ನಾನು ತಪ್ಪು ಮಾಡಿಬಿಟ್ಟೆ, ಆ ಒಂದು ತಪ್ಪಿನಿಂದ ಈಗ ನನ್ನ ಕುಟುಂಬದ 13 ಜನ….

in Kannada News/News 400 views

ಗಾಜಿಯಾಬಾದ್:

Advertisement
ಕರೋನಾದಿಂದ ಗುಣಮುಖನಾಗಿ ಮನೆಗೆ ತಲುಪಿದ ಮಸೂರಿ ನಿವಾಸಿಯಾದ ಜಮಾತಿ ಯುವಕನಿಗೆ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಲ್ಲಿ ಸ್ನಾನ ಮಾಡಲು ಸೋಪ್ ಮತ್ತು ಹಲ್ಲುಜ್ಜುವ ಬ್ರಷ್ ನೀಡಿದ್ದರು. ಕರೋನಾದಿಂದ ಗುಣಮುಖನಾದ ಈ ಜಮಾತಿ ಯುವಕನಿಗೆ ಈಗ ತನ್ನ ತಪ್ಪಿನ ಅರಿವಾಗಿದೆ. ಈ ಬಗ್ಗೆ ಮಾತನಾಡಿದ ಜಮಾತಿ ಯುವಕ ತಾನು ತನ್ನ ಕುಟುಂಬದವರಿಂದ ಒಂದೋ ದೂರವಿರಬೇಕಿತ್ತು ಇಲ್ಲ ತಬ್ಲಿಗಿ ಜಮಾತ್‌ಗೆ ಹೋಗಿರದಿದ್ದರೆ ಇಂದು ಇಂತಹ ಸಂಕಷ್ಟ ಎದುರಿಸುವ ಪ್ರಮೇಯವೇ ಬರುತ್ತಿರಲಿಲ್ಲ. ನನ್ನ ಈ ಒಂದು ತಪ್ಪಿನಿಂದಾಗಿ ನನ್ನ ಕುಟುಂಬದ 13 ಜನ ಸದಸ್ಯರು ಈಗ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಸೋಮವಾರದಂದು ವೈದ್ಯರುಗಳು ನನ್ನನ್ನ ಚಪ್ಪಾಳೆಯೊಂದಿಗೆ ಬೀಳ್ಕೊಟ್ಟು ಮನೆಗೆ ಕಳುಹಿಸಿದರು ಎಂದು ಯುವಕ ಹೇಳಿದ್ದಾನೆ.

ಸಲ್ಮಾನ್ ಚೌಧರಿ ತನ್ನ ಕುಟುಂಬದ ಜೊತೆ ಮಸೂರಿಯಲ್ಲಿ ವಾಸವಾಗಿದ್ದಾನೆ. ಆತ ನೋಯ್ಡಾದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಸೂರಿಯಿಂದ ಆತ ಮಾರ್ಚ್ 20 ರಂದು ನಾಲ್ಕು ವಾರಗಳ ಕಾಲ ಏರ್ಪಡಿಸಿದ್ದ ದೆಹಲಿಯಲ್ಲಿರುವ ಮರ್ಕಜ್‌ಗೆ ಹೋಗಿದ್ದ.‌ ಬಳಿಲ ಲಾಕ್‌ಡೌನ್ ಘೋಷಣೆಯಾದ್ದರಿಂದ ಆತ ಮಾರ್ಚ್ 26 ರಂದು ದೆಹಲಿಯ ಮರ್ಕಜ್ ನಿಂದ ಮಸೂರಿಗೆ ನಡೆದುಕೊಂಡೇ ಮನೆ ತಲುಪಿದ್ದ.

ಈ ಮಧ್ಯೆ ಮರ್ಕಜ್ ನಿಂದ ಕೊರೋನಾ ಹಬ್ಬಿರುವ ಸುದ್ದಿ ಬಂದ ಬಳಿಕ ಆರೋಗ್ಯ ಇಲಾಖೆಯ ತಂಡ ಮಾರ್ಚ್ 30 ರಂದು ಆತನನ್ನ ಜಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆತನನ್ನ ತಪಾಸಣೆಗೆ ಒಳಪಡಿಸಿದ ಬಳಿಕ ಆತನ ರಿಪೋರ್ಟ್ ಪಾಸಿಟಿವ್ ಬಂದ ಬಳಿಕ ಆತನನ್ನ ಗಾಜಿಯಾಬಾದ್ ನಿಂದ ದೆಹಲಿಗೆ ರೆಫರ್ ಮಾಡಲಾಯಿತು. ದೆಹಲಿಯ ಮುರಾದನಗರ್ ನಲ್ಲಿರುವ ಆಸ್ಪತ್ರೆಯಲ್ಲಿ ಆತನನ್ನ ದಾಖಲು ಮಾಡಲಾಯಿತು. ಈತನಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದ್ದರಿಂದ ಆರೋಗ್ಯ ಇಲಾಖೆಯ ತಂಡ ಈತನ ಕುಟುಂಬದ 13 ಜನರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದರು. ಈತನ ಕುಟುಂಬದಲ್ಲಿ ತಾಯಿ, ತಂದೆ, ಸಹೋದರ, ಇಬ್ಬರು ಸಹೋದರಿಯರು, ಅತ್ತಿಗೆ, ಇಬ್ಬರು ಮಕ್ಕಳು ಇದ್ದರು. ಇವರೆಲ್ಲಾ ತಮ್ಮ ಜವಾಬ್ದಾರಿಯನ್ನ ಅರಿತು ಚಿಕಿತ್ಸೆಗೆ ಸಹಕರಿಸಿರು. ಬಳಿಕ ಇವರೆಲ್ಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬರುವ ಸಂದರ್ಭದಲ್ಲಿ ಅಲ್ಲಿನ ಜನ ತಮ್ಮ ಮನೆಗಳ ಮೇಲೆ ನಿಂತು ಚಪ್ಪಾಳೆಗಳ ಮೂಲಕ ಸ್ವಾಗತಿಸಿದರು.

ಇಡೀ ಕುಟುಂಬಕ್ಕೆ ಕೊರೋನಾ ಹಬ್ಬುವ ಭೀತಿಯಿತ್ತು

ಯಾವಾಗ ಈ ಪರಿವಾರದ ಸದಸ್ಯರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತೋ ಆಗ ಈತನಿಗೆ ತನ್ನ ತಪ್ಪಿನ ಅರಿವಾಯಿತು. ಈ ಯುವಕನ ಒಂದು ತಪ್ಪಿನಿಂದ ಇಡೀ ಕುಟುಂಬ ಇಂದು ಸಮಸ್ಯೆ ಎದುರಿಸುವಂತಾಗುತ್ತಿದೆ. ಕೊರೋನಾ ಹಬ್ಬಿರುವ ಸಂದರ್ಭದಲ್ಲಿ ತಾನು ಜಮಾತ್‌ಗೆ ಹೋಗಿರಲಿಲ್ಲ ಎಂದಿದ್ದರೆ ತನ್ನ ಕುಟುಂಬ ಈ ಸಂಕಷ್ಟಕ್ಕೆ ಸಿಲುಕುತ್ತಿತಲಿಲ್ಲ. ದೇವರ ದಯೆಯಿಂದ ಕುಟುಂಬ ಸದಸ್ಯರ ಕೊರೋನಾ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಆತ ತಿಳಿಸಿದ್ದಾನೆ.

ತಮ್ಮ ಸ್ವಂತ ಖರ್ಚಿನಲ್ಲಿ ಸಾಬೂನು, ಟೂತ್ ಬ್ರಷ್ ತರಿಸಿದ್ದ ವೈದ್ಯರು

ಆರೋಗ್ಯ ಇಲಾಖೆ ತಂಡವು ನನ್ನ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿತ್ತು. ಬೆಳಿಗ್ಗೆ ಮತ್ತು ಸಂಜೆ, ಆಸ್ಪತ್ರೆಯ ಗ್ಯಾಲರಿಯಲ್ಲಿ ವಾಕ್ ಮಾಡಲು ವೈದ್ಯರು ಅವಕಾಶ ನೀಡುತ್ತಿದ್ದರು. ಬೆಳಿಗ್ಗೆ ಹಾಲು ಮತ್ತು ಬ್ರೆಡ್ ಮತ್ತು ಮಧ್ಯಾಹ್ನ ಮತ್ತು ಸಂಜೆ ಪೌಷ್ಠಿಕ ಆಹಾರ ಲಭ್ಯವಿತ್ತು. ವೈದ್ಯರು ತಮ್ಮ ಸ್ವಂತ ಹಣದಿಂದ ಹಲ್ಲುಜ್ಜುವ ಬ್ರಷ್ ಮತ್ತು ಸಾಬೂನನ್ನ ನನಗೆ ನೀಡಿದ್ದರು. ನಾನು ಆಗ ತುಂಬಾ ಭಯಭೀತನಾಗಿದ್ದೆ, ಆದರೆ ವೈದ್ಯರುಗಳು ನನ್ನನ್ನ ಪ್ರೋತ್ಸಾಹಿಸುತ್ತಲೇ ಇದ್ದರು ಎಂದು ಈ ಯುವಕ ತಿಳಿಸಿದ್ದಾನೆ.

Advertisement
Share this on...