ದಾವುದ್ ಇಬ್ರಾಹಿಂ ಬಳಿಕ ಇದೀಗ ಭಾರತದ ಮೋಸ್ಟ್ ವಾಂಟೆಡ್ ಟೆ-ರರಿಸ್ಟ್ ಮಸೂದ್ ಅಜರ್‌ನನ್ನ ಕಥೆ ಮುಗಿಸಿದ ‘ಅಪರಿಚಿತ’ ವ್ಯಕ್ತಿ

in Uncategorized 768 views

ಮುಂಜಾನೆ ಐದು ಗಂಟೆ ಸುಮಾರಿಗೆ ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಜರ್ ಭವಲ್ಪುರ ಮಸೀದಿಯಿಂದ ವಾಪಸ್ ತನ್ನ ನಿವಾಸಕ್ಕೆ ತೆರಳುತ್ತಿದ್ದ. ಈ ಸಮಯಕ್ಕೆ ಕಾಯುತ್ತಿದ್ದ ಅಪರಿಚಿತ ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದಾರೆ ಎನ್ನಲಾಗಿದೆ.

Advertisement

ನವದೆಹಲಿ: ಜಾಗತಿಕ ಉಗ್ರ, ಕುಖ್ಯಾತ ಪಾತಕಿ, ಜೈಷ್- ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ (Maulana Masood Azhar) ಬಾಂಬ್ ಸ್ಫೋಟಗೊಂಡು ಮೃತಪಟ್ಟಿದ್ದಾನೆ ಎಂದು ಅನಾಮಧೇಯ ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ ಮುಂಜಾನೆ 5 ಗಂಟೆಯ ಸುಮಾರಿಗೆ ಭವಲ್ಪುರ ಮಸೀದಿ ಮುಂಭಾಗದಲ್ಲಿ ತನ್ನ ಕಾರ್‌ನ ಬಲ ಬಾಗಿಲಿನ ಸಮೀಪ ಬಾಂಬ್‌ ಸ್ಫೋಟಗೊಂಡಿದ್ದು, ಈ ವೇಳೆ ಅಲ್ಲೇ ಇದ್ದ ಮೌಲಾನಾ ಮಸೂದ್ ಅಜರ್‌ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮಸೂದ್ ಅಜರ್‌ ಕಾರ್‌ನಲ್ಲಿ ‘ಅಪರಿಚಿತ’ ದುಷ್ಕರ್ಮಿಗಳು ಬಾಂಬ್‌ ಅಳವಡಿಸಿ ಸ್ಫೋಟ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಮುಂಜಾನೆ ಐದು ಗಂಟೆ ಸುಮಾರಿಗೆ ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಜರ್ ಭವಲ್ಪುರ ಮಸೀದಿಯಿಂದ ವಾಪಸ್ ತನ್ನ ನಿವಾಸಕ್ಕೆ ತೆರಳುತ್ತಿದ್ದ. ಈ ಸಮಯಕ್ಕೆ ಕಾಯುತ್ತಿದ್ದ ಅಪರಿಚಿತ ದುಷ್ಕರ್ಮಿಗಳು ಆತ ಕಾರ್‌ ಬಳಿ ಬರುತ್ತಿದ್ದಂತೆ ಅದಾಗಲೇ ಅಳವಡಿಸಲಾಗಿದ್ದ ಬಾಂಬ್ ಅನ್ನು ಸ್ಫೋಟಗೊಳಿಸಿದ್ದಾರೆ ಎಂದು ಅನಾಮಧೇಯ ಮಾಹಿತಿಗಳು ತಿಳಿಸಿವೆ.

1999ರ ಡಿಸೆಂಬರ್‌ 24ರಂದು ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಆಗಮಿಸುತ್ತಿದ್ದ 176 ಪ್ರಯಾಣಿಕರಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನ IC 814 ವಿಮಾನದ ಅಪಹರಣ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಜರ್‌ ಆಗಿದ್ದಾನೆ.

ಕಳೆದ ವರ್ಷ (2023) ನವೆಂಬರ್‌ನಲ್ಲಿ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಮತ್ತು ಮೌಲಾನಾ ಮಸೂದ್ ಅಜರ್‌ನ ಆಪ್ತ ಸ್ನೇಹಿತ ಮೌಲಾನಾ ರಹೀಂ ಉಲ್ಲಾ ತಾರಿಕ್ ರನ್ನು ಕರಾಚಿಯ ಒರಂಗಿ ಪಟ್ಟಣ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.

Advertisement
Share this on...