ಬಡ ಟೇಲರ್ ಕನ್ಹಯ್ಯಲಾಲ್ ಹ-ತ್ಯೆಯ ಬಗ್ಗೆ ಟ್ವೀಟ್ ಮಾಡಿ ಜಿಹಾದಿಗಳ ರಕ್ಷಣೆಗೆ ನಿಂತ ಕ್ರಿಕೆಟಿಗ ಇರ್ಫಾನ್ ಪಠಾಣ್: ಹಿಗ್ಗಾಮುಗ್ಗಾ ಝಾಡಿಸಿದ ನೆಟ್ಟಿಗರು

in Uncategorized 816 views

Irfan Pathan tweet on Udaipur Tailor Murder: ಮಂಗಳವಾರ, ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲಾಲ್ ರನ್ನ ಹಾಡು ಹಗಲೇ ಕೊ-ಲೆ ಮಾಡಿದ ನಂತರ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. ಹ-ತ್ಯೆ-ಯ ನಂತರ, ರಾಜಸ್ಥಾನ ಸರ್ಕಾರವು ಕಠಿಣ ಕ್ರಮ ಕೈಗೊಂಡಿದ್ದು ರಾಜ್ಯದಲ್ಲಿ ಸೆಕ್ಷನ್ 144 ಅನ್ನು ವಿಧಿಸಿತು. ಏತನ್ಮಧ್ಯೆ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಟ್ವೀಟ್ ಮಾಡುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ, ಆದರೆ ಇದರ ಹೊರತಾಗಿಯೂ ಅಭಿಮಾನಿಗಳು ಇರ್ಫಾನ್ ಪಠಾಣ್ ವಿರುದ್ಧ ಕೋಪಗೊಂಡಿದ್ದಾರೆ.

ಟ್ವೀಟ್ ನಲ್ಲಿ ಇರ್ಫಾನ್ ಪಠಾಣ್ ಹೇಳಿದ್ದೇನು?

ಉದಯಪುರದಲ್ಲಿ ನಡೆದ ಟೈಲರ್ ಹ-ತ್ಯೆ-ಯ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವಿಟರ್ ನಲ್ಲಿ, “ನೀವು ಯಾವ ಧರ್ಮವನ್ನು ಅನುಸರಿಸುತ್ತೀರಿ ಎಂಬುದು ಮುಖ್ಯವಲ್ಲ. ಮುಗ್ಧ ವ್ಯಕ್ತಿಗೆ ಹಾನಿ ಮಾಡುವುದು ಎಂದರೆ ನೀವು ಇಡೀ ಮಾನವಕುಲಕ್ಕೆ ಹಾನಿ ಮಾಡುತ್ತಿದ್ದೀರಿ ಎಂದರ್ಥ” ಎಂದು ಬರೆದುಕೊಂಡಿದ್ದಾರೆ.

Advertisement

ಇರ್ಫಾನ್ ಖಾನ್ ಟ್ವೀಟ್ ನೋಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಫ್ಯಾನ್ಸ್

ಇರ್ಫಾನ್ ಪಠಾಣ್ ತಮ್ಮ ಟ್ವೀಟ್‌ನಲ್ಲಿ ಯಾವುದೇ ಧರ್ಮದ ಹಂತಕರ ಹೆಸರನ್ನು ಹೇಳಿಲ್ಲ, ಈ ಕಾರಣಕ್ಕಾಗಿ ಅಭಿಮಾನಿಗಳು ಇರ್ಫಾನ್ ವಿರುದ್ಧ ಸಿಡಿದೆದ್ದರು. ಅಭಿಮಾನಿಗಳು ಇರ್ಫಾನ್ ಪಠಾಣ್ ಅವರಿಗೆ ಅಪರಾಧಿಗಳ ಧರ್ಮದ ಹೆಸರು ಹೇಳುವಂತೆ ಸಲಹೆ ನೀಡಿದರು.

ಇಬ್ಬರೂ ಆರೋಪಿಗಳು ಅರೆಸ್ಟ್

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾಲಾಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ರಾಜ್‌ಸಮಂದ್‌ನಲ್ಲಿ ಬಂಧಿಸಲಾಗಿದ್ದು, ಇಬ್ಬರೂ ಕೊ-ಲೆ-ಯ ಹೊಣೆ ಹೊತ್ತಿದ್ದಾರೆ. ಹ-ತ್ಯೆ-ಯ ನಂತರ ಪ್ರದೇಶದಲ್ಲಿ ಉದ್ವಿಗ್ನತೆಯ ದೃಷ್ಟಿಯಿಂದ, ಇಡೀ ರಾಜ್ಯದಲ್ಲಿ ಸೆಕ್ಷನ್ 144 ವಿಧಿಸಲಾಗಿದ್ದು, ಉದಯಪುರದ ಅನೇಕ ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕರ್ಫ್ಯೂ ವಿಧಿಸಲಾಗಿದೆ.

ಉದಯಪುರ ಕೊ-ಲೆ ಪ್ರಕರಣದಲ್ಲಿ ಆ್ಯಕ್ಷನ್ ನಲ್ಲಿ ಗೃಹ ಸಚಿವಾಲಯ

ಉದಯಪುರದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವೂ ಕ್ರಮ ಕೈಗೊಂಡಿದ್ದು, ತನಿಖೆಯನ್ನು ಎನ್‌ಐಎಗೆ ವಹಿಸಲಾಗಿದೆ. ಇದಕ್ಕಾಗಿ 5 ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೆತ್ತಿಕೊಳ್ಳುವಂತೆ ಗೃಹ ಸಚಿವಾಲಯ ಆದೇಶಿಸಿದೆ. ಗೃಹ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ, ಈ ವಿಷಯದಲ್ಲಿ ಯಾವುದೇ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕನೆಕ್ಷನ್ ಗಳನ್ನ ಕೂಲಂಕಷವಾಗಿ ತನಿಖೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಬುಧವಾರ (ಜೂನ್ 29, 2022) ಬೆಳಿಗ್ಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೃಹ ಕಾರ್ಯದರ್ಶಿಯೊಂದಿಗೆ ತುರ್ತು ಸಭೆ ನಡೆಸಿದರು, ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹತ್ಯೆಯಾದ ದಿನವೇ MHO (ಗೃಹಸಚಿವಾಲಯ) NIA ತಂಡವನ್ನು ಸ್ಥಳಕ್ಕೆ ಕಳುಹಿಸಿತ್ತು. ಈ ಹಿಂದೆ, ರಾಜಸ್ಥಾನ ಸರ್ಕಾರವು ಈ ಘಟನೆಯ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿತ್ತು. ಇದು ಸಾಮಾನ್ಯ ವಿಷಯವಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಕನ್ಹಯ್ಯ ಲಾಲ್ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸ್ಟೇಟಸ್ ಹಾಕಿದ್ದಕ್ಕೆ ಜಿಹಾದಿಗಳು ಅವರ ಶಿರಚ್ಛೇದನ ಮಾಡಿದ್ದರು.

Advertisement
Share this on...