ಕಾಬುಲ್:
ತಾಲಿಬಾನ್ ಖರಿ ಫಸೀಹುದ್ ದಿನ್ ಹಫೀಜುಲ್ಲಾ ನೇತೃತ್ವದ ಹಲವಾರು ಹೋರಾಟಗಾರರನ್ನು ಪಂಜ್ ಶೀರ್ ಮೇ ಲೆ ದಾ ಳಿ ನಡೆಸಲು ಕಳುಹಿಸಿತ್ತು, ಆದರೆ ಬಾಗ್ಲಾನ್ ಪ್ರಾಂತ್ಯದ ಅಂಡರಾಬ್ ಕಣಿವೆಯಲ್ಲಿ ಹೊಂ ಚು ಹಾಕಿ ಕುಳಿತಿದ್ದ ಪಂಜ್‌ಶೀರ್ ಯೋಧರು ದಾ ಳಿ ನಡೆಸಿದ್ದಾರೆ. ಈ ದಾ ಳಿ ಯಲ್ಲಿ 300 ತಾಲಿಬಾನಿಗಳು ಮೃ ತ ಪಟ್ಟಿದ್ದಾರೆ ಎನ್ನಲಾಗಿದೆ.
ಪಂಜಶೀರ್ ಕಣಿವೆಯ ಬಂ ಡು ಕೋ ರ ನಾಯಕ ಅಹಮ್ಮದ್ ಮಸೂದ್ ನೇತೃತ್ವದಲ್ಲಿ ಈ ಕಣಿವೆಯ ಪ್ರಜೆಗಳು ತಾಲಿಬಾನಿಗಳಿಗೆ ಎದೆಯೊಡ್ಡಿ ನಿಂತಿದ್ದಾರೆ. ಅಲ್-ಅರೇಬಿಯಾ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಮಸೂದ್, ಈ ಕಣಿವೆಯನ್ನು ನಿಮಗೆ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಅಫ್ಘಾನ್ ಅಧ್ಯಕ್ಷನಂತೆ ಓಡಿಹೋಗಲ್ಲ. ತಾಕತ್ತಿದ್ದರೆ ಯು ದ್ಧ ಮಾಡಿ ಗೆಲ್ಲಿ ಎಂದು ಮಸೂದ್ ಖಡಕ್ ಸಂದೇಶ ರವಾನಿಸಿದ್ದರು. ನಾವು ಯು ದ್ಧ ಮಾಡಲ್ಲ. ಆದ್ರೆ ಆ ಕ್ರ ಮ ಣಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ. ಒಂದು ವೇಳೆ ತಾಲಿಬಾನಿಗಳ ವರ್ತನೆ ಅತಿರೇಕಕ್ಕೆ ತಲುಪಿದರೆ ಯು ದ್ಧ ವೇ ನಡೆಯಲ್ಲ ಎಂದು ಹೇಳಲಾರೆ. ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ತಾಲಿಬಾನಿಗಳ ಮಾತುಕತೆ ಅವಶ್ಯಕವಾಗಿದೆ. ತಾಲಿಬಾನಿಗಳು ಮಾತುಕತೆಗೆ ಒಪ್ಪದಿದ್ದರೆ ಯು ದ್ಧ ನಮ್ಮ ಮುಂದಿನ ಆಯ್ಕೆ ಆಗಬಹುದು ಎಂದು ಎಚ್ಚರಿಕೆ ನೀಡಿದ್ದರು.
ಇದರ ಹೊರತಾಗಿಯೂ ಅಫ್ಘಾನಿಸ್ತಾನದ ರಾಜಧಾನಿ ಕಾಬುಲ‌್ ಸೇರಿದಂತೆ ಎಲ್ಲವನ್ನೂ ವಶಕ್ಕೆ ಪಡೆದುಕೊಂಡು ಬೀಗುತ್ತಿದ್ದ ತಾಲಿಬಾನಿಗಳು ಪಂಜ್‌ಶೀರ್‌ನತ್ತ ದೌಡಾಯಿಸಿದ್ದರು. ಇದೀಗ ಅವರನ್ನು ಹೊ ಡೆ ದು ರುಳಿಸಲಾಗಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ಸೋವಿಯತ್ ವಿರೋಧಿ ಹೋರಾಟದ ನಾಯಕ, ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ಅಹಮ್ಮದ್ ಷಾ ಮಸೂದ್ ಅವರ ಪುತ್ರ ಅಹಮ್ಮದ್ ಮಸೂದ್. ಅಫ್ಘಾನಿಸ್ತಾನದ ಇತಿಹಾಸದಲ್ಲಿ ದಂತಕತೆ ಎನಿಸಿದ್ದ ಮುಜಾಹಿದ್ದೀನ್ ಕಮಾಂಡರ್ ಅಹಮ್ಮದ್ ಷಾ ಅವರನ್ನು ಸೆಪ್ಟೆಂಬರ್ 11, 2001ರ ದಾಳಿಗೆ ಮೊದಲು ಅಲ್ಖೈದಾ ಉ ಗ್ರ ರು ಹ ತ್ಯೆ ಮಾಡಿದ್ದರು. ಈಗ ಅವರ ಮಗ ಅಹಮ್ಮದ್ ಮಸೂದ್ ತಾಲಿಬಾನಿಗಳ ವಿ ರು ದ್ಧ ಸಿ ಡಿ ದೆ ದ್ದಿದ್ದಾರೆ. ಇದಾಗಲೇ ಅವರು 9 ಸಾವಿರ ಹೋರಾಟಗಾರರನ್ನು ಸಂಘಟಿಸಿದ್ದು, ತಾಲಿಬಾನ್ ವಿ ರು ದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸರ್ಕಾರಿ ಪಡೆಗಳು ಇತರ ಬುಡಕಟ್ಟುಗಳ ಹೋರಾಟಗಾರರು ಈ ಪ್ರದೇಶದಲ್ಲಿ ಹೆಚ್ಚಾಗಿದ್ದಾರೆ.
ಮೊನ್ನೆಯಷ್ಟೇ ತಾಲಿಬಾನ್ ಮುಕ್ತವಾಗಿದ್ದ 3 ಜಿಲ್ಲೆಗಳು
ಅಫ್ಘಾನಿಸ್ತಾನವನ್ನು ತಾಲಿಬಾನ್ ವ ಶ ಕ್ಕೆ ಪಡೆದುಕೊಂಡಾಗಿನಿಂದ ಹಿಂ ಸೆ ಮತ್ತು ಪ್ರತಿಭಟನೆಗಳು ನಿರಂತರವಾಗಿದೆ. ತಾಲಿಬಾನ್ ಕಿ ರು ಕುಳ ವನ್ನು ಸಹಿಸದ ಆಫ್ಘಾನ್ ಜನರು ಇದೀಗ ತಾಲಿಬಾನಿಗಳ ವಿ ರು ದ್ಧ ವೇ ತಿರುಗಿಬಿದ್ದಿದ್ದು, ಕಾಬುಲ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪ್ರತಿಭಟನೆ ಜೋರಾಗಿದೆ.
ಬಾಯಲ್ಲಿ ಶಾಂತಿ ಮಂತ್ರ ಜಪಿಸಿ ಪ್ರ ತೀ ಕಾ ರ ದ ನಡೆ ಅನುಸರಿಸುತ್ತಿರುವ ತಾಲಿಬಾನ್ ತನ್ನ ಕ ರಾ ಳ ಮುಖವನ್ನು ಜಗತ್ತಿನ ಎದುರು ತೆರೆದಿಡುತ್ತಿದೆ. ಅಮೆರಿಕ ಸೇನೆ ಮತ್ತು ನ್ಯಾಟೋ ಪಡೆಗಳಿಗೆ ನೆರವು ನೀಡಿದ ಆಫ್ಘಾನ್ ಜನರನ್ನು ಹುಡುಕಿ ಹುಡುಕಿ ಪ್ರ ತೀ ಕಾ ರ ತೆಗೆದುಕೊಳ್ಳುತ್ತಿರುವ ತಾಲಿಬಾನಿಗಳ ನಡೆಯಿಂದ ಬೇಸತ್ತಿರುವ ಅಲ್ಲಿನ ಜನರ ಅವರ ವಿ ರು ದ್ಧ ವೇ ತಿರುಗಿಬಿದ್ದಿದ್ದಾರೆ.
ತಾಲಿಬಾನ್ ವಿ ರು ದ್ಧ ಸಮರ ಸಾರಿರುವ ಆಫ್ಘಾನ್ನ ಹೋರಾಟಗಾರರು ಕೆಲವು ತಾಲಿಬಾನಿಗಳನ್ನು ಕೊಂ ದು ಅವರ ನಿಯಂತ್ರಣದಲ್ಲಿದ್ದ ಮೂರು ಜಿಲ್ಲೆಗಳನ್ನು ಸ್ವತಂತ್ರಗೊಳಿಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಅನೇಕ ಪ್ರತಿಭಟನೆಗಳು ದಿನನಿತ್ಯ ನಡೆಯುತ್ತಿದ್ದು, ತಾಲಿಬಾನಿಗಳ ನ ರ ಕ ಕೂ ಪ ದಲ್ಲಿ ನ ರ ಳಿ ಸಾ ಯು ವುದಕ್ಕಿಂತ ಹೋ ರಾ ಡಿ ಮಡಿಯುವೇ ಮೇಲೂ ಎಂಬ ತೀರ್ಮಾನಕ್ಕೆ ಬಂದು ಉ ಗ್ರ ರ ವಿ ರು ದ್ಧ ಸ ಮ ರ ಸಾರಿದ್ದಾರೆ.
ಇನ್ನೊಂದೆಡೆ ಅಮೆರಿಕದಿಂದ ಆಫ್ಘಾನ್ನರ ಸ್ಥಳಾಂತರ ಕಾರ್ಯವೂ ನಡೆಯುತ್ತಿದೆ. ಕಾಬುಲ್ನಲ್ಲಿ ಏರ್ಲಿಫ್ಟ್ ಮಾಡುವುದು ಕಷ್ಟಕರ ಎಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, 13 ಸಾವಿರ ಜನರನ್ನು ಸ್ಥಳಾಂತರ ಮಾಡಿರುವುದಾಗಿ ತಿಳಿಸಿದ್ದಾರೆ. ಸದ್ಯ ಕಾಬುಲ್ ನೆಲದಲ್ಲಿ 5,200 ಅಮೆರಿಕ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸ್ಥಳಾಂತರ ಕೆಲಸ ಮುಂದುವರಿದಿದೆ.