ಪತಿ ದಿನಗೂಲಿ ನೌಕರ, ಗುಡಿಸಿಲಲ್ಲಿ ವಾಸ! ಬಿಜೆಪಿ‌ ಶಾಸಕಿಗೆ ಕೇಂದ್ರ ಸರ್ಕಾರದ ಭದ್ರತೆಯಿಂದ ಈ ಸಮಸ್ಯೆಗಳಾಗುತ್ತಿವೆಯಂತೆ

in Kannada News/News 991 views

ಕೋಲ್ಕತಾ:

Advertisement
ಪಶ್ಚಿಮ ಬಂಗಾಳದಲ್ಲಿ, ಮಮತಾ ಬ್ಯಾನರ್ಜಿ ಪಕ್ಷ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯಗಳಿಸಿದ್ದು ಭಾರತೀಯ ಜನತಾ ಪಕ್ಷ ಎರಡನೇ ಸ್ಥಾನದಲ್ಲಿದೆ. ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ಬಿಜೆಪಿಯ ನಿರ್ಧಾರದಿಂದಾಗಿ ಬಿಜೆಪಿ ಶ್ಲಾಘನೆಗೆ ಪಾತ್ರವಾಗಿತ್ತು. ಮಾರ್ಚ್ 27 ರಂದು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರಾಜ್ಯದ ಬಂಕುರಾದ ಸಲ್ತೋರಾ ವಿಧಾನಸಭಾ ಕ್ಷೇತ್ರದಿಂದ ಮನರೇಗಾ ಕಾರ್ಮಿಕೆಗೆ ಟಿಕೆಟ್ ನೀಡುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಲ್ಲರನ್ನು ಅಚ್ಚರಿಗೊಳಿಸಿತ್ತು. 30 ವರ್ಷದ ಚಂದನಾ ಬೌರಿಯ ಡೈಲಿ ವೇಜಸ್ ಕೂಲಿ ಕಾರ್ಮಿಕರಾಗಿದ್ದು, ಆಕೆ ಸ್ವತಃ ಮನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚಂದನಾ ಬೌರಿ ಚುನಾವಣೆಗೆ ಸ್ಪರ್ಧಿಸಿಿಿದ್ದ.ರು. ನಾಮನಿರ್ದೇಶನದಲ್ಲಿ, ಚಂದನಾ ಅವರು ಮೂರು ಆಡುಗಳು, ಮೂರು ಹಸುಗಳು, ಒಂದು ಗುಡಿಸಲು, ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ನಗದು ಸೇರಿದಂತೆ 31,985 ರೂ. ಇದೆ ಎಂದು ತಿಳಿಸಿದ್ದರು.

ಚಂದನಾ ಅವರ ಮನೆಯಲ್ಲಿ ಶೌಚಾಲಯ ಸೌಲಭ್ಯವಿಲ್ಲ, ಮತ್ತು ಶೌಚಕ್ಕಾಗಿ ಮನೆಯವರು ಪೊದೆಗಳ ಆಶ್ರಯ ಪಡೆಯುವಂತಹ ಪರಿಸ್ಥಿತಿಯಿದೆ. ಇದಲ್ಲದೆ, ಅವರ ಮನೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಟ್ಯಾಪ್ ಆಗಲಿ ಇಲ್ಲ, ಇದಕ್ಕಾಗಿ ಅವರು ದೂರ ಹೋಗಿ ನೀರನ್ನು ತರಬೇಕಾದ ಪರಿಸ್ಥಿತಿಯಿದೆ. ಚಂದನಾ ಅವರ ಪತಿ ಸರ್ಬನ್ ದೈನಂದಿನ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾನೆ. ಅವರು ದಿನಕ್ಕೆ 400 ರೂಪಾಯಿ ಗಳಿಸುತ್ತಾರೆ. ಮಳೆಗಾಲದಲ್ಲಿ, ಕಾರ್ಮಿಕರನ್ನು ಹುಡುಕುವುದು ಕಷ್ಟವಾದಾಗ, ಚಂದನಾ ಗಂಡನೊಂದಿಗೆ ಕೆಲಸ ಮಾಡುತ್ತಾರೆ. ಇಬ್ಬರೂ ಮನರೆಗಾ ಕಾರ್ಡ್ ಹೊಂದಿದ್ದು ಇವರಿಗೆ ಮೂರು ಮಕ್ಕಳಿದ್ದಾರೆ.

“ತೃಣಮೂಲ ಭ್ರಷ್ಟ ಪಕ್ಷವಾಗಿದೆ, ಟಿಎಂಸಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ, ಮೋದಿ ಅವರು ಕಲ್ಯಾಣ ಯೋಜನೆಗಳಿಗಾಗಿ ಕಳುಹಿಸಿದ ಎಲ್ಲ ಹಣವನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಮನೆ ಯೋಜನೆಯಿಂದ ಹಿಡಿದು ಶೌಚಾಲಯದವರೆಗೂ ಜನ ಟಿಎಂಸಿ ಪಕ್ಷಕ್ಕೆ ಹಣ ಕೊಡಬೇಕಾಗುತ್ತದೆ” ಎಂದು ಚಂದನಾ ಟಿಎಂಸಿ ಬಗ್ಗೆ ಕೇಳಿದಾಗ ಹೇಳಿದ್ದರು.

ಇಂಗ್ಲಿಷ್ ಪತ್ರಿಕೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, “ನಾವು ಮಲವಿಸರ್ಜನೆ ಮಾಡಲು ಹತ್ತಿರದ ಮೈದಾನಕ್ಕೆ ಹೋಗಬೇಕಾಗಿತ್ತು. ಕಳೆದ ವರ್ಷ, ನಾವು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಮೊದಲ ಕಂತು 60,000 ರೂಗಳಿಗೆ ಪಡೆದುಕೊಂಡಿದ್ದೇವೆ ಮತ್ತು ಎರಡು ಪಕ್ಕಾ ಕೊಠಡಿಗಳನ್ನು ನಿರ್ಮಿಸಲಾಗಿದೆ” ಎಂದು ಚಾಂದನಾ ಹೇಳಿದ್ದರು.

ಗಮನಿಸುವ ಅಂಶವೇನೆಂದರೆ, ಚಂದನಾ ಅವರು ಜಿಲ್ಲೆಯ ಹಿರಿಯ ಬಿಜೆಪಿ ಸದಸ್ಯರಾಗಿದ್ದಾರೆ. ಗಂಗಾಜಲ್‌ಘಾಟಿ ಬ್ಲಾಕ್‌ನ ಕೆಲೈ ಗ್ರಾಮದಲ್ಲಿ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಕಮಲ ಮುದ್ರಣ ಕೇಸರಿ ಬಣ್ಣದ ಸೀರೆಯನ್ನು ಧರಿಸಿ ಮ್ಯಾಟಡಾರ್‌ನಲ್ಲಿ ಪ್ರಚಾರಕ್ಕಾಗಿ ಅವರು ಹೊರಡುತ್ತಿದ್ದರು. ಅಭಿಯಾನದ ಸಮಯದಲ್ಲಿ ಆಕೆ ಆಗಾಗ ತನ್ನ ಮಗನನ್ನೂ ಕರೆದುಕೊಂಡು ಹೋಗುತ್ತಿದ್ದರು.

ಪಶ್ಚಿಮ ಬಂಗಾಲದ ಬಂಕುರಾ ಜಿಲ್ಲೆಯ ಸಾಲ್ಟೋರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಚಂದನಾ ಬೌರಿ ಮೊದಲ ಬಾರಿಗೆ ಆಯ್ಕೆಯಾದವರು. ಕೇಂದ್ರ ಸರಕಾರ ಬಿಜೆಪಿ ಶಾಸಕರಿಗೆ ಭದ್ರತೆ ನೀಡಲು ಕೇಂದ್ರ ಮೀಸಲು ಪಡೆಗಳನ್ನು ನಿಯೋಜಿಸಿದೆ. ಆದರೆ, ಅವರಿಗೆ ಈ ವ್ಯವಸ್ಥೆ ಹೊರೆಯಾಗಿ ಪರಿಣಮಿಸಿದೆ. ಶಾಸಕರಿಗೆ ಭದ್ರತೆ ಹೊರೆಯೇ ಎಂದು ಅಚ್ಚರಿಪಡಬೇಡಿ.

ಶಾಸಕಿ ಚಂದನಾ ಬಡ ಮಹಿಳೆ ಹಾಗೂ ಗೃಹಿಣಿ. ಅವರ ಪತಿ ದಿನಗೂಲಿ ನೌಕರ. ಮಕ್ಕಳ ಜತೆಗೆ ಒಂದು ರೂಮಿನ ಗುಡಿಸಲಿನಲ್ಲಿ ಅವರ ವಾಸ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ಪತಿಗೆ ಉದ್ಯೋಗವಿಲ್ಲ. ಹಾಗಾಗಿ, ಆದಾಯಕ್ಕೂ ತೊಂದರೆಯಾಗಿದೆ. ಅವರ ಮನೆಯಲ್ಲಿ ನೀರಿನ ಸೌಲಭ್ಯ ಮತ್ತು ಶೌಚಾಲಯ ಕೂಡಾ ಇಲ್ಲ.

ನೂತನ ಶಾಸಕಿ ಹಾಗೂ ಅವರ ಪತಿಯೇ ದಿನದ ಊಟಕ್ಕೆ ತಡಕಾಡುವ ಹಾಗಿರುವ ಈ ಪರಿಸ್ಥಿತಿಯಲ್ಲಿ ಅವರಿಗೆ ಭದ್ರತೆ ನೀಡಲು ನಿಯೋಜಿತರಾಗಿರುವ ನಾಲ್ವರು ಯೋಧರಿಗೆ ಊಟ ನೀಡಲು, ಅವರಿಗೆ ಆಶ್ರಯ ಕಲ್ಪಿಸಲಾಗದ ಅಸಹಾಯಕತೆ ಅವರನ್ನು ಆವರಿಸಿದೆ ಎಂದು “ದ ನ್ಯೂ ಇಂಡಿಯನ್‌ ಎಕ್ಸ್‌ ಪ್ರಸ್‌’ ಪತ್ರಿಕೆ ವರದಿ ಮಾಡಿದೆ.

ಯೋಧರಿಂದಲೇ ನೆರವು: ಶಾಸಕಿ ಚಂದನಾ ಬೌರಿ ಅವರ ಪರಿಸ್ಥಿತಿ ನೋಡಿ, ಭದ್ರತೆ ನೀಡಲು ಬಂದಿರುವ ಯೋಧರೇ ತಮ್ಮ ಜೇಬಿನಿಂದ ಖರ್ಚು ಮಾಡಿ ಅವರಿಗೆ ಸಮೀಪದ ಕಿರಾಣಿ ಅಂಗಡಿಯಿಂದ ತರಕಾರಿ, ದಿನಸಿ ತಂದು ನೀಡುತ್ತಿದ್ದಾರೆ. ಅದರ ಮೂಲಕವೇ ಅಡುಗೆ ಸಿದ್ಧವಾಗಿ ಊಟ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಚುನಾವಣೆಯಲ್ಲಿ ಚಂದನಾ ತಮ್ಮ ಸಮೀಪದ ಪ್ರತಿಸ್ಪರ್ಧಿ ಟಿಎಂಸಿಯ ಸಂತೋಷ್‌ ಕುಮಾರ್‌ ಮೊಂದಾಲ್‌ ವಿರುದ್ಧ 4,145 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

 

Advertisement
Share this on...