ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಆಸ್ಟ್ರೇಲಿಯಾ ಸೆನೆಟರ್‌ ಆದ ಭಾರತ ಮೂಲದ ವರುಣ್‌

in Uncategorized 29 views

ಕ್ಯಾನ್‌ಬೆರಾ: ಬ್ಯಾರಿಸ್ಟರ್ ವರುಣ್ ಘೋಷ್ ಅವರು ಆಸ್ಟ್ರೇಲಿಯಾ ಸಂಸತ್‌ಗೆ ಭಾರತ ಮೂಲದ ಮೊದಲ ಸೆನೆಟರ್‌ ಆಗಿ ಆಯ್ಕೆಯಾಗಿದ್ದಾರೆ. ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ.

Advertisement

ಪಶ್ಚಿಮ ಆಸ್ಟ್ರೇಲಿಯಾದ ವರುಣ್‌ ಘೋಷ್‌ ಅವರನ್ನು ಫೆಡರಲ್‌ ಸಂಸತ್ತಿನ ಸೆನೆಟ್‌ನಲ್ಲಿ ಆಸ್ಟ್ರೇಲಿಯಾ ರಾಜ್ಯವನ್ನು ಪ್ರತಿನಿಧಿಸಲು ವಿಧಾನಸಭೆ ಮತ್ತು ವಿಧಾನ ಪರಿಷತ್‌ ನೇಮಕಗೊಳಿಸಿದ ನಂತರ ನೂತನ ಸೆನೆಟರ್‌ ಆಗಿ ಆಯ್ಕೆ ಮಾಡಲಾಗಿದೆ.

ವರುಣ್ ಘೋಷ್ ಅವರನ್ನು ಸ್ವಾಗತಿಸಿದ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್, ನೀವು ಲೇಬರ್ ಸೆನೆಟ್ ತಂಡದಲ್ಲಿ ಇರುವುದು ಅದ್ಭುತವಾಗಿದೆ ಎಂದು ಅಭಿನಂದಿಸಿದ್ದಾರೆ.

ಪಶ್ಚಿಮ ಆಸ್ಟ್ರೇಲಿಯಾದ ನಮ್ಮ ನೂತನ ಸೆನೆಟರ್ ವರುಣ್ ಘೋಷ್ ಅವರಿಗೆ ಸುಸ್ವಾಗತ. ಸೆನೆಟರ್ ಘೋಷ್ ಅವರು ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಆಸ್ಟ್ರೇಲಿಯಾದ ಸೆನೆಟರ್ ಆಗಿದ್ದಾರೆ ಎಂದು ಎಕ್ಸ್‌ನಲ್ಲಿ ಪೆನ್ನಿ ಪೋಸ್ಟ್‌ ಹಾಕಿದ್ದಾರೆ.

ವರುಣ್ ಘೋಷ್ ಒಬ್ಬ ವಕೀಲ. ಅವರು ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಿಂದ ಕಲೆ ಮತ್ತು ಕಾನೂನಿನಲ್ಲಿ ಪದವಿ ಪಡೆದರು. ಅವರು ಹಿಂದೆ ನ್ಯೂಯಾರ್ಕ್‌ನಲ್ಲಿ ಹಣಕಾಸು ವಕೀಲರಾಗಿ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ವಿಶ್ವ ಬ್ಯಾಂಕ್‌ನ ಸಲಹೆಗಾರರಾಗಿ ಕೆಲಸ ಮಾಡಿದ್ದರು.

Advertisement
Share this on...