ಪಾನಿಪೂರಿ ಮಾರುತ್ತ, ಅದೆಷ್ಟೋ ದಿನಗಳ‌ ಕಾಲ ಉಪವಾಸ ಮಲಗುತ್ತ, ಗುಡಿಸಲಲ್ಲಿ ವಾಸಿಸುತ್ತಿದ್ದ ಯುವಕ ಇಂದು ಭಾರತ ಕ್ರಿಕೆಟ್ ತಂಡದ ಯಶಸ್ವಿ ಆಟಗಾರ

in Kannada News/News/ಕನ್ನಡ ಮಾಹಿತಿ/ಕ್ರೀಡೆ 118 views

ಟೆಂಟ್ ಹೌಸ್ ನಲ್ಲಿ ವಾಸ, ಎಷ್ಟೋ ಸಲ ಖಾಲಿ ಹೊಟ್ಟೆಯಲ್ಲಿ ಮಲಗಿ, ಹೊಟ್ಟೆ ಪಾಡಿಗಾಗಿ ರಾಮ್ ಲೀಲಾದ ಬೀದಿಯಲ್ಲಿ ಪಾನಿ ಪೂರಿ ಮಾರಿ, ಕೊನೆಗೊಂದು ದಿನ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ನಲ್ಲಿ, ಅತ್ಯಂತ ಯಶಸ್ವಿ ತಂಡಗಳಲ್ಲೊಂದಾದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗುವುದೆಂದರೆ ಅದು ಸಾಮಾನ್ಯ ಸಾಧನೆಯಲ್ಲ. ಅದನ್ನು ಸಾಧಿಸಿದ ಹುಡುಗನ ಕಥೆ ಇದು.

Advertisement

ನೀವೆಲ್ಲ ನೋಡಿರಬಹುದು ಯಶಸ್ವಿ ಜೈಸ್ವಾಲ್ ಎಂಬ ಪುಟ್ಟ ಹುಡುಗ ಮುಂಬೈ ಇಂಡಿಯನ್ಸ್ ತಂಡಕ್ಕೆ 2018 ರಲ್ಲಿ ಆಯ್ಕೆಯಾಗಿ, ಸಧ್ಯ ರಾಜಸ್ತಾನ್ ರಾಯಲ್ಸ್ ತಂಡದಲ್ಲಿರುವ 18 ವರ್ಷದ ಯಶಸ್ವಿ ಜೈಸ್ವಾಲ್ ಅವರ ಕಥೆ ಕೇಳಿದರೆ ಎಲ್ಲರಿಗೂ ಆಶ್ಚರ್ಯವೆನಿಸುವುದು ಸಹಜ. ಕೇವಲ ಹನ್ನೊಂದು ವರ್ಷ ವಯಸ್ಸಿನವನಾಗಿದ್ದಾಗಲೇ ಮುಂಬೈ ಸೇರಿದರು.

ತನ್ನ ಹುಟ್ಟೂರಿನಿಂದ ಕ್ರಿಕೆಟ್ ಕಲಿಯಲೇಬೇಕು ಅಷ್ಟೇ ಅಲ್ಲದೇ ಭಾರತ ತಂಡಕ್ಕಾಗಿ ಆಡಲೇಬೇಕು ಎಂಬ ಒಂದೇ ಒಂದು ಆಸೆಯಿಂದ 11 ವರ್ಷದ ಬಾಲಕನಾಗಿದ್ದ ಯಶಸ್ವಿ ತನ್ನ ಹುಟ್ಟೂರು ಭಾದೋಹಿಯಿಂದ ಮುಂಬೈಗೆ ಬಂದು ಅಲ್ಲಿ ಆಜಾದ್ ಮೈದಾನ್ ಗ್ರೌಂಡ್ ನ ಮುಸ್ಲಿಂ ಯುನೈಟೆಡ್ ಕ್ಲಬ್ ನಲ್ಲಿ ಒಂದು ಟೆಂಟ್ ನಲ್ಲಿ ಬರೋಬ್ಬರಿ 3 ವರ್ಷ ವಾಸಿಸಿದರು!

ನೀವೆಲ್ಲ ನೋಡಿರಬಹುದು ಯಶಸ್ವಿ ಜೈಸ್ವಾಲ್ ಎಂಬ ಪುಟ್ಟ ಹುಡುಗ ಮುಂಬೈ ಇಂಡಿಯನ್ಸ್ ತಂಡಕ್ಕೆ 2018 ರಲ್ಲಿ ಆಯ್ಕೆಯಾಗಿ, ಸಧ್ಯ ರಾಜಸ್ತಾನ್ ರಾಯಲ್ಸ್ ತಂಡದಲ್ಲಿರುವ 18 ವರ್ಷದ ಯಶಸ್ವಿ ಜೈಸ್ವಾಲ್ ಅವರ ಕಥೆ ಕೇಳಿದರೆ ಎಲ್ಲರಿಗೂ ಆಶ್ಚರ್ಯವೆನಿಸುವುದು ಸಹಜ. ಕೇವಲ ಹನ್ನೊಂದು ವರ್ಷ ವಯಸ್ಸಿನವನಾಗಿದ್ದಾಗಲೇ ಮುಂಬೈ ಸೇರಿದರು.

ತನ್ನ ಹುಟ್ಟೂರಿನಿಂದ ಕ್ರಿಕೆಟ್ ಕಲಿಯಲೇಬೇಕು ಅಷ್ಟೇ ಅಲ್ಲದೇ ಭಾರತ ತಂಡಕ್ಕಾಗಿ ಆಡಲೇಬೇಕು ಎಂಬ ಒಂದೇ ಒಂದು ಆಸೆಯಿಂದ 11 ವರ್ಷದ ಬಾಲಕನಾಗಿದ್ದ ಯಶಸ್ವಿ ತನ್ನ ಹುಟ್ಟೂರು ಭಾದೋಹಿಯಿಂದ ಮುಂಬೈಗೆ ಬಂದು ಅಲ್ಲಿ ಆಜಾದ್ ಮೈದಾನ್ ಗ್ರೌಂಡ್ ನ ಮುಸ್ಲಿಂ ಯುನೈಟೆಡ್ ಕ್ಲಬ್ ನಲ್ಲಿ ಒಂದು ಟೆಂಟ್ ನಲ್ಲಿ ಬರೋಬ್ಬರಿ 3 ವರ್ಷ ವಾಸಿಸಿದರು!

ಮೂರು ವರ್ಷದ ನಂತರ ಅಲ್ಲಿಂದಲೂ ಕೂಡ ಅವರನ್ನು ಹೊರಗೆ ಹಾಕಲಾಯಿತು. ನಂತರ ಅವನು ಅಲ್ಲಿನ ಒಂದು ಡೈರಿ ಶಾಪ್ ನಲ್ಲಿ ಇರಲು ಶುರು ಮಾಡಿದರು. ಇಷ್ಟೆಲ್ಲ ಕಷ್ಟದ ನಡುವೆಯೂ ಅವರ ತಲೆಯಲ್ಲಿ ಓಡುತ್ತಿದ್ದುದು ಒಂದೇ ಒಂದು ವಿಚಾರ ಅದು ಭಾರತ ಕ್ರಿಕೆಟ್ ತಂಡಕ್ಕಾಗಿ ಆಡುವುದು.

ಇಷ್ಟೆಲ್ಲ ಕಷ್ಟ ಪಡುತ್ತಾ 18 ವರ್ಷ ವಯಸ್ಸಿನವರಾಗುವುದರೊಳಗೆ ಒಬ್ಬ ಒಳ್ಳೆಯ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿ ಹೊರಹೊಮ್ಮಿದ್ದರು! ಅದರಲ್ಲೂ ಒಬ್ಬ ಒಳ್ಳೆಯ ಆಟಗಾರನಾಗಿಯೂ ಆಡುತ್ತಿದ್ದರು, ಅಂಡರ್ 19 ಇಂಡಿಯಾ ಟೀಮ್ ಗೆ ಆಯ್ಕೆಯಾಗಲು ಕಾತುರದಿಂದ ಕಾಯುತ್ತ ಕುಳಿತಿದ್ದರು.

ಯಶಸ್ವಿ ಒಂದು ಇಂಟರ್ವ್ಯೂ ನಲ್ಲಿ ಹೇಳಿದ ಪ್ರಕಾರ ನಾನು ಬ್ಯಾಟ್ ಬೀಸಬಲ್ಲೆ ರನ್ ಗಳಿಸಬಲ್ಲೆ ವಿಕೆಟ್ ಕೂಡ ತೆಗೆಯಬಲ್ಲೆ ನನಗದರ ಚಿಂತೆ ಇಲ್ಲ, ಆದರೆ ನನಗೆ ಸಂಜೆಯ ಮತ್ತು ಬೆಳಗಿನ ಊಟ ಸಿಗುತ್ತದೋ ಇಲ್ಲವೋ ಎಂಬುದೇ ಚಿಂತೆಯಾಗಿತ್ತು ಎಂದು ಹೇಳಿದ್ದು ಕೇಳಿ ಅಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗಿದ್ದವು.

ಮುಂಬೈ ಅಂಡರ್-19 ತಂಡದ ಕೋಚ್ ಸತೀಶ್ ಸಾಮಂತ್ ಅವರ ಪ್ರಕಾರ ಯಶಸ್ವಿಯೊಳಗೊಬ್ಬ ಅಸಧಾರಣ ಆಟಗಾರನಿದ್ದಾನೆ, ಅಷ್ಟೇ ಅಲ್ಲದೇ ದೃಢ ಶಕ್ತಿ ಕೂಡ ಇದೆ. ಮೂಲತಃ ಭಾದೋಹಿ ನಗರದವರಾದ ಯಶಸ್ವಿ ಅವರ ತಂದೆ ಒಂದು ಪುಟ್ಟ ಅಂಗಡಿ ನಡೆಸುತ್ತ ಸಂಸಾರದ ನೌಕೆ ನೂಕುತ್ತಿದ್ದರು.

ಆದರೆ ಹಿರಿಯ ಮಗನಾದ ಯಶಸ್ವಿಯ ಕ್ರಿಕೆಟ್ ಕನಸನ್ನು ನನಸು ಮಾಡಲು ಅವರ ಚಿಕ್ಕಪ್ಪ ಸಂತೋಷ ಕುಮಾರ್ ಜೊತೆಗೆ ಮುಂಬೈಗೆ ಕಳಿಸಿದರು. ಅಲ್ಲಿ ವಾರ್ಲಿ ಪ್ರದೇಶದಲ್ಲಿ ಒಂದು ಬಾಡಿಗೆ ಅಂಗಡಿಯನ್ನು ನಡೆಸುತ್ತಿದ್ದ ಅವರ ಮನೆ ಕೂಡ ಅತೀ ಚಿಕ್ಕದು ಇದ್ದ ಕಾರಣ ಯಶಸ್ವಿಗೆ ಅಲ್ಲಿ ಇರಲಾಗಲಿಲ್ಲ.

ಹೀಗಾಗಿ ಅವರು ಮುಸ್ಲಿಂ ಲೀಗ್ ನ ಒಂದು ಟೆಂಟ್ ನಲ್ಲಿ ಇರಲು ಅವರ ಚಿಕ್ಕಪ್ಪನೆ ಅನುಮತಿ ಕೊಡಿಸುತ್ತಾರೆ, ಅಲ್ಲಿಂದ ಮೂರು ವರ್ಷ ಅದೇ ಅವರ ಮನೆಯಂತಾಗಿತ್ತು. ಯಶಸ್ವಿ ಅವರು ದಿನ ಪೂರ್ತಿ ಕ್ರಿಕೆಟ್ ಆಡುತ್ತಿದ್ದರು, ರಾತ್ರಿ ಟೆಂಟ್ ಗೆ ಬಂದು ಮಲಗುತ್ತಿದ್ದರು. ಆದರೆ ಒಂದು ದಿನ ಇವರ ಎಲ್ಲಾ ಸಾಮಾನುಗಳನ್ನು ಹೊರಗೆ ಎಸೆಯಲಾಗಿತ್ತು, ಏನೂ ಮಾಡದ ಸ್ಥಿತಿಯಲ್ಲಿದ್ದ ಜೈಸ್ವಾಲ್ ಅವರು ಬೇಸರದ ಭಾವದಿಂದ ಕಾಲ್ಬಾದೇವಿ ಡೈರಿಯಲ್ಲಿ ಮಲಗಲು ಶುರು ಮಾಡಿದರು.

ಇಷ್ಟೆಲ್ಲ ಕಷ್ಟ ಇದ್ದರೂ ಸಹ ಅವರು ಈ ವಿಷಯವನ್ನು ತನ್ನ ತಂದೆಗಾಗಲಿ ತಾಯಿಗಾಗಲಿ ಹೇಳುತ್ತಿರಲಿಲ್ಲ, ಅಕಸ್ಮಾತ್ ಹೇಳಿದರೆ ಇವರನ್ನು ಅಲ್ಲಿಂದ ವಾಪಾಸ್ ಕರೆಸಿಕೊಂಡರೆ ಇವರ ಕ್ರಿಕೆಟ್ ಕರಿಯರ್ ಅಲ್ಲಿಗೆ ಮುಗಿದುಹೋಗುತ್ತಿತ್ತು. ಯಶಸ್ವಿಯವರಿಗೆ ಅವರ ತಂದೆ ಅಲ್ಪ ಸ್ವಲ್ಪ ದುಡ್ಡು ಕಳಿಸುತ್ತಿದ್ದರು ಅದು ಸಾಲದಾದಾಗ ಇವರು ಅಲ್ಲಿಯೇ ಅಜಾದ್ ಮೈದಾನದಲ್ಲಿಯೇ ಇದ್ದ ರಾಮ್ ಲೀಲಾ ಪ್ರದೇಶದಲ್ಲಿ ಪಾನಿಪುರಿ ಹಾಗೂ ಹಣ್ಣು ಮಾರಾಟ ಮಾಡುತ್ತಿದ್ದರು!

ಅಲ್ಲಿ ಕೆಲವು ಬಾರಿ ತಡವಾಗುವದರಿಂದ ಅಲ್ಲಿಯೇ ಮಲಗಬೇಕಾಗುತ್ತಿತ್ತು, ಇಷ್ಟೇ ಅಲ್ಲದೇ ಅಲ್ಲಿ ಕೆಲವು ಬಾರಿ ಗ್ರೌಂಡ್ಸ್ ಮ್ಯಾನ್ ಜೊತೆಗೆ ಸಣ್ಣ ಪುಟ್ಟ ಜಗಳ ಆಗುವುದರಿಂದ ಉಪವಾಸ ಕೂಡ ಮಲಗಬೇಕಾಗುತ್ತಿತ್ತು. ಇನ್ನೂ ಕಷ್ಟದ ಕೆಲಸ ಎಂದರೆ ಅಲ್ಲಿಗೆ ಇವರ ಜೊತೆಗೆ ಕ್ರಿಕೆಟ್ ಆಡುವ ಆಟಗಾರರು ಸಹ ತಿನ್ನಲು ಬರುತ್ತಿದ್ದರು, ಆಗ ಇವರು ಅವರಿಗೆ ಸರ್ವ್ ಮಾಡಬೇಕಾಗಿ ಬಂದಾಗ ತುಂಬಾ ಮುಜುಗರವಾಗುತ್ತಿತ್ತು.

ಅಲ್ಲಿ ಟೆಂಟ್ ನಲ್ಲಿ ಬೇಸಿಗೆ ಕಾಲದಲ್ಲಿ ತುಂಬಾ ಶೆಕೆಯಾಗುವ ಕಾರಣದಿಂದ ಇವರು ಕೆಲವು ಬಾರಿ ಅಲ್ಲಿಯೇ ಗ್ರೌಂಡ್ ನಲ್ಲಿ ಮಲಗುತ್ತಿದ್ದರು, ಆದರೆ ಒಮ್ಮೆ ಕಣ್ಣಲ್ಲಿ ಒಂದು ಕೀಟ ಹೋಗಿ ತೊಂದರೆ ಮಾಡಿದಾಗ ಅವರು ಎಷ್ಟೇ ಶೆಕೆಯಾದರು ಅದೇ ಪ್ಲಾಸ್ಟಿಕ್ ಟೆಂಟ್ ನಲ್ಲಿಯೇ ಮತ್ತೆ ಮಲಗಲು ಶುರು ಮಾಡಿದರು.

ಕೆಲವು ಬಾರಿ ಅವರ ಟೀಮ್ ಮೇಟ್ಸ್ ಜೊತೆಗೆ ಊಟಕ್ಕೆ ಹೋಗುತ್ತಿದ್ದರು, ಆದರೆ ಅಲ್ಲಿ ಇವರ ಬಳಿ ದುಡ್ಡು ಇರದ ಕಾರಣ ಅವರ ಕೆಲವು ಸ್ನೇಹಿತರು ಸಹಾಯ ಮಾಡಿದ್ದು ಇದೆ, ಅವರಲ್ಲೇ ಕೆಲವರು ಇವರನ್ನು ಅವಮಾನಿಸಿದ್ದು ಸಹ ಇದೆ. ಇನ್ನೂ ಭಾರತ ತಂಡದಲ್ಲಿ ಸ್ಥಾನ ಪಡೆಯದ ಯಶಸ್ವಿಯವರು ಆದಷ್ಟು ಬೇಗನೆ ತಂಡದಲ್ಲಿ ಸ್ಥಾನ ಪಡೆದು ಅವರ ಕನಸನ್ನು ನನಸು ಮಾಡಿಕೊಳ್ಳಲಿ ಎಂದು ಹಾರೈಸೋಣ.

Advertisement
Share this on...