ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ಡಿ ಬಾಸ್ ದರ್ಶನ್ ಕಡೆಯಿಂದ ಬಂತು ಮುದ್ದಾದ ಉಡುಗೊರೆ! ಏನದು ಗೊತ್ತಾ?

in Uncategorized 231 views

ನಮ್ಮ ಕನ್ನಡ ನಟಿ ಮೇಘನಾ ರಾಜ್ ಅವರು ಸಾಕಷ್ಟು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಆನಂತರ ಕನ್ನಡ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿ, ಇಲ್ಲಿಯ ತನಕ ಯೋಗಿ, ರಾಕಿಂಗ್ ಸ್ಟಾರ್ ಯಶ್, ಪ್ರಜ್ವಲ್ ದೇವರಾಜ್ ಸೇರಿದಂತೆ ಸಾಕಷ್ಟು ಕನ್ನಡ ನಟರ ಸ್ಟಾರ್ ಗಳ ಜೊತೆ ಕೆಲಸ ಮಾಡಿದ್ದಾರೆ. ಮೇಘನಾ ರಾಜ್ ಅವರು ಮೇ 2, 2018 ರಂದು ಚಿರಂಜೀವಿ ಸರ್ಜಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಕಳೆದ ವರ್ಷ ಚಿರು ಸರ್ಜಾ ಅವರು ದಿ’ಢೀರ್ ಸಾ-ವನ್ನಪಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಜೂನಿಯರ್ ಚಿರುವಿನ ಆಗಮದ ನಂತರ ಮೇಘನಾ ರಾಜ್ ಮನೆಯಲ್ಲಿ ಖುಷಿ ತಂದಿದೆ. ಇವತ್ತು ಮೇಘನಾ ರಾಜ್ ಅವರ ಹುಟ್ಟು ಹಬ್ಬದ ಪ್ರಯುಕ್ತ, ಡಿಬಾಸ್ ದರ್ಶನ್ ಕರೆ ಮಾಡಿ ಹೇಳಿದ್ದೇನು ಹಾಗು ಏನು ಉಡುಗೊರೆ ಕಳಿಸಿದ್ದಾರೆ ಗೊತ್ತಾ! ಮುಂದೆ ಓದಿರಿ

Advertisement

ಡಿಬಾಸ್ ದರ್ಶನ್ ಹಾಗು ಸರ್ಜಾ ಕುಟುಂಬ ಬಹಳ ಆಪ್ತರು. ಅರ್ಜುನ್ ಸರ್ಜಾ ಅವರ ಪ್ರೇಮ ಬರಹ ಚಿತ್ರದಲ್ಲಿ ಡಿಬಾಸ್ ದರ್ಶನ್ ಅವರು ಧ್ರುವ ಸರ್ಜಾ, ಚಿರು ಸರ್ಜಾ, ಅರ್ಜುನ್ ಸರ್ಜಾ ಅವರ ಜೊತೆ ಒಂದು ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿತು. ಚಿರು ಹಾಗು ಡಿಬಾಸ್ ಒಳ್ಳೆಯ ಸ್ನೇಹಿತರು ಕೂಡ. ಇದರ ಜೊತೆಗೆ ಮೇಘನಾ ರಾಜ್ ಅವರು ಕೂಡ ದರ್ಶನ್ ಅವರಿಗೆ ಬಹಳ ಆಪ್ತರು. ಕುರುಕ್ಷೇತ್ರ ಚಿತ್ರದಲ್ಲಿ ಡಿಬಾಸ್ ದರ್ಶನ್ ಅವರ ಜೊತೆ ಮೇಘನಾ ರಾಜ್ ಅವರು ನಾಯಕಿ ಯಾಗಿ ನಟಿಸಿದ್ದರು. ಇವತ್ತು ಮೇಘನಾ ರಾಜ್ ಅವರ ಹುಟ್ಟು ಹಬ್ಬದ ಪ್ರಯುಕ್ತ ದರ್ಶನ್ ಅವರು ಮೇಘನಾ ಅವರಿಗೆ ಕರೆ ಮಾಡಿ, ಹುಟ್ಟು ಹಬ್ಬದ ಶುಭ ಕೋರಿ, ಮಗು ಹೇಗಿದ್ದಾನೆ ಎಂದು ವಿಚಾರಿಸಿದ್ದಾರೆ. ಇದರ ಜೊತೆಗೆ ಡಿಬಾಸ್ ಕಳಿಸಿಕೊಟ್ಟ ಉಡುಗೊರೆ ಏನು ಗೊತ್ತಾ!

ಹೌದು! ಮೇಘನಾ ರಾಜ್ ಅವರಿಗೆ ಒಂದು ವಿಶೇಷ ಉಡುಗೊರೆಯನ್ನು ಡಿಬಾಸ್ ದರ್ಶನ್ ಅವರು ಕಳಿಸಿಟಿಕೊಟ್ಟಿದ್ದಾರೆ. ಡಿಬಾಸ್ ದರ್ಶನ್ ಅವರು ಮೇಘನಾ ರಾಜ್ ಅವರ ಮನೆಗೆ ತಮ್ಮ ತೋಟದ ವಿಶೇಷವಾದ ಪಕ್ಷಿಗಳನ್ನು ಕಳಿಸಿಕೊಟ್ಟಿದ್ದಾರೆ. ಮೇಘನಾ ರಾಜ್ ಅವರಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಇಷ್ಟ, ಆದರಿಂದ ಡಿಬಾಸ್ ದರ್ಶನ್ ಅವರು ಮೇಘನಾ ರಾಜ್ ಅವರಿಗೆ ಈ ಉಡುಗೊರೆಗಳನ್ನು ಕಳಿಸಿ ಕೊಟ್ಟಿದ್ದಾರೆ. ಇದರ ಜೊತೆಗೆ ಮೇಘನಾ ರಾಜ್ ಅವರಿಗೆ ಧ್ರುವ ಸರ್ಜಾ ಅವರು ಕೂಡ ಮುದ್ದಾದ ನಾಯಿ ಮರಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದಲ್ಲದೆ ಮೇಘನಾ ರಾಜ್ ಅವರಿಗೆ ಮಲಯಾಳಂ ಸ್ಟಾರ್ ನಟರು, ಹಾಗು ನಟಿಯರು, ನಟಿ ಶ್ರುತಿ, ತಾರಾ, ಸುಧಾ ರಾಣಿ, ಡಿಬಾಸ್ ದರ್ಶನ್, ರಾಧಿಕಾ ಪಂಡಿತ್ ಸೇರಿದಂತೆ ಹಲವಾರು ತಾರೆಯರು ಶುಭ ಕೋರಿ ಉಡುಗೊರೆಗಳನ್ನು ನೀಡಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

Advertisement
Share this on...