ಭಾರತದಲ್ಲಿದೆ ಹೆಸರೇ ಇಲ್ಲದ ರೇಲ್ವೇ ಸ್ಟೇಷನ್: ಇದರ ಹಿಂದಿರುವ ಕರಾಳ ಸತ್ಯ ತಿಳಿದರೆ ಬೆಚ್ಚಿಬೀಳ್ತೀರ

in Kannada News/News/ಕನ್ನಡ ಮಾಹಿತಿ 425 views

ನವದೆಹಲಿ: ಹೆಸರೇ ಇಲ್ಲದ ರೈಲು ನಿಲ್ದಾಣ ಭಾರತದಲ್ಲಿದೆ ಎಂದರೆ ಯಾರೂ ಸಹ ನಂಬುವುದಿಲ್ಲ. ಹೆಸರಿಲ್ಲದ ರೈಲು ನಿಲ್ದಾಣವಿರಲು ಹೇಗೆ ಸಾಧ್ಯ? ಹೆಸರಿಲ್ಲದ ರೈಲು ನಿಲ್ದಾಣವನ್ನು ಗುರುತಿಸುವುದಾದರೂ ಹೇಗೆ? ನಾಮಫಲಕ ತುಂಬಾ ಮುಖ್ಯ ಎನ್ನುವವರು ಈ ಸುದ್ದಿ ಓದಿದರೆ ಒಮ್ಮೆ ಅಚ್ಚರಿಗೀಡಾಗುವುದು ಖಂಡಿತ.

Advertisement

ನಿಜವಾಗಿಯೂ ಹೆಸರಿಲ್ಲದ ರೈಲು ನಿಲ್ದಾಣವೊಂದು ದೇಶದಲ್ಲಿದೆ. ವಿಶೇಷವಾಗಿ ಅದು ಹೆಸರಿಲ್ಲದ ರೈಲು ನಿಲ್ದಾಣವೆಂದೇ ಖ್ಯಾತಿಯಾಗಿದೆ. ಪ್ರತಿ ನಿಲ್ದಾಣಕ್ಕೂ ಖಂಡಿತವಾಗಿ ಹೆಸರು ಇರಲೇಬೇಕು. ಆದರೆ, ಈ ರೈಲು ನಿಲ್ದಾಣ ಹೆಸರು ಕಳೆದುಕೊಂಡು ರೋಚಕ ಕತೆಯನ್ನು ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಹೆಸರೇ ಇಲ್ಲದ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಆದ್ರಾ ರೈಲು ವಿಭಾಗದಲ್ಲಿ ಬರುತ್ತದೆ. ಈ ನಿಲ್ದಾಣ ಬಂಕುರಾ-ಮಾಸಗ್ರಾಮ್​ ರೈಲು ಮಾರ್ಗದಲ್ಲಿ ಬರುತ್ತದೆ. ರೈನಾ ಮತ್ತು ರೈನಾಗರ್​ ಎಂಬ ಎರಡು ಗ್ರಾಮಗಳ ನಡುವೆ ಈ ರೈಲು ನಿಲ್ದಾಣ ಬರುತ್ತದೆ.

ಈ ನಿಲ್ದಾಣಕ್ಕೆ ಮೊದಲು ರೈನಗರ್​ ರೈಲು ನಿಲ್ದಾಣ ಎಂದು ಹೆಸರಿಡಲಾಗಿತ್ತು. ಆದರೆ, ರೈನಾ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ತಮ್ಮ ಊರಿನ ಹೆಸರಿಡುವಂತೆ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಎರಡು ಗ್ರಾಮಗಳ ನಡುವೆ ಕಿತ್ತಾಟವು ನಡೆಯುತ್ತಿತ್ತು. ಈ ಸುದ್ದಿ ಕೋಸ್ಟ್​ ರೈಲ್ವೇ ಬೋರ್ಡ್​ಗೆ ತಿಳಿದಿದೆ. ವಿವಾದವನ್ನು ಬಗೆಹರಿಸಲು ಅಧಿಕಾರಿಗಳು ಕೂಡ ಯತ್ನಿಸಿದರೂ, ಯಾವುದೇ ಫಲ ದೊರೆಯಲಿಲ್ಲ.

ಇದಾದ ಬಳಿಕ ಒಂದು ನಿರ್ಧಾರಕ್ಕೆ ಬಂದು ರೈಲ್ವೇ ಬೋರ್ಡ್​ ನಾಮಫಲಕದಿಂದ ರೈನಗರ್​ ಹೆಸರನೇ ತೆಗೆದುಹಾಕಿದರು. ಮತ್ತೆ ಅದಕ್ಕೆ ಮರುನಾಮಕರಣ ಮಾಡಲು ಸಹ ಮುಂದಾಗಲಿಲ್ಲ. ಅಂದಿನಿಂದ ಅದು ಹೆಸರಿಲ್ಲದ ರೈಲು ನಿಲ್ದಾಣವಾಗಿಯೇ ಉಳಿದಿದೆ. ಇದರಿಂದಾಗಿ ಇಲ್ಲಿಗೆ ಬರುವ ಅನೇಕ ಪ್ರಯಾಣಿಕರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ.

ರೈಲು ನಿಲ್ದಾಣ ಹೆಸರಿಲ್ಲದೇ ಪ್ರಯಾಣಿಕರು ಸಹ ಗೊಂದಲಕ್ಕೀಡಾಗಿದ್ದಾರೆ. ಆದರೆ, ಅಧಿಕಾರಿಗಳು ಈಗಲೂ ಸಹ ರೈನಗರ್​ ಹೆಸರಿನಲ್ಲೇ ಟಿಕೆಟ್​ ಕೊಡುತ್ತಿದ್ದಾರೆ. ಆದರೆ, ನಾಮಫಲಕದಲ್ಲಿ ಮಾತ್ರ ಯಾವುದೇ ಹೆಸರಿಲ್ಲ. ಕೇವಲ ಹಳದಿ ಬಣ್ಣದ ಖಾಲಿ ಬೋರ್ಡ್​ ಮಾತ್ರ ಪ್ರಯಾಣಿಕರಿಗೆ ಪ್ರತಿ ಬಾರಿ ದರ್ಶನವಾಗುತ್ತಿದೆ.

ರೈಲಿನ ಬೋಗಿಗಳ ಹಿಂದೆ X ಎಂಬ ಚಿಹ್ನೆ ಬರೆಯುವುದಾದರೂ ಯಾಕೆ? ಏನಿದರ ಹಿಂದಿ‌ನ ಅರ್ಥ?

why is the sign of ‘X’ on the last train of the train: ಬಹುತೇಕ ಭಾರತದ ಎಲ್ಲರೂ ಭಾರತೀಯ ರೈಲಿನಲ್ಲಿ ಪ್ರಯಾಣಿಸಿಯೇ ಇರುತ್ತೀರ ಹಾಗು ಹಲವಾರು ಬಾರಿ ರೈಲುಗಳಲ್ಲಿ ಜನ ಒಂದಿಲ್ಲೊಂದು ಚಿಹ್ನೆ (sign) ಗಳನ್ನ ನೋಡಿಯೇ ಇರುತ್ತೀರ ಹಾಗು ಸಾಮಾನ್ಯ ಜನರಿಗೆ ಅವುಗಳ ಅರ್ಥವೇನು ಅಂತ ಯೋಚಿಸುವ ಹಾಗೆ ಮಾಡಿರುತ್ತದೆ. ಅಂಥದ್ರಲ್ಲಿ ಹಲವಾರು ಬಾರಿ ಪ್ಲ್ಯಾಟಫಾರಂ ನಲ್ಲಿ ನಿಂತ ನಾಗರಿಕರ ಎದುರು ಟ್ರೇನ್ ಪಾಸ್ ಆದಾಗ ರೈಲಿನ ಕೊನೆಯ ಬೋಗಿಯ ಹಿಂದೆ ಒಬ್ಬ ಮನುಷ್ಯ ನಿಂತಿರುತ್ತಾನೆ. ಆದರೆ ಆ ಮನುಷ್ಯ ಯಾಕೆ ನಿಂತಿರುತ್ತಾನೆ ಎಂದು ನೀವು ಯೋಚಿಸಿರುತ್ತೀರ.

ಅಷ್ಟಕ್ಕೂ ರೈಲಿನ ಕೊನೆಯ ಬೋಗಿಯ ಹಿಂದೆ X ಎಂಬ ಚಿಹ್ನೆಯನ್ನ ಯಾಕೆ ಬರೆದಿರಲಾಗುತ್ತೆ? ಈ ಪ್ರಶ್ನೆ ನಿಮ್ಮಲ್ಲೂ ಒಂದಿಲ್ಲೊಂದು ಬಾರಿ ಉದ್ಭವಿಸಿರುತ್ತದೆ. ಬನ್ನಿ ಹಾಗಿದ್ದರೆ ನಿಮ್ಮ ಈ ಪ್ರಶ್ನೆಗೆ ಉತ್ತರವನ್ನ ನಾವು ತಿಳಿಸುತ್ತೇವೆ

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಯಾವ ಪ್ಯಾಸೆಂಜರ್ ಟ್ರೇನ್ ರಾತ್ರಿ ಸಮಯದಲ್ಲಿ ಚಲಿಸುತ್ತೋ ಅದರ ಹಿಂದೆ ಬಿಳಿ ಅಥವ ಹಳದಿ ಬಣ್ಣದ ಈ ಗುರುತು ಇರುತ್ತದೆ. ಈ ಚಿಹ್ನೆ ರೈಲಿನ ಬೋಗಿಯ ಹಿಂದೆ ಹಾಕುವುದು ಅತ್ಯವಶ್ಯಕವಾಗಿದೆ. ಈ ನಿಯಮ ಭಾರತೀಯ ರೇಲ್ವೇ ಕಡೆಯಿಂದ ಮಾಡಲಾಗಿದೆ. ಇದರ ಜೊತೆಗೆ ನೀವು ಹಲವಾರು ಟ್ರೇನ್‌ ಗಳ ಮೇಲೆ LV ಅಂತ ಬರೆದಿರೋದನ್ನೂ ನೋಡಿರುತ್ತೀರ, ಜೊತೆಗೆ ರೈಲಿನ ಹಿಂದೆ ಕೆಂಪು ಬಣ್ಣದ ಲೈಟ್ ಬ್ಲಿಂಕ್ ಕೂಡ ಆಗುತ್ತಿರುತ್ತದೆ.

ವಾಸ್ತವವಾಗಿ, ರೈಲಿನ ಕೊನೆಯ ಬೋಗಿಯಲ್ಲಿ LV ಬರೆಯುವ ಅರ್ಥವೇನೆಂದರೆ ಅದು ಲಾಸ್ಟ್ ವೆಹಿಕಲ್ (Last Vehicle) ಅಂದರೆ ಕೊನೆಯ ವಾಹನ ಎಂಬುದಾಗಿದೆ. ಇದನ್ನು ಯಾವಾಗಲೂ X ಮಾರ್ಕ್‌ನೊಂದಿಗೆ ಬರೆಯಲಾಗುತ್ತದೆ, ಇದರ ಮೂಲಕ ರೇಲ್ವೆ ನೌಕರರಿಗೆ ಇದು ರೈಲಿನ ಕೊನೆಯ ಬೋಗಿ ಎಂಬ ಮಾಹಿತಿಯನ್ನ ನೀಡಲಾಗುತ್ತದೆ. ರೈಲಿನ ಹಿಂಭಾಗದಲ್ಲಿ ಯಾವುದೇ ಗುರುತು ಇಲ್ಲದಿದ್ದರೆ, ರೈಲು ತುರ್ತು ಪರಿಸ್ಥಿತಿಯಲ್ಲಿದೆ ಎಂದು ಅರ್ಥ.

ಮತ್ತೊಂದೆಡೆ, ಅದರೊಂದಿಗೆ ರೈಲಿನ ಹಿಂದೆ ಚಲಿಸುವ ಕೆಂಪು ದೀಪವು ರೈಲ್ವೆ ಟ್ರ್ಯಾಕ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿರುತ್ತದೆ, ಈ ಬೆಳಕು ಆ ಜನರು ಕೆಲಸ ಮಾಡುವ ಸ್ಥಳದಿಂದ ರೈಲು ಹೊರಟುಹೋಗಿದೆ ಎಂದು ಹೇಳುತ್ತದೆ‌. ಇದಲ್ಲದೆ, ಈ ಬೆಳಕು ಕೆಟ್ಟ ವಾತಾವರಣದಲ್ಲೂ ನೌಕರರ ಗಮನವನ್ನೂ ಸೆಳೆಯುತ್ತದೆ!

Advertisement
Share this on...