ಮಧ್ಯಪ್ರದೇಶದ ಇಂದೋರ್ನಲ್ಲಿ ಲವ್ ಜಿಹಾದ್ ಆರೋಪದ ಮೇಲೆ ಬಜರಂಗದಳದ ಕಾರ್ಯಕರ್ತರು ಯುವಕನೊಬ್ಬನನ್ನು ಹಿಡಿದಿದ್ದಾರೆ. ಬಂಧಿತ ಯುವಕನ ಹೆಸರು ಇರ್ಫಾನ್ ಶೇಖ್. ಸಿಕ್ಕಿಬಿದ್ದಾಗ, ಇರ್ಫಾನ್ ತನ್ನನ್ನು ತಾನು ಹಿಂದೂ ಎಂದು ಹೇಳಿಕೊಂಡಿದ್ದಾನೆ, ಆದರೆ ಸ್ವಲ್ಪ ಸಮಯದಲ್ಲೇ ಆತನ ಗುರುತು ಬಹಿರಂಗವಾಯಿತು. ಇರ್ಫಾನ್ ಶಾಲೆಯೊಂದರ ಹೊರಗೆ ಬರುವ ಮತ್ತು ಹೋಗುವ ಹಿಂದೂ ಹುಡುಗಿಯರ ಮೇಲೆ ಕಣ್ಣಿಟ್ಟಿದ್ದು, ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ. ಇರ್ಫಾನ್ನ ಫೋನ್ನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಫೋಟೋ ಕೂಡ ಪತ್ತೆಯಾಗಿದೆ. ಮೊದಲಿಗೆ ಇರ್ಫಾನ್ ಈ ಹುಡುಗಿಯನ್ನು ತನ್ನ ಸಹೋದರಿ ಎಂದು ಕರೆದನು, ಆದರೆ ನಂತರ ಆಕೆಯನ್ನ ನಿಕಾಹ್ (ಮದುವೆ) ಮಾಡಿಕೊಂಡಿರುವ ಬಗ್ಗೆ ತಿಳಿಸಿದನು. ಬಳಿಕ ಇರ್ಫಾನ್ನ್ನ ಪೊಲೀಸರಿಗೆ ಒಪ್ಪಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರಕರಣವು ರಾಜನಗರ ಪ್ರದೇಶದ್ದಾಗಿದೆ. ಬಜರಂಗದಳದ ಕಾರ್ಯಕರ್ತರು ಕೂಡ ಇರ್ಫಾನ್ಗೆ ಥಳಿಸಿದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಜರಂಗ ದಳದ ಕಾರ್ಯಕರ್ತರು ‘ಫಿರ್ ಲವ್ ಜಿಹಾದ್ ಕರೆಗಾ (ಮತ್ತೆ ಲವ್ ಜಿಹಾದ್ ಮಾಡ್ತೀಯ)?’ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ನಂತರ, ಕ್ಯಾಪ್ ಮತ್ತು ನೀಲಿ ಟಿ-ಶರ್ಟ್ನಲ್ಲಿ ನಿಂತಿರುವ ಇರ್ಫಾನ್ ಶೇಖ್ ಸಿಟಿ ಕಾನ್ವೆಂಟ್ ಶಾಲೆಯ ಬಳಿ ಅಡ್ಡಾಡುತ್ತಿದ್ದುದನ್ನ ಒಪ್ಪಿಕೊಳ್ಳುತ್ತಾನೆ. ಈ ವೇಳೆ ಇರ್ಫಾನ್ ತಾನು ಭೇಟಿಯಾಗಲು ಬಂದಿದ್ದ ಹುಡುಗಿಯ ಹೆಸರನ್ನೂ ಹೇಳಿದ್ದಾನೆ. 1 ವರ್ಷದಿಂದ ಆ ಹುಡುಗಿಯನ್ನು ಭೇಟಿಯಾಗುತ್ತಿದ್ದೇನೆ ಎಂದು ಇರ್ಫಾನ್ ಹೇಳಿದ್ದಾನೆ.
#indoo 17 साल की हिंदु बेटी से पहले ही शादी कर चुके इरफान शेख,अब स्कूल में पढ़ने वाली 16 साल की हिंदू बेटी को दोस्ती के जाल में फंसा रहा था और 8 अन्य लड़कियों के फोटो और मोबाइल में मिले।
बदमाश बजरंग दल के लोग बिचारे मासूम मुस्लिम
युवक को हिंदू बेटियों को धोखा भी नही देने दे रहे। pic.twitter.com/XUuC0mE5HH— Sujeet Swami️ (@shibbu87) December 6, 2022
ಬಜರಂಗದಳದ ಕಾರ್ಯಕರ್ತರು ಇರ್ಫಾನ್ಗೆ ಹುಡುಗಿಯ ವಯಸ್ಸನ್ನು ಕೇಳಿದಾಗ, ಆಕೆಗೆ 17 ವರ್ಷ ಎಂದು ಹೇಳುತ್ತ ಆಕೆ ರಹೀಮ್ ನಗರ ಪ್ರದೇಶದಲ್ಲಿ ವಾಸಿಸುವ ಬಗ್ಗೆ ಮಾಹಿತಿ ನೀಡಿದ್ದಾನೆ. ಆರು ತಿಂಗಳ ಹಿಂದೆ ಬಾಲಕಿಯನ್ನು ಮದುವೆಯಾಗಿದ್ದೆ ಎಂದು ಇರ್ಫಾನ್ ಹೇಳಿದ್ದಾನೆ. ಒಮ್ಮೆ ಹುಡುಗಿಯ ಮನೆಗೂ ಹೋಗಿ ಬಂದಿದ್ದೇನೆ ಎಂದಿದ್ದಾನೆ. ಇರ್ಫಾನ್ ಪ್ರಕಾರ, ಆತ ಬಜರಂಗದಳದ ಕಾರ್ಯಕರ್ತರನ್ನ ನೋಡಿ ಹೆದರಿ ಓಡಲು ಪ್ರಾರಂಭಿಸಿದಡ. ಈ ವೇಳೆ ಕಾಲು ಜಾರಿ ಬಿದ್ದು ಗಾಯಗೊಂಡಿದ್ದೇನೆ ಎಂದು ಹೇಳಿದ್ದಾನೆ.
ಅದೇ ವಿಡಿಯೋದಲ್ಲಿ ಬಜರಂಗದಳದವರು ಇರ್ಫಾನ್ನ ಮೊಬೈಲ್ನಲ್ಲಿ ಇರುವ 8 ರಿಂದ 10 ಹುಡುಗಿಯರ ಫೋಟೋಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ. ಆಗ ಶೇಖ್ ಅವರನ್ನ ತನ್ನ ಸಹೋದರಿಯ ಸ್ನೇಹಿತರು ಎಂದು ಹೇಳಿದ್ದಾನೆ. ತಂಗಿಯ ಸ್ನೇಹಿತರು ತನ್ನೊಂದಿಗೆ ಯಾಕೆ ಫೋಟೊ ತೆಗೆಸಿಕೊಂಡಿದ್ದಾರೆ ಎಂಬುದರ ಬಗ್ಗೆ ಆತನಿಗೆ ಉತ್ತರಿಸಲು ಸಾಧ್ಯವಾಗಿಲ್ಲ. ಇದರಿಂದ ಅನುಮಾನಗೊಂಡ ಬಜರಂಗದಳದ ಕಾರ್ಯಕರ್ತರು ಇರ್ಫಾನ್ ಶೇಖ್ನ್ನ ಥಳಿಸಿ ಪೋಲಿಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:
ಹಿಂದೂ ಯುವತಿಯ ಜೊತೆ ರೇ-ಪ್, ಬಲವಂತದ ಮತಾಂತರ ಹಾಗು ನಿಕಾಹ್ ಮಾಡಿಕೊಂಡ #ಕಫೀಲ್: ಈತನ ಅಮ್ಮಿ, ಭಾಯಿಜಾನ್ ಕೂಡ ಹಿಂದೂ ಯುವತಿಯನ್ನ….
ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ಇಸ್ಲಾಂಗೆ ಮತಾಂತರ ಮತ್ತು ಬಲವಂತದ ನಿಕಾಹ್ (ಮದುವೆ) ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯೊಬ್ಬರು ತಮ್ಮ ಮಗಳನ್ನು ಮುಸ್ಲಿಂ ವ್ಯಕ್ತಿಯೊಬ್ಬ ಬಲವಂತವಾಗಿ ಮದುವೆಯಾಗಿ ಮತಾಂತರ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಆರೋಪಿಯ ಹೆಸರು ಕಫೀಲ್ ಅಹ್ಮದ್, ಆತನ ಮೇಲೆ ಹ-ಲ್ಲೆ, ಅ-ತ್ಯಾ-ಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆಯ ಆರೋಪವೂ ಇದೆ. ಕಫೀಲ್ನ ಬ್ಲ್ಯಾಕ್ಮೇಲಿಂಗ್ನಿಂದಾಗಿ ಸಂತ್ರಸ್ತೆಯ ಅತ್ತಿಗೆಯೂ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಎಫ್ಐಆರ್ ಅನ್ನು ಶನಿವಾರ (ನವೆಂಬರ್ 5, 2022) ದಾಖಲಿಸಲಾಗಿದೆ. ಪ್ರಮುಖ ಆರೋಪಿ ಕಫೀಲ್ ಅಹಮದ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಹೆಸರಿಸಲಾದ ಇತರ ಆರೋಪಿಗಳ ಹುಡುಕಾಟದ ಜೊತೆಗೆ, ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಘಟನೆ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಫೀಲ್ ಅಹ್ಮದ್ ತನ್ನ ಸಂಬಂಧಿಕರ ಸ್ನೇಹಿತನಾಗಿ ಭೇಟಿಯಾಗುತ್ತಿದ್ದ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಮಗಳ ಅಶ್ಲೀಲ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದು, ಮನೆಗೆ ಬಂದ ಇತರ ಸಂಬಂಧಿಕರು ಕೂಡ ಕಫೀಲ್ ಗೆ ಬೆಂಬಲ ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಈ ಅಶ್ಲೀಲ ವೀಡಿಯೊವನ್ನು ಅಸ್ತ್ರವಾಗಿ ಬಳಸಿಕೊಂಡು, ಕಫೀಲ್ ಸಂತ್ರಸ್ತೆ ಮಗಳನ್ನು ಆಗಸ್ಟ್ 31, 2020 ರಂದು ಲಕ್ನೋಗೆ ಕರೆದೊಯ್ದನು. ನಂತರ ಸೆಪ್ಟೆಂಬರ್ 5, 2022 ರಂದು, ಕಫೀಲ್ ಸಂತ್ರಸ್ತೆಯನ್ನ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಅವಳಿಗೆ ಹೊಸ ಇಸ್ಲಾಮಿಕ್ ಹೆಸರನ್ನು ನೀಡಿದನು. ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರಗೊಳಿಸಿದ ನಂತರ ಕಫೀಲ್ ಬಲವಂತವಾಗಿ ನಿಕಾಹ್ (ಮದುವೆ) ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಬಲವಂತವಾಗಿ ಹಲವು ಬಾರಿ ಅ-ತ್ಯಾ-ಚಾ-ರವೆಸಗಿ ಅಸಹಜ ಸಂಬಂಧ ಹೊಂದಲು ಯತ್ನಿಸಿದ್ದಾರೆ. ಆದರೆ ಇದನ್ನ ನಿರಾಕರಿಸಿದ್ದಕ್ಕೆ ನವೆಂಬರ್ 4, 2022 ರಂದು ಯುವತಿಯನ್ನ ನಿರ್ದಯವಾಗಿ ಥಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ಕಫೀಲ್ ಅಹ್ಮದ್, ಆತನ ತಾಯಿ ಜಹಿದಾ ಬೇಗಂ ಮತ್ತು ಕಫೀಲ್ನ ಸಹೋದರ ಫರೀದ್ ಅಹ್ಮದ್ ತನ್ನ ಮಗಳಿಗೆ ಚಿತ್ರಹಿಂಸೆ ನೀಡಲು ಕಫೀಲ್ಗೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ದೂರಿನಲ್ಲಿ ಸಂತ್ರಸ್ತೆಯ ತಾಯಿ ತನ್ನ ಸೊಸೆಯ ಆತ್ಮಹತ್ಯೆಗೆ ಕಫೀಲ್ ಕಾರಣ ಎಂದು ಮತ್ತೊಂದು ದೊಡ್ಡ ಆರೋಪ ಮಾಡಿದ್ದಾರೆ. ದೂರುದಾರ ಮಹಿಳೆಯ ಪ್ರಕಾರ, ಕಫೀಲ್ ತನ್ನ ಮಗಳನ್ನು ಬ್ಲಾಕ್ ಮೇಲ್ ಮಾಡಿ ತನ್ನ ಸೊಸೆ ಸ್ನಾನ ಮಾಡುತ್ತಿರುವ ಅಶ್ಲೀಲ ವಿಡಿಯೋ ಮಾಡಿದ್ದ. ನಂತರ, ಕಫೀಲ್ ಸೊಸೆಯನ್ನೂ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದ, ಆ ಅಶ್ಲೀಲ ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಕಿರುಕುಳದಿಂದ ಬೇಸತ್ತು ದೂರುದಾರ ಮಹಿಳೆಯ ಸೊಸೆ ಅಂತಿಮವಾಗಿ ನವೆಂಬರ್ 5, 2021 ರಂದು ಟೆರೇಸ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ಪೊಲೀಸರು ಕಫೀಲ್ ಅಹ್ಮದ್, ಕಫೀಲ್ ತಾಯಿ ಜಾಹಿದಾ ಮತ್ತು ಕಫೀಲ್ ಸಹೋದರ ಫರೀದ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆಯ ಮನೆಗೆ ಕಫೀಲ್ನನ್ನು ಕರೆತಂದ ಸಂಬಂಧಿ ಡಿಂಪಲ್ ಸಕ್ಸೇನಾ ಅವರನ್ನು ನಾಲ್ಕನೇ ಆರೋಪಿ ಎಂದು ಪೊಲೀಸರು ಕಫೀಲ್ನಿಗೆ ಸಹಾಯ ಮಾಡಿದವಳು ಎಂದು ಹೆಸರಿಸಿದ್ದಾರೆ. ಇವರೆಲ್ಲರ ಮೇಲೆ ಐಪಿಸಿಯ ಸೆಕ್ಷನ್ 376 (2) (ಎನ್), 377, 323, 120-ಬಿ, 306 ಮತ್ತು ‘ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆ’ ಸೆಕ್ಷನ್ 3 ಮತ್ತು 5 (1) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಪ್ರಕರಣದ ಬಗ್ಗೆ ಸಂತ್ರಸ್ತೆ ಯುವತಿ ಮಾತನಾಡಿದ್ದಾರೆ. ಸುಮಾರು 2 ವರ್ಷಗಳಿಂದ ನಿರಂತರ ಕಿರುಕುಳಕ್ಕೆ ಬಲಿಯಾಗಿದ್ದೇನೆ ಎಂದು ಮತಾಂತರಕ್ಕೆ ಒಳಗಾದ ಸಂತ್ರಸ್ತೆ ನಮಗೆ ತಿಳಿಸಿದ್ದಾರೆ. ಇದರೊಂದಿಗೆ, ಆರೋಪಿ ಕಫೀಲ್ ಒಬ್ಬ ಪ್ರಸಿದ್ಧ ನಾಯಕ ಮತ್ತು ಮಾಜಿ ಸಭಾಪತಿಯ ನಿಕಟ ಸಂಬಂಧಿಗಳಿಂದ ಬಂದವನಾಗಿದ್ದು, ಪ್ರಭಾವ ಮತ್ತು ಒತ್ತಡದಿಂದ ಹಣದ ಬಲದಿಂದ ಇಷ್ಟೆಲ್ಲಾ ಆಟವಾಡುತ್ತಿದ್ದಾನೆ ಎಂದು ಯುವತಿ ತಿಳಿಸಿದ್ದಾಳೆ. ಮಾಧ್ಯಮದವರೊಂದಿಗೆ ಮಾತನಾಡುವಾಗ ಸಂತ್ರಸ್ತೆ ತಮ್ಮ ಅಳಲು ತೋಡಿಕೊಂಡರು, ಈ ಘಟನೆಯು ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ಉಂಟುಮಾಡಿದ್ದು ಮಾತ್ರವಲ್ಲದೆ ತನ್ನ ಇಡೀ ಕುಟುಂಬ ಗೌರವವನ್ನು ಕಳೆದುಕೊಂಡಿತು. ಕೊನೆಗೆ ಪೊಲೀಸ್ ಆಡಳಿತದ ವಿರುದ್ಧ ಸಂತ್ರಸ್ತೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸುದ್ದಿ ಮೂಲಗಳ ಮಾಹಿತಿಯ ಪ್ರಕಾರ ಸಂತ್ರಸ್ತ ಯುವತಿ 1 ವರ್ಷದ ಹಿಂದೆಯೇ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಳು. ನಂತರ, ತ್ವರಿತ ಕ್ರಮ ಕೈಗೊಂಡ ಪೊಲೀಸರು ನ್ಯಾಯಾಲಯದಲ್ಲಿ ಕಲಂ 164 ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡರು. ಮಾಹಿತಿಯ ಪ್ರಕಾರ, ಆ ಸಮಯದಲ್ಲಿ ಸಂತ್ರಸ್ತೆ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದಳು, ಇದರಿಂದಾಗಿ ಆರೋಪಿ ಕಫೀಲ್ ಲಾಭ ಪಡೆದಿದ್ದ. ಈ ಬಗ್ಗೆಯೂ ಸಂತ್ರಸ್ತ ಯುವತಿ ಮಾತನಾಡಿದ್ದಾಳೆ. ಈ ಘಟನೆ ಏಪ್ರಿಲ್ 2021 ಆಗಿದೆ ಮತ್ತು ನಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೀವು ರಾಜಿ ಮಾಡಿಕೊಂಡರೆ ಉತ್ತಮ ಎಂದು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು.
ಲಲಿತ್ ಎಂಬ ಸಬ್ ಇನ್ಸ್ಪೆಕ್ಟರ್ ಕೂಡ ತಾನು ಒಪ್ಪದಿದ್ದರೆ ತನ್ನ ಸಹೋದರನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತೇನೆ ಎಂದು ಧಮಕಿ ಹಾಕಿದ್ದರು ಎಂದು ಸಂತ್ರಸ್ತೆ ನಮಗೆ ತಿಳಿಸಿದರು. ಈ ಬಾರಿ ತಾನು ಗಟ್ಟಿ ಧೈರ್ಯ ಮಾಡಿ ಕಫೀಲ್ ಮತ್ತು ಅವನ ಇಡೀ ಕುಟುಂಬವನ್ನು ಶಿಕ್ಷಿಸಲು ಬಯಸುತ್ತೇನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಕಫೀಲ್ನ ಅಪ್ಪ ಕಬೀರ್ ನ ಮೇಲೂ ಇದೆ ಅಪ್ರಾಪ್ತ ಬಾಲಕಿಯ ಮೇಲೆ ಅ-ತ್ಯಾ-ಚಾರ ನಡೆಸಿದ್ದ ಕೇಸ್
ಕಫೀಲ್ನ ಮತಾಂತರ ಆರೋಪದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದಾಗ, ಕಫೀಲ್ ತಂದೆ ಕಬೀರ್ ಕೂಡ ಅಪ್ರಾಪ್ತ ಮಗುವಿನೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪವಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 10, 2021 ರಂದು ಶಹಜಹಾನ್ಪುರ ಜಿಲ್ಲೆಯಲ್ಲಿ ತನ್ನ ಸಹಚರರೊಬ್ಬರೊಂದಿಗೆ 8 ವರ್ಷದ ಮಗುವಿನೊಂದಿಗೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕತೆ ನಡೆಸಿರುವ ಆರೋಪವೂ ಕಬೀರ್ ಮೇಲಿದೆ. ಆಗ ಬಾಲಕಿಯ ಗುದದ್ವಾರದಿಂದ ರ-ಕ್ತ ಬಂದಿತ್ತು ಎಂದು ಸಂತ್ರಸ್ತೆಯ ಕುಟುಂಬದವರು ದೂರಿನಲ್ಲಿ ತಿಳಿಸಿದ್ದರು.
ಈ ದೂರಿನ ಮೇರೆಗೆ ಸದರ್ ಬಜಾರ್ ಪೊಲೀಸರು ಕಬೀರ್ ಅಹಮದ್ ಮತ್ತು ಇನ್ನೊಬ್ಬನ ವಿರುದ್ಧ ಐಪಿಸಿ ಸೆಕ್ಷನ್ 377 ಮತ್ತು ಪೋಕ್ಸೊ ಕಾಯ್ದೆಯಡಿ ಕ್ರಮ ಕೈಗೊಂಡಿದ್ದು, ಆರೋಪಿ ಜೈಲಿಗೂ ಹೋಗಬೇಕಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಕಬೀರ್ ಅಹಮದ್ ಜಾಮೀನಿನ ಮೇಲೆ ಹೊರಗಿದ್ದಾನೆ.
ಕಫೀಲ್ನ ಸಹೋದರನ ಮೇಲೂ ಇದೆ ಹಿಂದೂ ಯುವತಿಯನ್ನ ಅಪಹರಿಸಿದ್ದ ಕೇಸ್
ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತೆ, ಕಫೀಲ್ನ ಸಹೋದರ ಫರೀದ್ 2010 ರಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿದ ಆರೋಪವನ್ನು ಸಹ ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ. 2010 ರ ಆ ಪ್ರಕರಣದಲ್ಲಿ ಕಫೀಲ್ ಮತ್ತು ಅವನ ತಾಯಿಯ ಹೆಸರೂ ಇತ್ತು ಮತ್ತು ಅವರೆಲ್ಲರೂ ಪೊಲೀಸ್ ಕ್ರಮವನ್ನು ಎದುರಿಸಬೇಕಾಯಿತು. ಆರೋಪಿಯ ಕುಟುಂಬ ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಲು ಬಳಸಿಕೊಂಡಿದೆ ಎಂದು ಸಂತ್ರಸ್ತೆ ಹೇಳಿದ್ದಾರೆ.