ಭವ್ಯ ಸೋಮನಾಥ ಮಂದಿರದ ಆಳದಲ್ಲಿ ಪತ್ತೆಯಾಯ್ತು ಮೂರಂತಸ್ತಿನ ನಿಗೂಢ ಬೃಹತ್ ಕಟ್ಟಡ: ಉತ್ಖನನ‌ ಕಾರ್ಯ ಶುರು

in Kannada News/News 227 views

ಸೋಮನಾಥ ಮಹಾದೇವ್ ದೇವಸ್ಥಾನ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ‌. ಈ ಮಂದಿರದ ಕೆಳಗೆ ಒಂದು ಮೂರು ಅಂತಸ್ತಿನ ಕಟ್ಟಡವು ಪತ್ತೆಯಾಗಿರುವುದು ಇದೀಗ ತಜ್ಞರನ್ನೂ ದಂಗುಪಡಿಸಿದೆ. ಐಐಟಿ ಗಾಂಧಿನಗರ ಮತ್ತು ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಈ ಅಚ್ಚರಿಯ ವಿಷಯ ಬಹಿರಂಗವಾಗಿದೆ. 2017 ರಲ್ಲಿ, ಐಐಟಿ ಗಾಂಧಿನಗರ ಮತ್ತು ಪುರಾತತ್ವ ಇಲಾಖೆಯ ಮೂಲಕ ನಡೆಸಿದ ಸಂಶೋಧನೆಯಲ್ಲಿ ದೇಶದ ಕೋಟ್ಯಂತರ ಜನರ ನಂಬಿಕೆಯ ಸಂಕೇತವಾದ ಜ್ಯೋತಿರ್ಲಿಂಗ ಸೋಮನಾಥ ಮಹಾದೇವ್ ಮಂದಿರದ ಸಂಕೀರ್ಣದಲ್ಲಿ ಮೂರು ಅಂತಸ್ತಿನ L ಆಕಾರದ ಕಟ್ಟಡವನ್ನು ನೆಲದಡಿಯಲ್ಲಿ ಅಡಗಿದೆ ಎಂದು ಕಂಡುಬಂದಿದೆ.

Advertisement

4 ಪ್ರದೇಶಗಳಲ್ಲಿ ಜಿಪಿಆರ್ ಇನ್ವೆಸ್ಟಿಗೇಷನ್

2017 ರಲ್ಲಿ ನಡೆದ ಸೋಮನಾಥ ದೇವಾಲಯ ಟ್ರಸ್ಟ್ ಸಭೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಭಾಸ್ ಪಾಟನ್ ಮತ್ತು ಸೋಮನಾಥದಲ್ಲಿ ಪುರಾತತ್ತ್ವ ಶಾಸ್ತ್ರವನ್ನು ಅಧ್ಯಯನ ಮಾಡಲು ಸೂಚಿಸಿದರು. ಆ ಸಮಯದಲ್ಲಿ, ಈ ಸಲಹೆಯ ಸಮಯದಲ್ಲಿ, ಐಐಟಿ ಗಾಂಧಿನಗರ ಮತ್ತು ಪುರಾತತ್ವ ಇಲಾಖೆ ಈ ನಿಗೂಢ ಮಾಹಿತಿಯನ್ನು ಇತಿಹಾಸದ ಪುಟಗಳಿಂದ ಸೋಮನಾಥ ಟ್ರಸ್ಟ್‌ಗೆ ನೀಡಿದೆ. ನಂತರ ಈ ವರದಿಯನ್ನು ಸೋಮನಾಥ ಟ್ರಸ್ಟ್‌ಗೆ ಐಐಟಿ ಗಾಂಧಿನಗರ ಮೂಲಕ ನೀಡಲಾಯಿತು.

ಇಂತಹ ಪರಿಸ್ಥಿತಿಯಲ್ಲಿ ಸೋಮನಾಥ ದೇವಾಲಯದ ಮ್ಯಾನೇಜರ್ ವಿಜಯ್ ಚಾವ್ಡಾ ಅವರು ಹೇಳುವ ಪ್ರಕಾರ ಈ ವರದಿಯನ್ನು ಪಡೆಯುವ ಉದ್ದೇಶ ಸೋಮನಾಥನ ಇತಿಹಾಸವನ್ನು ಪರಿಶೀಲಿಸುವುದು ಎಂದು ಹೇಳುತ್ತಾರೆ. ಈ ವರದಿಯಲ್ಲಿ ಸೋಮನಾಥ ಮತ್ತು ಪ್ರಭಾಸ್ ಪಟಾನ್‌ನ ಒಟ್ಟು 4 ಪ್ರದೇಶಗಳಲ್ಲಿ ಜಿಪಿಆರ್ ಇನ್ವೆಸ್ಟಿಗೇಷನ್ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೌದ್ಧ ಗುಹೆ ಕೂಡ ಇದರಲ್ಲಿ ಸೇರ್ಪಡೆ ಮಾಡಲಾಗಿದೆ

ಇದಲ್ಲದೆ, ಸೋಮನಾಥ ದೇವಾಲಯದ ದಿಗ್ವಿಜಯ್ ದ್ವಾರದಿಂದ ಗುರುತಿಸಲ್ಪಡುವ ಮುಖ್ಯ ದ್ವಾರವಾದ ಗೋಲೋಕ್‌ಧಾಮ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯ ಸುತ್ತಲಿನ ಜಾಗದಲ್ಲಿ ಬೌದ್ಧ ಗುಹೆಯೂ ಸೇರಿಸಲಾಗಿದೆ. ಇದೀಗ 32 ಪುಟಗಳ ವರದಿಯನ್ನು ಸೋಮನಾಥ ಟ್ರಸ್ಟ್‌ಗೆ ನಕ್ಷೆಗಳೊಂದಿಗೆ ನೀಡಲಾಗಿದೆ‌.

ಈ ವರದಿಯ ಪ್ರಕಾರ, ಸೋಮನಾಥದ ಪ್ರಭಾಸ್ ಪಟಾನ್ ನಲ್ಲಿರುವ ಗೀತಾ ದೇವಾಲಯದ ಮುಂಭಾಗದ ಪ್ರದೇಶದಿಂದ ಹಿಡಿದು ಹಿರಣ್ ನದಿಯ ದಡದವರೆಗೆ ನಡೆಸಿದ ಸಮೀಕ್ಷೆಯಲ್ಲಿ ನೆಲದೊಳಗೆ ಸುಸಜ್ಜಿತ ಕಟ್ಟಡವೊಂದಿದೆ ಎಂಬ ಮಾಹಿತಿಯನ್ನ ಬಹಿರಂಗಪಡಿಸಲಾಗಿದೆ. ಇದರೊಂದಿಗೆ ದಿಗ್ವಿಜಯ್ ದ್ವಾರದಿಂದ ಸರ್ದಾರ್ ಪಟೇಲ್ ಪ್ರತಿಮೆಯ ಬಳಿ ಪಕ್ಕಾ ಕನ್ಸ್ಟ್ರಕ್ಷನ್ ಕೂಡ ಸಿಕ್ಕಿತ್ತು ಇದನ್ನ ಅಲ್ಲಿಂದ ತೆರವುಗೊಳಿಸಲಾಗಿದೆ.

ಅಂತಹ ಪರಿಸ್ಥಿತಿಯಲ್ಲಿ, ಈ ಮಂದಿರದ ಬಳಿಯಿರುವ ಭೂಗರ್ಭದಲ್ಲಿ ಮೂರು ಅಂತಸ್ತಿನ ಕಟ್ಟಡವಿದ್ದು, ಇದರಲ್ಲಿ ಮೊದಲ ಮಹಡಿ ಎರಡೂವರೆ ಮೀಟರ್, ಎರಡನೇ ಮಹಡಿ 5 ಮೀಟರ್ ಮತ್ತು ಮೂರನೇ ಮಹಡಿ 7.30 ಮೀಟರ್ ಆಳವಿದೆ ಎಂದು ಈ ವರದಿ ಬಹಿರಂಗಪಡಿಸಿದೆ. ಅದೇ ಸಮಯದಲ್ಲಿ, ಸೋಮನಾಥಕ್ಕೆ ಬರುವ ಯಾತ್ರಿಕರಿಗೆ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ, ಮತ್ತು ಈಗ ಮೂರು ಅಂತಸ್ತುಗಳ ಕಟ್ಟಡದ ಬಳಿಯೇ ಮತ್ತೊಂದು ಕಟ್ಟಡವಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

Advertisement
Share this on...