ಶುಕ್ರವಾರ (ಜನವರಿ 21, 2023), ಬಾಗೇಶ್ವರ ಧಾಮದ ಮಹಂತ್ ಪಂಡಿತ್ ಧೀರೇಂದ್ರ ಶಾಸ್ತ್ರಿ (Mahant Pandit Dhirendra Shastri) ಅವರ ವೇದಿಕೆಯಲ್ಲಿ ಮುಸ್ಲಿಂ ಮಹಿಳೆ ಸುಲ್ತಾನಾ ಬೇಗಂ ಸನಾತನ ಧರ್ಮಕ್ಕೆ ಮರಳಿದರು. ಈ ದಿನಗಳಲ್ಲಿ ಧೀರೇಂದ್ರ ಶಾಸ್ತ್ರಿ ಅವರು ಛತ್ತೀಸ್ಗಢದಲ್ಲಿ ತಮ್ಮ ದರ್ಬಾರ್ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ, ಸುಲ್ತಾನಾ ಬೇಗಂ ತನ್ನ ಸ್ವಂತ ಇಚ್ಛೆಯ ಮೇರೆಗೆ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಕ್ರಿಶ್ಚಿಯನ್ ಮಿಷನರಿಗಳ ಬೆನ್ನು ಮೂಳೆ ಮುರಿಯುತ್ತಿರುವ ಹಾಗು ಮತಾಂತರವಾದ ಸಾವಿರಾರು ಕುಟುಂಬಗಳನ್ನ ಮರಳಿ ಮಾತೃ ಧರ್ಮಕ್ಕೆ ಕರೆತರುತ್ತಿರುವ ಪಂಡಿತ್ ಧೀರೇಂದ್ರ ಶಾಸ್ತ್ರಿಜೀ ಯವರನ್ನ ಹೇಗಾದರೂ ಮಾಡಿ ಹಣಿಯಲೇಬೇಕು ಎಂದು ಧೀರೇಂದ್ರ ಶಾಸ್ತ್ರಿ ಮೂಢನಂಬಿಕೆಗಳನ್ನು ಹರಡುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ‘ರಿಪಬ್ಲಿಕ್ ಟಿವಿ’ ಟ್ವೀಟ್ ಮಾಡಿದ್ದು, ಅದರಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಸ್ವಯಂಪ್ರೇರಣೆಯಿಂದ ಸನಾತನ ಧರ್ಮಕ್ಕೆ ಘರ್ವಾಪಸಿ ಮಾಡುತ್ತಿರುವುದನ್ನ ಕಾಣಬಹುದು. ವೀಡಿಯೊದಲ್ಲಿ 26 ಸೆಕೆಂಡುಗಳ ನಂತರ, ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರು ಇಂದು ಈ ಸಹೋದರಿ ಬಲೇಶ್ವರ ಬಾಲಾಜಿಯ ಪವಾಡವನ್ನು ನೋಡಿದ ನಂತರ ಮತ್ತು ಸನಾತನ ಹಿಂದೂ ಧರ್ಮವನ್ನು ಪ್ರಮುಖವೆಂದು ಪರಿಗಣಿಸಿ ಹಿಂದೂ ಧರ್ಮಕ್ಕೆ ಘರ್ವಾಪಸಿ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಇದಾದ ನಂತರ ಮುಸ್ಲಿಂ ಮಹಿಳೆ ಮಾತನಾಡುತ್ತ, “ನನ್ನ ಹೆಸರು ಸುಲ್ತಾನಾ. ನಾನು ಛತ್ತೀಸ್ಗಢ ಬಿಲಾಸ್ಪುರದವಳು. ನನ್ನ ತಂದೆಯ ಹೆಸರು ಅಮೀರ್ ಖಾನ್ ಮತ್ತು ತಾಯಿಯ ಹೆಸರು ಸರ್ವಾರಿ ಬೇಗಂ. ನಾನು ವಿಗ್ರಹಗಳನ್ನು ಪೂಜಿಸುತ್ತೇನೆ, ಅದಕ್ಕಾಗಿಯೇ ನನ್ನ ಕುಟುಂಬ ಸದಸ್ಯರು ನನ್ನನ್ನು ತ್ಯಜಿಸಿದ್ದಾರೆ. ಈ ಜನರು ನನಗೆ ಮುಸಲ್ಮಾನರ ಹೆಸರಿಗೆ ಕಳಂಕ. ನಾನು ಸತ್ತರೆ, ನಾನು ನರಕಕ್ಕೆ ಹೋಗುತ್ತೇನೆ ಎಂದು ಹೇಳುತ್ತಾರೆ” ಎನ್ನುತ್ತಾರೆ.
#BREAKING | बागेश्वर दरबार में धीरेंद्र शास्त्री ने कुछ लोगों को हिंदू धर्म में वापसी करवाई
देखते रहिए रिपब्लिक भारत #LIVE: https://t.co/h34cjWzjtJ pic.twitter.com/bppHrEyNts
— रिपब्लिक भारत (@Republic_Bharat) January 21, 2023
ಸುಲ್ತಾನಾ ಬೇಗಂ ಮುಂದೆ ಮಾತನಾಡುತ್ತ, “ಹಿಂದೂ ಧರ್ಮಕ್ಕಿಂತ ಉತ್ತಮವಾದ ಧರ್ಮ ಮತ್ತೊಂದಿಲ್ಲ ಎಂದು ನನ್ನ ಮನಸ್ಸು ಹೇಳುತ್ತದೆ. ಏಕೆಂದರೆ ಈ ಧರ್ಮ ನಾಗರಿಕತೆಯ ಧರ್ಮ, ಆಚರಣೆಗಳ ಧರ್ಮ. ಇಲ್ಲಿ ಸಹೋದರ ಸಹೋದರಿಯರ ನಡುವೆ ಯಾವುದೇ ಮದುವೆಗಳಾಗಲ್ಲ. ಹಿಂದೂ ಧರ್ಮದಲ್ಲಿ ಮಹಿಳೆಯರ ಜೀವನ ನರಕಸದೃಶವಾಗಲ್ಲ. ಇಲ್ಲಿ ಟ್ರಿಪಲ್ ತಲಾಖ್ ಇಲ್ಲ. ಇದರಲ್ಲಿ ಸಪ್ತಪದಿ ತುಳಿದು ಅಗ್ನಿ ಸಾಕ್ಷಿಯಾಗಿ ಮದುವೆಯಾಗುವ ಸಂಸ್ಕ್ರತಿಯಿದೆ. ಅದರಲ್ಲಿ ಸಿಂಧೂರ ಮುಖ್ಯ, ಮಂಗಳಸೂತ್ರ ಮುಖ್ಯ. ಇಡೀ ಹದಿನಾರು ಶೃಂಗಾರಗಳಿಗೆ ಪ್ರಾಮುಖ್ಯತೆ ಇದೆ. ಲಡ್ಡು ಗೋಪಾಲನನ್ನೂ ಪೂಜಿಸುತ್ತೇನೆ” ಎಂದರು.
ಬಾಗೇಶ್ವರ್ ಧಾಮ್ ಸರ್ಕಾರ್ ನ ಫೇಸ್ಬುಕ್ ಪೇಜ್ ನಲ್ಲೂ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. ಪೋಸ್ಟ್ನ ಟೈಟಲ್, “ಇಂದು (ಜನವರಿ 21, 2023) ದಿವ್ಯ ದರ್ಬಾರ್ ನಲ್ಲಿ ಬಾಗೇಶ್ವರ್ ಧಾಮ್ ಸರ್ಕಾರ್ ವೇದಿಕೆಯಲ್ಲಿ ಮುಸ್ಲಿಂ ಮಹಿಳೆ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ” ಎಂದು ಬರೆಯಲಾಗಿದೆ.
ಕೆಲ ದಿನಗಳ ಹಿಂದೆ ಮಹಂತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಮಹಾರಾಷ್ಟ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿ’ಯ ರಾಷ್ಟ್ರೀಯ ಸಂಚಾಲಕ ಶ್ಯಾಮ್ ಮಾನವ್ ಅವರು ಧೀರೇಂದ್ರ ಕೃಷ್ಣ ಶಾಸ್ತ್ರಿ ಮೂಢನಂಬಿಕೆಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೆ ಸವಾಲು ಹಾಕಿದ್ದೆ. ಇದೇ ಕಾರಣಕ್ಕಾಗಿ ಆತ ಎರಡು ದಿನಗಳ ಹಿಂದೆ ನಾಗ್ಪುರದಿಂದ ಓಡಿ ಹೋಗಿದ್ದರು ಎಂದು ಹೇಳಿದ್ದರು.
ಇದೇ ವೇಳೆ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಇಡೀ ವಿವಾದದ ಬಗ್ಗೆ ಮಾಧ್ಯಮಗಳ ಮುಂದೆ ತಮ್ಮ ನಿಲುವನ್ನು ಮಂಡಿಸಿದ್ದರು. ತಮ್ಮ ಪ್ರೇರಣೆಯಿಂದ ಜನರು ಸನಾತನ ಧರ್ಮಕ್ಕೆ ಮರಳುತ್ತಿದ್ದಾರೆ. ಇದೇ ಕಾರಣಕ್ಕಾಗಿ ಮಿಷನರಿಗಳು ಕೋಟಿಗಟ್ಟಲೆ ಖರ್ಚು ಮಾಡಿ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಈಗ ಕ್ರಮೇಣ ಮಹಂತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೆ ಸಿಗುತ್ತಿರುವ ಬೆಂಬಲ ಹೆಚ್ಚುತ್ತಿದೆ. ಅವರ ಬೆಂಬಲಕ್ಕೆ ಬಾಬಾ ರಾಮದೇವ್ ಕೂಡ ಮುಂದೆ ಬಂದಿದ್ದಾರೆ.