“ನಾನೊಬ್ಬ ದಲಿತ ಕ್ರಿಶ್ಚಿಯನ್, ಇಲ್ಲದಿದ್ದರೆ ಈ ಬ್ರಾಹ್ಮಣರ ಮೇಲೆ ಎಸ್‌ಸಿ/ಎಸ್‌ಟಿ ಆ್ಯಕ್ಟ್ ನಲ್ಲಿ ಕೇಸ್ ಹಾಕಿ ಒಳಗ್ ಹಾಕಸ್ತಿದ್ದೆ”: ಶಾಲಿನ್ ಮರಿಯಾ

in Uncategorized 2,297 views

ಎಡಪಂಥೀಯ ಪೋರ್ಟಲ್ ‘ದಿ ಕ್ವಿಂಟ್’ ನಲ್ಲಿ ಲೇಖನ ಬರೆಯುವ  ಆ್ಯಕ್ಟಿವಿಸ್ಟ್ ಶಾಲಿನ್ ಮರಿಯಾ ಲಾರೆನ್ಸ್ ಸುಳ್ಳು ಸುದ್ದಿಗಳನ್ನು ಹಬ್ಬಿಸುವಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ, ಆಕೆ ಟ್ವಿಟರ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಒಂದನ್ನ ಮಾಡಿದ್ದಾಳೆ. ಈಕೆ ಬ್ರಾಹ್ಮಣರನ್ನು ಗೇಲಿ ಮಾಡುತ್ತಾ, “ಒಬ್ಬ ಬ್ರಾಹ್ಮಣ ನೆರೆಹೊರೆಯಾತ ನನ್ನ ಮನೆಯಲ್ಲಿರುವ ವೈಫೈ ಕನೆಕ್ಷನ್‌ನ್ನ ಹಾಳು ಮಾಡಿದ. ಆತ ವೈಫೈ ಕೇಬಲ್‌ನೊಂದಿಗೆ ಟಿಂಕರ್ ಮಾಡಲು ಪ್ರಾರಂಭಿಸಿದ, ಇದರಿಂದಾಗಿ ನನ್ನ ವೈಫೈ ಕೆಲಸ ಮಾಡುವುದನ್ನು ನಿಲ್ಲಿಸಿತು. ಅವರು ಏರ್‌ಟೆಲ್ ಇಂಡಿಯಾಗೆ ಕರೆ ಮಾಡಿದರು ಮತ್ತು ನನ್ನ ದೂರಿನ ನಂತರ ಅದನ್ನು ಸರಿಪಡಿಸಲು ಬಾಕ್ಸ್ ಅನ್ನು ಬದಲಾಯಿಸುವಂತೆ ಹೇಳಿದರು” ಎಂದು ಟ್ವೀಟ್ ಮಾಡಿದ್ದಾಳೆ.

ಇದಾದ ಬಳಿಕ ಮರಿಯಾ ಲಾರೆನ್ಸ್ ಮತ್ತೊಂದು ಟ್ವೀಟ್ ಮಾಡಿದ್ದಾಳೆ. ತನ್ನ ಎರಡನೇ ಟ್ವೀಟ್‌ನಲ್ಲಿ, “ಇದು ಸ್ಪಷ್ಟ ಉಲ್ಲಂಘನೆಯಾಗಿದೆ. ಅವರು ನನ್ನ ವಿರುದ್ಧ ಹಲವಾರು ವರ್ಷಗಳಿಂದ ಮಾಡಿರುವ ಕೆಲಸಗಳಿಂದಾಗಿ ಎಸ್‌ಸಿ/ಎಸ್‌ಟಿ ಪ್ರಕರಣವನ್ನು ನಾನು ಅವರ ವಿರುದ್ಧ ದಾಖಲಿಸಬಹುದು. ಆದರೆ ನನಗೆ ಸಾಧ್ಯವಿಲ್ಲ, ಏಕೆಂದರೆ ನಾನು ಕ್ರಿಶ್ಚಿಯನ್ ದಲಿತ. ನಾನು SC/ST POA ಅಡಿಯಲ್ಲಿ ಬರುವುದಿಲ್ಲ” ಎಂದು ಬರೆದುಕೊಂಡಿದ್ದಾಳೆ

‘ದಿ ಕ್ವಿಂಟ್’ ನಲ್ಲಿ ಅಂಕಣಗಳನ್ನ ಬರೆಯವ ಪತ್ರಕರ್ತೆ ತನ್ನ ಟ್ವೀಟ್ ವೈರಲ್ ಆದ ನಂತರ ಅದನ್ನು ಡಿಲೀಟ್ ಮಾಡಿದ್ದಾಳೆ. ಆದರೆ, Twitter ನಲ್ಲಿ @iMac_too ಹೆಸರಿನ ಯೂಸರ್ ಅದರ ಸ್ಕ್ರೀನ್‌ಶಾಟ್ ತೆಗೆದುಕೊಂಡಿದ್ದಾರೆ. ಬ್ರಾಹ್ಮಣರ ಮೇಲಿನ ಆಕೆಯ ದ್ವೇಷವು ಈ ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಆಕೆಯ ಈ ಟ್ವೀಟ್ ನಿಂದಾಗಿ ಆಕೆ ಸೋಶಿಯಲ್ ಮೀಡಿಯಾಗಳಲ್ಲಿ ಯೂಸರ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಒಬ್ಬ ಯೂಸರ್ ಕಮೆಂಟ್ ಮಾಡುತ್ತ, “ಇತ್ತೀಚಿನ ದಿನಗಳಲ್ಲಿ ನನ್ನ ಇಂಟರ್ನೆಟ್ ತುಂಬಾ ನಿಧಾನವಾಗಿದೆ. ನನ್ನ ಊರಿನಲ್ಲಿ 5G ಕೂಡ ಸಿಗುತ್ತಿಲ್ಲ. ಇದು ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ ಯೂಸರ್ ಕಮೆಂಟ್ ಮಾಡುತ್ತ, “ಬಿಜೆಪಿಯನ್ನು ಸೋಲಿಸಲು ಜನರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಬೇಕೆಂದೂ ಈಕೆ ಬಯಸಿದ್ದಳು” ಎಂದು ಬರೆದಿದ್ದಾರೆ.

ಇನ್ನೊಬ್ಬ ಯೂಸರ್ ಕಮೆಂಟ್ ಮಾಡುತ್ತ, “ನರೇಂದ್ರ ಮೋದಿ? ಕ್ರೈಸ್ತರು/ಮುಸ್ಲಿಮರು ಎಂದಿಗೂ SC/ST ಸ್ಥಾನಮಾನವನ್ನು ನೀಡಬಾರದು ಎಂಬುದಕ್ಕೆ ಇದೇ ಕಾರಣ. ಅವರು ತುಳಿತಕ್ಕೊಳಗಾಗಿಲ್ಲ ಆದರೆ ಅವರು ಹಿಂದೂ/ವಿಗ್ರಹಾರಾಧನೆ ವಿರೋಧಿಗಳು. ಇಲ್ಲಿಯವರೆಗೆ ನಾನು ನಿಮ್ಮ ಎಲ್ಲಾ ‘ಮಾಸ್ಟರ್‌ಸ್ಟ್ರೋಕ್’ಗಳಲ್ಲಿ ನಿಮ್ಮನ್ನು ಬೆಂಬಲಿಸಿದ್ದೇನೆ, ಆದರೆ ದಯವಿಟ್ಟು ಅದನ್ನು ಬದಲಾಯಿಸಲು ನನ್ನನ್ನು ಕೇಳಬೇಡಿ.”

ಯೂಸರ್ ಗಳ ಕೆಂಗಣ್ಣಿಗೆ ಗುರಿಯಾದ ನಂತರ ಶಾಲಿನ್ ಮಾರಿಯಾ ಲಾರೆನ್ಸ್ ತನ್ನ ಎರಡೂ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾಳೆ. ಆಕೆ ತನ್ನ ಹೊಸ ಟ್ವೀಟ್‌ನಲ್ಲಿ, “ನಾನು ನನ್ನ ಹಿಂದಿನ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದೇನೆ. ಬ್ರಾಹ್ಮಣರು ಮತ್ತು ಆರೆಸ್ಸೆಸ್ ನದ ಶೂದ್ರರ ಜಾತಿ ನಿಂದನೆ ಮತ್ತು ಬೆದರಿಕೆಗಳನ್ನು ನಾನು ನಿಜವಾಗಿಯೂ ಸಹಿಸಲಾರೆ. ಜಾತಿ (caste) ನೆಟ್‌ವರ್ಕ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನ ಯೋಚಿಸಿದರೆ ಅದು ನಿಜಕ್ಕೂ ಭಯಾನಕವಾಗಿದೆ. ಅದನ್ನು ಸಾಬೀತುಪಡಿಸಲು ನಾನು ಮಾನಸಿಕವಾಗಿ ತೊಂದರೆ ಕೊಡುವುದಿಲ್ಲ. ನಾನು ಹೇಳಿದ್ದು ಸರಿ, ಅದು ಸಾಕು. ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ” ಎಂದಿದ್ದಾಳೆ.

Advertisement
Share this on...