ಬಾಲಿವುಡ್‌ನ್ನೇ ಬೆಚ್ಚಿಬೀಳಿಸಿದ ಪ್ರಕಣ: ಸುಶಾಂತ್ ಅಭಿಮಾನಿಗಳ ವಾದಕ್ಕೆ ಸಿಕ್ಕಿತು ರೆಕ್ಕೆಪುಕ್ಕ

in Uncategorized 8,448 views

ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ಬಂದಾಗಿನಿಂದ, ಅವರ ಅಭಿಮಾನಿಗಳು ಅದು ಸೂಸೈಡ್ ಅಲ್ಲ ಕೊ-ಲೆ ಎಂದೇ ಹೇಳುತ್ತಿದ್ದಾರೆ ಹಾಗು ಅವರ ಸಾವಿಗೆ ನ್ಯಾಯಕ್ಕಾಗಿ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸುಶಾಂತ್ ರದ್ದು ಸೂಸೈಡ್ ಅಲ್ಲ ಕೊ-ಲೆ ಅನ್ನೋ ಹಲವರ ವಾದಕ್ಕೆ ಇದೀಗ ಮತ್ತೊಮ್ಮೆ ರೆಕ್ಕೆ ಪುಕ್ಕ ಬಂದಿವೆ.

Advertisement

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಎರಡೂವರೆ ವರ್ಷಗಳ ನಂತರ, ಅದರ ಬಗ್ಗೆ ಆಘಾತಕಾರಿ ವಿಷಯ ಬಹಿರಂಗವಾಗಿದೆ. ದಿವಂಗತ ನಟನ ಮರಣೋತ್ತರ ಪರೀಕ್ಷೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಅವರು ಸೂಸೈಡ್ ಮಾಡಿಕೊಂಡಿಲ್ಲ ಬದಲಾಗಿ ಅವರ ಕೊ-ಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ವ್ಯಕ್ತಿಯ ಹೆಸರನ್ನು ರೂಪಕುಮಾರ್ ಶಾ ಎಂದು ಹೇಳಲಾಗುತ್ತಿದ್ದು, ಸುಶಾಂತ್ ಅವರ ಪೋಸ್ಟಮಾರ್ಟಂ ನಡೆಯುತ್ತಿರುವ ಸಮಯದಲ್ಲಿ, ಅವರು ಆಸ್ಪತ್ರೆಯ ಪೋಸ್ಟಮಾರ್ಟಂ ರೂಮ್ ನಲ್ಲಿ ಹಾಜರಾಗಿದ್ದರು ಮತ್ತು ಸಂಪೂರ್ಣ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.

ಈ ಕಾರಣಕ್ಕಾಗಿ ಪೋಸ್ಟಮಾರ್ಟಂ ಪ್ರಕ್ರಿಯೆಯನ್ನ ರೆಕಾರ್ಡ್ ಮಾಡಿರಲಿಲ್ಲ

ವರದಿಗಳ ಪ್ರಕಾರ, ರೂಪಕುಮಾರ್ ಅವರು, “ಸುಶಾಂತ್ ಸಿಂಗ್ ರಜಪೂತ್ ನಿಧನರಾದಾಗ, ಐದು ಬಾಡಿಗಳನ್ನ ಪೋಸ್ಟ್‌ಮಾರ್ಟಮ್‌ಗಾಗಿ ಕೂಪರ್ ಆಸ್ಪತ್ರೆಗೆ (ಮುಂಬೈ) ತರಲಾಯಿತು. ಅವುಗಳಲ್ಲಿ ಒಂದು ವಿಐಪಿ ಡೆಡ್ ಬಾಡಿ ಇತ್ತು, ನಾವು ಪೋಸ್ಟ್‌ಮಾರ್ಟಮ್‌ಗೆ ಹೋದಾಗ, ಆಗ ಅದರ ಬಗ್ಗೆ ನಮಗೆ ತಿಳಿಯಿತು. ಸುಶಾಂತ್ ಸಿಂಗ್ ರಜಪೂತ್ ಅವರ ಬಾಡಿ ಮೇಲೆ ಹಲವಾರು ಮಾರ್ಕ್ ಗಳು ಮತ್ತು ಕುತ್ತಿಗೆಯ ಮೇಲೆ ಎರಡು-ಮೂರು ಮಾರ್ಕ್ ಗಳಲ್ಲಿ ದ್ದವು, ಪೋಸ್ಟ್‌ಮಾರ್ಟಮ್ ಅನ್ನು ರೆಕಾರ್ಡ್ ಮಾಡಬೇಕಾಗಿತ್ತು ಆದರೆ ಉನ್ನತ ಅಧಿಕಾರಿಗಳು ಕೇವಲ ಬಾಡಿಯ ಚಿತ್ರಗಳನ್ನು ಕ್ಲಿಕ್ ಮಾಡಲು ಕೇಳಿದರು. ಹಾಗಾಗಿ ಅವರ ಆದೇಶದ ಮೇರೆಗೆ ಅವರು ಹೇಳಿದ್ದನ್ನಷ್ಟೇ ಮಾಡಿದೆವು” ಎಂದು ತಿಳಿಸಿದ್ದಾರೆ.

ಬಾಡಿ ನೋಡುತ್ತಲೇ ಇದು ಕೊ-ಲೆ ಅಂತ ಅರ್ಥವಾಗಿತ್ತು

ರೂಪ್‌ಕುಮಾರ್ ಮುಂದೆ ಮಾತನಾಡುತ್ತ, “ಸುಶಾಂತ್ ಬಾಡಿಯನ್ನು ನೋಡಿದಾಗ, ನಾನು ತಕ್ಷಣ ನನ್ನ ಸೀನಿಯರ್ ಗೆ ಇದು ಸೂಸೈಡ್ ಅಲ್ಲ ಕೊ-ಲೆ ಎಂದು ಹೇಳಿದೆ. ನಾವು ನಿಯಮಗಳನ್ನು ಪಾಲಿಸಬೇಕು ಎಂದು ನಾನು ಅವರಿಗೆ ಹೇಳಿದೆ. ಆದರೆ, ನನ್ನ ಸೀನಿಯರ್ ಆದಷ್ಟು ಬೇಗ ಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ಬಾಡಿಯನ್ನು ಪೋಲಿಸರಿಗೆ ಕಳುಹಿಸಲು ನನ್ನನ್ನು ಕೇಳಿದರು, ಅದಕ್ಕಾಗಿಯೇ ನಾವು ರಾತ್ರಿಯೇ ಪೋಸ್ಟ್‌ಮಾರ್ಟಮ್ ಮಾಡಿದೆವು” ಎಂದಿದ್ದಾರೆ. ರೂಪಕುಮಾರ್ ಶಾ ಅವರ ಮಾತಿನಲ್ಲಿ ಎಷ್ಟು ಸತ್ಯವಿದೆ? ಇದಕ್ಕೆ ಕಾಲವೇ ಉತ್ತರಿಸಬೇಕಿದೆ. ಆದರೆ ಇದು ನಿಜವೇ ಆಗಿದ್ದರೆ ಸುಶಾಂತ್ ಅವರನ್ನು ಕೊಂ-ದ ವರು ಯಾರು ಮತ್ತು ಅದಕ್ಕೆ ಕಾರಣವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಜೂನ್ 14, 2020 ರ ಮಧ್ಯಾಹ್ನ, ಸುಶಾಂತ್ ಸಿಂಗ್ ರಜಪೂತ್ ನಿಧನರಾದರು ಎಂಬ ಸುದ್ದಿ ಇದ್ದಕ್ಕಿದ್ದಂತೆ ವರದಿಯಾದಾಗ ಇಡೀ ದೇಶವೇ ಶೋಕದಲ್ಲಿ ಮುಳುಗಿತ್ತು. ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಸುಶಾಂತ್ ಶ ವ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಮುಂಬೈ ಪೊಲೀಸರು ಇದನ್ನು ಸೂಸೈಡ್ ಎಂದು ಹೇಳಿದ್ದರು. ಆದರೆ, ನಂತರ ಸುಶಾಂತ್ ತಂದೆ ಕೆ.ಕೆ. ಸಿಂಗ್ ತನ್ನ ಮಗನನ್ನು ಕೊ ಲೆ ಮಾಡಲಾಗಿದೆ ಎಂದು ಆರೋಪಿಸಿ ಪಾಟ್ನಾದಲ್ಲಿ ಎಫ್‌ಐಆರ್ ದಾಖಲಿಸಿದ್ದರು ಮತ್ತು ಅದಕ್ಕೆ ಸುಶಾಂತ್‌ನ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿಯೇ ಕಾರಣ ಎಂದು ಆರೋಪಿಸಿದ್ದರು. ಸುಶಾಂತ್ ಅಭಿಮಾನಿಗಳು ಕೂಡ ಅದನ್ನೇ ಹೇಳುತ್ತಿದ್ದಾರೆ. ಈ ವಿಷಯ ಮುಂಬೈ ಪೊಲೀಸರ ಮೂಲಕ ಜಾರಿ ನಿರ್ದೇಶನಾಲಯ (ED), ನಾರ್ಕೋಟಿಕ್ಸ್ ಬ್ಯೂರೋ (NCB) ಮತ್ತು ಸಿಬಿಐಗೆ ತಲುಪಿತ್ತು. ಸದ್ಯ ಈ ಪ್ರಕರಣದ ಕಡತ ಸಿಬಿಐ ಬಳಿಯಿದ್ದು, ಇದುವರೆಗೂ ಸಂಸ್ಥೆ ಈ ಬಗ್ಗೆ ಯಾವುದೇ ಪ್ರಮುಖ ಮಾಹಿತಿ ಬಹಿರಂಗಪಡಿಸಿಲ್ಲ.

Advertisement
Share this on...