ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಬುರ್ಖಾ ಧರಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಹೆಸರು ಇಮ್ರಾನ್. ಇಮ್ರಾನ್ನಿಂದ ಅಕ್ರಮ ಪಿಸ್ತೂಲ್ ಮತ್ತು 1 ಕಾರ್ಟ್ರಿಡ್ಜ್ ವಶಪಡಿಸಿಕೊಳ್ಳಲಾಗಿದೆ. ಪೊಲೀಸರನ್ನು ಕಂಡ ಬುರ್ಖಾಧಾರಿ ಇಮ್ರಾನ್ ವೇಗವಾಗಿ ಓಡಲಾರಂಭಿಸಿದ್ದು, ಪೊಲೀಸರಿಗೆ ಅನುಮಾನ ಬಂದಿತ್ತು. ಆರೋಪಿಯನ್ನು ಅರೆಸ್ಟ್ ಮಾಡಿ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಘಟನೆ ಶುಕ್ರವಾರ (2 ಡಿಸೆಂಬರ್ 2022) ದಂದು ನಡೆದಿದೆ.
ಈ ಘಟನೆ ಅಮ್ರೋಹಾದ ಕೊತ್ವಾಲಿ ನಗರದಲ್ಲಿ ನಡೆದಿದೆ. ಈ ಸಂಬಂಧ ಸ್ವತಃ ಪೊಲೀಸ್ ಸಬ್ಇನ್ಸ್ಪೆಕ್ಟರ್ ಶೇರ್ ಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ಸ್ಪೆಕ್ಟರ್ ಶೇರ್ ಸಿಂಗ್ ಪ್ರಕಾರ, ಘಟನೆಯ ದಿನ ತಾವು ತಮ್ಮ ಸಹ ಕಾನ್ಸ್ಟೆಬಲ್ ಸುಮಿತ್ ಜೊತೆಗೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಮೆಹಬೂಬ್ ಪೆಟ್ರೋಲ್ ಪಂಪ್ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ತಮ್ಮನ್ನು ನೋಡಿ ವೇಗವಾಗಿ ನಡೆಯತೊಡಗಿದ. ಈ ಕ್ರಮ ಪೊಲೀಸರಿಗೆ ಅನುಮಾನ ಮೂಡಿಸಿದೆ. ಪೊಲೀಸರು ಆರೋಪಿಯನ್ನು ನಿಲ್ಲುವಂತೆ ಹೇಳಿದರು, ಆದರೆ ನಿಲ್ಲುವ ಬದಲು ಇಮ್ರಾನ್ ವೇಗವಾಗಿ ಓಡಲು ಪ್ರಾರಂಭಿಸಿದನು. ಕೊನೆಗೆ ಪೊಲೀಸರು ಆತನನ್ನು ಬೆನ್ನಟ್ಟಿದರು.
ಸಬ್ ಇನ್ಸ್ಪೆಕ್ಟರ್ ಶೇರ್ ಸಿಂಗ್ ಪ್ರಕಾರ, ಶಂಕಿತನನ್ನು ಬೆನ್ನಟ್ಟಿ ಕೆಲವೇ ಸಮಯದಲ್ಲಿ ಹಿಡಿಯಲಾಯಿತು. ವಿಚಾರಣೆ ವೇಳೆ ಆರೋಪಿ ತನ್ನನ್ನು ಇಮ್ರಾನ್ ಮತ್ತು ತಂದೆಯ ಹೆಸರನ್ನು ಇರ್ಫಾನ್ ಎಂದು ಹೇಳಿದ್ದಾನೆ. ಇಮ್ರಾನ್ ಅಮ್ರೋಹಾದ ಇಸ್ಲಾಂ ನಗರದ ನಿವಾಸಿಯಾಗಿದ್ದಾನೆ. ಆತನನ್ನು ತಪಾಸಣೆ ನಡೆಸಿದಾಗ ಆತನಿಂದ 315 ಬೋರ್ ಪಿಸ್ತೂಲ್ ಮತ್ತು ಜೀವಂತ ಕಾಟ್ರಿಡ್ಜ್ ಕೂಡ ಪತ್ತೆಯಾಗಿದೆ. ಆರೋಪಿ ಅದನ್ನ ತನ್ನ ಪ್ಯಾಂಟ್ ಒಳಗೆ ಬಚ್ಚಿಟ್ಟಿದ್ದ. ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಮತ್ತು ಕಾಟ್ರಿಡ್ಜ್ಗಳನ್ನು ವಶಪಡಿಸಿಕೊಂಡಿದ್ದಾರೆ.
प्रकरण के सम्बन्ध में थाना अमरोहा नगर पर सुसंगत धाराओं में अभियोग पंजीकृत कर अभियुक्त को गिरफ्तार कर जेल भेजा गया है ।
— Amroha Police (@amrohapolice) December 2, 2022
ಅದೇ ದೂರಿನಲ್ಲಿ ಇಮ್ರಾನ್ ಬಂಧನದ ಸಮಯದಲ್ಲಿ, ಹಾದುಹೋಗುವ ಜನರನ್ನು ಸಾಕ್ಷಿ ಹೇಳಲು ಕೇಳಲಾಯಿತು ಎಂದು ಹೇಳಲಾಗಿದೆ. ಆದರೆ ಜನ ಇದಕ್ಕೆ ಸಾಜ್ಷಿ ಹೇಳಲು ನಿರಾಕರಿಸಿ ಪೊಲೀಸರ ಈ ಬೇಡಿಕೆಯನ್ನು ತಿರಸ್ಕರಿಸಿದರು. ಕೊನೆಗೆ ಇಮ್ರಾನ್ನ್ನ ವಶಕ್ಕೆ ಪಡೆದು ಠಾಣೆಗೆ ಕರೆತರಲಾಯಿತು. ಆತನ ಕುಟುಂಬ ಸದಸ್ಯರಿಗೂ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯ ವಿರುದ್ಧ 3/25 ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಆರೋಪಿ ಇಮ್ರಾನ್ ಒಬ್ಬ ಜೇಬುಗಳ್ಳ. ಜೇಬು ಕತ್ತರಿಸಲು ಬುರ್ಖಾ ಹಾಕಿಕೊಂಡಿದ್ದ. ಬುರ್ಖಾ ಹಾಕಿಕೊಂಡು ಮಹಿಳೆಯರ ನಡುವೆ ನುಗ್ಗಿ ಅವರ ಪರ್ಸ್ ಇತ್ಯಾದಿಗಳನ್ನು ಕಸಿದುಕೊಳ್ಳಲು ಅಥವ ಕದಿಯಲು ಯತ್ನಿಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:
“ಬುರ್ಖಾ ಮಹಿಳೆಯರಿಗೆ ಶಕ್ತಿ ತುಂಬುತ್ತೆ, ಗಂಡಸರೂ ಬುರ್ಖಾ ಹಾಕೋ ಹಾಗಿದ್ದಿದ್ರೆ ನಾನೂ ಬುರ್ಖಾ ಹಾಕ್ತಿದ್ದೆ”: ಎ.ಆರ್.ರೆಹಮಾನ್
ಎ.ಆರ್. ರೆಹಮಾನ್ ಒಮ್ಮೆ ತಮ್ಮ ತಂದೆಯ ಸಾವಿಗೆ ಹಿಂದೂ ದೇವರುಗಳನ್ನು ಹೊಣೆಗಾರರನ್ನಾಗಿಸಿದ್ದರು. ತಂದೆ ಯಾರನ್ನು ಪೂಜಿಸುತ್ತಿದ್ದರೋ ಅದೇ ದೇವರುಗಳಿಂದಲೇ ತಮ್ಮ ತಂದೆ ಪ್ರಾಣ ತೆತ್ತಿದ್ದಾರೆ ಎಂದು ಹೇಳಿದ್ದರು. ಎ.ಆರ್ ರೆಹಮಾನ್ ಅವರ ಕುಟುಂಬವು ಮೊದಲು ಹಿಂದೂವಾಗಿತ್ತು, ಅವರ ತಂದೆಯ ನಿಧನದ ನಂತರ ಅವರು ಕುಟುಂಬವು ಇಸ್ಲಾಂಗೆ ಮತಾಂತರವಾಗಿತ್ತು.
ಬಾಲಿವುಡ್ನ ಖ್ಯಾತ ಗಾಯಕ ಎ.ಆರ್ ರೆಹಮಾನ್ ಅವರ ಪುತ್ರಿ ಖತೀಜಾ ರೆಹಮಾನ್ ಭಾನುವಾರ (ಜನವರಿ 2, 2022) ತನ್ನ ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತನ್ನ ಫೋಟೋವನ್ನು ಹಂಚಿಕೊಂಡ ಅವರು, ಆಡಿಯೊ ಎಂಜಿನಿಯರ್ ಮತ್ತು ಭಾವಿ ಉದ್ಯಮಿ ರಿಯಾಸ್ದಿನ್ ಶೇಖ್ ಮೊಹಮ್ಮದ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದರು. ಸಂಗೀತ ಸಂಯೋಜಕ ಎ.ಆರ್ ರೆಹಮಾನ್ ಅವರು ಖತೀಜಾ ಅವರ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಾಗಿ ಹಂಚಿಕೊಂಡಿದ್ದಾರೆ ಮತ್ತು ಕರೋನಾದಿಂದಾಗಿ ಮಗಳು ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಖತೀಜಾ ಅವರು ಹಂಚಿಕೊಂಡ Instagram ಪೋಸ್ಟ್ ಪ್ರಕಾರ, ಖತೀಜಾ ಮತ್ತು ಆಡಿಯೊ ಎಂಜಿನಿಯರ್ ರಿಯಾಸ್ದಿನ್ ಡಿಸೆಂಬರ್ 29, 2021 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ಖತೀಜಾ, “ಸರ್ವಶಕ್ತನ ಆಶೀರ್ವಾದದೊಂದಿಗೆ ನಾನು ಭಾವಿ ಉದ್ಯಮಿ ಮತ್ತು ವಿಜ್ಕಿಡ್ ಆಡಿಯೊ ಎಂಜಿನಿಯರ್ ರಿಯಾಸ್ದಿನ್ ಶೇಖ್ ಮೊಹಮ್ಮದ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ. ಡಿಸೆಂಬರ್ 29 ರಂದು ನನ್ನ ಹುಟ್ಟುಹಬ್ಬದಂದು ಎರಡೂ ಕುಟುಂಬಗಳು ಮತ್ತು ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥವು ನಡೆಯಿತು” ಎಂದು ಬರೆದಿದ್ದಾರೆ.
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಎ.ಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಅವರಿಗೆ ಮೂವರು ಮಕ್ಕಳಿದ್ದಾರೆ. ಖತೀಜಾ, ರಹೀಮಾ ಮತ್ತು ಎಆರ್ ಅಮೀನ್. ಖತೀಜಾ ತಮಿಳು ಚಲನಚಿತ್ರಗಳ ಹಿನ್ನೆಲೆ ಗಾಯಕಿಯಾಗಿದ್ದು ಅವರು ಅನೇಕ ಚಿತ್ರಗಳಲ್ಲಿ ಹಾಡಿದ್ದಾರೆ.
ಬುರ್ಖಾ ಬಗ್ಗೆಯ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದ ಖತೀಜಾ
ಖತೀಜಾ ಬುರ್ಖಾ ಬಗ್ಗೆ ನೀಡಿದ ಹೇಳಿಕೆಯಿಂದ ವಿವಾದಗಳಲ್ಲಿ ಸಿಲುಕಿದ್ದರು. ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಅವರು ಖತೀಜಾ ಅವರ ಬುರ್ಖಾದಲ್ಲಿರುವ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಟ್ರೋಲ್ ಮಾಡಿದ್ದರು. ಫೆಬ್ರವರಿ 11, 2020 ರಂದು ತಸ್ಲಿಮಾ ಅವರು ಟ್ವೀಟ್ ಮಾಡಿ, “ನಾನು ಎ.ಆರ್ ರೆಹಮಾನ್ ಅವರ ಸಂಗೀತವನ್ನು ಪ್ರೀತಿಸುತ್ತೇನೆ, ಆದರೆ ನಾನು ಅವರ ಮುದ್ದಾದ ಮಗಳನ್ನು ನೋಡಿದಾಗಲೆಲ್ಲಾ ನನಗೆ ಉಸಿರುಗಟ್ಟಿದಂತಾಗುತ್ತದೆ. ‘ಸಾಂಸ್ಕೃತಿಕ ಕುಟುಂಬ’ದಲ್ಲಿ ವಿದ್ಯಾವಂತ ಮಹಿಳೆಯನ್ನೂ ಸುಲಭವಾಗಿ ಬ್ರೈನ್ವಾಶ್ ಮಾಡಬಹುದು ಎಂದು ತಿಳಿದು ನಿರಾಶೆಯಾಯಿತು” ಎಂದಿದ್ದರು.
I absolutely love A R Rahman's music. But whenever i see his dear daughter, i feel suffocated. It is really depressing to learn that even educated women in a cultural family can get brainwashed very easily! pic.twitter.com/73WoX0Q0n9
— taslima nasreen (@taslimanasreen) February 11, 2020
ತಸ್ಲೀಮಾ ನಸ್ರೀನ್ ಅವರ ಟ್ವೀಟ್ಗೆ ಭಾರೀ ಕೋಲಾಹಲ ಉಂಟಾಗಿತ್ತು. ಆಗ ಎ.ಆರ್.ರೆಹಮಾನ್ ಪುತ್ರಿ ಖತೀಜಾ ಅವರು ಬುರ್ಖಾ ಧರಿಸುವುದನ್ನು ಸಮರ್ಥಿಸಿಕೊಂಡಿದ್ದರು ಮತ್ತು ತಾನು ಸ್ವಯಂಪ್ರೇರಣೆಯಿಂದ ಬುರ್ಖಾ ಧರಿಸುತ್ತೇನೆ ಹೊರತು ಯಾರ ಒತ್ತಾಯದಿಂದಾಗಲಿ ಅಥವ ಬ್ರೈನ್ ವಾಶ್ ನಿಂದಾಗಿ ಅಲ್ಲ ಎಂದು ಹೇಳಿದ್ದಾರೆ. ಬುರ್ಖಾ ಹೆಣ್ಣುಮಕ್ಕಳಿಗೆ ಶಕ್ತಿ ತುಂಬುತ್ತದೆ ಎಂದೂ ಅವರು ಹೇಳಿದ್ದರು. ಮಗಳ ಬುರ್ಖಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಎಆರ್ ರೆಹಮಾನ್, ಪುರುಷರೂ ಬುರ್ಖಾ ಧರಿಸುವಂತಿದ್ದರೆ ತಾನೂ ಕೂಡ ಬುರ್ಖಾ ಧರಿಸುತ್ತಿದ್ದೆ. ಇದು ಮಹಿಳೆಯರಿಗೆ ಒಳ್ಳೆಯದು ಎಂದು ಹೇಳಿದ್ದರು.
ಎ.ಆರ್. ರೆಹಮಾನ್ ಒಮ್ಮೆ ತಮ್ಮ ತಂದೆಯ ಸಾವಿಗೆ ಲ ದೇವರುಗಳನ್ನು ಹೊಣೆಗಾರರನ್ನಾಗಿಸಿದ್ದರು. ತಂದೆ ಯಾರನ್ನು ಪೂಜಿಸುತ್ತಿದ್ದರೋ ಅದೇ ದೇವರುಗಳಿಂದಲೇ ತಮ್ಮ ತಂದೆ ಪ್ರಾಣ ತೆತ್ತಿದ್ದಾರೆ ಎಂದು ಹೇಳಿದ್ದರು. ಎ.ಆರ್ ರೆಹಮಾನ್ ಅವರ ಕುಟುಂಬವು ಮೊದಲು ಹಿಂದೂವಾಗಿತ್ತು, ಅವರ ತಂದೆಯ ನಿಧನದ ನಂತರ ಅವರು ಕುಟುಂಬವು ಇಸ್ಲಾಂಗೆ ಮತಾಂತರವಾಗಿತ್ತು. ಎ.ಆರ್.ರೆಹಮಾನ್ ತಂದೆ ಮತ್ತು ಸಹೋದರಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರು ಇಸ್ಲಾಂಗೆ ಮತಾಂತರಗೊಂಡರು. ಎ.ಆರ್.ರೆಹಮಾನ್ ಸಹೋದರಿಯ ಜೀವ ಉಳಿಸುವ ಹೆಸರಿನಲ್ಲಿ ಸೂಫಿಯೊಬ್ಬ ಅವರನ್ನ ಮತಾಂತರಗೊಳಿಸಿದ್ದ. ಆ ನಂತರ ದಿಲೀಪ್ ಕುಮಾರ್ ಅವರಿಂದ ಅಲ್ಲಾಹ್ರಕ್ಖಾ ರೆಹಮಾನ್ ಆದರು.
ತಮಿಳು ಗೀತರಚನೆಕಾರ ಪಿರೈಸೂದನ್ ರವರು ಎ.ಆರ್.ರೆಹಮಾನ್ ಕುಟುಂಬದ ಮತಾಂಧತೆಯನ್ನ ಬಯಲಿಗೆಳೆದಿದ್ದರು. ಜುಲೈ 2020 ರಲ್ಲಿ ಪಿರೈಸುದನ್ ಅವರು ಹಾಡನ್ನು ಬರೆಯಲು ಎಆರ್ ರೆಹಮಾನ್ ಅವರ ಮನೆಗೆ ಹೋದಾಗ, ಎಆರ್ ರೆಹಮಾನ್ ಅವರ ತಾಯಿ ಹಿಂದೂ ಧರ್ಮದ ಚಿಹ್ನೆಗಳಾದ ವಿಭೂತಿ (ಹಣೆಯ ಮೇಲೆ ತಿಲಕ) ಮತ್ತು ಕುಂಕುಮವನ್ನಿಟ್ಟುಕೊಂಡು ಅವರ ಮನೆಗೆ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ಹೇಳಿದ್ದರು.