“ನಾವು ಮೊದಲು ಕಾಶ್ಮೀರ ಬಳಿಕ ಇಡೀ ಭಾರತವನ್ನ ಘಜವಾ-ಎ-ಹಿಂದ್ ಮೂಲಕ ವಶಪಡಿಸಿಕೊಂಡು ಆ ಮೇಲೆ ಈ ಹಿಂದುಗಳನ್ನ….”: ಶೋಯೇಬ್ ಅಖ್ತರ್… ಏನಿದು ಘಜವಾ-ಎ-ಹಿಂದ್?

in Uncategorized 2,712 views

ನವದೆಹಲಿ: ಮುಸ್ಲಿಮರ ಮೊದಲು ಕಾಶ್ಮೀರವನ್ನು ವಶಪಡಿಸಿಕೊಳ್ಳುತ್ತಾರೆ ಮತ್ತು ನಂತರ ಭಾರತವನ್ನು ಆಕ್ರಮಿಸಿಕೊಳ್ಳಲಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದಾನೆ.

ಘಜವಾ-ಎ-ಹಿಂದ್ ಬಗ್ಗೆ ಶೋಯೆಬ್ ಅಖ್ತರ್ ಮಾತನಾಡಿದ್ದ ಹಳೆಯ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಘಜವಾ-ಎ-ಹಿಂದ್ ಅಂದರೆ “ಭಾರತದ ವಿರುದ್ಧದ ಪವಿತ್ರ ಯುದ್ಧ, ಇದು ಇಸ್ಲಾಂನ ಹಲವಾರು ಹದಿತ್ ಗಳಲ್ಲಿ ಉಲ್ಲೇಖವಾಗಿದ್ದು ಇದನ್ನ ಮುಸಲ್ಮಾನರು ತಮ್ಮ ಪವಿತ್ರ ಗ್ರಂಥವೆಂದೇ ಪರಿಗಣಿಸುತ್ತಾರೆ. ಆದರೆ ಮುಸ್ಲಿಂ ವಿದ್ವಾಂಸರು ಹದಿತ್ ಗಳ ವಿಶ್ವಾಸಾರ್ಹತೆಯನ್ನ ಪ್ರಶ್ನಿಸುತ್ತಾರೆ.

“ಮುಸಲ್ಮಾನರು ಮೊದಲು ಕಾಶ್ಮೀರ ಆಕ್ರಮಿಸಿ ಬಳಿಕ ಭಾರತ ವಶಪಡಿಸಿಕೊಳ್ಳಲಿದ್ದಾರೆ”

ಪಾಕಿಸ್ತಾನದ ಸಮಾ (Samaa) ಟಿವಿ ಚಾನೆಲ್ ಗೆ ಶೋಯೆಬ್ ಅಖ್ತರ್ ನೀಡಿದ್ದ ಸಂದರ್ಶನದಲ್ಲಿ, “ಘಜ್ವಾ-ಎ-ಹಿಂದ್ ನಡೆಯುತ್ತದೆ ಮತ್ತು ಅಟಾಕ್‌ನಲ್ಲಿರುವ ನದಿಯು ರಕ್ತದಿಂದ ಎರಡು ಬಾರಿ ಕೆಂಪು ಬಣ್ಣಕ್ಕೆ ತಿರುಗಲಿದೆ ಎಂದು ನಮ್ಮ ಗ್ರಂಥಗಳಲ್ಲಿ ಬರೆಯಲಾಗಿದೆ. ಅಫ್ಘಾನಿಸ್ತಾನದಿಂದ ಪಡೆಗಳು ಅಟಾಕ್ ವರೆಗೆ ತಲುಪುತ್ತವೆ. ಆ ಪಡೆಗಳು ಶಮಾಲ್ ಮಶ್ರಿಕ್‌ ಗೆ ತಲುಪಿದ ನಂತರ, ಉಜ್ಬೇಕಿಸ್ತಾನ್ ಇತ್ಯಾದಿಗಳಿಂದ ವಿಭಿನ್ನ ದಳಗಳು ಬರುತ್ತವೆ. ಇವೆಲ್ಲವೂ ಲಾಹೋರ್‌ವರೆಗೆ ವಿಸ್ತರಿಸಿದ ಐತಿಹಾಸಿಕ ಪ್ರದೇಶವಾದ ಖೋರಾಸನ್‌ರನ್ನು ಉಲ್ಲೇಖಿಸುತ್ತದೆ” ಎಂದು ಅಖ್ತರ್ ಹೇಳಿದ್ದಾನೆ.

Advertisement

ಶಮಾಲ್ ಮಶ್ರಿಕ್ ಎಂದರೆ ಅದು ಅರೇಬಿಯನ್‌ನ ಉತ್ತರದಲ್ಲಿರುವ ಪೆನಿನ್ಸುಲಾ ಎಂಬುದು ಉರ್ದು ಭಾಷೆಯಲ್ಲಿ ಉಲ್ಲೇಖವಾಗಿದೆ.

‘ಘಜ್ವಾ-ಎ-ಹಿಂದ್’ ಎಂಬ ಪದವನ್ನು ಪಾಕಿಸ್ತಾನದ ಇಸ್ಲಾಮಿಕ್ ಬೋಧಕರು ಮತ್ತು ಪಾಕ್ ಬೆಂಬಲಿತ ಭಯೋತ್ಪಾದಕ ದಶಕಗಳಿಂದ ಬಳಸುತ್ತಿದ್ದಾರೆ. ಈ ಪರಿಕಲ್ಪನೆಯ ಪ್ರಕಾರ, ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಭೀಕರ ಯುದ್ಧ ನಡೆಯಲಿದ್ದು, ನಂತರ ಮುಸ್ಲಿಮರು ಹಿಂದೂ ಭಾರತದ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಲಿದ್ದಾರೆ ಎಂಬುದಾಗಿದೆ‌.

ಜೈಶ್-ಎ-ಮೊಹಮ್ಮದ್ (ಜೆಎಂ) ನಿಯಮಿತವಾಗಿ ಈ ಪದವನ್ನು ಹೊಸ ಭಯೋತ್ಪಾದಕರನ್ನ ಭರ್ತಿ ಮಾಡಿಕೊಳ್ಳಲು ಹಾಗು ಫಂಡಿಂಗ್ ಪಡೆದು ಭಾರತೀಯ ನೆಲದಲ್ಲಿ ಅದರ ದಾ-ಳಿಯನ್ನು ಸಮರ್ಥಿಸಿಕೊಳ್ಳಲು ಬಳಸುತ್ತದ.

ಭಯೋತ್ಪಾದಕ ಸಂಘಟನೆ JeM ಭಾರತದ ವಿರುದ್ಧ ಮುಸ್ಲಿಂ ಯುವಕರು ಜಿಹಾದ್ ನಡೆಸಿ ಸತ್ತರೆ ನೇರವಾಗಿ ಜನ್ನತ್ (ಸ್ವರ್ಗ)ಕ್ಕೆ ಹೋಗುತ್ತಾರೆ ಎಂದು ಪದೆ ಪದೆ ಘಜವಾ-ಎ-ಹಿಂದ್ ಪದವನ್ನ ಮುಸ್ಲಿಂ ಯುವಕರೆದುರು ಹೇಳುತ್ತಲೇ ಇರುತ್ತದೆ.

ಇಸ್ಲಾಮಿನ ಪ್ರಕಾರ ಈ ಯುದ್ಧವು ಸಿರಿಯಾದಿಂದ ಕಪ್ಪು ಧ್ವಜಗಳೊಂದಿಗೆ ಶುರುವಾಗಿ ಅದು ಭಾರತದತ್ತ ಸಾಗುತ್ತದೆ ಹಾಗು ಭಾರತವನ್ನ ಗೆದ್ದು ಅದನ್ನ ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾಯಿಸಲಿದೆ ಎಂಬುದಾಗಿದೆ.

ಏನಿದು ಘಜವಾ-ಎ-ಹಿಂದ್?

ಈ ದಿನಗಳಲ್ಲಿ ಮುಸ್ಲಿಂ ಬಾಹುಳ್ಯದ ಬಾಂಗ್ಲಾದೇಶದಲ್ಲಿ, ಸುಳ್ಳು ವದಂತಿಯ ನೆಪದಲ್ಲಿ, ದುರ್ಗಾ ಪೂಜಾ ಪಂಡಲ್‌ಗಳು, ದೇವಸ್ಥಾನಗಳು ಮತ್ತು ಬಾಂಗ್ಲಾದೇಶದ ಹಿಂದೂಗಳ ಮನೆಗಳ ಮೇಲೆ ಭಯಾನಕ ದಾಳಿಗಳು ನಡೆಯುತ್ತಿವೆ. ಈ ದೇಶದಲ್ಲಿ ಹಿಂದೂ ಸಮುದಾಯವು ಬದುಕುವುದೇ ದುಸ್ತರವಾಗಿದೆ. ಈಗ ಇಸ್ಲಾಮಿಕ್ ಸ್ಟೇಟ್ ನಂತಹ ಉಗ್ರ ಸಂಘಟನೆ ಕೂಡ ಅಲ್ಲಿ ಬೇರೂರಿದೆ. ಪಾಕಿಸ್ತಾನದಲ್ಲಿ, ಆಡಳಿತ ಮತ್ತು ನ್ಯಾಯಾಲಯಗಳು ಕೂಡ ಹಿಂದೂಗಳ ನಿಗ್ರಹದಲ್ಲಿ ತೊಡಗಿಕೊಂಡಿವೆ. ಅಫ್ಘಾನಿಸ್ತಾನದಲ್ಲಿ ಹಿಂದುಗಳು ಮತ್ತು ಸಿಖ್ಖರು ಅಳಿವಿನ ಅಂಚಿನಲ್ಲಿದ್ದಾರೆ.

ಮೂಲಭೂತವಾದಿಗಳು ಪಾಕಿಸ್ತಾನವಾಗಲಿ, ಅಫ್ಘಾನಿಸ್ತಾನವಾಗಲಿ ಅಥವಾ ಬಾಂಗ್ಲಾದೇಶವಾಗಲಿ ಇತರ ಧರ್ಮದ ಜನರನ್ನು ಬದುಕಲು ಬಿಡುತ್ತಿಲ್ಲ. ಇಂದಿನ ವಿಶ್ಲೇಷಣೆಯಲ್ಲಿ ನಾವು ಕಟ್ಟರಪಂಥೀಯರ ವಿಚಾರಧಾರೆ, ಚಿಂತನೆ ಮತ್ತು ಸಿದ್ಧಾಂತವನ್ನು ತಿಳಿಸಲಿದ್ದು, ಇದು ಇತಿಹಾಸದ ಕೆಲವು ಸಂಚಿಕೆಗಳನ್ನು ಉಲ್ಲೇಖಿಸುವ ಮೂಲಕ ನಿಮಗೆ ತಿಳಿಸಲಿದ್ದೇವೆ. ಇದರಲ್ಲಿ ನಮ್ಮ ನೆರೆಯ ದೇಶ ಪಾಕಿಸ್ತಾನ ಕೂಡ ಸೇರಿದೆ. ಇಂದು ನಾವು ನಿಮಗೆ ಘಜವಾ-ಎ-ಹಿಂದ್ ಎಂದರೇನು? ಅದರ ಸಿದ್ಧಾಂತವೇನು ಮತ್ತು ಉಗ್ರ ಸಂಘಟನೆಗಳು ಇಸ್ಲಾಮಿನ ಹೆಸರಿನಲ್ಲಿ ಹಿಂ-ಸೆಯನ್ನು ಹರಡಲು ಅದರ ಸಹಾಯವನ್ನು ಹೇಗೆ ತೆಗೆದುಕೊಳ್ಳುತ್ತವೆ? ಅನ್ನೋದನ್ನ ತಿಳಿಸಲಿದ್ದೇವೆ.

ಏನಿದು ಘಜವಾ-ಎ-ಹಿಂದ್?

ಮುಸ್ಲಿಮರ ಪ್ರಕಾರ ಈ ಪ್ರಪಂಚವು ಎರಡು ಭಾಗದಲ್ಲಿ ವಿಭಜಿಸಲಾಗಿದೆ

ಮೊದನೆಯದು – ದಾರುಲ್ ಇಸ್ಲಾಂ, ಅಂದರೆ ಯಾವ ದೇಶಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುತ್ತಾರೋ, ಮುಸ್ಲಿಮರ ಆಡಳಿತವಿರುತ್ತೋ ಆ ದೇಶಗಳನ್ನ ‘ದಾರುಲ್ ಇಸ್ಲಾಂ’ ಎಂದು ಕರೆಯುತ್ತಾರೆ.

ಎರಡನೆಯದು – ದಾರುಲ್ ಹರ್ಬ್, ಅಂದರೆ ಯಾವ ದೇಶಗಳಲ್ಲಿ ಮಸ್ಲಿಮರೇನೋ ಇರುತ್ತಾರೆ ಆದರೆ ಮುಸ್ಲಿಮೇತರರ ಆಡಳಿತವಿರುತ್ತದೆ, ಆ ದೇಶಗಳನ್ನ ದಾರುಲ್ ಹರ್ಬ್ ಎಂದು ಕರೆಯುತ್ತಾರೆ. ಉದಾಹರಣೆಗೆ ಮುಸ್ಲಿಮರ ಪ್ರಕಾರ ಭಾರತ ಒಂದು ದಾರುಲ್ ಹರ್ಬ್ ರಾಷ್ಟ್ರವಾಗಿದ್ದು ಭಾರತವನ್ನ ದಾರುಲ್ ಹರ್ಬ್ ನಿಂದ ದಾರುಲ್ ಇಸ್ಲಾಂ ಮಾಡುವುದೇ ‘ಘಜವಾ-ಎ-ಹಿಂದ್’

ಇಸ್ಲಾಮಿಕ್ ಸಿದ್ಧಾಂತಗಳ ಪ್ರಕಾರ ಭರತಭೂಮಿ ಕೇವಲ ಮುಸ್ಲಿಮರದ್ದಾಗಬೇಕಿದೆ, ಇದರಲ್ಲಿ ಹಿಂದೂ (ಬೌದ್ಧ, ಸಿಖ್, ಜೈನ್) ಹಾಗು ಮುಸ್ಲಿಂ ಇಬ್ಬರೂ ಇರಲು ಸಾಧ್ಯವೇ ಇಲ್ಲ. ಇಸ್ಲಾಮಿಕ್ ಸಿದ್ಧಾಂತಗಳ ಪ್ರಕಾರ, ಭಾರತದ ಮುಸ್ಲಿಮರು ಭಾರತವನ್ನು ‘ದಾರುಲ್ ಇಸ್ಲಾಂ ಮಾಡಲು ‘ಜಿಹಾದ್’ ಎಂದು ಘೋಷಿಸುವುದು ನ್ಯಾಯಯುತವಾಗಿದೆ. ಇದರರ್ಥ ದಾರುಲ್ ಹರ್ಬ್ ‘ಭಾರತ’ ವನ್ನು ದಾರುಲ್ ಇಸ್ಲಾಂ ಆಗಿ ಮಾಡುವುದೇ ‘ಘಜವಾ-ಎ-ಹಿಂದ್’. ಘಜವಾ-ಎ-ಹಿಂದ್ ಎಂದರೆ ಕಾಫಿರರನ್ನ ಸೋಲಿಸಿ ಯುದ್ಧವನ್ನು ಗೆಲ್ಲುವುದನ್ನ “ಘಜವಾ” ಎಂದು ಕರೆಯಲಾಗುತ್ತದೆ ಮತ್ತು ಈ ಯುದ್ಧದಲ್ಲಿ ವಿಜಯಿಯಾದವನನ್ನು “ಘಾಜಿ” ಎಂದು ಕರೆಯಲಾಗುತ್ತದೆ. ಯಾವುದೇ ಒಬ್ಬ ಆಕ್ರಮಣಕಾರನ ಹೆಸರ ಮುಂದೆ ಘಾಜಿ ಅಂತ ಹೊಂದಿದರೆ ಅಥವ ಘಾಜಿ ಎಂಬ ಬಿರುದನ್ನು ನೀಡಿದರೆ, ಆತನು ಹಿಂದೂಗಳ ಹ-ತ್ಯಾಕಾಂಡದಿಂದ ಇಸ್ಲಾಂನ ಹರಡುವಿಕೆಯಲ್ಲಿ ನಿರತನಾಗಿದ್ದ/ದ್ದಾನೆ ಎಂಬುದಾಗಿದೆ.

ಈ ಬಗ್ಗೆ ಹದೀಸ್ ನಲ್ಲಿ ಏನಿದೆ?

ಮೊಟ್ಟಮೊದಲ ಬಾರಿಗೆ ಹದೀಸ್ ನಲ್ಲಿ ಈ ಬಗ್ಗೆ ವಿಸ್ತೃತ ಉಲ್ಲೇಖವಿದೆ. ಮೊಹಮ್ಮದ್ ಪೈಗಂಬರ್ ಸಾವಿನ 200 ವರ್ಷಗಳ ಬಳಿಕ ಹದೀಸ್‌ನ್ನ ಬರೆಯಲಾಗಿತ್ತು. ಹದೀಸ್ ಒಂದು ಅರೇಬಿಕ್ ಶಬ್ದವಾಗಿದ್ದು ಇದರರ್ಥ ರಿಪೋರ್ಟ್ ಎಂಬುದಾಗಿದೆ. ವಾಸ್ತವವಾಗಿ, ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, ಪ್ರವಾದಿ ಮೊಹಮ್ಮದ್ ತನ್ನ ಅನುಯಾಯಿಗಳಿಗೆ ಬೋಧಿಸುತ್ತಿದ್ದ ಮತ್ತು ಹೇಳುತ್ತಿದ್ದ ಅಥವಾ ಅವರ ಯಾವುದೇ ಪ್ರಶ್ನೆಗಳಿಗೆ ಉತ್ತರವಾಗಿ ನೀಡುತ್ತಿದ್ದ ವಿಷಯಗಳನ್ನು, ಸಹಾಬಿಗಳು (ಪ್ರವಾದಿಯ ಸಹಚರರು) ನೆನಪಿಸಿಕೊಳ್ಳುತ್ತಿದ್ದರು, ನಂತರ ಅವರು ತಮ್ಮ ಮುಂದಿನ ಪೀಳಿಗೆಗಳಿಗೆ ಪ್ರವಾದಿಯವರ ಈ ಮಾತುಗಳನ್ನು ಹೇಳುತ್ತಿದ್ದರು. ನಂತರ ಪ್ರವಾದಿಯವರ ಈ ಮಾತುಗಳನ್ನ ಸಂಗ್ರಹಿಸಲಾಯಿತು, ಇದನ್ನೇ ಹದೀಸ್ ಎಂದು ಕರೆಯಲಾಗುತ್ತದೆ. ಹದೀಸ್ ನಲ್ಲಿ ಸಂಗ್ರಹಗಳಿವೆ. ಕುರಾನ್‌ನಲ್ಲಿ ಜಿಹಾದ್ ಎಂದರೆ ತಪಸ್ಸು ಆದರೆ ಹದೀಸ್ ನಲ್ಲಿ ಜಿಹಾದ ಎಂದರೆ ಧರ್ಮಯುದ್ಧ. ಘಜವಾ-ಎ-ಹಿಂದ್ ಅನ್ನು ಮೊದಲ ಬಾರಿಗೆ ಹದೀಸ್‌ನಲ್ಲಿ ಉಲ್ಲೇಖಿಸಲಾಗಿದೆ. ಘಜವಾ-ಎ-ಹಿಂದ್ ಎಂದರೆ ಪ್ರವಾದಿ ಮೊಹಮ್ಮದರ ಸೂಚನೆಗಳ ಮೇಲೆ ನಡೆಯಬೇಕಾದ ಯುದ್ಧ. ಈ ನಂಬಿಕೆಯ ಪ್ರಕಾರ, ಮೂರ್ತಿ ಪೂಜೆ (ಪೇಗನಿಸಂ) ಪ್ರಪಂಚದಾದ್ಯಂತ ನಿಲ್ಲುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ. ಏಕೆಂದರೆ ಮೂರ್ತಿ ಪೂಜೆಯನ್ನು ನಿಲ್ಲಿಸಿದ ನಂತರವೇ, ಇಸ್ಲಾಂನ ಶಾಸನವನ್ನ ಜಗತ್ತಿನಲ್ಲಿ ಸ್ಥಾಪಿಸಬಹುದು ಎಂಬುದಾಗಿದೆ.

ಹದೀಸ್ ಕುರಿತಾದ ವಿವಾದಗಳು

ಪ್ರವಾದಿಯ ಮರಣದ ನಂತರ ಯಾವುದೋ ವ್ಯಕ್ತಿಯು ತನ್ನ ವೈಯಕ್ತಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಪ್ರವಾದಿಯ ಹೆಸರಿನಲ್ಲಿ ಸುಳ್ಳು ಹದೀಸ್ ಅನ್ನು ತಯಾರಿಸಿದ್ದಾನೆಯೇ ಎಂಬ ಅನುಮಾನ ಇಸ್ಲಾಮಿಕ್ ವಿದ್ವಾಂಸರಲ್ಲಿ ಇದೆ. ವಿದ್ವಾಂಸರಿಂದ ಅನೇಕ ರಿಸರ್ಚ್ ಗಳ ನಂತರ, ಕೆಲವು ಹದೀಸ್‌ಗಳನ್ನು ಸಹ ರದ್ದುಗೊಳಿಸಲಾಗಿದೆ.

ಖುರಾಸಾನ್ ನಿಂದ ಬಂದ ಇಸ್ಲಾಮಿಕ್ ಸೇನೆ ಭಾರತದ ಮೇಲೆ ದಾಳಿ ನಡೆಸಲಿದೆ

ಇಸ್ಲಾಮಿಕ್ ಭವಿಷ್ಯವಾಣಿಯ ಪ್ರಕಾರ, ಈ ಯುದ್ಧವು ಸಿರಿಯಾದಿಂದ ಆರಂಭವಾಗುತ್ತದೆ. ಕಪ್ಪು ಧ್ವಜವಿರುವ ಸೇನೆಯು ಖೋರಾಸನ್‌ನಿಂದ ಬಂದು ಭಾರತವನ್ನು ಇಸ್ಲಾಮಿಕ್ ದೇಶವಾಗಿ ಪರಿವರ್ತಿಸಲಾಗುವುದು. ಪಾಕಿಸ್ತಾನದ ಬಹುಪಾಲು ಜನರು ಘಜವಾ-ಎ-ಹಿಂದ್ ನ ಉದ್ದೇಶವನ್ನು ಈಡೇರಿಸುವ ಕನಸು ಕಾಣುತ್ತಾರೆ. ಅಂತಹ ಉದ್ದೇಶಗಳಿಂದಾಗಿ, ಅವರು ತಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ಕಾಫಿರರೆಂದು ಪರಿಗಣಿಸುತ್ತಾರೆ ಮತ್ತು ಅವರನ್ನು ಇಸ್ಲಾಂಗೆ ಮತಾಂತರಗೊಳಿಸುವುದೇ ತಮ್ಮ ಧಾರ್ಮಿಕ ಕರ್ತವ್ಯವೆಂದು ಪರಿಗಣಿಸುತ್ತಾರೆ. ಖೋರಾಸನ್ ಎಂದು ಕರೆಯಲ್ಪಡುವ ಪ್ರದೇಶವು ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇರಾನ್‌ನ ಕೆಲವು ಪ್ರದೇಶಗಳನ್ನು ಒಳಗೊಂಡಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಭಾರತದಲ್ಲಿ ಇದುವರೆಗೆ ಘಜವಾ-ಇ-ಹಿಂದ್ ಅಡಿಯಲ್ಲಿ ಅನೇಕ ದಾಳಿಗಳನ್ನು ನಡೆಸಲಾಗಿದೆ. ಈ ಘೋಷವಾಕ್ಯದ ಅಡಿಯಲ್ಲಿ, ಸಮುದಾಯದ ಯುವಕರ ಬ್ರೈನ್ ವಾಶ್ ಮಾಡಿ ನಂತರ ಆತ್ಮಾಹುತಿ ಬಾಂಬರ್‌ಗಳನ್ನಾಗಿ ಮಾಡಲಾಗುತ್ತದೆ. ಈ ಘೋಷವಾಕ್ಯದ ಅರ್ಥವನ್ನು ವಿವರಿಸುವಾಗ, ಇಸ್ಲಾಮಿಕ್ ಮೂಲಭೂತವಾದಿ ಯುವಕರಿಗೆ ಹಿಂದೂ ಮುಸ್ಲಿಮರ ನಡುವೆ ಮೊದಲು ನಡೆಯುವ ಯುದ್ಧ ಹಾಗು ಅದರಲ್ಲಿ ಮುಸ್ಲಿಮರು ಹೇಗೆ ಹಿಂದುಗಳನ್ನ ಸೋಲಿಸಿ ಭಾರತವನ್ನ ಗೆಲ್ಲಬೇಕು ಎಂಬುದನ್ನ ತಿಳಿಸುತ್ತಾರೆ.

ಬಹುತೇಕ ಮುಸ್ಲಿಂ ಬಹುಸಂಖ್ಯಾತ ದೇಶಗಳು ಇಸ್ಲಾಂ ಅನ್ನು ರಾಷ್ಟ್ರೀಯ ಧರ್ಮವಾಗಿ ಘೋಷಿಸಿವೆ

ಹಿಂದೂಗಳು ವಿಶ್ವದ 110 ಕ್ಕೂ ಹೆಚ್ಚು ದೇಶಗಳಲ್ಲಿ ವಾಸಿಸುತ್ತಿದ್ದಾರೆ ಆದರೆ ಹಿಂದೂ ಧರ್ಮವನ್ನ ನಂಬುವವರಲ್ಲಿ ಹೆಚ್ಚಿನ ಜನಸಂಖ್ಯೆಯು ಭಾರತ ಮತ್ತು ನೇಪಾಳದಲ್ಲಿ ವಾಸಿಸುತ್ತಿದೆ. ಒಂದು ಕಾಲದಲ್ಲಿ ನೇಪಾಳ ಏಕೈಕ ಹಿಂದೂ ರಾಷ್ಟ್ರವಾಗಿತ್ತು, ಆದರೆ 2008 ರಲ್ಲಿ, ನೇಪಾಳದ ಸಂವಿಧಾನವನ್ನು ಬದಲಾಯಿಸುವ ಮೂಲಕ, ಜಾತ್ಯತೀತ ರಾಷ್ಟ್ರದ ಸ್ಥಾನಮಾನವನ್ನು ನೀಡಲಾಯಿತು. ಇದು 1977 ರಲ್ಲಿ ಭಾರತ ಜಾತ್ಯತೀತವಾದಂತೆ. ಹೌದು 1977 ರಲ್ಲಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭಾರತದ ಸಂವಿಧಾನದ 42 ನೇ ತಿದ್ದುಪಡಿಯನ್ನು ಮಾಡಿದರು ಮತ್ತು ಪೀಠಿಕೆಯಲ್ಲಿ ಜಾತ್ಯತೀತ ಪದವನ್ನು ಸೇರಿಸಿದರು. ಅಂದರೆ, ಕಳೆದ ಕೆಲವು ದಶಕಗಳಲ್ಲಿ, ಭಾರತ ಮತ್ತು ನೇಪಾಳದಂತಹ ದೇಶಗಳಲ್ಲಿ, ಜಾತ್ಯತೀತತೆಯ ಸಂಪೂರ್ಣ ಜವಾಬ್ದಾರಿಯನ್ನು ಬಹುಸಂಖ್ಯಾತ ಹಿಂದುಗಳ ಮೇಲೆಯೇ ಹೊರಿಸಲಾಯಿತು. ಆದರೆ ಮು-ಸ್ಲಿಂ ಬಹುಸಂಖ್ಯಾತ ದೇಶಗಳು ಜಾತ್ಯತೀತತೆಯಿದ ಇಸ್ಲಾಂ ಕಡೆಗೆ ಹೋಗಿ ಇಸ್ಲಾಂನ್ನ ರಾಷ್ಟ್ರೀಯ ಧರ್ಮವೆಂದು ಘೋಷಿಸಿದವು.

ಸೆಕ್ಯೂಲರ್ ನಿಂದ ಇಸ್ಲಾಮಿಕ್ ಆದ ದೇಶಗಳು

1956 ರಲ್ಲಿ ಪಾಕಿಸ್ತಾನ, 1979 ರಲ್ಲಿ ಇರಾನ್, 1980 ರಲ್ಲಿ ಬಾಂಗ್ಲಾದೇಶ, 2005 ರಲ್ಲಿ ಇರಾಕ್, 2021 ರಲ್ಲಿ ಅಫ್ಘಾನಿಸ್ತಾನ

ಈ ದೇಶಗಳು ಒಂದೋ ಸಂಪೂರ್ಣವಾಗಿ ಇಸ್ಲಾಮಿಕ್ ದೇಶಗಳಾದವು ಅಥವಾ ಇ-ಸ್ಲಾಂ ಅನ್ನು ತಮ್ಮ ರಾಷ್ಟ್ರೀಯ ಧರ್ಮವಾಗಿ ಸ್ವೀಕರಿಸಿದವು. ಆಶ್ಚರ್ಯಕರ ಸಂಗತಿಯೇನೆಂದರೆ, ಈ ದೇಶಗಳಲ್ಲಿ ಅನೇಕವು ರಿಪಬ್ಲಿಕ್ ಎಂಬ ಪದವನ್ನ ತಮ್ಮ ದೇಶದ ಹೆಸರಿನ ಮುಂದೆ ಬಳಸುತ್ತವೆ, ರಿಪಬ್ಲಿಕ್ ಅಂದರೆ ಅರೇಬಿಕ್‌ನಲ್ಲಿ ಜಮ್ಹೂರಿಯತ್ ಎಂದರ್ಥ. ಉದಾಹರಣೆಗೆ ಇತ್ತೀಚೆಗಷ್ಟೇ ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನ’ ಎಂದು ಮಾಡಿದ್ದರು.

ಹಲವಾರು ದೇಶಗಳಲ್ಲಿ ಇಸ್ಲಾಂನ ಪಾಲನೆ ಅಲ್ಲ ಬದಲಾಗಿ ಅದು ಕಡ್ಡಾಯ

ಗಾಂಧೀಯ ಕನಸುಗಳಿಗೆ ಇವರು ದ್ರೋಹ ಬಗೆದರು ಗಾಂಧೀ ತನ್ನವರೆಂದು ಯಾರನ್ನ ಕರೆಯುತ್ತಿದ್ದರೋ ಅದೇ ಜನರು ಗಾಂಧಿಯ ಕನಸುಗಳನ್ನ ನುಚ್ಚುನೂರು ಮಾಡಿದರು. ನಂತರ ಈ ವಂ-ಚ-ನೆ-ಯು ಭಾರತ ಮತ್ತು ಪಾಕಿಸ್ತಾನದ ವಿಭಜನೆಗೆ ಆಧಾರವಾಯಿತು. ಭಾರತವು 1947 ರಲ್ಲಿ ಸ್ವತಂತ್ರವಾದಾಗ, ಅದು ಜಾತ್ಯತೀತ ರಾಷ್ಟ್ರವಾಯಿತು. ಆದರೆ ಪಾಕಿಸ್ತಾನವು ನಂತರ ಇಸ್ಲಾಮಿಕ್ ದೇಶವಾಗಿ ಬದಲಾಯಿತು. ನಂತರ 1971 ರಲ್ಲಿ ಭಾರತವು ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ಕೊಡಿಸಿತು. ಆದರೆ ಕೆಲವು ವರ್ಷಗಳ ನಂತರ ಬಾಂಗ್ಲಾದೇಶವೂ ಇಸ್ಲಾಂ ಅನ್ನು ರಾಷ್ಟ್ರೀಯ ಧರ್ಮವಾಗಿ ಸ್ವೀಕರಿಸಿತು. ಆದಾಗ್ಯೂ, 2018 ರಲ್ಲಿ, ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಇದನ್ನು ಸಂವಿಧಾನದ ವಿರುದ್ಧ ಎಂದು ಕರೆದಿತ್ತು. ಪ್ರಪಂಚದಾದ್ಯಂತ ಸುಮಾರು 181 ಕೋಟಿ ಜನರು ಇ-ಸ್ಲಾಂ ಮತವನ್ನ ಅನುಸರಿಸುತ್ತಾರೆ. ಇವರಲ್ಲಿ ಸುಮಾರು 160 ಕೋಟಿ ಜನರು ಇಸ್ಲಾಮಿಕ್ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಹೆಚ್ಚಿನ ದೇಶಗಳಲ್ಲಿ, ಧರ್ಮವನ್ನು ಅನುಸರಿಸುವುದು ಒಂದು ಆಯ್ಕೆಯಲ್ಲ, ಬದಲಾಗಿ ಒಂದು ಕಡ್ಡಾಯವಾಗಿದೆ. ಏಕೆಂದರೆ ಇಸ್ಲಾಂ ನ್ನ ಅವಮಾನಿಸುವುದು ಬಹುತೇಕ ಎಲ್ಲಾ ಮುಸ್ಲಿಂ ದೇಶಗಳಲ್ಲಿ ಅಪರಾಧವೆಂದು ಪರಿಗಣಿಸಲಾಗಿದೆ. ಕೆಲವು ದೇಶಗಳಲ್ಲಿ, ಇದಕ್ಕಾಗಿ ಮರಣದಂಡನೆಗೂ ಅವಕಾಶವಿದೆ.

ಬಾಂಗ್ಲಾದೇಶದಲ್ಲಿ ಹಿಂದುಗಳೇ ಟಾರ್ಗೇಟ್

ಸಾಂದರ್ಭಿಕ ಚಿತ್ರ

ಪಾಕಿಸ್ತಾನದ ಮಿಲಿಟರಿ ಸರ್ಕಾರದ ದೌರ್ಜನ್ಯದ ವಿರುದ್ಧ ಹೋರಾಡುವ ಮೂಲಕ ಭಾರತದ ನೆರವಿನಿಂದ 1971 ರಲ್ಲಿ ಸ್ವಾತಂತ್ರ್ಯ ಪಡೆದ ನೆರೆಯ ಬಾಂಗ್ಲಾದೇಶವು ಪಕ್ಕದ ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸಲ್ಮಾನರ ಬಿಕ್ಕಟ್ಟಿನ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಸಾಕಷ್ಟು ಧ್ವನಿಯೆತ್ತಿತು, ಆದರೆ ಈಗ ಅಲ್ಪಸಂಖ್ಯಾತ ಹಿಂದೂ ಸಮುದಾಯದ ವಿರುದ್ಧ ಹಿಂಸಾತ್ಮಕ ದಾ-ಳಿ ನಡೆಯುತ್ತಿದ್ದರೂ ಅದನ್ನ ನಿಲ್ಲಿಸಲು ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಬಾಂಗ್ಲಾದೇಶದಲ್ಲಿ ಕಟ್ಟರಪಂಥೀಯ ಇಸ್ಲಾಮಿಕ್ ಸಂಘಟನೆಗಳ ಪ್ರಭಾವವು ವೇಗವಾಗಿ ಬೆಳೆಯುತ್ತಿದ್ದು ಕಳೆದ 9 ವರ್ಷಗಳಲ್ಲಿ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು 3,679 ದಾಳಿಗಳನ್ನು ಎದುರಿಸಿದ್ದಾರೆ.

ಕಾಶ್ಮೀರದ ಸ್ವಾತಂತ್ರ್ಯವನ್ನ ಘಜವಾ-ಎ-ಹಿಂದ್ ಗೆ ಲಿಂಕ್ ಮಾಡುತ್ತವೆ ಉಗ್ರ ಸಂಘಟನೆಗಳು

ಅಲ್-ಕೈದಾ ಮತ್ತು ಜೈಶ್-ಎ-ಮೊಹಮ್ಮದ್ ನಂತಹ ಸಂಘಟನೆಗಳು ಜಿಹಾದ್‌ನ್ನ ಹರಡಲು ಭಾರತ ಮತ್ತು ಪಾಕಿಸ್ತಾನದ ಮತಾಂಧರಿಗೆ ಹದೀಸ್‌ನ ಘಜವಾ-ಎ-ಹಿಂದ್ ನ ಪಾಠ ಮಾಡಿಸುತ್ತವೆ. ಭಾರತದೊಂದಿಗೆ ಕಾಶ್ಮೀರದಲ್ಲಿ ಪ್ರಾಕ್ಸಿ ಯುದ್ಧವನ್ನು ನಡೆಸುತ್ತಿರುವ ಪಾಕಿಸ್ತಾನ ಮತ್ತು ಸ್ಥಳೀಯ ಮತ್ತು ವಿದೇಶಿ ಉ-ಗ್ರ ಸಂಘಟನೆಗಳು ಈ ಹದೀಸ್‌ಗಳನ್ನು ಮುಸ್ಲಿಂ ಯುವಕರನ್ನು ಪ್ರಚೋದಿಸಲು ಮತ್ತು ಭಾರತದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತುಕೊಳ್ಳಲು ಬ್ರೈನ್‌ವಾ-ಶ್ ಮಾಡಲು ಬಳಸುತ್ತವೆ. ಲಷ್ಕರ್-ಎ-ತೊಯ್ಬಾ ಕಾಶ್ಮೀರದ ಸ್ವಾತಂತ್ರ್ಯವನ್ನ ಘಜವಾ-ಎ-ಹಿಂದ್ ಗೆ ಲಿಂಕ್ ಮಾಡುತ್ತದೆ. ಪಾಕಿಸ್ತಾನದ ಮೂಲಭೂತವಾದಿಗಳು ಈ ಹದೀಸ್‌ಗಳನ್ನು ಪ್ರಚಾರ ಮಾಡುತ್ತಾರೆ, ಪಾಕಿಸ್ತಾನವು ಘಜವಾ-ಎ-ಹಿಂದ್ ಮಾಡಲೆಂದೇ ಹುಟ್ಟಿದೆ ಎಂದು ಹೇಳುತ್ತದೆ. ಮಸೂದ್ ಅಜರ್ ತನ್ನ ಜಿಹಾದಿ ಭಾಷಣಗಳಲ್ಲಿ ಈ ಹದೀಸ್‌ಗಳನ್ನು ಹೆಚ್ಚು ಬಳಸಿದ್ದಾನೆ.

Advertisement
Share this on...