“ನಿಮ್ಮ ಮಜಹಬ್‌ನ್ನ ತಗೊಂಡು ಅಲ್ಲಿಗೇ (ಪಾಕಿಸ್ತಾನಕ್ಕೇ) ಹೋಗಿ, ಹಿಂದುಗಳೇನಾದ್ರೂ ರೊಚ್ಚಿಗೆದ್ದರೆ….”: ಪಿಎಫ್‌ಐ ವಿರುದ್ಧ ಸಿಡದೆದ್ದ ಹಿಂದೂ ಫೈರ್‌ಬ್ರ್ಯಾಂಡ್ ರಾಜ್ ಠಾಕ್ರೆ

in Uncategorized 165 views

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ವಿರುದ್ಧ ರಾಷ್ಟ್ರವ್ಯಾಪಿ NIA ದಾಳಿಗಳ ನಂತರ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದವರಿಗೆ MNS ಮುಖ್ಯಸ್ಥ ರಾಜ್ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ. ಇಂತಹ ಘಟನೆಗಳ ಬಗ್ಗೆ ಹಿಂದೂಗಳು ಸುಮ್ಮನಿರುವುದಿಲ್ಲ ಎಂದು ಘೋಷಣೆ ಕೂಗಿದವರಿಗೆ ಎಚ್ಚರಿಕೆ ನೀಡಿದ್ದಾರೆ. ದೇಶದ ಹಿತದೃಷ್ಟಿಯಿಂದ ಇಂತಹ ದೇಶವಿರೋಧಿ ಅಂಶಗಳನ್ನು ತಕ್ಷಣವೇ ತೊಡೆದುಹಾಕಬೇಕು ಎಂದು ರಾಜ್ ಠಾಕ್ರೆ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದರು. ಈ ತರಹದ ಘೋಷಣೆಗಳು ಕೂಗುವವರು ತಮ್ಮ ಮತವನ್ನು (ಇಸ್ಲಾಂನ್ನ) ತೆಗೆದುಕೊಂಡು ಪಾಕಿಸ್ತಾನಕ್ಕೇ ಹೋದರೆ ಒಳ್ಳೆಯದು ಎಂದು ಹೇಳಿದರು. ರಾಜ್ ಠಾಕ್ರೆ ಈ ಹೇಳಿಕೆಯನ್ನು ಸೆಪ್ಟೆಂಬರ್ 24, 2022 ರಂದು (ಶನಿವಾರ) ನೀಡಿದ್ದಾರೆ.

Advertisement

ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ರಾಜ್ ಠಾಕ್ರೆ ಮೊದಲು PFI ಉಗ್ರರ ಮೇಲೆ NIA ದಾಳಿಗಳನ್ನು ಉಲ್ಲೇಖಿಸಿದ್ದಾರೆ. ಉಗ್ರಗಾಮಿ ಪಿಎಫ್‌ಐಗೆ ಸಂಬಂಧಿಸಿದ ಕೆಲವರು ಪುಣೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಜೊತೆಗೆ ‘ಅಲ್ಲಾ-ಹು-ಅಕ್ಬರ್’ ಘೋಷಣೆಗಳನ್ನು ಎತ್ತಿದ್ದಾರೆ ಎಂದು ಅವರು ಬರೆದಿದ್ದಾರೆ. ದೇಶವಿರೋಧಿ ಕೆಲಸಗಳಿಗೆ ಸಿಗುತ್ತಿರುವ ಧನಸಹಾಯವೇ ಪಿಎಫ್‌ಐನವರ ಬಂಧನಕ್ಕೆ ಕಾರಣ ಎಂದು ಬರೆದಿದ್ದಾರೆ. ಈ ಚೇಷ್ಟೆಗಳನ್ನು ಅತ್ಯಂತ ಗಂಭೀರ ಸಮಸ್ಯೆ ಎಂದು ಕರೆದ ರಾಜ್ ಠಾಕ್ರೆ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸರ್ಕಾರವು ತಕ್ಷಣವೇ ಇಂತಹ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಬರೆದಿದ್ದಾರೆ.

ದೇಶವಿರೋಧಿಗಳ ಬಂಧನದ ನಂತರ ಕೆಲವರು ಬೀದಿಗಿಳಿದು ‘ಅಲ್ಲಾಹು-ಅಕ್ಬರ್ ಮತ್ತು ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿರುವುದನ್ನ ಭಾರತದಲ್ಲಿ ಯಾವುದೇ ಸಂದರ್ಭದಲ್ಲೂ ಸ್ವೀಕರಿಸುವುದಿಲ್ಲ. ಘೋಷಣೆ ಕೂಗಿದವರ ಮನಸ್ಸಿನಲ್ಲಿ ಪಾಕಿಸ್ತಾನ ಇದ್ದರೆ ನಿಮ್ಮ ಧರ್ಮವನ್ನು ತೆಗೆದುಕೊಂಡು ಅಲ್ಲಿಗೇ ಹೋಗಿ ಎಂದು ಎಂದು ರಾಜ್ ಠಾಕ್ರೆ ಬರೆದುಕೊಂಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಉದ್ದೇಶಿಸಿ ರಾಜ್ ಠಾಕ್ರೆ ಅವರು ಕೂಡಲೇ ಇಂತಹ ಸಮಾಜ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಬರೆದಿದ್ದಾರೆ. ಇದರ ಪರಿಣಾಮ ಏನಾಗುತ್ತದೆ ಎಂದು ನಾನು ಬರೆಯುವ ಅಗತ್ಯವಿಲ್ಲ ಎಂದು ಅವರು ಬರೆದಿದ್ದಾರೆ. ಕೇಸರಿ ಬಣ್ಣದಲ್ಲಿ ಮುಂದಿನ ಸಾಲನ್ನು ಬರೆದ ಠಾಕ್ರೆ, “ಮರಾಠಿ ಹಿಂದೂಗಳು ಈ ವಿಷಯವನ್ನು ತಮ್ಮ ಕೈಗೆ ತೆಗೆದುಕೊಂಡರೆ ಏನಾಗುತ್ತದೆ ಅನ್ನೋದರ ಬಗ್ಗೆ ಇಲ್ಲಿ ಬರೆಯಲು ಸಾಧ್ಯವಿಲ್ಲ” ಎಂದಿದ್ದಾರೆ. ಇದು ಹಬ್ಬ ಹರಿದಿನಗಳ ಕಾಲವಾಗಿದ್ದು, ಇದರಿಂದ ಅಶಾಂತಿ ಉಂಟಾಗಬಹುದು ಎಂದ ಅವರು, ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಇದರಿಂದ ದೇಶಕ್ಕೂ ಒಳ್ಳೆಯದಾಗುತ್ತದೆ ಎಂದಿದ್ದಾರೆ.

ಪುಣೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಿಎಫ್‌ಐ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ಸೆಪ್ಟೆಂಬರ್ 24, 2022 ರಂದು ಹೇಳಲಾಗುತ್ತಿದೆ. ಘೋಷಣೆ ಕೂಗಿದ ತಕ್ಷಣ ಮಹಾರಾಷ್ಟ್ರ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ 60-70 ಜನರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Advertisement
Share this on...