‘ಪಠಾಣ್’ ಚಿತ್ರವನ್ನ ಮಣ್ಣುಮುಕ್ಕಿಸಲು ಅದೇ ದಿನ ‘ಗಾಂಧಿ ಗೋಡ್ಸೆ – ಏಕ್ ಯುದ್ಧ್’ ಚಿತ್ರ ಬಿಡುಗಡೆ ಮಾಡಲು ಮುಂದಾದ ಬಾಲಿವುಡ್ ನಿರ್ದೇಶಕ: ಬಾಯ್‌ಕಾಟ್ ಪಠಾಣ್ ಎಂದ ಜನ

in Uncategorized 1,752 views

ನವದೆಹಲಿ: ಘಾಯಲ್, ದಾಮಿನಿ ಮತ್ತು ಖಾಕಿಯಂತಹ ಚಿತ್ರಗಳ ನಿರ್ದೇಶಕ ರಾಜಕುಮಾರ್ ಸಂತೋಷಿ ಸುದೀರ್ಘ ವಿರಾಮದ ನಂತರ ಮತ್ತೆ ಮರಳಿದ್ದಾರೆ. ‘ಗಾಂಧಿ ಗೋಡ್ಸೆ, ಏಕ ಯುದ್ಧ್’ದ ಚಿತ್ರದೊಂದಿಗೆ ರಾಜಕುಮಾರ್ ಸಂತೋಷಿ ಮತ್ತೆ ಬರುತ್ತಿದ್ದಾರೆ. ಗುರುವಾರ ಚಿತ್ರದ ಬಿಡುಗಡೆ ದಿನಾಂಕವನ್ನು ವಿಡಿಯೋ ಸಮೇತ ಪ್ರಕಟಿಸಲಾಗಿದೆ. ಗಾಂಧಿ ಗೋಡ್ಸೆಯು ಮಹಾತ್ಮಾ ಗಾಂಧಿ ಮತ್ತು ನಾಥುರಾಮ್ ಗೋಡ್ಸೆಯ ವೈರುಧ್ಯದ ಸಿದ್ಧಾಂತಗಳನ್ನು ಚಿತ್ರಿಸುವ ಚಿತ್ರವಾಗಿದೆ.

Advertisement

ಸಂತೋಷಿ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಪಿವಿಆರ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಚಿತ್ರವು ಜನವರಿ 26, 2023 ರಂದು ಬಿಡುಗಡೆಯಾಗಲಿದೆ. ಆದರೆ, ಚಿತ್ರದ ಶೀರ್ಷಿಕೆ ಮತ್ತು ದಿನಾಂಕವನ್ನು ಹೊರತುಪಡಿಸಿ, ವೀಡಿಯೊದಲ್ಲಿ ಏನನ್ನೂ ಬಹಿರಂಗಪಡಿಸಲಾಗಿಲ್ಲ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್ ಜೊತೆ ಟಕ್ಕರ್ ಕೊಡಲಿದೆ.

9 ವರ್ಷಗಳ ಬಳಿಕ‌ ನಿರ್ದೇಶನಕ್ಕೆ ಮರಳಿದ ರಾಜಕುಮಾರ್ ಸಂತೋಷಿ

ಸಂತೋಷಿ ಅವರ ಚಿತ್ರಗಳ ದೃಶ್ಯಗಳನ್ನು ತೋರಿಸಲಾಗಿದೆ. ಇವುಗಳಲ್ಲಿ ಘಾಯಲ್, ದಾಮಿನಿ, ಅಂದಾಜ್ ಅಪ್ನಾ ಅಪ್ನಾ, ಪುಕಾರ್, ಅಜಬ್ ಪ್ರೇಮ್ ಕಿ ಗಜಬ್ ಕಹಾನಿ, ಲಜ್ಜಾ ಮತ್ತು ಖಾಕಿಯ ದೃಶ್ಯಗಳು ಸೇರಿವೆ. ಗಾಂಧಿ-ಗೋಡ್ಸೆ ಏಕ್ ಯುದ್ಧ್ ಕಥೆ ಮತ್ತು ತಾರಾಗಣದ ವಿವರಗಳನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಚಿತ್ರದ ಟ್ರೇಲರ್ ಹೊರಬಂದ ನಂತರ ಹೆಚ್ಚಿನ ವಿವರಗಳು ಬಹಿರಂಗಗೊಳ್ಳಲಿವೆ.

‘ಗಾಂಧಿ ಗೋಡ್ಸೆ ಏಕ್ ಯುದ್ಧ’ ಚಿತ್ರದ ಮೂಲಕ 9 ವರ್ಷಗಳ ನಂತರ ಸಂತೋಷಿ ನಿರ್ದೇಶನಕ್ಕೆ ಮರಳುತ್ತಿದ್ದಾರೆ. 2013 ರಲ್ಲಿ ಬಿಡುಗಡೆಯಾದ ‘ಫಟಾ ಪೋಸ್ಟರ್ ನಿಖಲಾ ಹೀರೋ’ ಅವರ ಕೊನೆಯ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ಇಲಿಯಾನಾ ಡಿಕ್ರೂಜ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿತ್ತು.

‘ಘಾಯಲ್’ ಚಿತ್ರಕ್ಕೆ ಸಿಕ್ಕಿದ್ದವು ಎರಡು ನ್ಯಾಶನಲ್ ಅವಾರ್ಡ್

ಘಾಯಲ್, ದಾಮಿನಿ ಮತ್ತು ಘಾತಕ್ ರಾಜಕುಮಾರ್ ಸಂತೋಶಿ ವೃತ್ತಿಜೀವನದ ಸೂಪರ್ ಡೂಪರ್ ಚಿತ್ರಗಳು. ಘಾಯಲ್ 1990 ರಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಸನ್ನಿ ಡಿಯೋಲ್, ರಾಜ್ ಬಬ್ಬರ್ ಮತ್ತು ಮೀನಾಕ್ಷಿ ಶೇಷಾದ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ಅಮರೀಶ್ ಪುರಿ ನಟಿಸಿದ್ದಾರೆ. ಘಾಯಲ್ ಆಕ್ಷನ್ ಮತ್ತು ಭಾವನೆಗಳ ಮೇಲೆ ಸವಾರಿ ಮಾಡಿದ ಅದ್ಭುತ ಯಶಸ್ಸನ್ನು ಕಂಡಿತು. ಈ ಚಿತ್ರವು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಅದ್ಭುತ ನಟನೆಗಾಗಿ ಸನ್ನಿ ಡಿಯೋಲ್‌ಗೆ ಸ್ಪೆಷಲ್ ಜೂರಿ ಪ್ರಶಸ್ತಿಯನ್ನು ನೀಡಲಾಗಿತ್ತು. ಚಿತ್ರವು 7 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸಹ ಗೆದ್ದುಕೊಂಡಿತ್ತು. ಇದಾದ ನಂತರ 1993ರಲ್ಲಿ ಬಂದ ದಾಮಿನಿ ಚಿತ್ರ ತುಂಬಾ ಜನಪ್ರಿಯವಾಗಿತ್ತು. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಿಷಿ ಕಪೂರ್ ಮತ್ತು ಮೀನಾಕ್ಷಿ ಶೇಷಾದ್ರಿ ನಟಿಸಿದ್ದಾರೆ. ಸನ್ನಿ ಡಿಯೋಲ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸನ್ನಿ ಅವರ ಸಣ್ಣ ಪಾತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿತ್ತು.

ಗಣರಾಜ್ಯೋತ್ಸವದಂದು ‘ಗಾಂಧಿ ಗೋಡ್ಸೆ’ Vs ‘ಪಠಾಣ್’

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ಗಾಂಧಿ ಗೋಡ್ಸೆ ಏಕ್ ಯುದ್ಧ್ ಜನವರಿ 25 ರಂದು ಥಿಯೇಟರ್‌ಗಳಲ್ಲಿ ಬರುವ ಶಾರುಖ್ ಖಾನ್ ಅವರ ಪಠಾಣ್‌ನೊಂದಿಗೆ ಘರ್ಷಣೆ ಮಾಡಬೇಕಾಗುತ್ತದೆ. ಪಠಾಣ್ 2023 ರ ಮೊದಲ ದೊಡ್ಡ ಮತ್ತು ಬಹುನಿರೀಕ್ಷಿತ ಬಿಡುಗಡೆಯಾಗಿದೆ, ಇದರಿಂದ ಟ್ರೇಡ್ ಗೂ ಹೆಚ್ಚಿನ ಭರವಸೆಯಿದೆ.

Advertisement
Share this on...