ನೋಟ್‌ಗಳ ಮೇಲಿರುವ ಗಾಂಧಿ ಚಿತ್ರವನ್ನ ತೆಗೆದುಹಾಕುವಂತೆ ಕಾಂಗ್ರೆಸ್ ಶಾಸಕರ ಒತ್ತಾಯ: ಪ್ರಧಾನಿ ಮೋದಿಗೆ ಪತ್ರ, ಕಾರಣವೇನು ನೋಡಿ

in Kannada News/News/ಕನ್ನಡ ಮಾಹಿತಿ 318 views

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಭರತ್ ಸಿಂಗ್ ಸುದ್ದಿಯಲ್ಲಿದ್ದಾರೆ. ಸಂಗೋಡಿನ ಕಾಂಗ್ರೆಸ್ ಶಾಸಕ ಭರತ್ ಸಿಂಗ್, ನೋಟಿನಲ್ಲಿರುವ ಗಾಂಧಿ ಫೋಟೋಕ್ಕೆ ಸಂಬಂಧಿಸಿದಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. 500 ಹಾಗೂ 2 ಸಾವಿರ ರೂಪಾಯಿ ನೋಟಿನಲ್ಲಿರುವ ಮಹಾತ್ಮ ಗಾಂಧಿ ಫೋಟೋವನ್ನು ತೆಗೆಯುವಂತೆ ಭರತ್ ಸಿಂಗ್, ಪತ್ರದಲ್ಲಿ ಮನವಿ ಮಾಡಿದ್ದಾರೆ.

Advertisement

ಮಹಾತ್ಮ ಗಾಂಧಿ, ಸತ್ಯದ ಸಂಕೇತ. ಭಾರತೀಯ ರಿಸರ್ವ್ ಬ್ಯಾಂಕಿನ 500 ಮತ್ತು 2000 ನೋಟುಗಳಲ್ಲಿ ಮಹಾತ್ಮ ಗಾಂಧಿಯವರ ಫೋಟೋ ಇರುತ್ತದೆ. ಈ ನೋಟುಗಳನ್ನು ಲಂಚದ ವಹಿವಾಟಿಗೆ ಬಳಸಲಾಗುತ್ತದೆ. ಹಾಗಾಗಿ 500 ಮತ್ತು 2000 ನೋಟುಗಳಲ್ಲಿರುವ ಗಾಂಧೀಜಿಯವರ ಫೋಟೋ ತೆಗೆಯಬೇಕೆಂದು ಭರತ್ ಸಿಂಗ್ ಒತ್ತಾಯಿಸಿದ್ದಾರೆ. ಗಾಂಧಿ ಫೋಟೋ ಬದಲು ಕನ್ನಡಕ ಅಥವಾ ಅಶೋಕ್ ಚಕ್ರದ ಚಿತ್ರವನ್ನು ಮಾತ್ರ ಹಾಕಿ ಎಂದು ಪ್ರಧಾನಿಗೆ ಸಲಹೆ ನೀಡಿದ್ದಾರೆ.

75 ವರ್ಷಗಳಲ್ಲಿ, ದೇಶ ಮತ್ತು ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಈ ಭ್ರಷ್ಟಾಚಾರವನ್ನು ತಡೆಯಲು ಎಸಿಬಿ ಇಲಾಖೆ ತನ್ನ ಕೆಲಸವನ್ನು ರಾಜಸ್ಥಾನದಲ್ಲಿ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ಎಸಿಬಿ ಇಲಾಖೆಯು ಲಂಚದ ಮೊತ್ತವನ್ನು 500 ಮತ್ತು 2000 ನೋಟುಗಳನ್ನ ವಶಕ್ಕೆ ಪಡೆಯುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರವಿರುವ ದೊಡ್ಡ 500 ಮತ್ತು 2000 ನೋಟುಗಳನ್ನು ಬಾರ್, ಲಿಕ್ಕರ್ ಪಾರ್ಟಿಗಳು ಮತ್ತು ಇತರ ಪಾರ್ಟಿಗಳಲ್ಲಿ ನೃತ್ಯ ಮಾಡುವವರ ಮೇಲೆ ಎಸೆಯಲಾಗುತ್ತದೆ. ಇದು ಮಹಾತ್ಮ ಗಾಂಧಿಗೆ ಅವಮಾನ ಮಾಡಿದಂತೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

5, 10, 20, 50, 100 ಮತ್ತು 200 ನೋಟುಗಳ ಮೇಲೆ ಮಾತ್ರ ಗಾಂಧಿ ಫೋಟೋ ಮುದ್ರಿಸಬೇಕೆಂದು ಭರತ್ ಸಿಂಗ್ ಪತ್ರದಲ್ಲಿ ಬರೆದಿದ್ದಾರೆ. ಈ ನೋಟುಗಳು ಬಡವರಿಗೆ ಉಪಯುಕ್ತವಾಗುತ್ತವೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ಮೊಟ್ಟಮೊದಲು ಮಹಾತ್ಮ ಗಾಂಧಿ ಚಿತ್ರ ಮುದ್ರಿಸಿದ್ದು ಯಾವಾಗ?

ಅದು ಸರಿಯಾಗಿ ಅರ್ಧ ಶತಮಾನದ ಹಿಂದೆ. ಅಂದು ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ 100ನೇ ಜಯಂತಿ. ಅವರ ಸ್ಮರಣಾರ್ಥ 100 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಮೊದಲ ಬಾರಿಗೆ ಅವರ ಭಾವಚಿತ್ರವನ್ನು ಮುದ್ರಿಸಲಾಯಿತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಭಾರತೀಯ ಕರೆನ್ಸಿಗಳಲ್ಲಿ ಬ್ರಿಟಿಷ್ ರಾಜನ ಚಿತ್ರದ ಜಾಗಕ್ಕೆ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ತರಬೇಕೆಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ಬಂತು. ಅದು ಕಾರ್ಯರೂಪಕ್ಕೆ ಬರಲು ಸ್ವಲ್ಪ ಸಮಯ ಹಿಡಿಯಿತು. ಇದೇ ಹೊತ್ತಿಗೆ ಗಾಂಧಿಯವರ ಭಾವಚಿತ್ರದ ಬದಲಿಗೆ ಬ್ರಿಟಿಷ್ ದೊರೆಯ ಭಾವಚಿತ್ರದ ಸ್ಥಳದಲ್ಲಿ ಸಾರನಾಥದ ಸಿಂಹದ ರಾಜಧಾನಿ ಚಿತ್ರವನ್ನು ಮುದ್ರಿಸಲಾಯಿತು.

ಭಾರತೀಯ ರಿಸರ್ವ್ ಬ್ಯಾಂಕ್ 1969ರಲ್ಲಿ 100 ರೂಪಾಯಿ ನೋಟಿನಲ್ಲಿ ಸೇವಾಗ್ರಾಮ ಆಶ್ರಮದ ಹಿಂದೆ ಮಹಾತ್ಮಾ ಗಾಂಧಿಯವರು ಕುಳಿತಿರುವ ಚಿತ್ರವನ್ನು ಮುದ್ರಿಸಿತು. ನಂತರ ಭಾರತೀಯ ಕರೆನ್ಸಿಗಳಲ್ಲಿ ನಿಗದಿತವಾಗಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಮುದ್ರಿಸಲು ಆರಂಭಿಸಿದ್ದು 1987ರ ನಂತರ. 500 ರೂಪಾಯಿ ಸರಣಿ ನೋಟುಗಳಲ್ಲಿ ಗಾಂಧೀಜಿಯ ನಗುವ ಮುಖದ ಚಿತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸಿತು. ನಂತರ ಬೇರೆ ಬೇರೆ ಮುಖ ಬೆಲೆಯ ನೋಟುಗಳಲ್ಲಿ ಕೂಡ ಗಾಂಧೀಜಿ ಚಿತ್ರ ಮುದ್ರಣವಾಗಲು ಪ್ರಾರಂಭವಾಯಿತು.

ಗಾಂಧೀಜಿಯ ಫೋಟೋವನ್ನು ನೋಟುಗಳಲ್ಲಿ ಮುದ್ರಿಸುವ ಮೊದಲು ಹಲವು ವಿನ್ಯಾಸ ಮತ್ತು ಚಿತ್ರಗಳಲ್ಲಿ ಭಾರತೀಯ ಕರೆನ್ಸಿಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದವು. 1949ರಲ್ಲಿ ಅಂದಿನ ಸರ್ಕಾರ 1 ರೂಪಾಯಿ ನೋಟುಗಳಲ್ಲಿ ಅಶೋಕ ಸ್ಥಂಭವನ್ನು ಮುದ್ರಿಸಿತ್ತು. 1953ರಲ್ಲಿ ಹೊಸ ನೋಟುಗಳಲ್ಲಿ ಹಿಂದಿ ಭಾಷೆಗೆ ವಿಶೇಷ ಪ್ರಾಧಾನ್ಯತೆ ಇತ್ತು. ಹಿಂದಿ ಭಾಷೆಯಲ್ಲಿ ನೋಟಿಗೆ ಬಹುವಚನವಾಗಿ ಹೇಳಲಾಗುತ್ತಿದ್ದ ರುಪಯಾ ಹೋಗಿ ರೂಪಾಯೆಯಾಯಿತು. 1954ರಲ್ಲಿ 1,000, 5,0000 ಮತ್ತು 10,000ದ ಅಧಿಕ ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಮರು ಜಾರಿಗೆ ತರಲಾಯಿತು.

ಸಾವಿರ ಮುಖಬೆಲೆಯ ನೋಟುಗಳಲ್ಲಿ ತಂಜಾವೂರು ದೇವಾಲಯ ವಿಶೇಷತೆಗಳು, 5 ಸಾವಿರ ರೂಪಾಯಿ ನೋಟುಗಳಲ್ಲಿ ಗೇಟ್ ವೇ ಆಫ್ ಇಂಡಿಯಾ ಮತ್ತು 10 ಸಾವಿರ ರೂ ನೋಟಿನಲ್ಲಿ ಲಯನ್ ಕ್ಯಾಪಿಟಲ್ ಆಫ್ ಅಶೋಕ, ಅಶೋಕ ಸ್ಥಂಭಗಳನ್ನು ಮುದ್ರಿಸಲಾಗುತ್ತಿತ್ತು. ಇನ್ನು ಅಧಿಕ ಮುಖಬೆಲೆಯ ನೋಟುಗಳ ಚಲಾವಣೆಯನ್ನು 1978ರಲ್ಲಿ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಯಿತು.

1980ರ ದಶಕದಲ್ಲಿ ನೋಟುಗಳ ಮುದ್ರಣದಲ್ಲಿ ಸಂಪೂರ್ಣ ಬದಲಾವಣೆಯಾಯಿತು. ದೇವಸ್ಥಾನಗಳ ವಿಶಿಷ್ಟತೆ ಬದಲಿಗೆ ನೋಟುಗಳಲ್ಲಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳನ್ನು ಮುದ್ರಿಸಲಾಯಿತು. ಆರ್ಯಭಟ, ಒಲಿ ರಿಗ್, ಕೊನಾರ್ಕ್ ವೀಲ್ ಮತ್ತು ನವಿಲುಗಳ ಚಿತ್ರವನ್ನು ಮುದ್ರಿಸಲಾಗುತ್ತಿತ್ತು.

ನಂತರ ಆರ್ ಬಿಐ 1996ರಲ್ಲಿ ಹೊಸ ವಿನ್ಯಾಸದಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರವಿರುವ ನೋಟುಗಳನ್ನು ಮುದ್ರಿಸಿತು.

Advertisement
Share this on...