33 ಕೋಟಿ ದೇವತೆಗಳು ಯಾರು?
(ಹಿಂದೂಗಳನ್ನು) ಪ್ರಶ್ನಿಸುವವರು ನಿಮ್ಮ 33, ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ.. ಹಿಂದೂಗಳು ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ.
ಅಸಲಿಗೆ ಈ ಕೋಟಿ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಮೆಕಾಲೆ, ಮುಲ್ಲರ್, ನಂತವರು ತಮಗೆ ಬೇಕಾದ ಒಂದು ಮತ– ‘ವರ್ಗದವರಿಗೆ ಅನುಕೂಲವಾಗುವಂತೆ ಇತಿಹಾಸವನ್ನು ತಿದ್ದಿ ತೀಡಿ ಜಾಣರೆನಿಸಿಕೊಂಡರು..ಹಿಂದೂಗಳು ಅಂತಹ ಇತಿಹಾಸವನ್ನು ಓದಿ ಪೆದ್ದರೆನಿಸಿಕೊಂಡರು
ವೇದ ಪುರಾಣಗಳು ಹೇಳುವ ತ್ರಯತ್ರಿಂಶತಿ ಕೋಟಿ (೩೩ ಕೋಟಿ) ದೇವತೆಗಳು ಮತ್ತು ಅವರ ಹೆಸರು ಮತ್ತು ಹಿಂದೂ ಧಾರ್ಮಿಕ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿರುವ ೩೩ ಕೋಟಿ ದೇವತೆಗಳು ಯಾರು, ಅವರ ಹೆಸರುಗಳೇನು ಗೊತ್ತೇ!?
ಹಿಂದೂ ಧರ್ಮ ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳ ಉಲ್ಲೇಖವಿದೆ.
ಬಹುತೇಕ ಜನರು ಇಲ್ಲಿ ಕೋಟಿ’ ಅಂದರೆ ಸಂಖ್ಯೆ ಅಂದುಕೊಂಡಿದ್ದಾರೆ. ಮತ್ತು 33 ಕೋಟಿ ಹೆಸರುಗಳನ್ನು ಹೇಳಿರೆಂದು ತಾಕೀತು ಮಾಡುತ್ತಾರೆ.
ವಾಸ್ತವದಲ್ಲಿ, ಈ ‘ಕೋಟಿ’ ಸಂಖ್ಯೆಯನ್ನು ಸೂಚಿಸುವ ಕೋಟಿಯಲ್ಲ.
ಸಂಸ್ಕೃತದಲ್ಲಿ ‘ಕೋಟಿ’ ಅಂದರೆ ‘ವಿಧ’,’ ವರ್ಗ’ (type) ಎಂಬ ಅರ್ಥವೂ ಇದೆ. ಉದಾ: ಉಚ್ಚಕೋಟಿ. ಇದರ ಅರ್ಥ ಉಚ್ಚ ವರ್ಗಕ್ಕೆ ಸೇರಿದವರು ಎಂದು.
ಹಾಗೆಯೇ ಮತ್ತೊಂದು ಉದಾಹರಣೆ: ಸಪ್ತಕೋಟಿ ಬುದ್ಧರು. ಇದರ ಅರ್ಥ, ಏಳು ಪ್ರಧಾನ ಬುದ್ಧರು ಎಂದು.
ಯಜುರ್ವೇದ, ಅಥರ್ವ ವೇದ, ಶತಪಥ ಮೊದಲಾದ ಪ್ರಾಚೀನ ಕೃತಿಗಳಲ್ಲಿ 33 ವಿಧದ ದೇವತೆಗಳನ್ನು ಉಲ್ಲೇಖಿಸಲಾಗಿದೆ.
ಇವರೇ ತ್ರಯತ್ರಿಂಶತಿ ಕೋಟಿ (33ಕೋಟಿ ) ದೇವತೆಗಳು, ಹಿಂದೂ ಗ್ರಂಥಗಳು ಮಾತ್ರವಲ್ಲ, ಬೌದ್ದ, ಪಾರಸಿ ಮೊದಲಾದವು ಕೂಡಾ ೩೩ ದೇವವರ್ಗಗಳ ಕುರಿತು ಹೇಳುತ್ತವೆ.
ಬೌದ್ಧರ ದಿವ್ಯ ವಾದನ ಮತ್ತು ಸುವರ್ಣ ಪ್ರಭಾಸ ಸೂತ್ರಗಳಲ್ಲಿ ಇದರ ಉಲ್ಲೇಖವಿದೆ. ಈಗ ದೇವತೆಗಳ ಈ ೩೩ ವರ್ಗಗಳನ್ನೂ, ಅವುಗಳಲ್ಲಿ ಬರುವ ದೇವತೆಗಳ ಹೆಸರನ್ನೂ ನೋಡೋಣ:
12 ಆದಿತ್ಯರು (ದ್ವಾದಶಾದಿತ್ಯರು) : 1.ತ್ವಷ್ಟ 2.ಪೂಷ 3,ವಿವಸ್ವಾನ್ 4.ಮಿತ್ರ 5,ಧಾತಾ 6.ವಿಷ್ಣು 7.ಭಗ 8.ವರುಣ ೯.ಸವಿತೃ 10.ಶಕ 11.ಅಂಶ 12.ಅರ್ಯಮ
11 ರುದ್ರರು (ಏಕಾದಶರುದ್ರಾ) : 1.ಮನ್ಯು 2.ಮನು 3.ಮಹಿನಸ 4,ಮಹಾನ್ 5,ಶಿವ 6.ಋತಧ್ವಜ 7.ಉಗ್ರರೇತಾ 8.ಭವ 9.ಕಾಲ 10.ವಾಮದೇವ 11.ಧೃತವೃತ.
8 ವಸುಗಳು (ಆಷ್ಟವಸವಃ) : 1.ಧರಾ 2.ಪಾವಕ 3.ಅನಿಲ 4.ಅಪ 5.ಪ್ರತ್ಯುಷ 6.ಪ್ರಭಾಸ 7.ಸೋಮ 8.ಧ್ರುವ
ಮತ್ತಿಬ್ಬರು : 1.ಇಂದ್ರ 2.ಪ್ರಜಾಪತಿ ತ್ರಯತ್ರಿಂಶತಿ (33) ಕೋಟಿ ದೇವತೆಗಳು ಯಾರೆಲ್ಲ ಎಂದು ತಿಳಿಯಿತಲ್ಲ? ಈ ಹೆಸರುಗಳನ್ನು ಬಾಯಿಪಾಠ ಮಾಡುವುದು ಬಹಳ ಸುಲಭ. ಯಾರಾದರೂ ಇನ್ನು ೩೩ ಕೋಟಿ ದೇವತೆಗಳ ಹೆಸರು ಹೇಳಿ ಎಂದರೆ ಹಿಂದೆ ಮುಂದೆ ನೋಡುವ ಅಗತ್ಯವೇ ಇಲ್ಲ! ಅಲ್ಲವೆ?
#ನೆನಪಿರಲಿ- ಯಾರು ಹುಟ್ಟುವಾಗಲೇ ಸ್ನೇಹಿತರೂ ಅಲ್ಲ ವೈರಿಗಳೂ ಅಲ್ಲ.
ಜೈ ಹಿಂದ್ ವಂದೇ ಭಾರತ ಮಾತರಂ 🇮🇳🙏 .
#ಸಂಗ್ರಹ: (ಕರ್ನಾಟಕ ವೈಶ್ಯ ಪತ್ರಿಕೆ) ದಶಂಬರ 2020
ಇದನ್ನೂ ಓದಿ: ಗೋಮಾತೆಯ ಬಗೆಗಿನ ವಿಜ್ಞಾನ ಹಾಗು ಅದರಲ್ಲಿಡಗಿರುವ ರಹಸ್ಯಗಳ ಬಗ್ಗೆ ನಿಮಗೆ ಗೊತ್ತಾ?
ಹಸು (ಗೋವು) ವಿಗೆ ಭಾರತದಲ್ಲಿ ಮಾತೆಯ ಸ್ಥಾನಮಾನ ಸಿಕ್ಕಿದೆ. ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಹಸುವನ್ನು ತಾಯಿಯಾಗಿ ಸ್ವೀಕರಿಸಲಾಗಿದೆ. ಇದರ ಹಿಂದಿನ ಒಂದು ದೊಡ್ಡ ಕಾರಣವೆಂದರೆ ಹಸು ಬಹಳ ಉಪಯುಕ್ತ ಪ್ರಾಣಿ. ಹೊಲಗಳನ್ನು ಉಳುಮೆ ಮಾಡಲು ಹಸುಗಳನ್ನು ಬಳಸಲಾಗುತ್ತದೆ, ಇದಲ್ಲದೆ ಹಸುವಿನ ಹಾಲು, ತುಪ್ಪ, ಮಜ್ಜಿಗೆ, ಪನೀರ್ ಇತ್ಯಾದಿಗಳು ಮನೆಯ ಅಡುಗೆಮನೆಯ ಶೋಭೆಯನ್ನ ಹೆಚ್ಚಿಸುತ್ತದೆ. ಇದು ಮಾತ್ರವಲ್ಲ, ಪೂಜಾ ಪಾಠ ಹಾಗು ಇತ್ಯಾದಿಗಳಲ್ಲಿ ಹಸುವಿನ ಗೋಮೀತ್ರ ಮತ್ತು ಸಗಣಿಯನ್ನ ಬಳಸಲಾಗುತ್ತದೆ.
ಹಸುವಿನ ಮಹತ್ವವನ್ನು ಕೇವಲ ಪುರಾಣಗಳಲ್ಲಿ ಮಾತ್ರವಲ್ಲ ವಾಸ್ತು ಶಾಸ್ತ್ರದಲ್ಲಿ ಗೋಮಾತೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಹಸು ವಾಸಿಸುವ ಸ್ಥಳದಲ್ಲಿ, ಎಲ್ಲಾ ವಾಸ್ತು ದೋಷಗಳು ತಾವಾಗಿಯೇ ಹೋಗುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಹಸುವಿನ ಬಗ್ಗೆ ಇತರ ಕೆಲವು ವಿಷಯಗಳನ್ನ ತಿಳಿಯೋಣ ಬನ್ನಿ….
ವಾಸ್ತು ದೋ-ಷ-ಕ್ಕೆ ಮುಕ್ತಿ ನೀಡುತ್ತದೆ ಗೋಮಾತೆ
ಮಾನ್ಯತೆಯ ಪ್ರಕಾರ ಹಸು ಯಾವ ಜಾಗದಲ್ಲಿ ನಿಂತು ಶಾಂತಿಯಿಂದ ಉಸಿರಾಡುವ ಸ್ಥಳದಲ್ಲಿ ಎಲ್ಲಾ ವಾಸ್ತು ದೋ-ಷ-ಗಳು ದೂರವಾಗುತ್ತವೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಯಾವ ಮನೆಯಲ್ಲಿ ಗೋಮಾತೆ ಸಂತೋಷದಿಂದ ಇರುತ್ತಾಳೋ ಆ ಮನೆಯಲ್ಲಿ ಲಕ್ಷ್ಮಿಯ ವಾಸವೂ ಇರುತ್ತದೆ ಗೋಮಾತೆಯ ಕೊರಳಿಗೆ ಗಂಟೆಯನ್ನು ಕಟ್ಟಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ, ಏಕೆಂದರೆ ಹಸುವಿನ ಕೊರಳಿಗೆ ಕಟ್ಟಿದ ಗಂಟೆ ಶಬ್ದವಾಗುವುದರಿದ ಗೋಮಾತೆಯ ಆರತಿಯಾದಂತೆ ಎಂದು ಹೇಳಲಾಗುತ್ತದೆ.
ನಿಮ್ಮ ಮನೆಯಲ್ಲಿ ಹಸುಗಳಿಲ್ಲ ಆದರೆ ಹಸುಗಳು ಪ್ರತಿದಿನ ಮನೆಯ ಮುಂದೆ ಬರುತ್ತವೆಯೆಂದರೆ, ಅವು ಒಳ್ಳೆಯ ದಿನಗಳ ಸಂಕೇತಗಳಾಗಿವೆ. ಅದೇ ಸಮಯದಲ್ಲಿ, ವಾಸ್ತು ದೋ-ಷ-ಗಳು ಮನೆಯ ಮುಖ್ಯ ದ್ವಾರದಿಂದ ಕಣ್ಮರೆಯಾಗುತ್ತವೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹರಡುತ್ತದೆ.
ಗೋಮಾತೆಯ ಸೇವೆಯಿಂದ ಈ ಲಾಭಗಳಾಗುತ್ತವೆ
ಗೋಮಾತೆಯನ್ನ ನಿಯಮಿತವಾಗಿ ಪೂಜಿಸುವ ಮತ್ತು ಸೇವೆ ಮಾಡುವ ಜನರಿಗೆ ಕಷ್ಟ ಕಾರ್ಪಣ್ಯಗಳು ಹತ್ತಿರವು ಸುಳಿಯಲ್ಲ ಎಂದು ನಂಬಲಾಗಿದೆ. ಅಂತಹ ಜನರ ಮೇಲಿನ ಎಲ್ಲಾ ವಿಪತ್ತುಗಳ ನಾಶಕ್ಕೆ ಗೋಮಾತೆ ಕಾರಣಳಾಗುತ್ತಾಳೆ. ಗೋಮಾತೆಯಲ್ಲಿ ದೇವ ದೇವಾದಿಗಳು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ, ಅಂಥದ್ರಲ್ಲಿ ಗೋಮಾತೆ ಯಾವ್ಯಾವ ಸ್ಥಳಗಳಿಗೆ ಹೋಗುತ್ತದೆಯೋ ಅಲ್ಲಿ ಹಾ-ವು ಚೇ-ಳು-ಗಳು ಎಂದಿಗೂ ಬರುವುದಿಲ್ಲ ಎಂದು ಹೇಳಲಾಗುತ್ತದೆ.
ಗೋಮಾತೆಯ ಬಾಲದಿಂದ ದೂರವಾಗುತ್ತದೆ ದೃಷ್ಟಿ ದೋ-ಷ
ಪೌರಾಣಿಕ ಮಾನ್ಯತೆಗಳ ಪ್ರಕಾರ ಹಸುವಿನ ಸಗಣಿಯಲ್ಲಿ ತಾಯಿ ಲಕ್ಷ್ಮಿ ನಿವಾಸವಿರುತ್ತದೆ ಮತ್ತು ಗೋಮಾತೆಯ ಒಂದು ಕಣ್ಣಿನಲ್ಲಿ ಸೂರ್ಯನಿದ್ದರೆ ಮತ್ತೊಂದು ಕಣ್ಣಿನಲ್ಲಿ ಚಂದ್ರ ದೇವ ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಇದಲ್ಲದೆ, ಹಸುವಿನ ಹಾಲಿನಲ್ಲಿ ಕೆಲ ಅದ್ಭುತ ತತ್ವಗಳಿದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋ-ಗ-ಗಳ ವಿ-ರು-ದ್ಧ ಹೋರಾಡುವ ಸಾಮರ್ಥ್ಯವನ್ನು ಮನುಷ್ಯನಿಗೆ ನೀಡುತ್ತದೆ.
ಗೋಮಾತೆಯ ಬಾಲದಲ್ಲಿ ಹನುಮಂತ ನೆಲೆಸಿರುತ್ತಾನೆ. ಹಾಗಾಗಿ ಯಾರ ಮೇಲಾದರೂ ಕೆಟ್ಟ ದೃಷ್ಟಿ ಬಿದ್ದರೆ ಆಗ ಗೋಮಾತೆಯ ಬಾಲದಿಂದ ದೃಷ್ಟಿ ತೆಗೆಯಲಾಗುತ್ತದೆ
ರೋ-ಗ-ಗಳ ನಾ-ಶ-ಪಡಿಸುತ್ತದೆ ಗೋಮಾತೆ
ಗೋಮಾತೆಯ ಬೆನ್ನ ಮೇಲಿರುವ ಡುಬ್ಬದ ಮೇಲೆ ಸೂರ್ಯದೇವ ಕೇತು ನಾಡಿಯಿರುತ್ತದೆ. ಮಾನ್ಯತೆಗಳ ಪ್ರಕಾರ ಪ್ರತಿದಿನ ಬೆಳಿಗ್ಗೆ ಗೋಮಾತೆಯ ಬೆನ್ನ ಮೇಲೆ ಕೈ ಸವರುವುದರಿಂದ ಎಲ್ಲ ರೋ-ಗ-ಗಳೂ ನಾ-ಶ-ವಾಗುತ್ತವೆ. ಗೋವಿಗೆ ಮೇವು ತನ್ನಿಸುವುದರಿಂದ 33 ಕೋಟಿ ದೇವತೆಗಳ ಸಂತೃಪ್ತರಾಗುತ್ತಾರೆ. ಯಾಕಂದ್ರೆ ಗೋಮಾತೆಯಲ್ಲಿ 33 ಕೋಟಿ ದೇವತೆಗಳಿದ್ದಾರೆ ಎಂಬ ನಂಬಿಕೆಯಿದೆ. ಅಂಥದ್ರಲ್ಲಿ ಅಂತಹ ಗೋಮಾತೆಗೆ ಮೇವು ತಿನ್ನಿಸಲೇಬೇಕು.
ನೀವು ಮಾಡುವ ಕೆಲಸಗಳು ಫೇಲ್ ಆಗುತ್ತಿದ್ದರೆ ಮತ್ತು ಅದೃಷ್ಟವು ನಿಮಗೆ ಸಾಥ್ ನೀಡದಿರುತ್ತಿದ್ದತೆ ನೀಡದಿದ್ದರೆ, ಈ ಕ್ರಮಗಳು ನಿಮಗೆ ತುಂಬಾ ಪರಿಣಾಮಕಾರಿಯಾಗಿ ಸಾಬೀತಾಗಬಹುದು. ಹಾಗಾಗಿ ನಿಮ್ಮ ಅದೃಷ್ಟವನ್ನ ಖುಲಾಯಿಸಲು ಸ್ವಲ್ಪ ಬೆಲ್ಲವನ್ನು ಅಂಗೈಯಲ್ಲಿ ಇರಿಸಿ ಅದನ್ನ ಹಸುವಿನ ನಾಲಿಗೆಯಿಂದ ನೆಕ್ಕಿಸಿ.
ಒಂದು ವೇಳೆ ನಿಮ್ಮ ಅಂಗೈಯಲ್ಲಿರುವ ಬೆಲ್ಲವನ್ನ ಗೋಮಾತೆ ತನ್ನ ನಾಲಿಗೆಯಿಂದ ನೆಕ್ಲಿದರೆ ನಿಮ್ಮ ಅದೃಷ್ಟ ಖುಲಾಯಿಸಿತೆಂದೇ ಅಂದಯಕೊಳ್ಳಿ. ಅದರ ಜೊತೆಗೆ ಗೋಮಾತೆಯ ನಾಲ್ಕೂ ಕಾಲುಗಳ ಮಧ್ಯದಿಂದ ಪರಿಕ್ರಮ ಮಾಡುವುದರಿಂದ ಮನುಷ್ಯ ಭ-ಯ-ಮುಕ್ತನಾಗುತ್ತಾನೆ.
ನವಗ್ರಹಗಳನ್ನ ಈ ರೀತಿಯಾಗಿ ಶಾಂತಗೊಳಿಸುತ್ತೆ ಗೋಮಾತೆ
ಹಿಂದೂ ಧರ್ಮದ ಹಲವಾರು ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಕಪ್ಪು ಬಣ್ಣದ ಗೋಮಾತೆಯನ್ನ ಪೂಜಿಸುವುದರಿಂದ ನವಗ್ರಹಗಳು ಶಾಂತವಾಗುತ್ತವೆ. ಅಷ್ಟೇ ಅಲ್ಲ ವ್ಯಕ್ತಿ ಸಂಪೂರ್ಣ ವಿಧಿವಿಧಾನಗಳೊಂದಿಗೆ ಗೋಮಾತೆಯ ಪೂಜೆ ಮಾಡಿದರೆ ಅಂತಹ ವ್ಯಕ್ತಿಗೆ ಶ-ತ್ರು-ಗಳಿಂದ ಮುಕ್ತಿ ಸಿಗುತ್ತದೆ.
ನಿಮ್ಮ ಯಾವುದಾದರೂ ಕೆಲಸಗಳು ಫೇಲ್ ಆಗುತ್ತಿದ್ದರೆ ಅಥವ ನಿಮಗೆ ಕಷ್ಟಗಳು ದೂರವಾಗುತ್ತಿರಲಿಲ್ಲವೆಂದರೆ ಆ ವಿಷಯವನ್ನು ನೀವು ಯಾರ ಹತ್ತಿರವೂ ಹೇಳಿಕೊಳ್ಳಲಾಗದಿದ್ದರೆ ಅದನ್ನ ನೀವು ಗೋಮಾತೆಯ ಕಿವಿಯಲ್ಲಿ ಹೇಳಿ. ನಿಮ್ಮ ನಿಂತ ಕೆಲಸಗಳು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುತ್ತವೆ.