ಬಾಲಿವುಡ್‌ನ ಸೆಲೆಬ್ರಿಟಿಗಳ‌ ಕಾಸ್ಟ್ಲಿಯೆಸ್ಟ್ ಬಾಡಿಗಾರ್ಡ್ ಗಳಿವರು: ಇವರಿಗೆ ಸಿಗೋ ಪ್ರತಿ ತಿಂಗಳ ಸಂಬಳವೆಷ್ಟು ಗೊತ್ತಾ?

in FILM NEWS/Kannada News/News/ಸಿನಿಮಾ 67 views

ಬಾಲಿವುಡ್ ಸ್ಟಾರ್ ಗಳ ಜೊತೆ ಯಾರಾದರೂ ಅವರ ನೆರಳಿನಂತೆ ಇರ್ತಾರಂದ್ರೆ ಅದು ಅವರ ಬಾಡಿಗಾರ್ಡ್ ಗಳು. ನಟ ಎಲ್ಲಿಗೆ ಹೋದರೂ ಅವನ ಅಭಿಮಾನಿಗಳು ಅವನನ್ನು ಸುತ್ತುವರೆಯುರುತ್ತಾರೆ. ಸ್ಟಾರ್ ಗಳನ್ನ ನೋಡಿದಾಗ, ಕೆಲವು ಅಭಿಮಾನಿಗಳು ಉತ್ಸುಕರಾಗುತ್ತಾರೆ, ಹೇಗಾದರೂ ಮಾಡಿ ತಮ್ಮ ನೆಚ್ಚಿನ ಸ್ಟಾರ್ ಗಳ ಬಳಿ ಹೋಗಲು ಪ್ರಯತ್ನಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅಭಿಮಾನಿಗಳಿಂದ ಸ್ಟಾರ್ ಗಳನ್ನ ದೂರವಿರಿಸುವುದು ಬಾಡಿಗಾರ್ಡ್ ಗಳ ಜವಾಬ್ದಾರಿಯಾಗಿರುತ್ತದೆ. ಬಾಡಿಗಾರ್ಡ್ ಗಳು ಯಾವಾಗಲೂ ಸ್ಟಾರ್ ಗಳದಿಗೆ ಅವರ ನೆರಳಿನಂತೆ ಅವರ ಜೊತೆಯೇ ಇರುತ್ತಾರೆ. ಅವರ ಕಣ್ಣುಗಳು ತಮ್ಮ‌ ಬಾಸ್ ಸುತ್ತಮುತ್ತಲೇ ಇರುತ್ತೆ. ದೂರದಿಂದ ಸ್ಟಾರ್ ಗಳ ಮೇಲೆ ಬರುವ ಯಾವುದೇ ರೀತಿಯ ಅಪಾಯವನ್ನು ಅವರು ಗ್ರಹಿಸುತ್ತಾರೆ. ಇದಕ್ಕಾಗಿ ಬಾಲಿವುಡ್ ಸ್ಟಾರ್ ಗಳು ಅವರಿಗೆ ದೊಡ್ಡ ಮೊತ್ತದ ಸಂಬಳವನ್ನೂ ಕೊಡ್ತಾರೆ. ಬಾಲಿವುಡ್‌ನ ಕೆಲವು ಪ್ರಸಿದ್ಧ ನಟರ ಬಾಡಿಗಾರ್ಡ್ ಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

Advertisement

ಅಮಿತಾಭ್ ಬಚ್ಚನ್ ಬಾಡಿಗಾರ್ಡ್ ಜೀತೇಂದ್ರ ಶಿಂಧೆ

ಬಾಲಿವುಡ್ ದಿಗ್ಗಜನಟ ಅಮಿತಾಬ್ ಬಚ್ಚನ್ ಅವರ ಅಭಿಮಾನಿಗಳು ಭಾರತದಲ್ಲಷ್ಟೇ ಅಲ್ಲದೇ ದೇಶ ವಿದೇಶಗಳಲ್ಲೂ ಇದಾರೆ.‌ ಹೀಗಿರುವಾಗ ಅವರ ಬಾಡಿಗಾರ್ಡ್ ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ. ಅಮಿತಾಭ್ ಬಚ್ಚನ್ ಅವರನ್ನು ರಕ್ಷಿಸುವ ಜವಾಬ್ದಾರಿ ಜಿತೇಂದ್ರ ಶಿಂಧೆ ಅವರ ಹೆಗಲ ಮೇಲಿದೆ. ಜಿತೇಂದ್ರ ಶಿಂಧೆ ಬಿಗ್ ಬಿ ಅವರ ನೆರಳಿನಂತೆ ದಿನದ 24 ಗಂಟೆಗಳ ಕಾಲ ಅವರನ್ನ ಕಾಯುತ್ತಾರೆ. ಮನೆ, ಫಿಲಂ ಸೆಟ್‌ಗಳಾಗಲಿ ಅಥವಾ ಯಾವುದೇ ಸಾರ್ವಜನಿಕ ಕಾರ್ಯಕ್ರಮವಿರಲಿ, ಜಿತೇಂದ್ರ ಶಿಂಧೆ ಅಮಿತಾಭ್ ಬಚ್ಚನ್ ಅವರೊಂದಿಗೆ ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಮೂಲಗಳ ಪ್ರಕಾರ, ಅಮಿತಾಬ್ ಬಚ್ಚನ್ ಜೀತೇಂದ್ರ ಶಿಂಧೆಗೆ ವಾರ್ಷಿಕ 1.5 ಕೋಟಿ ರೂ. ಸಂಬಳ ನೀಡುತ್ತಾರೆ ಅಂದರೆ ಅವರ ತಿಂಗಳ ಸಂಬಳ ಬರೋಬ್ಬರಿ ಹನ್ನೆರಡುವರೆ ಲಕ್ಷದಷ್ಟಿದೆ.

ಸಲ್ಮಾನ ಖಾನ್ ಬಾಡಿಗಾರ್ಡ್ ಶೇರಾ

ಬಾಲಿವುಡ್‌ನ ಅತ್ಯಂತ ಜನಪ್ರೀಯ ಬಾಡಿಗಾರ್ಡ್ ಅಂದರೆ ಅದು ಶೇರಾ. ಶೇರಾ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್. ಅವರು ಸಲ್ಮಾನ್ ಖಾನ್ ಅವರೊಂದಿಗೆ ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಶೇರಾ ಅವರ ನಿಜವಾದ ಹೆಸರು ಗುರ್ಮೀತ್ ಸಿಂಗ್ ಜಾಲಿ. ಶೇರಾ  ಮೊದಲ ಬಾರಿಗೆ 1998 ರಲ್ಲಿ ಸಲ್ಮಾನ್ ಖಾನ್‌ರನ್ನ ಭೇಟಿಯಾದರು. ಅಂದಿನಿಂದ, ಶೇರಾ ಸಲ್ಮಾನ್ ಖಾನ್ ಜೊತೆ ಅವರ ನೆರಳಿನಂತೆ ಇರುತ್ತಾರೆ. ವರದಿಯ ಪ್ರಕಾರ, ಸಲ್ಮಾನ್ ಖಾನ್ ಪ್ರತಿ ವರ್ಷ ಎರಡು ಕೋಟಿ ರೂಪಾಯಿಗಳನ್ನು ಶೇರಾಗೆ ಸಂಬಳದ ರೂಪದಲ್ಲಿ ನೀಡುತ್ತಾರೆ.

ಶಾರುಖ್ ಖಾನ್ ಬಾಡಿಗಾರ್ಡ್ ರವಿ ಸಿಂಗ್

ಬಾಲಿವುಡ್‌ನ ಮತ್ತೊಬ್ಬ ಖ್ಯಾತ ನಟ ಶಾರುಖ್ ಖಾನ್. ಶಾರುಖ್ ಹೋದಲ್ಲೆಲ್ಲಾ ಲಕ್ಷಾಂತರ ಅಭಿಮಾನಿಗಳು ಅವರನ್ನು ಸುತ್ತುವರೆದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅಭಿಮಾನಿಗಳ ನಡುವೆ ಶಾರುಖ್ ಖಾನ್ ಅವರನ್ನು ರಕ್ಷಿಸುವ ಜವಾಬ್ದಾರಿ ಅವರ ಬಾಡಿಗಾರ್ಡ್ ರವಿ ಸಿಂಗ್ ಅವರ ಮೇಲಿದೆ. ರವಿ ಸಿಂಗ್ ಅವರು ಸುಮಾರು 9 ವರ್ಷಗಳಿಂದ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ವರದಿಯ ಪ್ರಕಾರ, ರವಿ ಸಿಂಗ್ ಬಾಲಿವುಡ್‌ನ ಅತ್ಯಂತ ದುಬಾರಿ ಬಾಡಿಗಾರ್ಡ್. ಮೂಲಗಳ ಪ್ರಕಾರ, ಶಾರುಖ್ ಖಾನ್ ಅವರಿಗೆ ವರ್ಷಕ್ಕೆ 2.7 ಕೋಟಿ ರೂ.ನಷ್ಟು ಸಂಭಾವನೆ ನೀಡುತ್ತಾರೆ.

ಅಮೀರ್ ಖಾನ್ ಬಾಡಿಗಾರ್ಡ್ ಯುವರಾಜ್ ಘೋರ್ಪಡೆ

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರ ಬಾಡಿಗಾರ್ಡ್ ಯುವರಾಜ್ ಘೋರ್ಪಡೆ. ಮೀಡಿಯಾಗಳ, ಅಭಿಮಾನಿಗಳಿಂದ ಸುತ್ತುವರಿಯುವಿಕೆಯಿಂದ ದೂರವಿರಲು ಅಮೀರ್ ಖಾನ್ ಬಯಸುತ್ತಾರೆ. ಅಮೀರ್ ಖಾನ್ ಅವರೊಂದಿಗೆ ಯುವರಾಜ್ ಘೋರ್ಪಡೆ ಸದಾ ಕಾಣಿಸಿಕೊಳ್ಳುತ್ತಾರೆ. ವರದಿಗಳ ಪ್ರಕಾರ, ಅಮೀರ್ ಅವರಿಗೆ ವಾರ್ಷಿಕವಾಗಿ 2 ಕೋಟಿ ರೂ.ಸಂಬಳ ನೀಡುತ್ತಾರೆ.

ಅಕ್ಷಯ್ ಕುಮಾರ್ ಬಾಡಿಗಾರ್ಡ್ ಶ್ರೇಯಸ್ ಠೇಲೆ

ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್‌ಗೆ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರು ತ್ವರಿತತೆ ಮತ್ತು ವೇಗಕ್ಕೆ ಹೆಸರುವಾಸಿಯಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಬಾಡಿಗಾರ್ಡ್ ಕೂಡ ಚುರುಕಾಗಿರಬೇಕಾಗುತ್ತೆ. ಅಕ್ಷಯ್ ಕುಮಾರ್ ಅವರ ಬಾಡಿಗಾರ್ಡ್ ಹೆಸರು ಶ್ರೇಯಸ್ ಠೇಲೆ. ಅಕ್ಷಯ್ ಮನೆಯಿಂದ ಹೊರಬಂದ ಕೂಡಲೇ ಶ್ರೇಯಸ್ ಠೇಲೆ ಸಕ್ರಿಯರಾಗುತ್ತಾರೆ. ಅಕ್ಷಯ್ ಕುಮಾರ್ ಅವರು ಶ್ರೇಯಸ್‌ಗೆ ವಾರ್ಷಿಕವಾಗಿ 1.2 ಕೋಟಿ ರೂ.ಸಂಬಳ ನೀಡುತ್ತಾರೆ

Advertisement
Share this on...