ನೇಪಾಳ ಪ್ಲೇನ್ ಕ್ರ್ಯಾಶ್ ಗೂ ಮುನ್ನ ವಿಮಾನದೊಳಗೆ ಲೈವ್ ಮಾಡುತ್ತಿದ್ದ ಯುವಕ: ಜನರ ಚೀರಾಟ, ಪ್ಲೇನ್ ಕ್ರ್ಯಾಶ್, ಬೆಂಕಿ ಎಲ್ಲವನ್ನೂ ನೋಡಿದರೆ ಬೆಚ್ಚಿಬೀಳ್ತೀರ

in Uncategorized 1,234 views

ನೇಪಾಳದಲ್ಲಿ ಭಾನುವಾರ ಯೇತಿ ಏರ್‌ಲೈನ್ಸ್ ವಿಮಾನ ಪತನಗೊಂಡಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 72 ಜನರು ಸಾವನ್ನಪ್ಪಿದ್ದರು. ವಿಮಾನ ಲ್ಯಾಂಡಿಂಗ್ ವೇಳೆ ಗಾಜಿಪುರದ ಸೋನು ಜೈಸ್ವಾಲ್ ತನ್ನ ಸ್ನೇಹಿತರಿಗೆ ಫೇಸ್ ಬುಕ್ ನಲ್ಲಿ ವಿಮಾನ ಲ್ಯಾಂಡಿಂಗ್ ನ ಲೈವ್ ವಿಡಿಯೋ ತೋರಿಸುತ್ತಿದ್ದ. ಅದರ ವಿಡಿಯೋ ಈಗ ವೈರಲ್ ಆಗಿದೆ.

Advertisement

ನವದೆಹಲಿ: ನೇಪಾಳದಲ್ಲಿ ಭಾನುವಾರ ಯೇತಿ ಏರ್‌ಲೈನ್ಸ್ ವಿಮಾನ ಪತನಗೊಂಡಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 72 ಜನರು ಸಾವನ್ನಪ್ಪಿದ್ದರು. ವಿಮಾನ ಲ್ಯಾಂಡಿಂಗ್ ವೇಳೆ ಗಾಜಿಪುರದ ಸೋನು ಜೈಸ್ವಾಲ್ ತನ್ನ ಸ್ನೇಹಿತರಿಗೆ ಫೇಸ್ ಬುಕ್ ನಲ್ಲಿ ವಿಮಾನ ಲ್ಯಾಂಡಿಂಗ್ ನ ಲೈವ್ ವಿಡಿಯೋ ತೋರಿಸುತ್ತಿದ್ದ.

ಈ ವಿಡಿಯೋ 1.40 ಸೆಕೆಂಡ್‌ನದ್ದಾಗಿದೆ, ಆದರೆ ಅದನ್ನು ಲೈವ್ ಮಾಡುವಾಗ, ಸೋನುಗೆ ತಾನು ಸಾವಿನಿಂದ ಕೆಲವು ಕ್ಷಣಗಳು ದೂರದಲ್ಲಿದ್ದೇನೆ ಎಂದು ತಿಳಿದಿರಲಿಲ್ಲ. ನಿಜಕ್ಕೂ ಈ ವಿಡಿಯೋ ಆಘಾತಕಾರಿಯಾಗಿದೆ.

ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 5 ಭಾರತೀಯರು

ವಿಮಾನ ದುರಂತವು ಜನರ ಪ್ರಾಣವನ್ನು ಬಲಿ ಪಡೆದ್ದಷ್ಟೇ ಅಲ್ಲದೆ ಅಷ್ಟೂ ಕುಟುಂಬಗಳನ್ನ ಅನಾಥರನ್ನಾಗಿ ಮಾಡಿದೆ. ಐವರು ಭಾರತೀಯರಾದ ಅಭಿಷೇಕ್ ಕುಶ್ವಾಹ (25), ವಿಶಾಲ್ ಶರ್ಮಾ (22), ಅನಿಲ್ ಕುಮಾರ್ ರಾಜ್‌ಭರ್ (27), ಸೋನು ಜೈಸ್ವಾಲ್ (35) ಮತ್ತು ಸಂಜಯ್ ಜೈಸ್ವಾಲ್ ವಿಮಾನದಲ್ಲಿದ್ದರು. ಇವರೆಲ್ಲರೂ ಉತ್ತರ ಪ್ರದೇಶದ ನಿವಾಸಿಗಳಾಗಿದ್ದರು.

ಇದುವರೆಗೂ ಸಿಕ್ಕಿವೆ 69 ಜನರ ಶವಗಳು

ಇದುವರೆಗೆ ವಿಮಾನದ ಬ್ಲ್ಯಾಕ್ ಬಾಕ್ಸ್ ಮತ್ತು 69 ಮೃತದೇಹಗಳು ಪತ್ತೆಯಾಗಿವೆ. ‘ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್’ (ಸಿವಿಆರ್) ಮತ್ತು ‘ಫ್ಲೈಟ್ ಡೇಟಾ ರೆಕಾರ್ಡರ್’ (ಎಫ್‌ಡಿಆರ್) ಎರಡೂ ಸಿಕ್ಕಿವೆ. CVR ರೇಡಿಯೋ ಪ್ರಸರಣಗಳು ಮತ್ತು ಕಾಕ್‌ಪಿಟ್‌ನಲ್ಲಿ ಇತರ ಶಬ್ದಗಳನ್ನು ರೆಕಾರ್ಡ್ ಮಾಡುತ್ತದೆ ಅಂದರೆ ಉದಾಹರಣೆಗೆ ಪೈಲಟ್‌ಗಳ ನಡುವಿನ ಸಂಭಾಷಣೆಗಳು ಮತ್ತು ಎಂಜಿನ್ ಶಬ್ದಗಳನ್ನ ಇವುಗಳು ರೆಕಾರ್ಡ್ ಮಾಡುತ್ತವೆ.

FDR ವೇಗ, ಎತ್ತರ ಮತ್ತು ದಿಕ್ಕು, ಹಾಗೆಯೇ ಪೈಲಟ್ ಚಲನೆಗಳು ಮತ್ತು ನಿರ್ಣಾಯಕ ವ್ಯವಸ್ಥೆಗಳ ಕಾರ್ಯಕ್ಷಮತೆಯಂತಹ 80 ಕ್ಕೂ ಹೆಚ್ಚು ವಿಭಿನ್ನ ರೀತಿಯ ಮಾಹಿತಿಯನ್ನು ದಾಖಲಿಸುತ್ತದೆ.

ಕಳೆದ 30 ವರ್ಷಗಳಲ್ಲಿ ಹಿಮಾಲಯ ರಾಷ್ಟ್ರವಾದ ನೇಪಾಳದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಮಾನ ಅಪಘಾತ ಇದಾಗಿದೆ.

ಮಾಹಿತಿ ನೀಡಿದ ಏರ್ ಪೋರ್ಟ್ ವಕ್ತಾರರು

ಪೋಖರಾ ಅಂತರಾಷ್ಟ್ರೀಯ ಏರ್‌ಪೋರ್ಟ್ ವಕ್ತಾರ ಅನುಪ್ ಜೋಶಿ ಹೇಳಿಕೆಯನ್ನು ‘ಕಠ್ಮಂಡು ಪೋಸ್ಟ್’ ಪತ್ರಿಕೆ ಉಲ್ಲೇಖಿಸಿದೆ. “ಹವಾಮಾನ ಸ್ಪಷ್ಟವಾಗಿತ್ತು. ನಾವು ಅವರನ್ನು ಪೂರ್ವ ತುದಿಯಲ್ಲಿರುವ ರನ್‌ವೇ 30 ರಲ್ಲಿ ಇಳಿಸಲು ಹೇಳಿದೆವು … ಎಲ್ಲವೂ ಸರಿಯಾಗಿತ್ತು” ಅವರು ಯಾವುದೇ ಸಮಸ್ಯೆ ವರದಿಯಾಗಿಲ್ಲ ಎಂದು ಹೇಳಿದರು. ನಂತರ ವಿಮಾನದ ಕ್ಯಾಪ್ಟನ್ ಪಶ್ಚಿಮ ತುದಿಯಲ್ಲಿರುವ ರನ್‌ವೇ 12 ರಲ್ಲಿ ಇಳಿಯಲು ಅನುಮತಿ ಕೋರಿದರು. ಈತ ಯಾಕೆ ಹೀಗೆ ಮಾಡಿದನೋ ಗೊತ್ತಿಲ್ಲ. ಅನುಮತಿ ನೀಡಲಾಯಿತು ಮತ್ತು ನಂತರ ವಿಮಾನ ಲ್ಯಾಂಡಿಂಗ್ ಪ್ರಾರಂಭಿಸಿತು ಎಂದು ಜೋಶಿ ಹೇಳಿದ್ದಾರೆ.

‘ದುರ್ಘಟನೆ ಹೇಗಾಯ್ತು ಇದು ತನಿಖೆಯ ವಿಷಯ’

ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಜನರಲ್ ಮ್ಯಾನೇಜರ್ ಪ್ರೇಮನಾಥ್ ಠಾಕೂರ್ ಮಾತನಾಡಿ, “ವಿಮಾನವು ಕಠ್ಮಂಡುವಿನಿಂದ ಬೆಳಿಗ್ಗೆ 10.32 ಕ್ಕೆ ಹೊರಟಿತು. ಬೆಳಗ್ಗೆ 10.58ಕ್ಕೆ ಪೋಖರಾದಲ್ಲಿ ವಿಮಾನ ಇಳಿಯಬೇಕಿತ್ತು. ವಿಮಾನವು ಪೋಖರಾ ಟವರ್ ನೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಆ ವಿಮಾನದ ಲ್ಯಾಂಡಿಂಗ್‌ಗೆ ಅಗತ್ಯವಾದ ಕ್ಲಿಯರೆನ್ಸ್ (ಲ್ಯಾಂಡಿಂಗ್ ಕ್ಲಿಯರೆನ್ಸ್) ಸಹ ಪಡೆದಿತ್ತು. ಹವಾಮಾನವೂ ಚೆನ್ನಾಗಿತ್ತು. ಎಲ್ಲವೂ ಸರಿಯಾಗೇ ಇತ್ತು. ಅಪಘಾತ ಹೇಗೆ ಸಂಭವಿಸಿತು ಎಂಬುದು ತನಿಖೆಯ ವಿಷಯವಾಗಿದೆ” ಎಂದು ತಿಳಿಸಿದ್ದಾರೆ.

Advertisement
Share this on...