ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಲೇ ವೇದಿಕೆಯಲ್ಲೇ ಎನ್‌.ಮಹೇಶ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಸಿಎಂ ಬೊಮ್ಮಾಯಿ ಹಾಗು ಬಿಎಸ್‌ವೈ

in Kannada News/News 535 views

ಬೆಂಗಳೂರು: ರಾಜಕೀಯದಲ್ಲಿ ಯಾರೂ ಶಾಶ್ವತ ಶ ತ್ರು ಗಳೂ ಅಲ್ಲ, ಮಿತ್ರರೂ ಅಲ್ಲ ಎಂಬ ಮಾತಿದೆ. ಅದರಂತೆ ತಮ್ಮ ಸುಧೀರ್ಘ ಹೋ ರಾ ಟ ದ ಉದ್ದಕ್ಕೂ ಬಿಜೆಪಿ ಸಿದ್ದಾಂತಗಳನ್ನು ವಿ ರೋ ಧಿ ಸಿ ಕೊಂಡೇ ಬಂದಿದ್ದ ಕೊಳ್ಳೇಗಾಲದ ಬಿಎಸ್ಪಿ ಉ ಚ್ಚಾ ಟಿ ತ ಶಾಸಕ ಎನ್.ಮಹೇಶ್  ಇಂದು ಅದೇ ಕಮಲಪಾಳಯಕ್ಕೆ ಸೇರಿದ್ದಾರೆ.

Advertisement

ಮೂರು ಬಾರಿ ಸೋ ತ ರೂ ಧೃತಿಗೆಡದೆ ಕಳೆದ ಇಪ್ಪತ್ತು ವರ್ಷಗಳಿಂದ  ತಮ್ಮ ಹೋ ರಾ ಟ ದ ಮೂಲಕವೇ  ಬಿಎಸ್ಪಿಯನ್ನು ಸಂಘಟಿಸಿದ್ದ ಎನ್ ಮಹೇಶ್ ಆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದರು.  ಕೊನೆಗೂ 2018 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಗೆಲವು ಸಾಧಿಸುವ ಮೂಲಕ ವಿಧಾನಸಭೆಯಲ್ಲಿ ಬಿಎಸ್ಪಿ ಖಾತೆ ತೆರೆದಿದ್ದರು.

ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ  ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆ ಮೂಲಕ  ಕಳೆದ ಎರಡು ವರ್ಷಗಳಿಂದ ಉಂಟಾಗಿದ್ದ ರಾಜಕೀಯ ಹೊಯ್ದಾಟಕ್ಕೆ ಕೊನೆ ಹಾಡಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರೂ ಆಗಿದ್ದ ಎನ್ ಮಹೇಶ್,  ಕೆಲ ತಿಂಗಳ ನಂತರ ಬಿಎಸ್ಪಿ ಹೈಕಮಾಂಡ್ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾ ಜೀ ನಾ ಮೆ ಯನ್ನೂ  ನೀಡಿದ್ದರು.  2019 ರ ಜುಲೈ 23 ರಂದು ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡುವ ಸಂದರ್ಭ ಬಂದಾಗ  ಮಹೇಶ್ ಸದನಕ್ಕೆ ಗೈ ರು ಹಾಜರಾಗಿದ್ದರು. ಸದನಕ್ಕೆ ಹಾಜರಾಗಿ ಮೈತ್ರಿ ಸರ್ಕಾರದ ಪರ ಮತ ಚಲಾಯಿಸುವಂತೆ ಸ್ವತಃ ಬಿಎಸ್ಪಿ ಅಧಿನಾಯಕಿ ಮಾಯಾವತಿ ಟ್ವೀಟ್ ಮಾಡಿ ಸೂಚಿಸಿದ್ದರು. ಆದರೆ ಅಂದು ತಾವು ಆಶ್ರಮವೊಂದರಲ್ಲಿ ಧ್ಯಾನದಲ್ಲಿದ್ದ ಕಾರಣ ಹಾಗೂ   ನೆಟ್ ವರ್ಕ್ ಸಮಸ್ಯೆಯಿಂದ ಮಾಯಾವತಿ ಅವರ ಸೂಚನೆ ತಮಗೆ ಗೊತ್ತಾಗಲಿಲ್ಲ ಎಂಬ ಕಾರಣವನ್ನು ಮಹೇಶ್ ನೀಡಿದ್ದರು. ಆ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪರೋಕ್ಷವಾಗಿ ಸಹಕಾರ ನೀಡಿದ್ದರು.

ಈ ಹಿನ್ನಲೆಯಲ್ಲಿ ಹಾಗೂ ಪಕ್ಷದ ಆದೇಶ ಉ ಲ್ಲಂ ಘಿ ಸಿ ದ ಆ ರೋ ಪ ದ ಮೇರೆಗೆ ಅವರನ್ನು ಬಿಎಸ್ಪಿಯಿಂದ ಉ ಚ್ಛಾ ಟಿ ಸ ಲಾ ಗಿ ತ್ತು. ಅಂದಿನಿಂದಲು ಯಡಿಯೂರಪ್ಪ, ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ ಬಿಜೆಪಿ ಸೇರುವ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ,  ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ಪಕ್ಷದವರೊಡನೆ ಒಡನಾಟ ಹೊಂದಿದ್ದೇನೆ ಎಂದಷ್ಟೇ ಹೇಳಿಕೊಂಡು ಬರುತ್ತಿದ್ದರು.

ಮಹೇಶ್ ಬಿಜೆಪಿ ಸೇರ್ಪಡೆಯಾದ ವೇದಿಕೆಯಲ್ಲೇ ಯಡಿಯೂರಪ್ಪ ಹೇಳಿದ ಆ ಒಂದು ಮಾತು ಕೂತೂಹಲ ಮೂಡಿಸಿದೆ.

ನಾಡಿನ ಉದ್ದಗಲಕ್ಕೂ ಪರಿಶಿಷ್ಟರು ಇದ್ದಾರೆ. ಮಹೇಶ್ ಸೇರ್ಪಡೆಯಿಂದ ಎಲ್ಲರೂ ಬಿಜೆಪಿಯತ್ತ ವಾಲುತ್ತಾರೆ. ಪರಿಶಿಷ್ಟರನ್ನ ಬಿಜೆಪಿಗೆ ಸೇರಿಸುವ ಕೆಲಸ ಆಗಬೇಕು. ದ ಲಿ ತ ರ ಪರವಾಗಿಯೂ ನಮ್ಮ ಪಕ್ಷ ಇದೆ ಎಂಬ ಸಂದೇಶ ಹೋಗಬೇಕು ಎಂದ ಯಡಿಯೂರಪ್ಪ, ದ ಲಿ ತ ನಾಯಕ ಬಿಜೆಪಿಗೆ ಸೇರಿದ್ದಾನೆಂಬುದು ಸಿಎಂ ಬೊಮ್ಮಾಯಿಗೆ ಗೊತ್ತಿದೆ. ಅವರು ಇದನ್ನು ಗಮನದಲ್ಲಿ ಇಟ್ಟುಕೊಳ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಮಹೇಶ್​ಗೆ ಸಚಿವ ಸ್ಥಾನ ಕೊಡುವ ಅಥವಾ ಆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಡುವ ಬಗ್ಗೆ ಸುಳಿವು ಕೊಟ್ಟರು.

ಮಹೇಶ್ ಸೇರ್ಪಡೆಯಿಂದ ಬಿಜೆಪಿಗೆ ಆ ಭಾಗದಲ್ಲಿ ಆ ನೆ ಬ ಲ ಬಂದಂತಾಗಿದೆ. ಇಡೀ ರಾಜ್ಯ ಸುತ್ತಿ ಪಕ್ಷ ಕಟ್ಟುತ್ತೇವೆ ಎಂದು ಬಿಎಸ್​ವೈ ಹೇಳಿದರು.

ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಹೇಶ್ ನಮ್ಮ‌ ಆತ್ಮೀಯ‌ ಸ್ನೇಹಿತರು. ಚಳವಳಿ ಮೂಲಕ ಬಂದವರು. ಅವರ ಸಂಘಟನಾ ಶಕ್ತಿ ಅಗಾಧ. ಅವರು ಶಾಸಕರಾಗುವ ಮುನ್ನವೇ ದ ಲಿ ತ ರ ಹೃದಯ ಗೆದ್ದವರು. ಕೊಳ್ಳೇಗಾಲದ ಎಲ್ಲ ಜ ನಾಂ ಗ ಅವರನ್ನು ಆಯ್ಕೆ ಮಾಡಿದೆ. ನಮ್ಮ ಪಕ್ಷದ ಸಿದ್ಧಾಂತ ಮನವರಿಕೆಯಾದ ಮೇಲೆ ಬಿಜೆಪಿಗೆ ಅವರು ಬಂದಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರಿಗೆ ಸಹಕಾರ ಕೊಟ್ಟಿದ್ದರು. ಇವರ ಸೇವೆಯನ್ನು ಪಕ್ಷ ಬಳಸಿಕೊಳ್ಳಲಿದೆ. ಆ ಭಾಗದಲ್ಲಿ ವಿಜಯೇಂದ್ರ ಸುತ್ತಾಡಿದ್ದಾರೆ. ವಿಜಯೇಂದ್ರರ ಶ್ರಮಕ್ಕೆ ಮಹೇಶ್ ಶಕ್ತಿ ಸೇರಿದರೆ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗುತ್ತೆ ಎಂದರು.

Advertisement
Share this on...