ಕೊರೊನಾ ಹಾವಳಿ ಎಲ್ಲೆಡೆ ಹೆಚ್ಚಳವಾಗುತ್ತಲೇ ಇದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಯಾವುದೂ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಅತ್ತ ಸ್ಯಾಂಡಲ್ ವುಡ್ ನಲ್ಲಿ ಯಾವ ಸಿನಿಮಾ ನಿರ್ಮಾಣದ ಕಾರ್ಯವಾಗಲೀ, ಬಿಡುಗಡೆಯಾಗಲೀ ಆಗುತ್ತಿಲ್ಲ. ಹಾಗಾಗಿ ಸಿನಿಮಾಗೆ ಸಂಬಂಧಿಸಿದ ಯಾವುದೇ ಕೆಲಸ ಸಾಗದೇ ಸಿನಿಮಾಗಳನ್ನೇ ನಂಬಿಕೊಂಡವರು ಇಂದು ಬೀದಿಗೆ ಬೀಳುವ ಸಂದರ್ಭ ಎದುರಾಗಿದೆ.
ಇದೇ ವೇಳೆ ಕೋಟಿ ರಾಮು ಅವರಂತಹ ದೊಡ್ಡ ದೊಡ್ಡ ನಿರ್ಮಾಪಕರೇ ಸಾವಿಗೀಡಾಗುತ್ತಿದ್ದಾರೆ. ಚಿತ್ರರಂಗದ ಅನ್ನದಾತರೆನಿಸಿದ ರಾಮು ಅವರು ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಮತ್ತೊಬ್ಬ ಟಾಪ್ ನಟನ ಸಾವು ಸಂಭವಿಸಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ್ದ ರನ್ನ ಚಿತ್ರದ ನಿರ್ಮಾಪಕ ಚಂದ್ರಶೇಖರ್ ಅವರು ಕೂಡ ಇತ್ತೀಚೆಗೆ ಕೊರೊನಾಕ್ಕೆ ಬ ಲಿ ಯಾಗಿದ್ದರು.
ನವರಸ ನಾಯಕ ಜಗ್ಗೇಶ್ ಅವರ ತಮ್ಮ ಕೋಮಲ್ ಅವರಿಗೂ ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆ ಸೇರಿದ್ದರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಅವರು ಕೂಡ ಕೊರೊನಾಗೆ ಬಲಿಯಾಗಿದ್ದರು. ರಾಮು ಅವರ ಆರೋಗ್ಯದಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು.
ಕೊರೋನಾ ಎರಡನೇ ಅಲೆಯ ಉಪಟಳ ಮುಂದುವರೆದಿದ್ದು ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಕನ್ನಡದ ಸ್ಪುರದ್ರೂಪಿ, ರಾಷ್ಟ್ರಪ್ರಶಸ್ತಿ ವರ್ಷದ ವಿಜೇತ ಸಂಚಾರಿ ವಿಜಯ್ ರವರು ಅಗಲಿದ ಸುದ್ದಿಯಿಂದ ಸ್ಯಾಂಡಲ್‌ವುಡ್ ಹೊರಬರುವ ಮುನ್ನವೇ ಇದೀಗ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಹಿರಿಯ ನಟಿ ಕವಿತಾ ಅವರ ಮಗ ಕೊವಿಡ್ನಿಂದ ಮೃ ತ ಪಟ್ಟಿದ್ದಾರೆ.
ಕವಿತಾ ಅವರ ಮಗ ಸಂಜಯ್ ರೂಪ್ಗೆ ಕೊವಿಡ್ ಕಾಣಿಸಿಕೊಂಡಿತ್ತು. ಸಣ್ಣ ಪ್ರಮಾಣದಲ್ಲಿ ಜ್ವರ ಇರುವುದರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯದಲ್ಲಿ ಏರುಪೇರಾಗಿ ಕಂಡುಬಂದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಗಲೇ ಅವರ ದೇಹದಲ್ಲಿ ಕೊರೋನಾ ಸೋಂಕು ಹೆಚ್ಚಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಸಂಜಯ್ ಆಸ್ಪತ್ರೆಯಲ್ಲಿ ಮೃ ತ ಪಟ್ಟಿದ್ದಾರೆ.
ಇನ್ನು, ಕವಿತಾ ಅವರ ಪತಿಗೂ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಲಗಳ ಪ್ರಕಾರ ಅವರ ಆರೋಗ್ಯ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಕಾರಣಕ್ಕೆ ಅವರಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸಲಾಗಿದೆ.
ಕನ್ನಡದಲ್ಲಿ ಕಿಲಾಡಿ ಕಿಟ್ಟು, ಪುಟ್ನಂಜ, ಸೂಪರ್ ಸ್ಟಾರ್, ಎಚ್2ಓ, ಭೂತಯ್ಯನ ಮಕ್ಕಳು, ಚಂದ್ರ ಚಕೋರಿ ಸೇರಿದಂತೆ ೨೯ ಸಿನಿಮಾಗಳಲ್ಲಿ ಕವಿತಾ ನಟಿಸಿದ್ದಾರೆ. 2009ರಲ್ಲಿ ತೆರೆಗೆ ‘ ಉಲ್ಲಾಸ ಉತ್ಸಾಹ’ ಚಿತ್ರ ಕವಿತಾ ನಟಿಸಿದ ಕೊನೆಯ ಸಿನಿಮಾ. ಸಿನಿಮಾ ಮಾತ್ರವಲ್ಲ ಕಿರುತೆರೆಯ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.
ನಟ ಸಂಚಾರಿ ವಿಜಯ್ ಗೂ ಮುನ್ನ ಕೋವಿಡ್ ಗೆ ಬ ಲಿ ಯಾಗಿದ್ದ ನಟ ಹಾಗು ನಿರ್ದೇಶಕ
ಸ್ಯಾಂಡಲ್ ವುಡ್ ಗೆ ಒಂದರ ಮೇಲೊಂದರಂತೆ ಕೊರೋನಾ ಹೊಡೆತ ಕೊಡುತ್ತಿದ್ದು ನಟ ಹಾಗು ನಿರ್ದೇಶಕ ಕೊರೋನಾಗೆ ಬಲಿಯಾಗಿದ್ದರು. ಸಿನಿಮಾ ತೆರೆಗೆ ಕಾಣುವ ಮೊದಲೇ ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಇಬ್ಬರೂ ಕೊರೊನಾಗೆ ಬ ಲಿ ಯಾಗಿದ್ದರು.
ಸ್ಯಾಂಡಲ್‌ವುಡ್ ಯುವ ನಟ ಹಾಗೂ ನಿರ್ಮಾಪಕ ಡಾ. ಡಿ.ಎಸ್. ಮಂಜುನಾಥ್ ಏಪ್ರಿಲ್ ತಿಂಗಳಲ್ಲಿ ಕೊರೊನಾದಿಂದ ಮೃತಪಟ್ಟಿದ್ದರು. ಈಗ ಇವರು ನಿರ್ಮಾಣ ಮಾಡಿದ ಎರಡು ಚಿತ್ರಗಳ ನಿರ್ದೇಶಕ ಅಭಿರಾಮ್ ಕೊರೊನಾದಿಂದ ಮೃತಪಟ್ಟಿದ್ದಾರೆ.
34 ವರ್ಷದ ಅಭಿರಾಮ್ ಕಳೆದೊಂದು ವಾರದಿಂದ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು. ಆದರೆ ಅವರು ಪರೀಕ್ಷೆ ಮಾಡಿಸಿಕೊಳ್ಳದೆ ಮನೆಯಲ್ಲೇ ಇದ್ದರು. ಇತ್ತೀಚೆಗೆ ಉಸಿರಾಟದ ತೊಂದರೆ ಅವರಲ್ಲಿ ಹೆಚ್ಚಾಗಿದ್ದು, ಶುಕ್ರವಾರ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಡಿ.ಎಸ್. ಮಂಜುನಾಥ್ ‘ಸಂಯುಕ್ತ-2’ ಸಿನಿಮಾದ ಮೂಲಕ ನಿರ್ಮಾಪಕರಾಗಿ ಮತ್ತು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾವನ್ನು ನಿರ್ಮಿಸಿ ಹೆಸರು ಮಾಡಿದ್ದರು. ಸದ್ಯ ‘0% ಲವ್’ ಚಿತ್ರದಲ್ಲಿ ಹೀರೋ ಆಗಿ ಕೂಡ ನಟಿಸುತ್ತಿದ್ದರು. ‘ಸಂಯುಕ್ತ 2’ ಮತ್ತು ‘0% ಲವ್’ ಎರಡೂ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಅಭಿರಾಮ್. ಈಗ ಅಭಿರಾಮ್ ಕೂಡಾ ಮಂಜುನಾಥ್ ಅವರನ್ನು ಹಿಂಬಾಲಿಸಿ ಹೊರಟಿದ್ದಾರೆ ಎನ್ನುವುದು ಬೇಸರದ ಸಂಗತಿ.