1947 ರ ನಂತರ ಕಾಂಗ್ರೆಸ್ ಯಾವ ರೀತಿಯ ಭಾರತವನ್ನು ನಿರ್ಮಿಸಲು ಪ್ರಾರಂಭಿಸಿತು? ಇಂದಿನ ದೃಷ್ಟಿಕೋನದಲ್ಲಿ ಇದು ಬಹಳ ಪ್ರಸ್ತುತವಾದ ಪ್ರಶ್ನೆಯಾಗಿದೆ. ವಾಸ್ತವವಾಗಿ, ಕಾಂಗ್ರೆಸ್ ಚಿಂತನೆಯು ವೈದಿಕ ಭಾರತದ ಕಡೆಯತ್ತ ಎಂದಿಗೂ ಹೋಗಲೇ ಇಲ್ಲ. ಅವರು ಮೊಘಲರು ಮತ್ತು ತುರ್ಕರು ಬರುವ ಮುಂಚಿನ ಇತಿಹಾಸವನ್ನು ಮರೆಮಾಚಲು ಪ್ರಯತ್ನಿಸಿದರು ಮತ್ತು ಈ ಜಗತ್ತು ಕೇವಲ 5000 ವರ್ಷಗಳಷ್ಟು ಹಳೆಯದು ಎಂಬ ಪಾಶ್ಚಾತ್ಯ ಚಿಂತಕರ ವಾದವನ್ನು ಒಪ್ಪಿದರು.
ಕಾಂಗ್ರೆಸ್ ವೈದಿಕ ಸೃಷ್ಟಿ ಯುಗವನ್ನು ಅನುಸರಿಸಲು ನಿರಾಕರಿಸಿದರು, ಆದ್ದರಿಂದ ಇಡೀ ವೈದಿಕ ಇತಿಹಾಸವು ಅವರಿಗೆ ಅಂಧಕಾರದ ಯುಗ ಎಂದು ಕಾಣಲಾರಂಭಿಸಿತು. ಇದರ ಪರಿಣಾಮವಾಗಿ, ಭಾರತದ ವೈಭವಯುತವಾದ ವೈದಿಕ ಭೂತಕಾಲವು ಮರೆಯಾಗುವಂತೆ ಮಾಡಲಾಯಿತು ಮತ್ತು ಮೊಘಲರ ಕತ್ತಿಗಳ ಕೂಗು ಇಲ್ಲಿ ಜಾತ್ಯತೀತತೆಯ ಮೇಲಂಗಿಯನ್ನು ಧರಿಸಿ ದೇಶಕ್ಕೆ ಸ್ನೇಹಪರವಾಗಿಸಲು ಪ್ರಯತ್ನಿಸಲು ಪ್ರಾರಂಭಿಸಿತು. ಇದರ ಫಲವಾಗಿ, ಇಂದು ನಮ್ಮ ಯುವ ಪೀಳಿಗೆ ಈ ದೇಶದಲ್ಲಿ ಏನೇ ಸಾಧನೆ ಅಭಿವೃದ್ಧಿಯಾಗಿದ್ದರೂ ಅದು ಮೊದಲು ಮೊಘಲರು, ತುರ್ಕರು ತದನಂತರ ಬ್ರಿಟಿಷರ ಕೊಡುಗೆ. ನಮ್ಮ ಬಳಿ ನಮ್ಮದೇ ಅಂತ ಹೇಳೋಕೇ ಏನೂ ಇಲ್ಲ ಎಂದು ಹೇಳುತ್ತಿದ್ದಾರೆ. ಯಾವಾಗ ತಮ್ಮ ಕಾಲಿನ ಮೇಲೆ ತಾವೇ ಕೊಡಲಿಯೇಟು ಹಾಕಿಕೊಂಡಾಗ ಆ ವ್ಯಕ್ತಿ ತನ್ನ ನೈಜತೆ, ತನ್ನ ಗುರುತು ಹಾಗು ಅಸ್ಮಿತೆಯನ್ನೇ ಮರೆತುಬಿಡುತ್ತಾನೆ. ಇದೇ ಭಾರತದ ಜನರ ಜೊತೆಗೂ ಆಗುವಂತೆ ಮಾಡಿದ್ದು.
ಗಾಂಧಿ ಕಾಂಗ್ರೆಸ್ನ ಆದರ್ಶ ವ್ಯಕ್ತಿ. ಆತನ ಆದರ್ಶ ಚಿಂತನೆಗಳನ್ನಿಟ್ಟುಕ್ಕೊಂಡೇ ಕಾಂಗ್ರೆಸ್ ಮುಂದುವರೆಯುತ್ತಿದೆ. ಹಾಗಾದರೆ ಭಾರತೀಯ ಸಂಸ್ಕೃತಿಯ ಬಗ್ಗೆ ಗಾಂಧಿ ಚಿಂತನೆ ಏನಿತ್ತು? ಇದನ್ನ ನಾವೆಲ್ಲರೂ ತಿಳಿದುಕೊಳ್ಳಲೇಬೇಕು.
ಜುಲೈ 17, 1937 ರಲ್ಲಿ ಗಾಂಧಿ ‘ಹರಿಜನ’ ದಲ್ಲಿ ಹೀಗೆ ಬರೀತಾನೆ, “ನನಗೆ ಅಬೂಬಕರ್ ಹಾಗು ಉಮರ್ ಸಿದ್ದಿಕಿ ಕಥೆಗಳನ್ನು ಓದಲು ಬಿಡಿ. ಅನ್ಯರು ರಾಮ ಹಾಗು ಕೃಷ್ಣನ ಬಗೆಗಿನ ಒಳ್ಳೆಯ ವಿಚಾರಗಳನ್ನು ಹೇಳುತ್ತಾರೆ ಆದರೆ ಈ ವ್ಯಕ್ತಿಗಳು ಯಾವ ಕಾಲಘಟ್ಟಕ್ಕೆ ಸೇರಿದ್ದರು ಅನ್ನೋ ತಾರೀಖೇ ನಮಗೆ ಗೊತ್ತಿಲ್ಲ. ಹಾಗಾಗಿ ಆದರ್ಶಪ್ರಾಯರಾಗಿ ನಾವು ಇವರನ್ನ ಪರಿಗಣಿಸಲು ಸಾಧ್ಯವಿಲ್ಲ. ತಾರೀಖು ಹೇಳುವಂತೆ ಶಿವಾ (ಶಿವಾಜಿ) ಹಾಗು ಪ್ರತಾಪ್ (ಮಹಾರಾಣಾ ಪ್ರತಾಪ್ ಸಿಂಗ್) ಸರಳ ಜೀವನ ನಡೆಸುತ್ತಿದ್ದರೆಂದು ಹೇಳಲಾಗುತ್ತದೆ ಆದರೆ ಈ ವಿಷಯದಲ್ಲಿ ಮತಭೇದಗಳಿವೆ. ತೋಳ್ಬಲದ ಮದದಲ್ಲಿ ಅವರೇನೇನು ಮಾಡಿಲ್ಲ ಹೇಳಿ. ಆದರೆ ಯಾರ ಮೇಲಾದರೂ ಬೆರಳೆತ್ತಿ ಮಾತನಾಡಲು ಸಾಧ್ಯವಿಲ್ಲ ಎಂದಾದರೆ ಅದು ಅಬುಬಕರ್ ಹಾಗು ಉಮರ್ ಆಗಿದ್ದಾರೆ. ಇವರನ್ನ ಸರಳಜೀವಿಗಳೆಂದು ಹೇಳಲು ಹಾಗು ಆದರ್ಶಪ್ರಾಯ ವ್ಯಕ್ತಿಗಳೆಂದು ಹೇಳಲು ಬಯಸುತ್ತೇನೆ”
ಗಾಂಧಿಯ ರಾಮ-ಕೃಷ್ಣರೆಡೆಗಿನ, ರಾಮಾಯಾಣ, ಭಗವದ್ಗೀತೆಯ, ಶಿವಾಜಿ, ಮಹಾರಾಣಾ ಪ್ರತಾಪ್ ಬಗ್ಗೆ ಎಂತಹ ಚಿಂತನಗಳಿದ್ದವು ಅನ್ನೋದು ಆತನ ಮೇಲಿನ ಮಾತುಗಳಿಂದಲೇ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತವೆ. ಗಾಂಧಿಯ ಈ ಚಿಂತನೆಯೇ ಡಾ.ಜಾಕೀರ್ ಹುಸೇನ್ ನಂತಹ ವ್ಯಕ್ತಿಗಳ ಮೂಲಕ ವಾರ್ಧಾ ಸ್ಕೀಮ್ ತಯಾರು ಮಾಡಲಾಯಿತು. ಈ ಜನರು ಸ್ವಾತಂತ್ರ್ಯಕ್ಕೂ ಮೊದಲಿನಿಂದಲೇ ಸ್ವಾತಂತ್ರ್ಯ ಭಾರತದಲ್ಲಿ ಎಂತಹ ಶಿಕ್ಷಣ ನೀತಿಯನ್ನ ದೇಶದಲ್ಲಿ ಅಳವಡಿಸಬೇಕು ಅನ್ನೋದನ್ನ ಪ್ಲ್ಯಾನ್ ಮಾಡಿಟ್ಟಿದ್ದರು. ಇದರಲ್ಲಿ ಭಾರತೀಯ ಸಂಸ್ಕೃತಿಯ ನಾಶಕ್ಕಾಗಿ ಬೀಜಗಳನ್ನ ನಡೆಲಾಗಿತ್ತು.
ಯಾವ ಸಮಯದಲ್ಲಿ ಇವರು ಶಿಕ್ಷಣ ನೀತಿಯನ್ನ ಜಾರಿಗೆ ತಂದರೋ ಆಗ ಭಾರತದಲ್ಲಿ ಹಿಂದುಗಳು 67.7% ಇದ್ದರು ಹಾಗು ಕೆಲವೇ ಪ್ರತಿಶತದಷ್ಟು ಮುಸಲ್ಮಾನರಿದ್ದರು. ಅದರಲ್ಲಿ ಕ್ರಿಶ್ಚಿಯನ್ನರಂತೂ ಒಂದು ಪ್ರತಿಶತಕ್ಕೂ ಕಡೆಮೆಯಿದ್ದರು. ಆಗ ಭಾರತದ ಇಬ್ಭಾಗ ಮಾಡುವ ಮಾತುಕತೆ ನಡೆದಿತ್ತು. ಅದೇ ಸಮಯದಲ್ಲಿ ದ್ವೀತಿಯ ವಿಶ್ವ ಮಹಾಯುದ್ಧ ಕೂಡ ಶುರುವಾಗಿತ್ತು. ಮುಸಲ್ಮಾನರಿಂದ ಆಗ ನಿರಂತರವಾಗಿ ವಿಭಜನೆಯ ಬೇಡಿಕೆ ಹೆಚ್ಚಾಗುತ್ತಲೇ ಇತ್ತು. ಆಗ ತುಷ್ಟಿಕರಣದ ಗೇಮ್ ಆಡುತ್ತ ಗಾಂಧಿ ವರ್ಧಾ ಸ್ಕೀಮ್ ತಯಾರಿಸಿದ. ಅದರಲ್ಲಿ ಹಿಂದೂ ಸಂಸ್ಕೃತಿಯನ್ನ ಸರ್ವನಾಶ ಮಾಡಿಬಿಡಲಾಗಿತ್ತು. ಅದರ ಪರಿಣಾಮದಿಂದ ನಮ್ಮ ದೇಶ ಈಗಲೂ ಅನುಭವಿಸುತ್ತಿದೆ.
ಭಾರತದ ಹಿಂದೂ ಸಂಸ್ಕೃತಿಯನ್ನು ನಾಶ ಮಾಡುವ ದೃಷ್ಟಿಕೋನದಿಂದ ತಂದ ಈ ವಾರ್ಧಾ ಶಿಕ್ಷಣ ಯೋಜನೆಯ ಫಲಿತಾಂಶವೆಂದರೆ ಇಲ್ಲಿ 2300 ವರ್ಷಗಳ ಹಿಂದೆ ಈ ದೇಶದ ಗಡಿಗಳ ಮೇಲೆ ದಾಳಿ ಮಾಡಿ ಹಾಳು ಮಾಡಿದ ಅಲೆಕ್ಸಾಂಡರ್ ನ್ನ ಮಹಾನ್ ಎಂದು ಕರೆಯಲಾಯಿತು ಮತ್ತು ಅವನ ಪಾಪವನ್ನ ತೊಳೆಯಲು ಹಿಂದೂ ಯೋಧರನ್ನು ಮರೆತು ಹೋಗುವಂತೆ ಮಾಡಲಾಯಿತು, ಆ ಹಿಂದೂ ಯೋಧರ ಬಾಣದಿಂದಲೇ ಅಲೆಗ್ಸಾಂಡರ್ ನ ಜ್ವರಕ್ಕೆ ಕಾರಣವಾಗಿ ಆತ ಸತ್ತಿದ್ದ ಅನ್ನೋದನ್ನ ನಮಗೆ ತಿಳಿಸಲೇ ಇಲ್ಲ.
ಆ ಕಾರಣದಿಂದಾಗಿ ಆ ಸಮಯದಲ್ಲಿ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸಿದ್ದ ಚಂದ್ರಗುಪ್ತ ಮತ್ತು ಚಾಣಕ್ಯರ ರಾಷ್ಟ್ರೀಯತಾವಾದಿ ಕಾರ್ಯವನ್ನು ಮರೆಮಾಚಲಾಯಿತು. ಯಾವ ಅಶೋಕ ಅವನು ತನ್ನ ಕುಟುಂಬದ ಅನೇಕರನ್ನು ಕೊಲ್ಲುವ ಮೂಲಕ ಅಧಿಕಾರವನ್ನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದ ಆ ಅಶೋಕನನ್ನು ಒಬ್ಬ ಮಹಾನ್ ವ್ಯಕ್ತಿ ಎಂದು ಕರೆಯಲಾಯಿತು.
ಇದೇ ರೀತಿಯಾಗಿ ಕಾಮಪಿಪಾಸು ಹಾಗು ವ್ಯಭಿಚಾರಿಯಾಗಿದ್ದ ಅಕ್ಬರ್ನ್ನ ಮಹಾನ್ ಎಂದು ಕರೆಯಲಾಯಿತು. ಅದೇ ಅಕ್ಬರ್ ತನ್ನ ಹರಮ್ ನಲ್ಲಿ 5000 ಹಿಂದೂ ಮಹಿಳೆಯರನ್ನ ಕೂಡಿಟ್ಟಿದ್ದ, ಅಷ್ಟಾದರೂ ಆತನ ಕಾಮತೃಷೆ ಮಾತ್ರ ತೀರಿರಲಿಲ್ಲ. ದೆಹಲಿಯಲ್ಲಿ ಪ್ರತಿ ವಾರ ಹಿಂದೂ ಹುಡುಗಿಯರನ್ನ ಮಹಿಳೆಯರನ್ನ ಖರೀದಿಸುವ ಮೀನಾ ಬಜಾರ್ ನಡೆಯುತ್ತಿತ್ತು. ಇಂತಹ ಚರಿತ್ರ ಭ್ರಷ್ಟ, ಧರ್ಮ ಭ್ರಷ್ಟ ಜನರನ್ನ ನಮ್ಮ ಇತಿಹಾಸದಲ್ಲಿ ಮಹಾನ್ ಅಂತ ಕರೆಯಲಾಯಿತು ಹಾಗು ಮಹಾರಾಣಾ ಪ್ರತಾಪ್ ಹಾಗು ಶಿವಾಜಿ ಮಹಾರಾಜರಂತಹ ಮಹಾನ್ ರಾಜರುಗಳನ್ನ ಇತಿಹಾಸದಿಂದ ಅಳಿಸಿಹಾಕುವ ಕೆಲಸ ಮಾಡಲಾಯಿತು. ಈ ಮಹಾನ್ ಯೋಧರ ಬಗ್ಗೆ ಒಮ್ಮೆ ಮಾತನಾಡುತ್ತ “ಇವರು ಯಾವ ಪಾಪ ಕಾರ್ಯಗಳನ್ನ ಮಾಡಿಲ್ಲ ಹೇಳಿ?” ಎಂದಿದ್ದ. ಇದರರ್ಥ ಗಾಂಧಿಯ ದೃಷ್ಟಿಯಲ್ಲಿ ಮಹಾರಾಣಾ ಪ್ರತಾಪ್ ಹಾಗು ಶಿವಾಜಿ ಮಹಾರಾಜರು ಪಾಪಿಗಳಾಗಿದ್ದರು ಹಾಗು ಪಾಪಿ ಅಕ್ಬರ್ ಮಹಾನ್ ಆಗಿದ್ದ. ಇದೇ ಮಾನಸಿಕತೆಯಿಂದ ಇಂದಿಗೂ ನಮ್ಮ ದೇಶ ಮುನ್ನಡೆಯುತ್ತಿದೆ. ಇದೇ ಕಾರಣಕ್ಕಾಗಿ ನಮ್ಮ ಇತಿಹಾಸದಲ್ಲಿ ಬದಲಾವಣೆ ತರುವ ಅವಶ್ಯಕತೆಯಿದೆ.