ಬ್ರಿಟಿಷ್ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ (ಪಿಎಂ ಮೋದಿ) ಅವರನ್ನು ಸಮರ್ಥಿಸಿಕೊಂಡ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಗುಜರಾತ್ ಗಲಭೆಗಳ ಕುರಿತು “ಪ್ರಧಾನಿ ಮೋದಿಯವರನ್ನು ಈ ರೀತಿ ಚಿತ್ರಿಸುವುದನ್ನ ಒಪ್ಪುವುದಿಲ್ಲ” ಎಂದು ಹೇಳುತ್ತ ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಗರಂ ಆಗಿದ್ದಾರೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು 2002 ರ ಗುಜರಾತ್ ಗಲಭೆಗಳ ಕುರಿತು BBC ಸಾಕ್ಷ್ಯಚಿತ್ರದ ಕುರಿತು ಕೆಂಡಾಮಂಡಲವಾಗಿದ್ದು ಖಾರವಾಗಿ ಪ್ರತಿಕ್ರಿಯಿಸಿದೆ. ಭಾರತ ಇದನ್ನು ಪ್ರೊಪೊಗಂಡಾ ಎಂದು ಕರೆದಿದೆ. ಪಕ್ಷಪಾತ, ವಸ್ತುನಿಷ್ಠತೆಯ ಕೊರತೆ ಮತ್ತು ವಸಾಹತುಶಾಹಿ ಮನಸ್ಥಿತಿ ಈ ಡಾಕ್ಯುಮೆಂಟರಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ನಾವು ಇದರ ಹಿಂದಿನ ಉದ್ದೇಶ ಮತ್ತು ಅದರ ಹಿಂದಿನ ಅಜೆಂಡಾ ಬಗ್ಗೆ ಯೋಚಿಸುವಂತೆ ಮಾಡುತ್ತದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ಇದೇ ವೇಳೆ ಪಾಕಿಸ್ತಾನ ಮೂಲದ ಬ್ರಿಟನ್ ಸಂಸದರೊಬ್ಬರು ಬ್ರಿಟನ್ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. ಆದರೆ, ಪ್ರಧಾನಿ ರಿಷಿ ಸುನಕ್ ಇದನ್ನು ತಿರಸ್ಕರಿಸಿದ್ದಾರೆ.
ವಾಸ್ತವವಾಗಿ, 2002 ರ ಗುಜರಾತ್ ದಂಗೆಯ ಸಂದರ್ಭದಲ್ಲಿ, ನರೇಂದ್ರ ಮೋದಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಮತ್ತು ಬಿಬಿಸಿಯ ಡಾಕ್ಯುಮೆಂಟರಿಯಲ್ಲಿ ನರೇಂದ್ರ ಮೋದಿಯವರ ನಾಯಕತ್ವವನ್ನು ಪ್ರಶ್ನಿಸಲಾಗಿದೆ. ಯುಕೆ ಸಂಸತ್ತಿನಲ್ಲಿ ಸಂಸದ ಇಮ್ರಾನ್ ಹುಸೇನ್ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿಯ ಮಾತುಗಳಲ್ಲಿ, “ಈ ಹಿಂಸಾಚಾರಕ್ಕೆ ಅವರು (ಪಿಎಂ ಮೋದಿ) ನೇರ ಹೊಣೆಗಾರರಾಗಿದ್ದಾರೆ. ಯುಕೆ, ಭಾರತ ಮತ್ತು ಪ್ರಪಂಚದಾದ್ಯಂತ ನೂರಾರು ಜನರು ಕ್ರೂರವಾಗಿ ಕೊಲ್ಲಲ್ಪಟ್ಟರು ಮತ್ತು ಕುಟುಂಬಗಳಿಗೆ ಇನ್ನೂ ನ್ಯಾಯ ಸಿಗಬೇಕಿದೆ. ಪ್ರಧಾನಿ ಮೋದಿ ನೇರ ಹೊಣೆ ಎಂದು ವಿದೇಶಾಂಗ ಕಚೇರಿಯ ರಾಜತಾಂತ್ರಿಕರು ಒಪ್ಪುತ್ತಾರೆಯೇ? ಅಲ್ಲದೆ, ಜನಾಂಗೀಯ ಸಂಹಾರದ ಈ ಗಂಭೀರ ಕೃತ್ಯದಲ್ಲಿ ಅವರ ಸಹಭಾಗಿತ್ವದ ಬಗ್ಗೆ ವಿದೇಶಾಂಗ ಕಚೇರಿಗೆ ಇನ್ನೇನು ಗೊತ್ತು?” ಎಂದಿದ್ದಾರೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ರಿಷಿ ಸುನಕ್, “ಹಾನರೇಬಲ್ ಸ್ಪೀಕರ್, ಈ ಬಗ್ಗೆ ಯುಕೆ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಮತ್ತು ದೀರ್ಘಕಾಲೀನವಾಗಿದೆ ಮತ್ತು ಬದಲಾಗಿಲ್ಲ. ಖಂಡಿತವಾಗಿಯೂ ನಾವು ಎಲ್ಲಿಯೂ ಕಿರುಕುಳವನ್ನು ಸಹಿಸುವುದಿಲ್ಲ, ಆದರೆ ಮಾನ್ಯ ಸಂಸದರ ಮಾತನ್ನ ನಾನು ಒಪ್ಪುವುದಿಲ್ಲ” ಎಂದರು.
UK Government PM Rishi Sunak Criticizes BBC Report:
UK PM Rishi Sunak dismisses Pakistani-origin Imran Hussain, a British MP, appearing in the House in connection with an allegation against PM Modi, which was conducted by BBC. pic.twitter.com/Uu3O72g1tU
— 𝐊𝐚𝐩𝐢𝐥 𝐊𝐮𝐦𝐚𝐫 (@kapilkumaron) January 19, 2023
ಡಾಕ್ಯುಮೆಂಟರಿಯ ಪಾರ್ಟ್ 2 ನಲ್ಲಿ ನರೇಂದ್ರ ಮೋದಿಯವರ ಬಗ್ಗೆ ಪ್ರಸ್ತಾಪ
2002 ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಮೇಲೆ ದಾಳಿ ಮಾಡುವ 2 ಭಾಗಗಳ ಸರಣಿಯನ್ನು ಬ್ರಿಟನ್‌ನ ರಾಷ್ಟ್ರೀಯ ಪ್ರಸಾರ BBC ಪ್ರಸಾರ ಮಾಡಿತ್ತು. ಡಾಕ್ಯುಮೆಂಟರಿಯ ಈ ಸೀರೀಸ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಭಾರತೀಯ ಮೂಲದ ಪ್ರಮುಖ ಬ್ರಿಟಿಷ್ ನಾಗರಿಕರು ಈ ಡಾಕ್ಯುಮೆಂಟರಿಯನ್ನ ಖಂಡಿಸಿದ್ದಾರೆ. ಬ್ರಿಟನ್ನಿನ ಪ್ರಮುಖ ಪ್ರಜೆಯಾದ ಲಾರ್ಡ್ ರಾಮಿ ರೇಂಜರ್, ಬಿಬಿಸಿ ನೂರು ಕೋಟಿಗೂ ಅಧಿಕ ಭಾರತೀಯರಿಗೆ ಸಾಕಷ್ಟು ನೋವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.