ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವುದು ಯಾಕೆ ಗೊತ್ತಾ.? ಹೀಗೆ ಮಾಡುವುದರ ಹಿಂದಿನ ವೈಜ್ಞಾನಿಕ ಸತ್ಯ ಬಯಲು

in Kannada News/News/ಕನ್ನಡ ಮಾಹಿತಿ 494 views

ನಮ್ಮ ಹಿಂದೂ ಧರ್ಮದಲ್ಲಿ ಹಲವಾರು ರೀತಿಯಾಗಿ ದೇವರನ್ನು ಪೂಜಿಸುತ್ತೇವೆ ಮತ್ತು ಆರಾಧಿಸುತ್ತೇವೆ. ದೇವಸ್ಥಾನದಲ್ಲಿ ಉರುಳುಸೇವೆ, ದೇವಸ್ಥಾನ ಪ್ರದಕ್ಷಿಣೆ ಹಾಕುತ್ತೇವೆ. ಆದರೆ ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ಎಂಬುದು ನಮಗೆ ಗೊತ್ತಿಲ್ಲ. ಹಾಗಾದರೆ ಏಕೆ ಪರದಾಖಿನೆ ಹಾಕುತ್ತೇವೆ ಎಂದು ತಿಳಿದುಕೊಳ್ಳೋಣ ಬನ್ನಿ.

Advertisement

ಕೆಲವರು ದೇವಸ್ಥಾನಕ್ಕೆ ಹೋದಾಗ ದೇವರಿಗೆ ಕೈ ಮುಗಿದು ಪೂಜೆ ಮಾಡಿಕೊಂಡು ಬರುತ್ತಾರೆ ಇನ್ನು ಕೆಲವರು ಪ್ರದಕ್ಷಿಣೆ ಕೂಡ ಹಾಕುತ್ತಾರೆ ದೇವಸ್ಥಾನಕ್ಕೆ ಹೋದಾಗ 108 ಅಥವಾ ಯಥಾಶಕ್ತಿ ಪ್ರದಕ್ಷಿಣೆ ಹಾಕಬೇಕು ಎಂದು ನಾವೆಲ್ಲಾ ನಂಬಿದ್ದೇವೆ. ಪ್ರದಕ್ಷಿಣೆಗೆ ನಮ್ಮ ಜನ್ಮ ಜನ್ಮಾಂತರಗಳ ಪಾಪಗಳನ್ನು ಕಳೆಯುವ ಶಕ್ತಿಯಿದೆ ಎಂದು ಪುರೋಹಿತರು ಹೇಳುತ್ತಾರೆ. ಆದ್ದರಿಂದಲೇ ಪೂಜಾ ಪ್ರಯೋಗ ವಿಧಿಗಳಲ್ಲಿ ಕೇವಲ ನಮಸ್ಕಾರಂ ಕುರ್ಯಾತ್ ಎಂದು ಎಲ್ಲೂ ಹೇಳುವುದಿಲ್ಲ. ಬದಲಿಗೆ ಪ್ರದಕ್ಷಿಣ ನಮಸ್ಕಾರಂ ಕುರ್ಯಾತ್ ಎಂದೇ ಹೇಳಲಾಗಿದೆ.

ಪ್ರದಕ್ಷಿಣೆಯ ಹಿಂದಿರುವುದು ಜ್ಯೋತಿರ್ವಿಜ್ಞಾನ. ಈ ಜಗತ್ತು ಒಂದು ಶಕ್ತಿಯ ಸುತ್ತ ಯಾವಾಗಲೂ ಸುತ್ತುತ್ತಿರುತ್ತದೆ. ಇಡೀ ವಿಶ್ವಕ್ಕೆ ಸೂರ್ಯನು ಪರಮೋಚ್ಚ ಶಕ್ತಿ. ಭೂಮಿಯೂ ಸೇರಿದಂತೆ ಎಲ್ಲಾ ಗ್ರಹಗಳೂ ಸೂರ್ಯನ ಸುತ್ತ ಸದಾಕಾಲವೂ ಸುತ್ತುತ್ತಿರುತ್ತವೆ. ಹಾಗೆ ಸುತ್ತುವುದರಿಂದಲೇ ಭೂಮಿಯ ಮೇಲೆ ನಮಗೆ ಜೀವ ಹಿಡಿದಿಟ್ಟುಕೊಳ್ಳಲು ಬೇಕಾದ ಬೆಳಕು, ಗಾಳಿ, ನೀರು ಇತ್ಯಾದಿ ಶಕ್ತಿ ಮೂಲಗಳು ಸರಿಯಾದ ಪ್ರಮಾಣದಲ್ಲಿ ಸಿಗುತ್ತಿವೆ.

ಪ್ರಕೃತಿಯೇ ದೇವರು ಎಂದು ನಂಬಿರುವ ಹಿಂದೂಗಳು ತಮ್ಮ ಪೂಜಾವಿಧಿಯನ್ನೂ ಪ್ರಕೃತಿ ನಿಯಮಕ್ಕೆ ಅನುಗುಣವಾಗಿಯೇ ರೂಪಿಸಿಕೊಂಡಿದ್ದಾರೆ. ಏಂಕೆದರೆ ಹೇಗೆ ಸೂರ್ಯನಿಂದ ಭೂಮಿಗೆ ಶಕ್ತಿ ಸಿಗುತ್ತದೆಯೋ ಹಾಗೆ ದೇವರು ಎಂಬ ಪರಮೋಚ್ಚ ಶಕ್ತಿಯ ಸುತ್ತ ಪ್ರದಕ್ಷಿಣೆ ಮಾಡುವುದರಿಂದ ನಮಗೂ ಸಹ ಶಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ.

ಮೇಲಾಗಿ, ಪ್ರದಕ್ಷಿಣೆಯು ಏಕರೂಪದ ಪುನರಾವರ್ತಿ ಕ್ರಿಯೆಯಾಗಿರುವುದರಿಂದ ಅಲ್ಲಿ ಏಕಾಗ್ರತೆ ಸುಲಭವಾಗಿ ಸಿದ್ಧಿಸುತ್ತದೆ. ನೀವು ಯಾವುದಾದರೂ ಒಂದು ಶಕ್ತಿಗೆ ಸಂಪೂರ್ಣ ಶರಣಾಗಲು ಈ ಏಕಾಗ್ರತೆ ಅತ್ಯಗತ್ಯ. ದೇವರನ್ನು ಪೂಜಿಸುವುದು ಅಂದರೆ ಆತನಿಗೆ ಎಲ್ಲಾ ರೀತಿಯಲ್ಲೂ ಶರಣಾಗುವುದು ಎಂದೇ ಅರ್ಥ. ಪ್ರದಕ್ಷಿಣೆ ಆ ಉದ್ದೇಶವನ್ನೂ ಈಡೇರಿಸುತ್ತದೆ ಎಂಬ ನಂಬಿಕೆ ಹಾಗಾಗಿ, ಪ್ರದಕ್ಷಿಣೆಯನ್ನು ಹಾಕಬೇಕು ಅನ್ನುವುದು ಪ್ರತೀತಿಯಾಗಿದೆ.

ಇದನ್ನೂ ಓದಿ: ಕಾಣಿಕೆ ಅಥವ ದೇಣಿಗೆಗಾಗಿ 21, 51, 101 ಹೀಗೆ ಹಣಣ ಮೇಲೆ 1 ರೂ. ಸೇರಿಸಿ ಯಾಕೆ ಕೊಡುತ್ತಾರೆ ಗೊತ್ತಾ? ಏನಿದರ ಹಿಂದಿನ ಅರ್ಥ?

ನಿಮ್ಮ ಮನೆಗೆ ಯಾವುದೋ ದೇವರ ಕಾರ್ಯಕ್ಕೊ ಅಥವಾ ಇನ್ನೋನೋ ಒಳ್ಳೆಯ ಕೆಲಸಕ್ಕಾಗಿ ದೇಣಿಗೆ ಕೇಳಲು ಬರುತ್ತಾರೆ. ಆಗ ನೀವೆಷ್ಟು ಹಣ ಕೊಡುತ್ತೀರಿ? 11, 21, 51, 101 ಅಥವಾ 501 ರೂಪಾಯಿ. ಒಟ್ಟಿನಲ್ಲಿ ಸಮ ಸಂಖ್ಯೆಯ ರೂಪದಲ್ಲಿ ಹಣವನ್ನು ಕೊಡುವುದಿಲ್ಲ.  ಏಕೆ ಹೀಗೆ?

ದೇಣಿಗೆ ಕೊಡುವ ವಿಷಯದಲ್ಲಿ ಮಾತ್ರವಲ್ಲ ವಾಹನ ಖರೀದಿ, ದದೇವರಿಗೆ ಕಾಣಿಕೆ ಹಾಕುವುದರಿಂದ ಹಿಡಿದು  ಸಾಕು ಪ್ರಾಣಿ ಖರೀದಿಯವರೆಗೂ ಹೀಗೆಯೇ. ಕೊನೆಯಲ್ಲಿ 1 ರೂಪಾಯಿ ಬರುವಂತೆಯೇ ಹಣ ಕೊಡುತ್ತಾರೆ.

ತುಂಬಾ ಜನರಿಗೆ ಏಕೆ ಹೀಗೆ ಕೊಡುವುದು ಎಂಬ ಮಾಹಿತಿ ಗೊತ್ತಿಲ್ಲ. ನನ್ನ ಅಜ್ಜ, ಅಪ್ಪ ಹೀಗೆ ಮಾಡ್ತಿದ್ರು ಅದನ್ನೇ ಮುಂದುವರೆಸಿರುವುದಾಗಿ ಹೇಳ್ತಾರೆ.

ಇದರ ಹಿಂದಿರುವುದು ಸಿಂಪಲ್ ಕಾರಣ.. ಆಗಿನ ಕಾಲದಲ್ಲಿ ಹಣವನ್ನು ಕೈಯಿಂದ ಕೈಯಿಗೆ ಕೊಡುತ್ತಿರಲಿಲ್ಲ. ನೆಲದ ಮೇಲೆ ಇಡುತ್ತಿದ್ದರು. ಬರಿ ನೋಟನ್ನು ನೆಲದ ಮೇಲೆ ಇಟ್ಟರೆ ಹಾರಿ ಹೋಗುತ್ತದೆ ಎನ್ನುವ ಕಾರಣಕ್ಕೆ ಅದರ ಮೇಲೆ ಒಂದು ರೂಪಾಯಿ ನಾಣ್ಯ ಇಡುತ್ತಿದ್ದರು.

Advertisement
Share this on...