ಭಾರತವು ವಿಸ್ಮಯ, ರಹಸ್ಯಗಳಿಂದ ಕೂಡಿದ ದೇಶವಾಗಿದೆ. ಇಂತಹದ್ದೇ ಹಲವು ಮಾಹಿತಿಗಳು ಕಾಲ ಕಾಲಕ್ಕೆ ನಮ್ಮ ಅನುಭವಕ್ಕೂ ಬರುತ್ತಿರುತ್ತವೆ, ಆದರೆ ಅವುಗಳ ರಹಸ್ಯವನ್ನ ಭೇದಿಸಲು ಮಾತ್ರ ಸಾಧ್ಯವಾಗದೇ ಉಳಿದ ಹಲವು ನಿದರ್ಶನಗಳೂ ನಮ್ಮಲ್ಲಿವೆ. ಭಾರತದ ಇತಿಹಾಸವು ಅಂತಹ ಅನೇಕ ರಹಸ್ಯಗಳನ್ನ ತನ್ನ ಗರ್ಭದಲ್ಲೇ ಅಡಗಿಸಿಟ್ಟುಕೊಂಡಿದೆ. ಅಂತಹ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ. ಇಂದು ನಾವು ನಿಮಗೆ 52 ಟನ್ ಮ್ಯಾಗ್ನೆಟ್ ಅಳವಡಿಸಲಾಗಿರುವ ದೇವಾಲಯದ (ಸೂರ್ಯ ಮಂದಿರ) ಬಗ್ಗೆ ತಿಳಿಸಲಿದ್ದೇವೆ.
ಹೌದು ಈ ದೇವಾಲಯ ಕೊನಾರ್ಕ್‌ನ ಸೂರ್ಯ ದೇವಾಲಯವಾಗಿದೆ. ಕೊನಾರ್ಕ್ ಸೂರ್ಯ ಮಂದಿರವು ಪೌರಾಣಿಕ ಹಾಗು ನಂಬಿಕೆಗಳಿಂದಾಗಿ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಆದರೆ ಇನ್ನೂ ಅನೇಕ ಕಾರಣಗಳಿವೆ, ಇವೇ ಕಾರಣಗಳಿಂದಾಗಿ ಜನರು ಈ ದೇವಾಲಯವನ್ನು ನೋಡಲು ವಿಶ್ವದ ಮೂಲೆ ಮೂಲೆಯಿಂದ ಇಲ್ಲಿಗೆ ಬರುತ್ತಾರೆ. ಬನ್ನಿ ಈ ದೇವಾಲಯದ ಕೆಲ ರೋಚಕ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ.
ಕೊನಾರ್ಕ್ ದೇವಾಲಯದ ಗರ್ಭಗೃಹದಲ್ಲಿ ಸ್ಥಾಪಿಸಲಾಗಿರುವ ಸೂರ್ಯ ದೇವನ ದರ್ಶನ ಭಾಗ್ಯವನ್ನು ಕೆಲವೇ ಜನರು ಪಡೆಯುತ್ತಾರೆ. ಭಾರತದ ಈ ಐತಿಹಾಸಿಕ ದೇವಾಲಯವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದೆ. ಮೂಲಗಳ ಪ್ರಕಾರ ಈ ದೇವಾಲಯದಲ್ಲಿ 52 ಟನ್ ಬೃಹತ್ ಮ್ಯಾಗ್ನೆಟ್ ಅಳವಡಿಸಲಾಗಿತ್ತು ಎಂದು ಹೇಳಲಾಗುತ್ತದೆ.
ಪುರಾಣಗಳ ಪ್ರಕಾರ, ಸೂರ್ಯ ದೇವಾಲಯದ ಶಿಖರದಲ್ಲಿ 52 ಟನ್ ಕಾಂತೀಯ ಕಲ್ಲನ್ನ ಅಳವಡಿಸಲಾಗಿತ್ತಂತೆ. ಈ ಕಲ್ಲು ಸಮುದ್ರದಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಳವಡಿಸಲಾಗಿತ್ತು. ಈ ದೇವಾಲಯವು ನೂರಾರು ದಶಕಗಳಿಂದ ಸಮುದ್ರದ ತಟದಲ್ಲೇ ಭದ್ರವಾಗಿ ನಿಂತಿದೆ. ದೇವಾಲಯದ ಮುಖ್ಯ ಆಯಸ್ಕಾಂತವನ್ನು ಇತರ ಆಯಸ್ಕಾಂತಗಳೊಂದಿಗೆ ಯಾವ ರೀತಿಯಲ್ಲಿ ಅಲಂಕರಿಸಲಾಗಿತ್ತೆಂದರೆ ದೇವಾಲಯದ ವಿಗ್ರಹ ಗಾಳಿಯಲ್ಲಿ ತೇಲುತ್ತಿರುವಂತೆ ಈ ಹಿಂದೆ ಕಂಡುಬರುತ್ತಿತ್ತು.
ಆದರೆ ದೇವಾಲಯದ ಈ ಶಕ್ತಿಯುತ ಮ್ಯಾಗ್ನೆಟಿಕ್ ವ್ಯವಸ್ಥೆಯು ಆಧುನಿಕ ಕಾಲದ ಆರಂಭದಲ್ಲಿ ಸಮಸ್ಯೆಯಾಗಲು ಪ್ರಾರಂಭಿಸಿತು. ಈ ಮ್ಯಾಗ್ನೇಟ್ ಶಕ್ತಿ ಎಷ್ಟು ವೇಗವಾಗಿತ್ತೆಂದರೆ ಇದರ ಸೆಳೆತದಿಂದಾಗಿ ಬೃಹತ್ ಹಡಗುಗಳು ದೇವಾಲಯದ ಕಡೆಗೆ ಅನಾಮತ್ತಾಗಿ ಸೆಳೆಯಲಾರಂಭಿಸಿದ್ದವು. ಬ್ರಿಟಿಷರ ಕಾಲದಲ್ಲಿ ಬ್ರಿಟಿಷರು ದೇವಾಲಯದ ಒಳಗಿದ್ದ ಆಯಸ್ಕಾಂತವನ್ನು ತೆಗೆದುಹಾಕಿದ್ದರು. ಆದರೆ ಇದನ್ನ ತೆಗೆದುಹಾಕಿದ ಬಳಿಕ ಏನಾಯ್ತು ಅನ್ನೋದು ಮಾತ್ರ ಈಗಲೂ ನಿಗೂಢವಾಗೇ ಉಳಿದಿರುವ ಸಂಗತಿಯಾಗಿದೆ.
ಇಡೀ ದೇವಾಲಯವನ್ನು ಕಾಂತೀಯ ವ್ಯವಸ್ಥೆಗೆ ಅನುಗುಣವಾಗಿ ನಿರ್ಮಿಸಲಾಗಿತ್ತು. ಬ್ರಿಟಿಷರು ದೇವಾಲಯದೊಳಗಿನ ದೈತ್ಯ ಮ್ಯಾಗ್ನೆಟ್ ತೆಗೆದ ಕಾರಣ ದೇವಾಲಯದ ಸಮತೋಲನ ಹದಗೆಟ್ಟಿತು ಎಂದು ಹೇಳಲಾಗುತ್ತದೆ. ಆ ಕಾರಣದಿಂದಾಗಿ ಅನೇಕ ದೇವಾಲಯದ ಗೋಡೆಗಳು ಮತ್ತು ಕಲ್ಲುಗಳು ಬೀಳಲಾರಂಭಿಸಿದವು.
ಭಾರತದ ಪೂರ್ವ ರಾಜ್ಯ ಒಡಿಶಾದ ಪುರಿ ಜಿಲ್ಲೆಯಲ್ಲಿರುವ ಈ ದೇವಾಲಯವನ್ನು ಚಂದ್ರಭಾಗ ನದಿಯ ದಡದಲ್ಲಿ ನಿರ್ಮಿಸಲಾಗಿದೆ. ಈ ಮಂದಿರದ ಪರಿಕಲ್ಪನೆಯನ್ನ ಸೂರ್ಯ ದೇವನ ರಥದ ರೂಪದ ಆಧಾರದ ಮೇಲೆ ನಿರ್ಮಿಸಲಾಗಿದೆ. ರಥದಲ್ಲಿ 12 ಚಕ್ರಗಳನ್ನ ನಿರ್ಮಿಸಲಾಗಿದೆ.
ಇದರ ವಿಶಾಲ ರಚನೆ ನಿಮ್ಮನ್ನ ರೋಮಾಂಚನ ಗೊಳಿಸುವುದರಲ್ಲಿ ಸಂದೇಹವೇ ಇಲ್ಲ. ರಥದ ಮುಂದೆ 7 ಶಕ್ತಿಶಾಲಿ ಕುದುರೆಗಳು ರಥವನ್ನ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬರುತ್ತದೆ. 12 ಜೋಡಿಯ ಈ ಚಕ್ರವು ದಿನದ 24 ಗಂಟೆಗಳನ್ನ ಸೂಚಿಸುತ್ತದೆ. ಅಷ್ಟೇ ಅಲ್ಲದೆ ಇದು ವರ್ಷದ 12 ತಿಂಗಳುಗಳ ಬಗ್ಗೆಯೂ ಸೂಚಿಸುತ್ತದೆ.
– Vinod Hindu Nationalist