“ಪ್ರಜಾಪ್ರಭುತ್ವ ಉಳೀಬೇಕಂದ್ರೆ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ಸನ್ನ ಬೆಂಬಲಿಸಬೇಕು”: ಮಲ್ಲಿಕಾರ್ಜುನ ಖರ್ಗೆ

in Uncategorized 104 views

ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲ ನ್ಯೂಸ್‌ ಚಾನಲ್‌ಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲೇಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಬೀದರ್: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ನೀವು ಬೆಂಬಲಿಸಲೇಬೇಕು. ಪ್ರಜಾಪ್ರಭುತ್ವದ ಸಂಸ್ಥೆಗಳನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಂಟ್ರೋಲ್ ಮಾಡುತ್ತಿವೆ. ಸುದ್ದಿ ಮಾಧ್ಯಮಗಳ ವರದಿಗಾರರು ಕಾಂಗ್ರೆಸ್‌ ಪರವಾಗಿ ಹೈಪ್‌ ಕೊಟ್ಟರೆ ಅವರ ಕೆಲಸವೇ ಹೋಗುತ್ತದೆ ಎಂದು ನ್ಯೂಸ್ ಚಾನಲ್‌ಗಳ ಮಾಲೀಕರ ವಿರುದ್ಧ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದರ್‌ನಲ್ಲಿ ಕಾಂಗ್ರೆಸ್ ಪಕ್ಷದ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ನೀವು ಬೆಂಬಲಿಸಲೇಬೇಕು. ಪ್ರಜಾಪ್ರಭುತ್ವದ ಸಂಸ್ಥೆಗಳನ್ನ ಮೋದಿ, ಬಿಜೆಪಿ ಕಂಟ್ರೋಲ್ ಮಾಡುತ್ತಿವೆ. ಮೇಡಿಯಾ ರಿಪೋರ್ಟರ್ ಗಳು ನಮ್ಮ ಪರವಾಗಿ ಹೆಚ್ಚು ಹೈಪ್ ಕೊಟ್ಟರೆ ಸುದ್ದಿ ಕೊಟ್ಟ ವರದಿಗಾರನ ಕೆಲಸ ಹೋಗುತ್ತದೆ. ಕಾಂಗ್ರೆಸ್ ಪಕ್ಷದ ನಾಯಕರು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ನ್ಯೂಸ್ ನಲ್ಲಿ ತೋರಿಸಲ್ಲ. ಬಿಜೆಪಿ, ಆಆರ್‌ಎಸ್ಎಸ್ ಮನುವಾದವನ್ನ ತರಲು ಪ್ರಯತ್ನಿಸುತ್ತಿದಾರೆ. ನಾವು ಮನುವಾದ ಬರದಂತೆ ತಡೆಯುತ್ತಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ನಾವು ಬಸವಣ್ಣನ ತತ್ವಗಳನ್ನು ಪಾಲಿಬೇಕೆಂದು ಹೇಳುತ್ತಿದ್ದೆವೆ. ಆದರೆ,ಎಲ್ಲಾ ಚಾನಲ್ ಗಳು ಮೋದಿ ಬಿಜೆಪಿ ಕಾರ್ಯಕ್ರಮಗಳನ್ನು ಮಾತ್ರ ಕವರ್ ಮಾಡುತ್ತಿವೆ. ಇದರಲ್ಲಿ ಮಾಧ್ಯಮಗಳ ವರದಿಗಾರರ ಯಾವುದೇ ತಪ್ಪಿಲ್ಲ. ವರದಿಗಾರರು ಕಾಂಗ್ರೆಸ್‌ ಮಾಡುವ ಸತ್ಯದ ಸುದ್ದಿಗಳನ್ನು ಹಾಕಿದರೆ, ವರದಿಗಾರರನ್ನ ತೆಗೆದು ಹಾಕುವಂತ ಕೆಲಸ ನಡೆಯುತ್ತಿದೆ. ರಾಜ್ಯದ ಕೆಲವು ಚಾನಲ್ ಗಳು ಸೇರಿದಂತೆ, ಬಹುತೇಕ ಚಾನಲ್‌ಗಳು ಏಕಪಕ್ಷಿಯವಾಗಿ ಕೆಲಸ ಮಾಡುತ್ತಿವೆ ಎಂದು ನೇರವಾಗಿ ಕಿಡಿಕಾರಿದರು.

Advertisement
Share this on...