‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಅಟ್ಟರ್ ಫ್ಲಾಪ್ ಆದ ನಂತರ ಅಮೀರ್ ಖಾನ್ ಚಿತ್ರಗಳಿಂದ ಬ್ರೇಕ್ ಘೋಷಿಸಿದ್ದರು. ಆದರೆ, ಈಗ ಬಾಲಿವುಡ್ ಚಿತ್ರಗಳ ದೊಡ್ಡ ಪ್ರಮಾಣದ ಬಾಯ್‌ಕಾಟ್ ನಂತರ, ಅವರು ಈಗ ದಕ್ಷಿಣ ಭಾರತದ ಚಿತ್ರಗಳ ಸಹಾಯದಿಂದ ಹಿಟ್ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ತೋರುತ್ತದೆ. ವಾಸ್ತವವಾಗಿ, ದಕ್ಷಿಣ ಭಾರತದ ಸೂಪರ್‌ಹಿಟ್ ಚಿತ್ರ ಕೆಜಿಎಫ್‌ನ ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮ ಮುಂದಿನ ಚಿತ್ರ NTR 31 ರಲ್ಲಿ ಜೂನಿಯರ್ ಎನ್‌ಟಿಆರ್ ಜೊತೆಗೆ ಅಮೀರ್ ಖಾನ್ ಅವರನ್ನೂ ಸೈನ್ ಮಾಡಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.
ಪ್ರಶಾಂತ್ ನೀಲ್ ಪ್ರಸ್ತುತ ಪ್ರಭಾಸ್ ಮತ್ತು ಶ್ರುತಿ ಹಾಸನ್ ಅಭಿನಯದ ‘ಸಲಾರ್’ ಚಿತ್ರದ ನಿರ್ದೇಶನದಲ್ಲಿ ನಿರತರಾಗಿದ್ದಾರೆ. ಹಾಗಾಗಿ NTR 31 ಚಿತ್ರದ ಶೂಟಿಂಗ್ ಸಲಾರ್ ಚಿತ್ರೀಕರಣದ ನಂತರವೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಬಗ್ಗೆ ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ಹೇಳಿದ್ದು, ಈ ಚಿತ್ರದ ಕಲ್ಪನೆ 20 ವರ್ಷಗಳ ಹಿಂದೆಯೇ ನನ್ನ ಮನಸ್ಸಿನಲ್ಲಿ ಬಂದಿತ್ತು. ಆದರೆ, ಬಜೆಟ್ ಕೊರತೆಯಿಂದ ನನ್ನ ಮನಸ್ಸು ಬದಲಾಯಿಸಿದ್ದೆ ಎಂದಿದ್ದರು.
NTR 31 ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಸುದ್ದಿ ಕೇಳಿ ಜನ ಪ್ರತಿಕ್ರಿಯಿಸಲಾರಂಭಿಸಿದ್ದಾರೆ. ಬಾಲಿವುಡ್‌ನಿಂದ ತಿರಸ್ಕರಿಸಲ್ಪಟ್ಟ ನಂತರ ಈ ನಟರು ತಮ್ಮ ಖ್ಯಾತಿಯನ್ನು ಉಳಿಸಿಕೊಳ್ಳಲು ದಕ್ಷಿಣದತ್ತ ಮುಖ ಮಾಡುತ್ತಾರೆ ಎಂದು ಜನರು ಹೇಳುತ್ತಿದ್ದಾರೆ. ಎನ್‌ಟಿಆರ್ ಜೊತೆಗಿನ ಸಿನಿಮಾದಲ್ಲಿ ಬಂದರೆ ನೆಗೆಟಿವ್ ರೋಲ್ ಅಥವಾ ಸೈಡ್ ಕ್ಯಾರೆಕ್ಟರ್ ನಲ್ಲಿ ಅಮೀರ್ ಖಾನ್ ಇರುತ್ತಾರೆ ಎನ್ನುತ್ತಾರೆ ಕೆಲವರು.
-> True aithe zoo ki inkoka side character
-> Hindi lo boycott chesi dengtaru zoo ni kuda— —— (@AbhiramRP10) December 30, 2022
ಮಾಹಿತಿಯ ಪ್ರಕಾರ, ಈ ಚಿತ್ರದ ಬಗ್ಗೆ ಅಮೀರ್ ಖಾನ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಈ ಚಿತ್ರಕ್ಕಾಗಿ ಅಮೀರ್‌ಗೆ ನೆಗೆಟಿವ್ ಪಾತ್ರವನ್ನು ನೀಡಲಾಗಿದೆ ಎಂದು ಕೆಲವು ವರದಿಗಳು ಹೇಳಿವೆ. ಇದಕ್ಕೂ ಮೊದಲು ಲಾಲ್ ಸಿಂಗ್ ಚಡ್ಡಾ ಚಿತ್ರದ ಮೇಲೆ ಅಮೀರ್ ಖಾನ್ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಬಾಯ್‌ಕಾಟ್ ಬಾಲಿವುಡ್ ನಿಂದಾಗಿ ಚಿತ್ರ ಅಟ್ಟರ್ ಫ್ಲಾಪ್ ಆಗಿತ್ತು. ಈ ಚಿತ್ರ ಫ್ಲಾಪ್ ಆದ ನಂತರ, ಅಮೀರ್ ಖಾನ್ ಚಿತ್ರಗಳಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು.
“ನಾನು ಕಳೆದ 35 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಕೆಲಸದ ಮೇಲೆ ಮಾತ್ರ ಸಂಪೂರ್ಣವಾಗಿ ಗಮನಹರಿಸುತ್ತಿದ್ದೇನೆ. ನನ್ನ ಹತ್ತಿರ ಇರುವವರಿಗೆ ಇದು ನ್ಯಾಯೋಚಿತವಲ್ಲ ಎಂದು ನಾನು ಭಾವಿಸುತ್ತೇನೆ. ಈಗ ಒಂದಿಷ್ಟು ದಿನ ಬಿಡುವು ಮಾಡಿಕೊಂಡು ಅವರ ಜೊತೆಗಿದ್ದು ಬದುಕನ್ನು ಬೇರೆಯದೇ ರೀತಿಯಲ್ಲಿ ಅನುಭವಿಸಬೇಕು ಅನ್ನಿಸುವ ಸಮಯ ಬಂದಿದೆ. ಮುಂದಿನ ವರ್ಷ ಅಥವಾ ಒಂದೂವರೆ ವರ್ಷ ನಾನು ನಟನಾಗಿ ಕೆಲಸ ಮಾಡುವುದಿಲ್ಲ” ಎಂದು ಅಮೀರ್ ಖಾನ್ ಹೇಳಿದ್ದರು. ಇದಲ್ಲದೇ ಅಮೀರ್ ಖಾನ್ ನಟನೆಯಿಂದ ದೂರ ಉಳಿದು ಪ್ರೊಡಕ್ಷನ್ ಗೆ ಹೋಗುವ ಬಗ್ಗೆ ಅಂದರೆ ನಿರ್ಮಾಪಕನಾಗಿ ಕೆಲಸ ಮುಂದುವರೆಸುವ ಬಗ್ಗೆಯೂ ಮಾತನಾಡಿದ್ದರು.
ಚಾಂಪಿಯನ್ಸ್ ಚಿತ್ರದ ಕುರಿತು ಮಾತನಾಡಿದ ಅಮೀರ್, “ನಾನು ‘ಚಾಂಪಿಯನ್ಸ್’ ಚಿತ್ರದ ನಿರ್ಮಾಪಕನಾಗಿ ಕೆಲಸ ಮಾಡುತ್ತೇನೆ. ನಾನು ಮಾಡಬೇಕೆಂದಿರುವ ಈ ಸಿನಿಮಾ ಮಾಡಲು ಬೇರೆ ನಟರಿಗೆ ಆಸಕ್ತಿ ಇದೆಯೇ ಎಂದು ಅವರ ಜತೆ ಮಾತನಾಡುತ್ತೇನೆ. ನಾನು ಎಲ್ಲಾ ಸಂಬಂಧಗಳನ್ನು ಆನಂದಿಸಲು ಬಯಸುವ ನನ್ನ ಜೀವನದ ಆ ಹಂತದಲ್ಲಿ ನಾನು ಇದ್ದೇನೆ” ಎಂದಿದ್ದರು.
ಕೆಲ ವರ್ಷಗಳಿಂದ ಬಾಲಿವುಡ್‌ನಲ್ಲಿ ಹಿಟ್ ಚಿತ್ರಗಳ ಬರಗಾಲವಿದೆ. ಅದೇ ಸಮಯದಲ್ಲಿ ಕೆಜಿಎಫ್ 2, ಪುಷ್ಪ, PS-I, ಕಾಂತಾರ ಸೇರಿದಂತೆ ದಕ್ಷಿಣ ಭಾರತದ ಅನೇಕ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿ ಇಡೀ ಜಗತ್ತೇ ದಕ್ಷಿಣದ ಚಿತ್ರಗಳತ್ತ ತಿರುಗಿ ನೋಡುವಂತೆ ಮಾಡಿವೆ. ಹೀಗಿರುವಾಗ ಅಮೀರ್ ಖಾನ್ ದಕ್ಷಿಣ ಭಾರತದ ಚಿತ್ರರಂಗದತ್ತ ಒಲವು ತೋರುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರು ಹಿಟ್ ಆಗಲು ದಕ್ಷಿಣ ಭಾರತವನ್ನೇ ಆಶ್ರಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.