ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವತ್ ಅವರ ಪುತ್ರ ಶಂಕರ ಅಶ್ವಥ್ ಅವರೂ ಸಹಾ ನಾಡಿನಲ್ಲಿ ಬಹಳಷ್ಟು ವಿಷಯಗಳಿಂದಾಗಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಹಾಗೂ ಶ್ರಮ ಜೀವಿಯಾಗಿದ್ದಾರೆ. ಸ್ವಾಭಿಮಾನಿ ಬದುಕಿಗೆ ಅವರು ಒಂದು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಕೇವಲ ಸಿನಿಮಾಗಳನ್ನೇ ನಂಬಿಕೊಂಡು ಅವಕಾಶಗಳು ಸಿಗದೆ ಹೋದಾಗ ಹತಾಶರಾಗುವ ಜನರ ಅಥವಾ ಕಲಾವಿದರ ಮಧ್ಯೆ ಶಂಕರ್ ಅಶ್ವಥ್ ಅವರು ವಿಭಿನ್ನವಾಗಿ ನಿಲ್ಲುತ್ತಾರೆ.
ಅವರು ತಮ್ಮ ಜೀವನದ ಮೂಲಕ ಬಹಳಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕಷ್ಟ ಪಟ್ಟು ಜೀವನವನ್ನು ನಡೆಸಲು, ಮಾದರಿ ಬದುಕನ್ನು ಕಟ್ಟಿಕೊಳ್ಳಲು ಅವರ ಜೀವನವೊಂದು ಪ್ರೇರಣೆ ಎನಿಸುತ್ತದೆ. ಈ ಬಾರಿ ಬಿಗ್ ಬಾಸ್ ಸೀಸನ್ ನಲ್ಲಿ ಕೂಡ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದರು ಶಂಕರ್ ಅಶ್ವಥ್ ಅವರು. ಬಿಗ್ ಬಾಸ್ ಮೂಲಕ ಕರುನಾಡಿನ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಅವರು. ಈ ಶೋ ಮೂಲಕ ಜನ ಅವರ ಬಗ್ಗೆ ಮತ್ತಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮತ್ತೆ ಹಳೆಯ ಶ್ರಮಜೀವಿಯಾಗಿದ್ದಾರೆ ಶಂಕರ ಅಶ್ವಥ್ ಅವರು. ಸೋಶಿಯಲ್ ಮೀಡಿಯಾ ಗಳಲ್ಲಿ ಸಕ್ರಿಯವಾಗಿರುವ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಜೀವನದಲ್ಲಿ ಕಂಡ ಏಳುಬೀಳುಗಳ ಕುರಿತಾಗಿ, ತನ್ನ ಅನುಭವಗಳ ಕುರಿತಾಗಿ ಹಲವಾರು ಉತ್ತಮ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ, ಬಹಳಷ್ಟು ಜನರಿಗೆ ಜೀವನದ ಬಗ್ಗೆ ಒಂದು ಉತ್ಸಾಹವನ್ನು ತುಂಬುವಂತಹ ಒಂದು ಕಾರ್ಯವನ್ನು ಪರೋಕ್ಷವಾಗಿ ಮಾಡುತ್ತಿದ್ದಾರೆ. ಇದೀಗ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ದುಡಿದು ತಿನ್ನುವ ಕುರಿತಾಗಿ ಒಂದಷ್ಟು ಉತ್ತಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಶಂಕರ್ ಅಶ್ವಥ್ ಅವರು ಫೋಟೋ ಒಂದನ್ನು ಹಂಚಿಕೊಂಡು, ಬಡಿದು ತಿನ್ನುವುದಕ್ಕಿಂತ ದುಡಿದು ತಿನ್ನುವುದು ಮೇಲು!! ಬಡಿದು ತಿಂದ ಹಣ ನಮ್ಮ ಸಂತಾನವನ್ನು ಕಾಡುತ್ತೆ, ಅದೇ ದುಡಿದು ತಂದ ಹಣ ನಮ್ಮ ಏಷ್ಟೋ ಪಿಳಿಗೆಗಳನ್ನು ದುಪ್ಪಟ್ಟು ಕಾಪಾಡುತ್ತೆ ಇದು ನಮ್ಮಪ್ಪ ನನಗೆ ಹೇಳಿಕೊಟ್ಟ ಪಾಠ. ಹೇಗಿದ್ರೂ ಊಬರ್ ಸಂಪಾದನೆ ನೂ ಇಲ್ಲ ,ಈ ಲಾಕ್ ಡೌನ್ ಪರಿಸ್ಥಿಯಲ್ಲೂ ಸುಮಾರು ಇಪತ್ತು ಕಿ.ಮೀ ವಾಹನ ಚಾಲನೆ ಮಾಡಿ ದುಡಿಯಲು ಮನೆಯವರಿಗೆ ಕೈ ಜೋಡಿಸುತ್ತಿದ್ದೇನೆ. ಒಂದಂತ್ತು ಸತ್ಯ, ಸುಮ್ಮನೆ ಮನೆಯಲ್ಲಿ ಕುಳಿತು ಕಾಲ ಕಳೆಯುವುದಕ್ಕಿಂತ ಈ ರೀತಿ ಕ್ಯಾರಿಯರ್ ಕೊಡುತ್ತಾ ಕಾಲ ಕಳೆಯೋದ್ರಿಂದ ಒಂದು ನಾಲ್ಕು ಕಾಸಾದ್ರು ಸಂಪಾದನೆ ಮಾಡಿ ನೆಮ್ಮದಿಯಿಂದ ಆ ದಿನ ಮಲಗಬಹುದು. ಏನಂತೀರಾ? ಎಂದಿದ್ದಾರೆ.
ಶಂಕರ್ ಅಶ್ವಥ್ ಅವರು ಮಾಡಿದ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಒಬ್ಬರು ಶಂಕರ್ ಅಶ್ವಥ್ ಅವರನ್ನು ನಿಮ್ಮ ಮಗ ಇದ್ದಾನೆ, ಅವರು ನೋಡ್ಕೋಬಹುದಲ್ಲಾ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಶಂಕರ್ ಅಶ್ವಥ್ ಅವರು, “ನೀವು ಕೇಳುತ್ತಿರುವ ಪ್ರಶ್ನೆ ಸರಿ ಆದರೆ ನನ್ನ ಕೈಕಾಲು ಗಟ್ಟಿ ಇದ್ದಾಗ ನಾನ್ಯಕೆ ನನ್ನ ಮಗನ ಹಂಗಲ್ಲಿ ಬೀಳಬೇಕು. ನಾನು ಹೀಗೆ ಸ್ವಾಭಿಮಾನದಲ್ಲಿ ಬದುಕಿದರೆ ನಾಳೆ ಅವನಿಗೂ ಒಂದು ಪಾಠ ಜೊತೆಗೆ ಮರ್ಯಾದೆ” ಎಂದು ಉತ್ತರ ನೀಡಿದ್ದಾರೆ. ಇನ್ನೊಂದಷ್ಟು ಜನ ನೀವು ಮಾದರಿ ಕಲಾವಿದರು. ನಿಮ್ಮ ಕಾರ್ಯ ದೊಡ್ಡದು ಎನ್ನುವ ಮೆಚ್ಚುಗೆಗಳನ್ನು ನೀಡಿದ್ದಾರೆ.