ದೇಶದ ಪ್ರಧಾನಮಂತ್ರಿಯನ್ನ ಬದಲಾಯಿಸಬೇಕೆ ಎಂದು ಸರ್ವೇನಲ್ಲಿ ಕೇಳಿದ ಪ್ರಶ್ನೆಗೆ ಜನರಿಂದ ಬಂತು ಶಾಕಿಂಗ್ ರಿಸಲ್ಟ್

in Kannada News/News 3,463 views

ಕಾಲಕಾಲಕ್ಕೆ ದೇಶದ ಜನ ಅಭಿಪ್ರಾಯವನ್ನು ತಿಳಿಯಲು ಅನೇಕ ಸಮೀಕ್ಷೆಗಳು ನಡೆಯುತ್ತವೆ. ಈಗ ಕೊರೋನಾ ವೈರಸ್ ಸಂಕಟಕ್ಕೆ ಪರಿಹಾರ ಸಿಕ್ಕ ಹಾಗು ಕಿಸಾನ್ ಆಂದೋಲನ್ ಹೊತ್ತಿನಲ್ಲಿ ಅಂತಹ ಒಂದು ಸಮೀಕ್ಷೆ ನಡೆದಿದ್ದು ಪ್ರಸ್ತುತ ಭಾರತದ ಪ್ರಧಾನ ಮಂತ್ರಿಯವರ ಆಡಳಿತದಿಂದ ನೀವು  ಸಂತೋಷವಾಗಿದ್ದೀರ? ಅಥವಾ ಅವರ ಜಾಗದಲ್ಲಿ ಯಾರಿದ್ದರೆ ಸೂಕ್ತ ಎಂದು ಜನರನ್ನು ಕೇಳಲಾಯಿತು. ಅದಕ್ಕೆ ಜನ ಕೊಟ್ಟ ಉತ್ತರ ನಿಜಕ್ಕೂ ಆಶ್ಚರ್ಯಕರವಾಗಿತ್ತು.

Advertisement

ಪ್ರಸ್ತುತ ಭಾರತದ ಪ್ರಧಾನ ಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರು ಸತತ 2 ನೆಯ ಬಾರಿ ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಮೋದಿಯವರು 2014 ರಲ್ಲಿ ವಾರಣಾಸಿಯಿಂದ ಸಂಸದರಾಗುವ ಮೂಲಕ ಭಾರತದ 14 ನೇ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಅವರು ತಮ್ಮ ಎರಡನೇ ಅವಧಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಅಕ್ಟೋಬರ್ 7, 2009 ರಿಂದ ಮೇ 22, 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.

ದೇಶದಲ್ಲಿ ಕರೋನಾ ಮಹಾಮಾರಿ ಅಟ್ಟಹಾಸ ತಹಬದಿಗೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಸಂಕಟದಿಂದ ದೇಶವನ್ನ ಪಾರುಮಾಡಲು‌ ದೇಶವನ್ನ 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ್ದರು. ಪ್ರಧಾನಿ ಮೋದಿಯವರ ಈ ನಿರ್ಧಾರದ ಬಗ್ಗೆ ಅವರ ವಿರೋಧಿಗಳು ವಿರೋಧ ವ್ಯಕ್ತಪಡಿಸುತ್ತ ಇದು ತಪ್ಪು ನಿರ್ಧಾರ ಅಂತ ಕೆಲವರು ಹೇಳಿದ್ದರು ಇನ್ನು ಕೆಲವರು ಪ್ರಧಾನಿಗಳು ಇದರ ಬಗ್ಗೆ ಮೊದಲೇ ತಿಳಿಸಿ ಕಾಲಾವಕಾಶ ಕೊಟ್ಟು ಲಾಕ್‌ಡೌನ್ ಮಾಡಬೇಕಿತ್ತು ಅಂತ ಹೇಳಿದ್ದರು. ಅದಾದ ಬಳಿಕ ಕಿಸಾನ್ ಆಂದೋಲನ್ ಬಗ್ಗೆಯೂ ದೇಶದ ಜನ ಪ್ರತಿಕ್ರಿಯಿಸಿದ್ದಾರೆ.

ಭಾರತದಲ್ಲಿ ಕೊರೋನಾ ಮ್ಯಾನೇಜ್ ಮಾಡಿದ್ದು, ಕಿಸಾನ್ ಆಂದೋಲನ್ ಬಗ್ಗೆ ಹಾಗು ದೇಶದ ಪ್ರಧಾನಿಯ ಬಗ್ಗೆ ಜನರ ಅಭಿಪ್ರಾಯವೇನು ಎಂದು ತಿಳಿದುಕೊಳ್ಳಲು ನಡೆದ ಸರ್ವೇನಲ್ಲಿ ದೇಶದ ಜನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೆಲಸಗಳಿಂದ ಸಂತುಷ್ಟರಾಗಿದ್ದು ಅವರನ್ನ ಪ್ರಧಾನಿ ಹುದ್ದೆಯಲ್ಲೇ ನೋಡಬೇಕೆಂದು ಬಯಸಿದ್ದಾರೆ. ದೇಶದ ಜನ ಕೇಂದ್ರ ಸರ್ಕಾರದಲ್ಲಿ ಯಾವ ಬದಲಾವಣೆಯೂ ಆಗಬಾರದು ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಮುಂದುವರೆಯಬೇಕು, ರಾಷ್ಟ್ರಕ್ಕೆ ಅವರ ಅಗತ್ಯತೆಯಿದ್ದು ಅವರೇ ದೇಶವನ್ನ ಆಳಬೇಕು ಎಂದು ಜನ ತಮ್ಮ ಅಭಿಪ್ರಾಯವನ್ನ ನ್ಯಾಶನಲಿಸ್ಟ್ ವೀವ್ಸ್ ನಡೆಸಿದ ಆನ್ಲೈನ್ ಸರ್ವೇ ನಲ್ಲಿ ತಿಳಿಸಿದ್ದಾರೆ.

ಜನರಿಗೆ “ಏನು ಪ್ರಧಾನಮಂತ್ರಿಯವರನ್ನ ಬದಲಿಸಬೇಕಾ?” ಅಂತ ಕೇಳಿದಾಗ 71.7% ಜನ “ಬೇಡ” ಎಂದರೆ 25.1% ಜನ “ಹೌದು” ಎಂದಿದ್ದಾರೆ ಹಾಗು 3.2% ಜನ ಈ ಪ್ರಶ್ನೆಗೆ ಉತ್ತರವೇ ಕೊಟ್ಟಿಲ್ಲ.

ಈ ಸರ್ವೇ ನಲ್ಲಿ ಜನರಿಗೆ ತಮ್ಮ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಹೊರತಾಗಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಅಥವ ಅರವಿಂದ್ ಕೇಜ್ರಿವಾಲ್ ಹೆಸರುಗಳನ್ನ ಮುಂದಿಟ್ಟಾಗ ತೀರಾ ಕಡಿಮೆ ಜನ ಇವರಲ್ಲಿ ಕೆಲವೊಬ್ಬರ ಹೆಸರನ್ನಷ್ಟೇ ಹೇಳಿದ್ದು ಶೇ.80 ರಷ್ಟು ಜನ ಪ್ರಧಾನಮಂತ್ರಿ ರೂಪದಲ್ಲಿ ನರೇಂದ್ರ ಮೋದಿಯವರನ್ನೇ ನೋಡಲು ಇಷ್ಟಪಡುತ್ತಾರೆ ಎಂದು ತಿಳಿಸಿದ್ದಾರೆ.

Advertisement
Share this on...