Next President Of India: ಮುಂದಿನ ತಿಂಗಳು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ದೇಶಕ್ಕೆ ಹೊಸ ರಾಷ್ಟ್ರಪತಿ ಸಿಗಲಿದ್ದಾರೆ. ಈ ಬಾರಿಯ ಚುನಾವಣೆ ಅವಿರೋಧವಾಗಿ ನಡೆಯಲಿದೆಯೇ ಎಂಬ ಪ್ರಶ್ನೆಯೂ ಹಲವರ ಮನಸ್ಸನಲ್ಲಿದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ರಾಷ್ಟ್ರಪತಿಗಳು ಅವಿರೋಧವಾಗಿ ಆಯ್ಕೆಯಾಗುವ ಲಕ್ಷಣ ಕಾಣುತ್ತಿಲ್ಲ. ಇಲ್ಲಿಯವರೆಗೆ NDA ಮತ್ತು UPA ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಅಂದಹಾಗೆ, ಇದೆಲ್ಲದರ ಹೊರತಾಗಿ, ದೇಶದ ಈ ದೊಡ್ಡ ಹುದ್ದೆಗೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬಹುದು ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಆದರೆ, NDA ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಿದಾಗಲೆಲ್ಲ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಏಕೆಂದರೆ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಯನ್ನ ಗಮನದಲ್ಲಿಟ್ಟುಕೊಂಡು ರಾಜಕೀಯ ತಜ್ಞರು ಯಾವ ಹೆಸರುಗಳನ್ನ ಹೇಳುತ್ತಾರೋ ಅದರ ವಿಪರೀತವಾಗಿ ಬಿಜೆಪಿ ಮಾಸ್ಟರ್‌ಸ್ಟೋಕ್ ಹೊಡೆಯುವ ಮೂಲಕ ಜನರಿಗೆ ಹೊಸ ನಾಯಕ ಅಥವ ಹೊಸ ಹೆಸರನ್ನೇ ಪ್ರಸ್ತುತಪಡಿಸುತ್ತದೆ. 2017 ರಲ್ಲಿ ರಾಮನಾಥ್ ಕೋವಿಂದ್ ಅವರ ಹೆಸರನ್ನು ಪ್ರಸ್ತುತಪಡಿಸುವ ಮೂಲಕ NDA ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಇದಲ್ಲದೇ ವೆಂಕಯ್ಯ ನಾಯ್ಡು ಅವರ ಹೆಸರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ತರುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿತ್ತು.
ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದಾಗಲೆಲ್ಲಾ ಪ್ರತಿಯೊಂದು ಜಾತಿಗಳನ್ನೂ ತಲುಪಲು ಪ್ರಯತ್ನಿಸಿದೆ ಮತ್ತು ಪರಿಸ್ಥಿತಿಯನ್ನು ಪರಿಗಣಿಸಿ ಮಾಸ್ಟರ್ ಸ್ಟ್ರೋಕ್ ಆಡಿದೆ. ಈ ಬಾರಿಯ ರಾಷ್ಟ್ರಪತಿ ಚುನಾವಣೆ ಬಗ್ಗೆ ಮಾತನಾಡುವುದಾದರೆ, ದೇಶಾದ್ಯಂತ ಧಾರ್ಮಿಕ ಗಲಾಟೆ ನಡೆದಿದ್ದು, ಜಗತ್ತಿನಾದ್ಯಂತ ಇರುವ ಭಾರತೀಯ ಮುಸ್ಲಿಮರಿಗೆ ಬಿಜೆಪಿ ಸ್ವಲ್ಪ ಮಟ್ಟಿನ ಮಣೆ ಹಾಕಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಈ ಬಾರಿ ಮುಸ್ಲಿಂ ನಾಯಕರೊಬ್ಬರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತಿದೆ.
ಮುಸ್ಲಿಂ ಅಭ್ಯರ್ಥಿಗಳಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿಯ ಮೊದಲ ಹೆಸರು ಆರಿಫ್ ಮೊಹಮ್ಮದ್ ಖಾನ್. ಆರೀಫ್ ಮೊಹಮ್ಮದ್ ಹೆಸರಿನ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆರಿಫ್ ಮೊಹಮ್ಮದ್ ಪ್ರಸ್ತುತ ಕೇರಳದ ರಾಜ್ಯಪಾಲರಾಗಿದ್ದಾರೆ ಮತ್ತು ಪ್ರಗತಿಪರ ಮುಸ್ಲಿಂ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯು ಆರೀಫ್ ಮೊಹಮ್ಮದ್ ಅವರನ್ನ ರಾಷ್ಟ್ರಪತಿಯಾಗಿ ಮಾಡುವ ಮೂಲಕ ದೇಶ ಮತ್ತು ಪ್ರಪಂಚದ ಮುಸ್ಲಿಮರಿಗೆ ದೊಡ್ಡ ಸಂದೇಶವನ್ನು ನೀಡಲು ಮುಂದಾಗಬಹುದು.
ಮತ್ತೊಂದೆಡೆ, ನಾವು ಮತ್ತೊಬ್ಬ ಮುಸ್ಲಿಂ ನಾಯಕನ ಹೆಸರಿನ ಬಗ್ಗೆ ಮಾತನಾಡುವುದಾದರೆ ಮುಖ್ತಾರ್ ಅಬ್ಬಾಸ್ ನಖ್ವಿ ಬಗ್ಗೆಯೂ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಕಾರಣವೇನೆಂದರೆ ಮುಖ್ತಾರ್ ಅಬ್ಬಾಸ್ ನಖ್ವಿ ಜುಲೈ ತಿಂಗಳಲ್ಲಿ ರಾಜ್ಯಸಭೆಯಿಂದ ನಿವೃತ್ತಿಯಾಗಲಿದ್ದಾರೆ. ಇದಾದ ಬಳಿಕ ಅವರ ಕೈಯಿಂದ ಸಚಿವ ಸ್ಥಾನವೂ ಹೋಗುತ್ತದೆ. ರಾಂಪುರ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಬಗ್ಗೆ ಭಾರತೀಯ ಜನತಾ ಪಕ್ಷವು ರಾಂಪುರ ಕ್ಷೇತ್ರದಿಂದ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಬಹುದು ಎಂಬ ಊಹಾಪೋಹಗಳು ಇದ್ದವು, ಆದರೆ ಅದು ಸಂಭವಿಸಲಿಲ್ಲ. ಇದಲ್ಲದೇ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಖ್ವಿ ಹೆಸರಿರಲಿಲ್ಲ. ಮುಖ್ತಾರ್ ಅಬ್ಬಾಸ್ ನಖ್ವಿ ಬಿಜೆಪಿಯ ಹಳೆಯ ಮತ್ತು ಪ್ರಗತಿಪರ ಮುಸ್ಲಿಂ ನಾಯಕ. ಹೀಗಿರುವಾಗ ಬಿಜೆಪಿಯವರು ಅವರ ಹೆಸರನ್ನೂ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಬಹುದು ಎಂದೂ ಹೇಳಲಾಗುತ್ತಿದೆ.