ನಿಕಾಹ್ (ಮದುವೆ) ಮಾಡಿಕೊಳ್ಳೋಕೆ ಹುಡುಗಿಯರು ಸಿಗ್ತಿಲ್ಲ ಅಂತ 83 ವರ್ಷದ ಮುದುಕಿಯನ್ನೇ ಮದುವೆಯಾದ 28 ರ ಯುವಕ #ನದೀಮ್: ಮುಂದಾಗಿದ್ದೇನು ನೋಡಿ

in Uncategorized 1,071 views

ಪಾಕಿಸ್ತಾನದಲ್ಲಿ 28 ವರ್ಷದ ಯುವಕ 83 ವರ್ಷದ ಮುದುಕಿಯನ್ನ ಮದುವೆಯಾಗಿದ್ದಾನೆ. ಆಘಾತಕಾರಿ ವಿಷಯವೆಂದರೆ ಮಹಿಳೆ ಈ ವಯಸ್ಸಿನಲ್ಲೂ ಕನ್ಯೆಯಾಗಿದ್ದು, ಪೋಲೆಂಡ್ ನಿವಾಸಿಯಾಗಿದ್ದಾಳೆ. ಇಬ್ಬರೂ ಫೇಸ್‌ಬುಕ್ ಮೂಲಕ ಭೇಟಿಯಾಗಿದ್ದರು, ನಂತರ ಇಬ್ಬರೂ ಮದುವೆಯಾಗಿ ಒಟ್ಟಿಗೆ ಬಾಳಲು ನಿರ್ಧರಿಸಿದರು.

Advertisement

ಒಬ್ಬ ವ್ಯಕ್ತಿಯು ಪ್ರೀತಿಯಲ್ಲಿದ್ದಾಗ, ಅವನು ಭಾಷೆ, ರಾಜ್ಯ, ದೇಶಗಳ ಗಡಿಯನ್ನೂ ದಾಟುತ್ತಾನೆ. ಪ್ರೀತಿಯಲ್ಲಿ, ಒಬ್ಬ ವ್ಯಕ್ತಿಯು ಶ್ರೀಮಂತಿಕೆ, ಬಡತನವನ್ನು ಅಥವಾ ವಯಸ್ಸನ್ನು ನೋಡುವುದಿಲ್ಲ. ಪ್ರೀತಿಯಲ್ಲಿ ಮುಳುಗಿರುವ ವ್ಯಕ್ತಿಯು ತನ್ನ ಪ್ರೀತಿಪಾತ್ರರನ್ನು ಭೇಟಿಯಾಗದ ಸಮಯದವರೆಗೆ ತೃಪ್ತನಾಗುವುದಿಲ್ಲ. 83ರ ಹರೆಯದ ಮುದುಕಿಯೊಬ್ಬಳು 28ರ ಹರೆಯದ ಯುವಕನನ್ನು ತನ್ನ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಇಂತಹದೊಂದು ಉದಾಹರಣೆ ಪಾಕಿಸ್ತಾನದಿಂದ ವರದಿಯಾಗಿದೆ. ಅಚ್ಚರಿಯ ವಿಷಯವೆಂದರೆ ವಧುವಿಗೆ 83 ವರ್ಷ ವಯಸ್ಸಾಗಿದ್ದು, ಆಕೆ ಬೇರೆ ದೇಶದವಳು. ಆಕೆ ತನ್ನ 28 ವರ್ಷದ ಪ್ರೇಮಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಓಡಿ ಬಂದಿದ್ದು, ಅಲ್ಲಿ ಇಬ್ಬರೂ ಮದುವೆಯಾಗಿದ್ದಾರೆ.

ವಿದೇಶಿ ವಯಸ್ಸಾದ ಮಹಿಳೆ ಮತ್ತು 28 ವರ್ಷದ ಹಫೀಜ್ ನದೀಮ್ ಒಂದು ವರ್ಷದ ಹಿಂದೆ ನವೆಂಬರ್ 2021 ರಲ್ಲಿ ಪಾಕಿಸ್ತಾನದ ಹಫ್ಜಾಬಾದ್‌ನ ಖಾಜಿಪುರದಲ್ಲಿ ಭಾರಿ ಸಡಗರದಿಂದ ವಿವಾಹವಾದರು. ಮದುವೆಯ ನಂತರ ಇಬ್ಬರೂ ಒಟ್ಟಿಗೆ ತುಂಬಾ ಸಂತೋಷವಾಗಿದ್ದಾರೆ. ಮದುವೆಯಾದ ಒಂದು ವರ್ಷದ ನಂತರ, ಈಗ ದಂಪತಿಗಳ ಸಂದರ್ಶನವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಇಬ್ಬರೂ ಅನೇಕ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸುತ್ತಿದ್ದಾರೆ.

ಪೋಲೆಂಡ್‌ ದೇಶದ ನಿವಾಸಿ ಈ 83 ರ ಮುದುಕಿ

ಪೋಲೆಂಡ್ ನ 83 ವರ್ಷದ ವೃದ್ಧೆ ಪಾಕಿಸ್ತಾನದ 28 ವರ್ಷದ ಹಫೀಜ್ ನದೀಮ್ ನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಇಬ್ಬರೂ ಸೋಶಿಯಲ್ ಮೀಡಿಯಾ ಮೂಲಕ ಭೇಟಿಯಾದರು, ನಂತರ ಇಬ್ಬರ ನಡುವೆ ಪ್ರೇಮಾಂಕುರವಾಯಿತು, ಬಳಿಕ ಅದು ಎಷ್ಟು ಮಟ್ಟಿಗೆ ಬೆಳೆಯಿತೆಂದರೆ, ಇಬ್ಬರೂ ಒಟ್ಟಿಗೆ ಬಾಳುವುದಾಗಿ ನಿರ್ಧರಿಸಿದರು. ದೂರದಲ್ಲಿದ್ದು ತನ್ನ ಪ್ರಿಯಕರನನ್ನ ನೋಡದೇ ಇರಲು ಸಾಧ್ಯವಾಗದಿದ್ದಾಗ ಮಹಿಳೆ ಪಾಕಿಸ್ತಾನಕ್ಕೆ ಬಂದೇ ಬಿಟ್ಟಳು ಮತ್ತು ಇಬ್ಬರೂ ಮದುವೆಯಾಗೇ ಬಿಟ್ಟರು.

ಇಲ್ಲಿ ರಬ್ (ಅಲ್ಲಾಹ್) ಅಲ್ಲ ಫೇಸ್ಬುಕ್ ಇಬ್ಬರನ್ನೂ ಒಂದು ಮಾಡಿತು

ಇವರಿಬ್ಬರ ಪ್ರೀತಿಯಲ್ಲಿ ಬಹುಮುಖ್ಯವಾದ ಅಂಶವೆಂದರೆ ಇವರಿಬ್ಬರ ಜೋಡಿಯ ಹಿಂದೆ ಫೇಸ್ ಬುಕ್ ಇದೆ. ಇಬ್ಬರೂ ಫೇಸ್‌ಬುಕ್‌ನಲ್ಲಿ ಭೇಟಿಯಾಗಿದ್ದರು. ಫೇಸ್‌ಬುಕ್‌ನಲ್ಲಿ ಚಾಟ್ ಮಾಡುವಾಗ, ಮಾತು ಹೆಚ್ಚಾಗತೊಡಗಿತು. ಕ್ರಮೇಣ ಇಬ್ಬರೂ ಪ್ರೀತಿಯಲ್ಲಿ ಮುಳುಗಿದರು ಮತ್ತು ವಯಸ್ಸಿನ ಮಿತಿಯನ್ನು ಬಿಟ್ಟು ಪರಸ್ಪರ ಬದುಕಲು ಮತ್ತು ಸಾಯಲು ಪ್ರತಿಜ್ಞೆ ಮಾಡಿದರು.

ತನ್ನ ಪ್ರೀತಿಯನ್ನ ಪಡೆಯಲು ಪಾಕಿಸ್ತಾನಕ್ಕೇ ಬಂದ ಮುದುಕಿ

ಇವರಿಬ್ಬರ ದಾಂಪತ್ಯದಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಈಕೆಯ ಪ್ರೇಮದ ಮೋಹ ನೋಡಲೇಬೇಕು. ಮಹಿಳೆಗೆ 83 ವರ್ಷ, ಆದರೂ ಆಕೆ ಮದುವೆಯಾಗಲು ನಿರ್ಧರಿಸಿದಳು ಮತ್ತು ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನಕ್ಕೆ ಬಂದಳು. ಮುದುಕಿ ತನ್ನ ಪ್ರಿಯಕರನನ್ನು ಭೇಟಿಯಾದಾಗ, ನಂತರ ಇಬ್ಬರೂ ಮದುವೆಯಾಗಿ ಒಟ್ಟಿಗೆ ಬಾಳಲು ಮನಸ್ಸು ಮಾಡಿದರು.

ತನ್ನ ಸಣ್ಣ ಬಿಸಿನೆಸ್ ನಡೆಸುತ್ತಾನೆ ನದೀಮ್

ವಯಸ್ಸಾದ ಮುದುಕಿಯ 28 ವರ್ಷದ ವರ ಪಾಕಿಸ್ತಾನದ ಖಾಜಿಪುರದಲ್ಲಿ ತನ್ನ ವ್ಯಾಪಾರವನ್ನು ಮಾಡುತ್ತಾನೆ. ವೃದ್ಧೆಯ ಪತಿ ಹಫೀಜ್ ನದೀಮ್ ಬಿಡಿಭಾಗಗಳ ವ್ಯಾಪಾರ ಮಾಡುತ್ತಿದ್ದಾನೆ. ಪ್ರಸ್ತುತ, ವಯಸ್ಸಾದ ಮಹಿಳೆ ತನ್ನ ಪತಿ ಹಫೀಜ್ ನದೀಮ್‌ನೊಂದಿಗೆ ತುಂಬಾ ಸಂತೋಷವಾಗಿದ್ದಾಳೆ ಮತ್ತು ಇಬ್ಬರೂ ತಮ್ಮ ಭವಿಷ್ಯದ ಯೋಜನೆಯಲ್ಲಿ ನಿರತರಾಗಿದ್ದಾರೆ.

ಮತ್ತೊಂದು ಸುದ್ದಿ ಮೂಲಗಳ ಪ್ರಕಾರ ನದೀಮ್‌ ಮದುವೆಯಾಗಲು ಬಯಸಿದ್ದ ಆದರೆ ಆತನಿಗೆ ಹೆಣ್ಣುಗಳೇ ಸಿಗದೇ ಅಥವ ಆತ ನೋಡಿ ಬಂದ ಹುಡುಗಿಯರೂ ಆತನನ್ನ ಮದುವೆಯಾಗಲು ಒಪ್ಪಿಕೊಳ್ಳದಿದ್ದರಿಂದ ಆತ ಫೇಸ್ಬುಕ್ ನಲ್ಲಿ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ, ಆಗ ಅನೇಕ ಯುವತಿಯರೂ ಫೇಸ್ಬುಕ್ ನಲ್ಲಿ ಫ್ರೆಂಡ್ ಆಗಿದ್ದರು ಆದರೆ ಯಾರೂ ಆತನ ಪ್ರೊಪೋಸಲ್ ಒಪ್ಪಿಕೊಳ್ಳಲಿಲ್ಲ, ಹಾಗಾಗಿ ಬೇಸತ್ತ ನದೀಮ್ 83 ವಯಸ್ಸಿನ ಮಹಿಳೆಯನ್ನು ಪ್ರೀತಿಸಲಾರಂಭಿಸಿದ ಎಂಬ ಸುದ್ದಿಯೂ ವರದಿಯಾಗಿತ್ತು. ಆದರೆ ಸತ್ಯಾಂಶ ಏನು ಅನ್ನೋದನ್ನ ನದೀಮ್‌ನೇ ಹೇಳಬೇಕಿದೆ.

Advertisement
Share this on...