ಪಣಜಿ: ಸ್ಥಳೀಯ ಕ್ರಿಶ್ಚಿಯನ್ನರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಗೋವಾ ಜಿಲ್ಲೆಯ ವಾಸ್ಕೋ ಪಟ್ಟಣದ ಸಮೀಪ ಇರುವ ಸಾವೊ ಜಸಿಂಟೊ ದ್ವೀಪದಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ರದ್ದುಪಡಿಸಿರುವುದಾಗಿ ನೌಕಾಪಡೆ ತಿಳಿಸಿದ್ದು ಇದರ ಬೆನ್ನಲ್ಲೇ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಿಡಿಮಿಡಿಗೊಂಡಿದ್ದು ಧ್ವಜಾರೋಹಣ ಕಾರ್ಯಕ್ರಮ ನಿಗದಿಯಂತೆ ಮುಂದುವರಿಸುವಂತೆ ಸೂಚಿಸಿದ್ದಾರೆ. ಮಾತ್ರವಲ್ಲದೆ ದ್ವೀಪವಾಸಿಗಳಿಗೆ ಯಾವುದೇ “ಭಾರತ ವಿರೋಧಿ ಚಟುವಟಿಕೆಗಳನ್ನು” “ಕಟ್ಟುನಿಟ್ಟಿನ ಕ್ರಮ” ದೊಂದಿಗೆ ನಿಭಾಯಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ನಡೆಸುತ್ತಿರುವ ‘ಆಜಾದಿ ಕಾ ಅಮೃತ್ ಮಹೋತ್ಸವ’ವದ ಭಾಗವಾಗಿ ಆಗಸ್ಟ್ 13 ಮತ್ತು 15ರ ನಡುವೆ ರಾಷ್ಟ್ರದಾದ್ಯಂತ ದ್ವೀಪಗಳಲ್ಲಿ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲು ರಕ್ಷಣಾ ಸಚಿವಾಲಯ ಉದ್ದೇಶಿಸಿತ್ತು. ಈ ಪ್ಯಾನ್-ಇಂಡಿಯಾ ಉಪಕ್ರಮದ ಭಾಗವಾಗಿ ಗೋವಾ ನೌಕಾ ಪ್ರದೇಶದ ತಂಡವು ಸಾವೊ ಜಾಸಿಂಟೊ ದ್ವೀಪ ಸೇರಿದಂತೆ ಗೋವಾ ದ್ವೀಪಗಳಿಗೆ ಭೇಟಿ ನೀಡಿತು.
ಆದರೆ, ನಿವಾಸಿಗಳು ವಿರೋಧ ವ್ಯಕ್ತಪಡಿಸಿರುವುದರಿಂದ ಸಾವೊ ಜಸಿಂಟೊ ದ್ವೀಪದಲ್ಲಿನ ಯೋಜನೆಯನ್ನು ರದ್ದುಗೊಳಿಸಬೇಕಾಯಿತು ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದರು.
“ನಿಗದಿತ ಕಾರ್ಯಕ್ರಮದಂತೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುವಂತೆ ನೌಕಾಪಡೆ ಅಧಿಕಾರಿಗಳಿಗೆ ನಾನು ಮನವಿ ಮಾಡಿದ್ದೇನೆ. ದ್ವೀಪದಲ್ಲಿ ಕೆಲವರು ಧ್ವಜಾರೋಹಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿ ಇಂತಹ “ಭಾರತ ವಿರೋಧಿ” ಕೃತ್ಯಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದಕ್ಷಿಣ ಗೋವಾದ ಸಾವೊ ಜಸಿಂತೋ ದ್ವೀಪದಲ್ಲಿ ರಾಷ್ಟ್ರಧ್ವಜ ಹಾರಿಸಲು ವಿರೋಧ ವ್ಯಕ್ತಿಪಡಿಸಿದ್ದ ಸ್ಥಳೀಯ ನಿವಾಸಿಗಳಿಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ನೌಕಾಪಡೆಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಮುಂದುವರೆಸುವಂತೆ ಸೂಚಿಸಿರುವ ಸಾವಂತ್, ಗೋವಾ ಪೊಲೀಸರು ತತ್ಸಂಬಂಧವಾಗಿ ಪೂರ್ಣ ಸಹಕಾರ ನೀಡವರು ಎಂದಿದ್ದಾರೆ.
ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮದ ಅಂಗವಾಗಿ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ರಕ್ಷಣಾ ಸಚಿವಾಲಯ ದೇಶದ ಎಲ್ಲ ದ್ವೀಪಗಳಲ್ಲಿ ಆಗಸ್ಟ್ 13 ರಿಂದ 15 ರ ನಡುವೆ ಧ್ವಜಾರೋಹಣವನ್ನು ಆಯೋಜಿಸಿದೆ. ಆದರೆ, ಈ ಸಂಬಂಧ ದಕ್ಷಿಣ ಗೋವಾ ಜಿಲ್ಲೆಯ ವಾಸ್ಕೋ ಪಟ್ಟಣದಲ್ಲಿರುವ ಸಾವೋ ಜಸಿಂತೋ ದ್ವೀಪಕ್ಕೆ ಭೇಟಿ ನೀಡಿದಾಗ, ಕೆಲವು ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅಲ್ಲಿನ ಕಾರ್ಯಕ್ರಮವನ್ನು ರದ್ದುಗೊಳಿಸುತ್ತಿರುವುದಾಗಿ ಐಎನ್ಎಸ್ ಹಂಸದ ಗೋವಾ ಅಧಿಕಾರಿಗಳು ಹೇಳಿಕೆ ನೀಡಿದ್ದರು.
ಈ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ರಾಜ್ಯದ ಸಿಎಂ ಪ್ರಮೋದ್ ಸಾವಂತ್, “ಕೆಲವು ವ್ಯಕ್ತಿಗಳು ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ, ಇಂಥ ನಡವಳಿಕೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲಿಚ್ಛಿಸುತ್ತೇನೆ” ಎಂದಿದ್ದಾರೆ.
I have requested the Indian Navy to go ahead with their original plan and have assured full cooperation from Goa Police. These attempts of Anti-India activities shall be dealt with an iron fist. It will always be Nation First.2/2
— Dr. Pramod Sawant (@DrPramodPSawant) August 13, 2021
“ನೌಕಾಪಡೆಗೆ ತಮ್ಮ ಯೋಜನೆಯಂತೆ ಕಾರ್ಯಕ್ರಮ ನಡೆಸಲು ಹೇಳಿದ್ದು, ಗೋವಾ ಪೊಲೀಸರು ಇದಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ” ಎಂದಿರುವ ಸಿಎಂ, “ಈ ತೆರನ ಭಾರತವಿರೋಧಿ ಚಟುವಟಿಕೆಗಳ ಪ್ರಯತ್ನಗಳ ವಿರುದ್ಧ ತಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಯಾವಾಗಲೂ ರಾಷ್ಟ್ರವೇ ಮೊದಲು” ಎಂದಿದ್ದಾರೆ.