“ನನಗೆ ರಾಮನ ಮೇಲೆ ಭಕ್ತಿ ಇಲ್ಲ..ಆಸ್ತಿಕರು ದೇವಸ್ಥಾನಕ್ಕೆ ಹೋಗ್ತಾರೆ, ನಾಸ್ತಿಕರು ಹೋಗಲ್ಲ, ನಾನೇನ್ ಮಾಡ್ಲಿ?”: ಪ್ರಿಯಾಂಕ್ ಖರ್ಗೆ

in Uncategorized 33 views

ಬೆಂಗಳೂರು :

Advertisement
‘ನನಗೆ ರಾಮನ ಮೇಲೆ ಭಕ್ತಿ ಇಲ್ಲ.. ನಾನು ಏನು ಮಾಡಲಿ? ನಾನು ಸಂವಿಧಾನದ ಭಕ್ತ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಎಷ್ಟು ಜನರಿಗೆ ರಾಮಾಯಣ ಗೊತ್ತು? ಹನುಮಾನ್ ಚಾಲಿಸ್ ಎಷ್ಟು ಬಿಜೆಪಿ ಸಂಸದರು ಹಾಗೂ ಶಾಸಕರಿಗೆ ಬರುತ್ತೆ?’ ಎಂದು ಬಿಜೆಪಿಗರಿಗೆ ಪ್ರಶ್ನೆ ಮಾಡಿದರು.

ನಾನು ಎಲ್ಲರ ಜೊತೆಗೆ ಹೋಗ್ತೀನಿ. ಬಸವಣ್ಣ, ಅಂಬೇಡ್ಕರ್, ಸಂವಿಧಾನ ತತ್ವ ಪಾಲಿಸುತ್ತೇನೆ. ಇದರಲ್ಲಿ ಎಲ್ಲರೂ ಇದ್ದಾರೆ. ನಾನು ರಾಮಾಯಣನೂ ಓದಿದ್ದೇನೆ, ಮಹಾಭಾರತನೂ ಓದಿದ್ದೇನೆ’ ಎಂದು ಕುಟುಕಿದರು.

ಆಸ್ತಿಕರು ಹೋಗ್ತಾರೆ, ನಾಸ್ತಿಕರು ಹೋಗಲ್ಲ

‘ಪ್ರಧಾನಿ ಮೋದಿ ಸುಪ್ರೀಂಕೋರ್ಟ್ ಆದೇಶದಂತೆ ರಾಮಮಂದಿರ ಮಾಡ್ತಾ ಇದ್ದೇವೆ ಅಂತಾರೆ. ನಾವು ಒಪ್ಪಿದೇವೆ, ಕಾಂಗ್ರೆಸ್ ಅದು ಮಾಡಬೇಕು, ಇದು ಮಾಡಬೇಕು ಅಂತ ಜನ ಹೇಳ್ತಾರೆ. ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ, ಅದು ವೈಯಕ್ತಿಕ ವಿಚಾರ ಅಂತ. ಯುಪಿ ಕಾಂಗ್ರೆಸ್ ನವರು ಹೋಗ್ತಾ ಇಲ್ವಾ? ಆಸ್ತಿಕರು ಹೋಗ್ತಾರೆ, ನಾಸ್ತಿಕರು ಹೋಗಲ್ಲ..’ ಎಂದು ಛೇಡಿಸಿದರು.

ಬಿಜೆಪಿಯವರು ಯಾಕೆ ನಮ್ಮನ್ನ ಕೇಳ್ತಾರೆ?

‘ಬಿಜೆಪಿಗರಿಗೆ ನಂದು ಸ್ಪಷ್ಟವಾದ ಪ್ರಶ್ನೆ ಇದೆ.‌ ಬಿಜೆಪಿಯವರು ಯಾಕೆ ನಮ್ಮನ್ನ ಕೇಳ್ತಾರೆ? ಶಂಕರಾಚಾರ್ಯರು ಅಪೂರ್ಣವಾದ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾನ ಮಾಡೋದು ಸೂಕ್ತನಾ? ಅಂತ ಹೇಳಿದ್ದಾರೆ. ಯಾರು ಜೀವ ತುಂಬ ಬೇಕು? ಸಾಧು ಸಂತರು ತುಂಬಬೇಕು. ಶಂಕರಾಚಾರ್ಯರು, ನಾನು ಮಾಡಲ್ಲ ಅಂತ ಹೇಳಿದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Advertisement
Share this on...