ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯೂ ನಿರಂತರವಾಗಿ ಹೆಚ್ಚುತ್ತಲೇ ಹೊರಟಿದೆ. ಪೆಟ್ರೋಲ್ ಡಿಸೇಲ್ ಬೆಲೆಯೇರಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಯೋಗ ಗುರು ಬಾಬಾ ರಾಮದೇವ್ ಮಾತನಾಡುತ್ತ, “ನನಗನಿಸುತ್ತೆ ಸರ್ಕಾರ ಶೀಘ್ರದಲ್ಲೇ ಬೆಲೆಯೇರಿಕೆಯನ್ನ ನಿಯಂತ್ರಿಸಬೇಕು” ಎಂದು ಹೇಳಿದ್ದಾರೆ.
ಅವರು ಮುಂದೆ ಮಾತನಾಡುತ್ತ, “ದೇಶವನ್ನು ನಡೆಸಲು ಸರ್ಕಾರಕ್ಕೆ ಆದಾಯ (ರೆವಿನ್ಯೂ) ಬೇಕು. ಅದೇ ಸಮಯದಲ್ಲಿ, ಸರ್ಕಾರ ಜನಸಾಮಾನ್ಯರ ಬಗ್ಗೆಯೂ ಯೋಚಿಸಬೇಕು, ಜನರ ಬಿಪಿ ಹೆಚ್ಚಾಗಬಾರದು ಎಂದು ಸರ್ಕಾರವೂ ಯೋಚಿಸಬೇಕು. ಈ ಸರ್ಕಾರ ಸಂವೇದನಾಶೀಲ ಸರ್ಕಾರ. ಸರ್ಕಾರ ಇದನ್ನು ಶೀಘ್ರದಲ್ಲೇ ಪರಿಗಣಿಸಬಹುದು” ಎಂದಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆ ಪ್ರಕ್ರಿಯೆಯು ಇಂದು 11 ನೇ ದಿನವೂ ಮುಂದುವರಿಯಲಿದೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಅನೇಕ ನಗರಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100 ರೂ.ತಲುಪಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ 11 ದಿನಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 3.24 ರೂ.ಗಳಷ್ಟು ದುಬಾರಿಯಾಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 3.49 ರೂ. ಹೆಚ್ಚಾಗಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ 1 ಲೀಟರ್‌ಗೆ 90.19 ರೂ. ಹಾಗು ಒಂದು ಲೀಟರ್ ಡೀಸೆಲ್ ಬೆಲೆ 80.60 ರೂ.ಗೆ ತಲುಪಿದೆ.
ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆಯ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ದಿನಂಪ್ರತಿ ಏರುತ್ತಿರುವ ತೈಲ ಬೆಲೆ ಹೊಸ ಹೊಸ ದಾಖಲೆಗಳನ್ನೇ ಮುರಿಯುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದೇಶಾದ್ಯಂತ ಅತ್ಯಧಿಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಲ ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ರೂಪಾಯಿಗಳನ್ನು ದಾಟಿದೆ. ಇದು ಮಾತ್ರವಲ್ಲ, ಪ್ರತಿದಿನ ಈ ಬೆಳವಣಿಗೆ ನಿರಂತರವಾಗಿ ಜಾರಿಯಲ್ಲಿದೆ. ಏತನ್ಮಧ್ಯೆ, ಹಿಂದಿನ ಸರ್ಕಾರಗಳು ಇಂಧನ ಆಮದಿನ ಅವಲಂಬನೆಯ ಬಗ್ಗೆ ಗಮನ ಹರಿಸಿದ್ದರೆ ಮಧ್ಯಮ ವರ್ಗದವರಿಗೆ ಅಂತಹ ತೊಂದರೆ ಇರುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಂಧನ ಬೆಲೆಯಲ್ಲಿ ಸ್ಥಿರವಾದ ಹೆಚ್ಚಳವನ್ನು ಉಲ್ಲೇಖಿಸದೆ, 2019-20ರಲ್ಲಿ ಭಾರತವು ತನ್ನ ದೇಶೀಯ ಬೇಡಿಕೆಗಳನ್ನು ಪೂರೈಸಲು 85 ಶೇಕಡಾ ತೈಲ ಮತ್ತು 53 ಶೇಕಡಾ ಅನಿಲವನ್ನು ಆಮದು ಮಾಡಿಕೊಂಡಿದೆ ಎಂದು ಪ್ರಧಾನಿ ಹೇಳಿದರು. ತಮಿಳುನಾಡಿನಲ್ಲಿ ಎನ್ನೋರ್-ತಿರುವಳ್ಳೂರು-ಬೆಂಗಳೂರು-ಪುದುಚೇರಿ-ನಾಗಪಟ್ಟಣಂ-ಮಧುರೈ-ಟುಟಿಕೊರಿನ್ ನೈಸರ್ಗಿಕ ಅನಿಲ ಪೈಪ್‌ಲೈನ್‌ನ ರಾಮನಾಥಪುರಂ-ತೂತುಕುಡಿ ವಿಭಾಗವನ್ನು ಬುಧವಾರ ಉದ್ಘಾಟಿಸಿದ ನಂತರ, ನಾವು ತೈಲ ಆಮದುಗಳ ಮೇಲೆ ಯಾಕೆ ಅಷ್ಟೊಂದು ಅವಲಂಬಿತವಾಗಿರಬೇಕೇ? ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು. ನಾನು ಯಾರನ್ನೂ ಟೀಕಿಸಲು ಬಯಸುವುದಿಲ್ಲ ಆದರೆ ಈ ವಿಷಯದ ಬಗ್ಗೆ ನಾವು ಗಮನ ಹರಿಸಿದ್ದರೆ ನಮ್ಮ ಮಧ್ಯಮ ವರ್ಗದವರು ಈ ಭಾರವನ್ನು ಹೊರಬೇಕಾಗಿರಲಿಲ್ಲ ಎಂದು ನಾನು ಹೇಳಲೇಬೇಕು ಎಂದರು..
ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿರುವಾಗ ಸ್ವಚ್ಛ ಮತ್ತು ಹಸಿರು ಮೂಲಗಳಲ್ಲಿ ಕೆಲಸ ಮಾಡಬೇಕಿರುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು. ಅವರು ಮುಂದೆ ಮಾತನಾಡುತ್ತ, “ನಮ್ಮ ಸರ್ಕಾರವು ಮಧ್ಯಮ ವರ್ಗದವರ ಮೇಲೆ ಹೊರೆಯಾಗುವ ಬಗ್ಗೆ ಕಾಳಜಿ ವಹಿಸುತ್ತದೆ. ಅದಕ್ಕಾಗಿಯೇ ಭಾರತ ಈಗ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣಕ್ಕೆ ಒತ್ತು ನೀಡುತ್ತಿದೆ. ಇದು ರೈತರಿಗೆ ಮತ್ತು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. 2025 ರ ವೇಳೆಗೆ ಪೆಟ್ರೋಲ್‌ನಲ್ಲಿರುವ ಎಥೆನಾಲ್ ಮಿಶ್ರಣವನ್ನು 20 ಪ್ರತಿಶತಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ, ಇದು ಪ್ರಸ್ತುತ 8.5 ಶೇಕಡಾ ನಷ್ಟಿದೆ” ಎಂದರು.
ಭಾರತವು ಇಂಧನ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವತ್ತ ಗಮನ ಹರಿಸುತ್ತಿದ್ದರೆ, ಮತ್ತೊಂದೆಡೆ ಅಪಾಯವನ್ನು ಕಡಿಮೆ ಮಾಡಲು ತನ್ನ ಸಂಪನ್ಮೂಲಗಳನ್ನು ವೈವಿಧ್ಯಗೊಳಿಸುತ್ತಿದೆ ಎಂದು ಅವರು ಹೇಳಿದರು. ನವೀಕರಿಸಬಹುದಾದ ಇಂಧನ ಮೂಲಗಳಿಗೆ ನಮ್ಮ ಸರ್ಕಾರ ಒತ್ತು ನೀಡಿದೆ ಮತ್ತು 2030 ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳ ಪಾಲನ್ನು ಒಟ್ಟು ಇಂಧನ ಉತ್ಪಾದನೆಯ 40% ಕ್ಕೆ ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಪ್ರಧಾನಿ ಹೇಳಿದರು.
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಭಾರತ, ಚೀನಾ ಸೇರಿದಂತೆ ಏಷ್ಯಾದ ದೇಶಗಳಲ್ಲಿ ಕಚ್ಚಾ ತೈಲದ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಈ ಕಾರಣದಿಂದಾಗಿ, ಅಂತರರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಲಂಡನ್ ಕಚ್ಚಾ ತೈಲ ವಿನಿಮಯ ಕೇಂದ್ರದಲ್ಲಿ ಡಬ್ಲ್ಯುಟಿಐ ಕಚ್ಚಾ ಬ್ಯಾರೆಲ್‌ಗೆ $0.66 ಏರಿಕೆ ಕಂಡು $61.80 ಕ್ಕೆ ತಲುಪಿದೆ. ಬ್ರೆಂಟ್ ಕಚ್ಚಾ ಬೆಲೆಯಲ್ಲೂ ತೀಕ್ಷ್ಣವಾದ ಏರಿಕೆಯಿದೆ. ಇದು ಪ್ರತಿ ಬ್ಯಾರೆಲ್‌ಗೆ $0.99 ಏರಿಕೆಯಾಗಿ $64.34 ಕ್ಕೆ ತಲುಪಿದೆ.
ವಿಶೇಷವೆಂದರೆ, ಈ ವರ್ಷದಲ್ಲಿ ಅಂದರೆ ಜನವರಿ ಮತ್ತು ಫೆಬ್ರವರಿಯಲ್ಲಿ ಕೇವಲ 22 ದಿನಗಳಲ್ಲಿ ಪೆಟ್ರೋಲ್ 06.07 ರೂ. ಹೆಚ್ಚಳವಾಗಿದೆ. ಕಳೆದ 10 ತಿಂಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 19 ರೂ.ಗಿಂತ ಹೆಚ್ಚಾಗಿದೆ. ಅದೇ ಸಮಯದಲ್ಲಿ, ಡೀಸೆಲ್ ಇದುವರೆಗೆ ಪ್ರತಿ ಲೀಟರ್‌ಗೆ 06.40 ರೂ. ಹೆಚ್ಚಾಗಿದೆ. ಕಳೆದ 10 ತಿಂಗಳಲ್ಲಿ ಡೀಸೆಲ್ ಬೆಲೆ ಸುಮಾರು 17 ರೂ. ಹೆಚ್ಚಳ ಕಂಡಿದೆ.