ಪಠಾಣ್ ಚಿತ್ರಕ್ಕೆ ಪ್ರಧಾನಿ ಮೋದಿಯಿಂದ ಸಿಕ್ಕಿತೆ ಬೆಂಬಲ? ಪ್ರಧಾನಿ ಮೋದಿಯವರ ಈ ಒಂದು ಮಾತಿನಿಂದ ಬಾಯ್ಕಾಟ್ ಅಭಿಯಾನ ನಿಂತು ಪಠಾಣ್ ಹಿಟ್ ಆಗುತ್ತಾ?

in Uncategorized 320 views

ಪಠಾಣ್ ಚಿತ್ರದ ಟೀಸರ್ ಬಗ್ಗೆ ವಿವಾದ ಶುರುವಾಗಿತ್ತು. ಡಿಸೆಂಬರ್ 12 ರಂದು ಬೇಷರಂ ರಂಗ್ ಹಾಡು ಬಿಡುಗಡೆಯಾದಾಗ, ಈ ವಿರೋಧವು ರಾಷ್ಟ್ರವ್ಯಾಪಿ ಚರ್ಚೆಯ ವಿಷಯವಾಯಿತು. ಇದೀಗ ಪ್ರಧಾನಿ ಮೋದಿಯವರ ಇತ್ತೀಚಿನ ಹೇಳಿಕೆಯನ್ನು ಈ ವಿಷಯಕ್ಕೆ ಲಿಂಕ್ ಮಾಡಿ ನೋಡಲಾಗುತ್ತಿದೆ.

Advertisement

ಪ್ರಧಾನಿ ಮೋದಿಯವರ ಹೇಳಿಕೆಯ ಬಳಿಕ ತಣ್ಣಗಾಗುತ್ತಾ ಪಠಾಣ್ ವಿವಾದ?

ಕೆಲ ದಿನಗಳಿಂದ ಬಾಲಿವುಡ್ ಬಾಯ್‌ಕಾಟ್ ಟ್ರೆಂಡ್‌ನಿಂದ ತಮ್ಮ ಚಿತ್ರಗಳು ಸೋತಿವೆ ಎಂದು ಆರೋಪಿಸುತ್ತಿದೆ. ಚಿತ್ರಗಳು ವಿಫಲವಾಗಲು ಹಲವು ಕಾರಣಗಳಿದ್ದರೂ ರಾಷ್ಟ್ರ ಮತ್ತು ಧರ್ಮದ ಹೆಸರಿನಲ್ಲಿ ಚಿತ್ರ ಬಿಡುಗಡೆಗೂ ಮುನ್ನವೇ ನೆಗೆಟಿವಿಟಿ ಹರಡಲಾಗುತ್ತಿದೆ ಎಂಬ ಮಾತು ನಿರಂತರವಾಗಿ ಬಾಲಿವುಡ್ ನಿಂದ ಕೇಳಿಬರುತ್ತಿದೆ. ಅದರ ಪರಿಣಾಮ ಬೆಳ್ಳಿತೆರೆ ಮೇಲೆ ಚಿತ್ರ ಮಕಾಡೆ ಮಲಗುತ್ತಿದೆ. ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್ ಚಿತ್ರಕ್ಕೂ ಇದೇ ರೀತಿಯ ಸಂಕಷ್ಟ ಸೃಷ್ಟಿಯಾಗಿದೆ.

ಚಿತ್ರದ ಟೀಸರ್ ಬಿಡುಗಡೆಯಾದ ನಂತರ ಶುರುವಾದ ಚರ್ಚೆ ಬೇಷರಮ್ ರಂಗ್ ಹಾಡಿನೊಂದಿಗೆ ವಿವಾದಕ್ಕೆ ತಿರುಗಿತು. ಇದೀಗ ಪ್ರಧಾನಿ ಮೋದಿ ಅವರು ಚಲನಚಿತ್ರಗಳ ಬಗ್ಗೆ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ‘ಪಠಾಣ್’ ವಿವಾದದ ನಡುವೆಯೇ ಬಂದಿರುವ ಅವರ ಈ ಹೇಳಿಕೆ ಬಹುಮುಖ್ಯ ಎನಿಸಿದೆ. ಕೆಲ ದಿನಗಳ ಹಿಂದೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ತಮ್ಮ ವಿಚಾರವನ್ನು ಪ್ರಧಾನಿ ಮೋದಿಗೆ ತಿಳಿಸುವಂತೆ ಮನವಿ ಮಾಡಿದ್ದ ಸುನೀಲ್ ಶೆಟ್ಟಿ ಅವರ ಮನವಿಗೂ ಈ ಹೇಳಿಕೆಗೂ ಸಂಬಂಧ ಕಲ್ಪಿಸಲಾಗಿದೆ.

ವಿವಾದವಾಗಿದ್ದು ಯಾಕೆ?

ಪಠಾಣ್ ಚಿತ್ರದ ಟೀಸರ್ ಬಗ್ಗೆ ವಿವಾದ ಶುರುವಾಗಿತ್ತು. ಡಿಸೆಂಬರ್ 12 ರಂದು ಬೇಷರಂ ರಂಗ್ ಹಾಡು ಬಿಡುಗಡೆಯಾದಾಗ, ಈ ವಿವಾದ ರಾಷ್ಟ್ರವ್ಯಾಪಿ ಚರ್ಚೆಯ ವಿಷಯವಾಯಿತು. ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರ ಬಟ್ಟೆಗಳನ್ನು ವಿಶೇಷವಾಗಿ ಕೇಸರಿ ಬಿಕಿನಿಯನ್ನು ಪ್ರಶ್ನಿಸಿದ್ದರು. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕದಿದ್ದರೆ ಚಿತ್ರವನ್ನು ಬಿಡುಗಡೆ ಮಾಡದಂತೆ ಎಚ್ಚರಿಕೆ ನೀಡಿದರು. ಟ್ವಿಟರ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲೂ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಚಿತ್ರವನ್ನು ಬಾಯ್‌ಕಾಟ್ ಟ್ರೆಂಡ್ ಈಗಲೂ ನಡೆಯುತ್ತಿದೆ.

ಪಠಾಣ್ ವಿರುದ್ಧ ಕೆಂಡಾಮಂಡಲವಾಗಿದ್ದ ಹಿಂದೂ ಸಂಘಟನೆಗಳು

ಪಠಾಣ್ ಕುರಿತು ವಿವಾದ ಆರಂಭವಾದ ನಂತರ, ಹಿಂದೂ ಸಂಘಟನೆಗಳ ಜೊತೆಗೆ, ಇತರ ನಾಯಕರು ಪಠಾಣ್ ಚಿತ್ರ ಹಾಗು ಬೇಷರಂ ರಂಗ್ ಹಾಡಿನ ಬಗ್ಗೆ ತೀವ್ರ ಟೀಕೆಗಳನ್ನು ಮಾಡಿದ್ದರು. ಮೊದಲನೆಯದಾಗಿ ಮಹಾರಾಷ್ಟ್ರದ ಬಿಜೆಪಿ ನಾಯಕ ರಾಮ್ ಕದಂ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. “ಚೀಪ್ ಪಬ್ಲಿಸಿಟಿ ಪಡೆಯಲು ಯೋಜಿತ ಷಡ್ಯಂತ್ರದಲ್ಲಿ ವಿವಾದ ಸೃಷ್ಟಿಸಲಾಗಿದೆ, ಯಾವುದೇ ಸಿನಿಮಾ, ಟಿವಿ, ಧಾರಾವಾಹಿ ಹಿಂದೂ ಸಮಾಜಕ್ಕೆ ಧಕ್ಕೆ ತಂದರೆ ಅದನ್ನು ಮಹಾರಾಷ್ಟ್ರದಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ” ಎಂದು ಹೇಳಿದ್ದರು. ಇದರ ನಂತರ, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಎಲ್ಲಾ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕುವಂತೆ ಎಚ್ಚರಿಕೆ ನೀಡಿದ್ದರು, ಹಾಗೆ ಮಾಡದಿದ್ದರೆ ಮಧ್ಯಪ್ರದೇಶದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಬಿಡಲ್ಲ ಎಂದಿದ್ದರು.

ಬಿಹಾರದಲ್ಲಿ ಬಿಜೆಪಿ ನಾಯಕ ಹರಿಭೂಷಣ್ ಠಾಕೂರ್ ಬಚೌಲ್ ಕೇಸರಿ ಬಣ್ಣ ನಮ್ಮ ಧರ್ಮದ ಸಂಕೇತ ಎಂದು ಹೇಳಿದ್ದರು. ಈ ಚಿತ್ರವು ಸನಾತನ ಸಂಸ್ಕೃತಿಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಹಿಂದೂಗಳು ಖರೀದಿಸಿದ ಟಿಕೆಟ್‌ನಿಂದ ಕಿಂಗ್ ಖಾನ್ ಆಗಿರೋ ಜನರು ಚೌಪಾಟಿಯಲ್ಲಿ ಭಿಕ್ಷೆ ಬೇಡುವವರೆಗೂ ಇಂತಹ ಚಲನಚಿತ್ರಗಳನ್ನು ಬಹಿಷ್ಕರಿಸಬೇಕು ಎಂದು ಹಿಂದೂವಾದಿ ನಾಯಕ ಜೈಭಾನ್ ಸಿಂಗ್ ಪವಯ್ಯ ಹೇಳಿದ್ದರು. ಕೇವಲ ಹಿಂದೂ ದೇವತೆಗಳನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತದೆ ಎಂದು ಸಂಸದ ಸಚಿವ ಒಪಿಎಸ್ ಭದೌರಿಯಾ ಹೇಳಿದ್ದರು. ಅಯೋಧ್ಯೆಯಲ್ಲಿರುವ ಹನುಮಾನ್‌ಗಢಿಯ ಮಹಂತ್ ರಾಜು ದಾಸ್ ಅವರು ಪಠಾಣ್ ಸಿನಿಮಾ ಎಲ್ಲೆಲ್ಲಿ ರಿಲೀಸ್ ಆಗುತ್ತೋ ಆ ಚಿತ್ರಮಂದಿರವನ್ನು ಸುಟ್ಟು ಹಾಕಿ ಎಂದು ಹೇಳಿದ್ದರು.

ಫಿಲ್ಮ್ ಗಳಿಗೆ ಸಂಬಂಧಿಸಿದಂತೆ ಈ ಹಿಂದೆಯೂ ಆಗಿದ್ದವು ವಿವಾದಗಳು

ಬಾಲಿವುಡ್ ಚಿತ್ರಗಳ ಬಗ್ಗೆ ಈ ಹಿಂದೆಯೂ ಹಲವು ವಿವಾದಗಳಾಗಿವೆ, ನಾವು ಇತ್ತೀಚಿನ ಚಿತ್ರಗಳ ಬಗ್ಗೆ ಮಾತನಾಡುವುದಾದರೆ, ರಣಬೀರ್ ಕಪೂರ್ ಅವರ ಚಿತ್ರ ಶಂಶೇರಾ ಬಗ್ಗೆಯೂ ಅಸಮಾಧಾನವಿತ್ತು. ಇದರಲ್ಲಿ ಖಳನಟ ಸಂಜಯ್ ದತ್ ಹಣೆಯ ಮೇಲೆ ಕುಂಕುಮದ ಗುರುತು ಇದ್ದು, ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದ ಆರೋಪ ಕೇಳಿಬಂದಿತ್ತು. ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್, ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ, ಗಂಗೂಬಾಯಿ ಕಥಿಯಾವಾಡಿ ಮತ್ತು ದೀಪಿಕಾ ಪಡುಕೋಣೆ ಅವರ ರಾಮಲೀಲಾ ಮತ್ತು ಪದ್ಮಾವತಿ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ದೀಪಿಕಾ ಪಡುಕೋಣೆ ಅವರ ಬಾಜಿರಾವ್ ಮಸ್ತಾನಿ ಮತ್ತು ಛಪಾಕ್, ತಾಪ್ಸಿ ಪನ್ನು ಅವರ ಚಿತ್ರ ದೊಬಾರಾ ಕೂಡ ಬಾಯ್‌ಕಾಟ್ ಟ್ರೆಂಡ್ ನಿಂದಾಗಿ ಮಕಾಡೆ ಮಲಗಿದ್ದವು.

ಸುನಿಲ್ ಶೆಟ್ಟಿ ಮಾಡಿದ ಮನವಿ ವರ್ಕೌಟ್ ಆಯಿತೇ?

ಪ್ರಧಾನಿ ಮೋದಿಯವರ ಹೇಳಿಕೆಗೂ ಸುನೀಲ್ ಶೆಟ್ಟಿ ಮನವಿಗೂ ಸಂಬಂಧ ಕಲ್ಪಿಸಲಾಗುತ್ತಿದೆ. ವಾಸ್ತವವಾಗಿ, ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಮುಂದೆ, ಸುನೀಲ್ ಶೆಟ್ಟಿ ಚಿತ್ರರಂಗವನ್ನು ಬಾಯ್‌ಕಾಟ್ ಟ್ರೆಂಡ್ ನಿಂದ ಮುಕ್ತಗೊಳಿಸುವಂತೆ ಮನವಿ ಮಾಡುತ್ತ ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಮಾಡಿ ಎಂದು ಕೋರಿದ್ದರು. ಯೋಗಿ ಆದಿತ್ಯನಾಥ್ ಅವರ ಮುಂದೆ ಸುನೀಲ್ ಶೆಟ್ಟಿ ಹೇಳಿದ್ದು ಹೀಗೆ- ’90 ಪ್ರತಿಶತ ಬಾಲಿವುಡ್ ಮಂದಿ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅದಕ್ಕಾಗಿಯೇ ಬಾಲಿವುಡ್ ಬಾಯ್ಕಾಟ್ ಟ್ಯಾಗ್ ಅನ್ನು ತೆಗೆದುಹಾಕುವುದು ಅನಿವಾರ್ಯವಾಗಿದೆ. ಇದರಿಂದ ಬಾಲಿವುಡ್‌ನ ಹಾಳಾದ ಇಮೇಜ್ ಅನ್ನು ಸರಿಪಡಿಸಬಹುದು. ಈ ಟ್ಯಾಗ್ ಅನ್ನು ತೆಗೆದುಹಾಕಲೇಬೇಕಾಗಿದೆ. ಬುಟ್ಟಿಯಲ್ಲಿ ಒಂದು ಕೊಳೆತ ಸೇಬು ಇರಬಹುದು, ನಾವೆಲ್ಲರೂ ಹಾಗಲ್ಲ. ನಮ್ಮ ಚಲನಚಿತ್ರಗಳ ಕಥೆಗಳು ಮತ್ತು ಸಂಗೀತವು ಪ್ರಪಂಚದೊಂದಿಗೆ ಸಂಪರ್ಕ ಹೊಂದಿದೆ. ಅದಕ್ಕಾಗಿಯೇ ಈ ಕಳಂಕವನ್ನು ತೆಗೆದುಹಾಕುವ ಅವಶ್ಯಕತೆಯಿದೆ. ಈ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೂ ತಿಳಿಸಿ” ಎಂದಿದ್ದರು.

ಪ್ರಧಾನಿ ಮೋದಿ ಹೇಳಿದ್ದೇನು?

ಯಾವುದೇ ಚಿತ್ರ ಮತ್ತು ನಾಯಕರ ಹೆಸರನ್ನು ತೆಗೆದುಕೊಳ್ಳದೆ ಅನಗತ್ಯ ಕಾಮೆಂಟ್‌ಗಳ ಕುರಿತು ಪ್ರಧಾನಿ ಮೋದಿ ಪಕ್ಷದ ನಾಯಕರಿಗೆ ಸಲಹೆ ನೀಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿಯ ಎರಡನೇ ದಿನದಂದು ಪ್ರಧಾನಿ ಮೋದಿ – “ಚಿತ್ರಗಳಂತಹ ಅರ್ಥಹೀನ ವಿಷಯಗಳ ಬಗ್ಗೆ ಯಾರೂ ಅನಗತ್ಯ ಕಾಮೆಂಟ್‌ಗಳನ್ನು ಮಾಡುವ ಅಗತ್ಯವಿಲ್ಲ. ಅಂತಹವುಗಳಿಂದ ಸಾಧ್ಯವಾದಷ್ಟು ದೂರವಿರಿ. ಈ ಹೇಳಿಕೆಗಳು ಅಭಿವೃದ್ಧಿಯ ಅಜೆಂಡಾವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸುತ್ತವೆ. ಈ ರೀತಿಯ ಹೇಳಿಕೆಗಳನ್ನು ನೀಡುವ ನಾಯಕನಿದ್ದಾನೆ, ನಡ್ಡಾ ಜಿ ಕೂಡ ಅವರನ್ನು ಕರೆದರು, ಆದರೆ ಅವರು ನಡ್ಡಾಜೀ ಮಾತನ್ನೂ ಒಪ್ಪುವುದಿಲ್ಲ, ಇಂತಹ ಹೇಳಿಕೆಗಳ ಅಗತ್ಯವೇನು” ಎಂದು ಪ್ರಧಾನಿ ಹೇಳಿದ್ದರು. ಇದೀಗ ಪ್ರಧಾನಿ ಮೋದಿಯವರ ಈ ಹೇಳಿಕೆಯನ್ನು ಪಠಾಣ್‌ಗೆ ಲಿಂಕ್ ಮಾಡಲಾಗುತ್ತಿದೆ, ಆದರೂ ಪ್ರಧಾನಿ ಯಾವುದೇ ಚಿತ್ರದ ಹೆಸರನ್ನು ತೆಗೆದುಕೊಳ್ಳದೆ ಎಲ್ಲಾ ಚಲನಚಿತ್ರಗಳ ಬಗ್ಗೆ ಅನಗತ್ಯ ಹೇಳಿಕೆ ನೀಡದಂತೆ ನಾಯಕರಿಗೆ ಸಲಹೆ ನೀಡಿದ್ದಾರೆ.

ಟ್ರೋಲ್ ಹಾಗು ಬಾಯ್‌ಕಾಟ್ ಆಗದಿದ್ದರೆ ಬಚಾವಾಗುತ್ತಾ ಪಠಾಣ್?

ಪಕ್ಷದ ನಾಯಕರಿಗೆ ಪ್ರಧಾನಿ ಮೋದಿ ಸಲಹೆ ನೀಡಿದ ನಂತರ, ಕಿಂಗ್ ಖಾನ್ ಅಭಿನಯದ ಪಠಾಣ್ ಚಿತ್ರಕ್ಕೆ ರಿಲೀಫ್ ಸಿಗಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಪಠಾಣ್‌ನ ಬೇಷರಂ ರಂಗ್‌ನ ಹಾಡಿನಲ್ಲಿ ದೀಪಿಕಾ ಪಡುಕೋಣೆಯ ಉಡುಪಿನ ಬಗ್ಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ನಾಯಕರು ಕೆಂಡಾಮಂಡಲವಾಗಿದ್ದರು. ಇದೀಗ ಪ್ರಧಾನಿ ಮೋದಿಯವರು ಇಂತಹ ವಿಚಾರಗಳನ್ನು ತಪ್ಪಿಸುವಂತೆ ಹಾಗು ಅನಗತ್ಯ ಹೇಳಿಕೆಗಳನ್ನು ನೀಡದಂತೆ ಸಲಹೆ ನೀಡಿದ್ದು, ಇದರಿಂದ ನಕಾರಾತ್ಮಕ ಹೇಳಿಕೆಗಳನ್ನು ನಿಷೇಧಿಸುವುದು ಬಹುತೇಕ ಖಚಿತವಾಗಿದೆ. ಮುಂದಿನ ದಿನಗಳಲ್ಲಿ, ಅದರ ಪರಿಣಾಮವನ್ನು ಸೋಶಿಯಲ್ ಮೀಡಿಯಾಗಳಲ್ಲೂ ಕಾಣಬಹುದು, ಏಕೆಂದರೆ ಪಕ್ಷದ ನಾಯಕರಿಗೆ ಸಲಹೆ ನೀಡುವ ಜೊತೆಗೆ, ಪ್ರಧಾನಿ ಮೋದಿ ದೇಶಕ್ಕೆ ಸಂದೇಶವನ್ನು ನೀಡಲು ಪ್ರಯತ್ನಿಸಿದ್ದಾರೆ.

Advertisement
Share this on...