ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಉತ್ತರ ಪ್ರದೇಶದ ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಹೆಸರು ತಯ್ಯಬ್ ಅನ್ಸಾರಿ ಎಂಬುದಾಗಿದ್ದು ಈತನ ವಯಸ್ಸು 52 ವರ್ಷ. ಸಂತ್ರಸ್ತೆ ಕಾಂಗ್ರೆಸ್ ಮುಖಂಡನ ಮೇಲೆ ಮದುವೆಯಾಗುತ್ತೇನೆ ಎಂದು ತನಗೆ ಮೋಸ ಮಾಡಿ ಹಣ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತಯ್ಯಬ್ ಸುಮಾರು 2 ತಿಂಗಳ ಕಾಲ ತಲೆಮರೆಸಿಕೊಂಡಿದ್ದ. ಆದರೆ ಶುಕ್ರವಾರ (ಜನವರಿ 13, 2023) ಪೋಲಿಸರು ಆತನನ್ನ ಬಂಧಿಸಿದ್ದಾರೆ.
ಲಕ್ನೋ ಪೊಲೀಸರ ಪ್ರಕಾರ, ಪ್ರಕರಣ ಚಿನಹಟದಲ್ ಪೊಲೀಸ್ ಠಾಣೆ ವ್ಯಾಪ್ತಿಯದ್ದಾಗಿದೆ. ಇಲ್ಲಿ ನವೆಂಬರ್ 2022 ರಲ್ಲಿ, ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರಕ್ಕಾಗಿ ತಯ್ಯಬ್ ಎಂಬ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆರೋಪಿ ತನ್ನನ್ನು ಕಾಂಗ್ರೆಸ್ ಪಕ್ಷದ ದೊಡ್ಡ ನಾಯಕ ಎಂದು ಬಣ್ಣಿಸಿಕೊಂಡು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತನಗೆ ಟಿಕೆಟ್ ನೀಡುವ ಭರವಸೆಯನ್ನೂ ನೀಡಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ತಯ್ಯಬ್ ಅನ್ಸಾರಿಯ ಮೇಲೆ ಮದುವೆ ಮಾಡಿಕೊಳ್ತೀನಿ ಎಂದು ಭರವಸೆ ನೀಡಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪವಿದೆ. ತಯ್ಯಬ್ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಮಹಿಳೆ ಭಾವಿಸಿದಾಗ, ಆಕೆ ಪ್ರಕರಣವನ್ನು ದಾಖಲಿಸಿದ್ದಾಳೆ.
ಪ್ರಕರಣ ದಾಖಲಾದ ಬಳಿಕ ಆರೋಪಿ ತಯ್ಯಬ್ ಪರಾರಿಯಾಗಿದ್ದ. ಆತನ ಪತ್ತೆಗಾಗಿ ಪೊಲೀಸ್ ತಂಡಗಳು ಶೋಧ ಕಾರ್ಯ ಮುಂದುವರೆಸಿದ್ದವು. ಏತನ್ಮಧ್ಯೆ, ಸುಮಾರು 2 ತಿಂಗಳ ಪರಿಶ್ರಮದ ನಂತರ ಪೊಲೀಸರಿಗೆ ಕೊನೆಗೂ ಯಶಸ್ಸು ಸಿಕ್ಕಿತು. ಆರೋಪಿ ತಯ್ಯಬ್ ಅನ್ಸಾರಿ ಲಕ್ನೋದಿಂದ ಸುಮಾರು 250 ಕಿಮೀ ದೂರದಲ್ಲಿರುವ ಬರೇಲಿಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಪೊಲೀಸ್ ತಂಡವು ಅಲ್ಲಿಗೆ ತಲುಪಿದಾಗ, ಬರೇಲಿಯ ಮೋತಿ ಮಹಲ್ ಹೆಸರಿನ ಹೋಟೆಲ್ನಲ್ಲಿ ತಯ್ಯಬ್ ನ ಲೊಕೇಷನ್ ಪತ್ತೆಯಾಗಿದೆ. ಇಲ್ಲಿ ತಯ್ಯಬ್ ರೂಮ್ ನಂಬರ್ 110 ರಲ್ಲಿ ತಂಗಿದ್ದ.
— LUCKNOW POLICE (@lkopolice) January 14, 2023
ಪೊಲೀಸರು ಖೆಡ್ಡಾಅ ತೋಡಿ ಅನ್ಸಾರಿಯನ್ನು ಬಂಧಿಸಿದ್ದಾರೆ. ಮೊದಲಿಗೆ ತಯ್ಯಬ್ ತನ್ನ ಪ್ರಭಾವದ ಬಗ್ಗೆ ಹೇಳುತ್ತ ಪೊಲೀಸರನ್ನು ಒತ್ತಡಕ್ಕೆ ತರಲು ಪ್ರಯತ್ನಿಸಿದನು ಆದರೆ ಯಾವುದೂ ಫಲ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಪೊಲೀಸರ ವಿಚಾರಣೆಯಲ್ಲಿ ತಯ್ಯಬ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 120ಬಿ, 376, 328, 342, 506, 406 ಮತ್ತು 420 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು ತಯ್ಯಬ್ ಅನ್ಸಾರಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಕಾಂಗ್ರೆಸ್ ಟಿಕೆಟ್ ಕೊಡಿಸುತ್ತೇನೆ ಎಂಬ ಹೆಸರಿನಲ್ಲಿ ತಯ್ಯಬ್ ಇತರ ಕೆಲವರನ್ನೂ ಇದೇ ರೀತಿಯ ವಂಚನೆಗೆ ಬಲಿಪಶು ಮಾಡಿದ್ದಾನೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಯ್ಯಬ್ ಅನ್ಸಾರಿಯ ದೃಢೀಕರಣದ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಇದುವರೆಗೂ ಯಾವುದೇ ಹೇಳಿಕೆ ಬಂದಿಲ್ಲ.
ಇದನ್ನೂ ಓದಿ:
ಮಕ್ಕಳಿಗೆ ಪಾಠ ಮಾಡಿಸೋಕೆ ಹಿಂದೂ ಟೀಚರ್ನ್ನ ಮನೆಗೆ ಕರೆಸಿಕೊಂಡು ರೇ-ಪ್ ಮಾಡಿ ವಿಡಿಯೋ ಮಾಡಿದ ಅಬ್ದುಲ್ ಕಾಸಿಮ್: ಇಸ್ಲಾಂಗೆ ಮತಾಂತರವಾದರೆ ಡಿಲೀಟ್ ಮಾಡುವುದಾಗಿ ಧಮಕಿ
ಮಧ್ಯಪ್ರದೇಶದ ಶ್ಯೋಪುರ ಪೊಲೀಸರು ಅಬ್ದುಲ್ ಕಾಸಿಂನನ್ನು ಬಂಧಿಸಿದ್ದಾರೆ. ಮಹಿಳೆ ಮೇಲೆ ರೇ-ಪ್, ಅಶ್ಲೀಲ ವಿಡಿಯೋ ಮಾಡಿ ಹಣ ವಸೂಲಿ ಮಾಡಿದ ಆರೋಪ ಈತನ ಮೇಲಿದೆ. ವಿಡಿಯೋ ಡಿಲೀಟ್ ಮಾಡುವ ಹೆಸರಿನಲ್ಲಿ ಅಬ್ದುಲ್ ತನ್ನ ಮೇಲೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದ ಎಂದು ಸಂತ್ರಸ್ತೆ ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಮಹಿಳೆ ಪೋಲಿಸರಿಗೆ ಭಾನುವಾರ (8 ಜನವರಿ 2023) ದೂರನ್ನು ನೀಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣ ಶ್ಯೋಪುರದ ಜಯಶ್ರೀ ಪ್ಯಾಲೇಸ್ ಪ್ರದೇಶದ್ದಾಗಿದೆ. 22 ವರ್ಷದ ಸಂತ್ರಸ್ತೆ ಶಾನು ಅಲಿಯಾಸ್ ಅಬ್ದುಲ್ ಕಾಸಿಮ್ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ತಾನು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೇನೆ ಎಂದು ಬಿಎಸ್ಸಿ ಪಾಸ್ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಆಟೋ ಚಾಲಕ ಅಬ್ದುಲ್ ಕಾಸಿಂ ಸ್ಥಳೀಯ ನಿವಾಸಿಯಾಗಿದ್ದಾನೆ.
2018ರ ನವೆಂಬರ್ 2ರಂದು ಸಂತ್ರಸ್ತೆ ಶಾಲೆಗೆ ಹೋಗುತ್ತಿದ್ದೆ. ಅಣ್ಣನ ಮಕ್ಕಳಿಗೆ ಪಾಠ ಮಾಡುವ ನೆಪದಲ್ಲಿ ಅಬ್ದುಲ್ ತನ್ನನ್ನು ಮನೆಯೊಳಗೆ ಕರೆದಿದ್ದಾನೆ. ಮನೆಯೊಳಗೆ ಪ್ರವೇಶಿಸಿದ ತಕ್ಷಣ, ಅಬ್ದುಲ್ ಬಲವಂತವಾಗಿ ಬಾಗಿಲು ಮುಚ್ಚಲು ಪ್ರಾರಂಭಿಸಿದನು. ಸಂತ್ರಸ್ತೆ ವಿರೋಧ ವ್ಯಕ್ತಪಡಿಸಿದಾಗ ಅಬ್ದುಲ್ ಮನೆಯಲ್ಲಿದ್ದ ಮ್ಯೂಸಿಕ್ ಸಿಸ್ಟಮ್ ನ ಸೌಂಡ್ನ್ನ ಹೆಚ್ಚಿಸಿದ. ಇದಾದ ಬಳಿಕ ರೇ-ಪ್ ಮಾಡಿ ವಿಡಿಯೋ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಶ್ಲೀಲ ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ನಂತರವೂ ಅಬ್ದುಲ್ ತನ್ನ ಮೇಲೆ ಹಲವಾರು ಬಾರಿ ಅ ತ್ಯಾ ಚಾ ರವೆಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಬ್ಲ್ಯಾಕ್ ಮೇಲ್ ಮತ್ತು ಬೆದರಿಕೆಗಳಿಂದ ಅವನಿಂದ ಚೇತರಿಸಿಕೊಳ್ಳಲು ಪ್ರಾರಂಭಿಸಿದೆ. ಸಂತ್ರಸ್ತ ಮಹಿಳೆ ತನ್ನ ಸಂಬಳ, ತಾಯಿಯ ಸೇವಿಂಗ್ಸ್ ಮತ್ತು ಅಕ್ಕನಿಂದ ಸಾಲ ಮಾಡಿ ಒಟ್ಟು 4 ಲಕ್ಷ 70 ಸಾವಿರ ರೂ.ಗಳನ್ನು ಕಾಸಿಂಗೆ ನೀಡಿದ್ದಾಳೆ. ಸಂತ್ರಸ್ತೆಯ ಪ್ರಕಾರ, ಒಂದು ವರ್ಷದ ಹಿಂದೆ ತನಗೆ ಅಬ್ದುಲ್ ಮದುವೆಯಾಗಿ ಎರಡು ಮಕ್ಕಳ ತಂದೆ ಎಂಬ ವಿಷಯ ಗೊತ್ತಾಯಿತು. ಬಳಿಕ ತನ್ನ ವೀಡಿಯೊವನ್ನು ಡಿಲೀಟ್ ಮಾಡುವಂತೆ ಕಾಸಿಮ್ಗೆ ಕೇಳಿದಳು.
ವಿಡಿಯೋ ಡಿಲೀಟ್ ಮಾಡಬೇಕೆಂದರೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಸಂತ್ರಸ್ತೆಯ ಮುಂದೆ ಕಾಸಿಂ ಷರತ್ತು ಹಾಕಿದ್ದ ಎನ್ನಲಾಗಿದೆ. ಅದೇ ಸಮಯದಲ್ಲಿ, ಅವನು ಅವಳನ್ನು ಮದುವೆಯಾಗಲು ಮತ್ತು ಅವಳನ್ನು ತನ್ನ ಎರಡನೇ ಹೆಂಡತಿಯಾಗಿ ಇರಿಸಿಕೊಳ್ಳಲು ಪ್ರಸ್ತಾಪಿಸಿದನು. ಕಿರುಕುಳದಿಂದ ಬೇಸತ್ತು ಹಲವು ಬಾರಿ ಆತ್ಮಹತ್ಯೆಗೂ ಯತ್ನಿಸಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಪೊಲೀಸರಿಗೆ ದೂರು ನೀಡಿದರೆ ಕುಟುಂಬ ಸಮೇತ ತನ್ನನ್ನು ಕೊ ಲೆ ಮಾಡುವುದಾಗಿ ಅಬ್ದುಲ್ ಬೆದರಿಕೆ ಹಾಕಿದ್ದ. ಕೊನೆಗೆ ಎರಡೂವರೆ ವರ್ಷದ ನಂತರ ಯುವತಿ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ತಾಯಿ ವಿಶ್ವ ಹಿಂದೂ ಪರಿಷತ್ತಿನವರಿಗೆ ಘಟನೆಯ ಬಗ್ಗೆ ತಿಳಿಸಿದ್ದು, ಅವರೆಲ್ಲರೂ ಪೊಲೀಸ್ ಠಾಣೆಗೆ ಬಂದರು.
ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಶಾನು ಅಲಿಯಾಸ್ ಅಬ್ದುಲ್ ಕಾಸಿಂನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376, 366, 384 ಮತ್ತು 506 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.