ನೇಪಾಳದ ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ತನ್ನ ದೇಶದ ಪ್ರಧಾನಿ ಸ್ಥಾನಕ್ಕೆ ಹೀನಾಯವಾಗಿ ರಾಜೀನಾಮೆ ಕೊಟ್ಟ ಬಳಿಕ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆ.ಪಿ.ಶರ್ಮಾ ಓಲಿ ಭಾರತದ ಬಗ್ಗೆ ಆಗಾಗ ಹೇಳಿಕೆಗಳನ್ನು ನೀಡುತ್ತಿರುವುದು ನಿಮಗೆ ಗೊತ್ತೇ ಇದೆ. ಈ ವೇಳೆ ಅವರು ಅಂತಹ ಹೇಳಿಕೆ ನೀಡಿದ್ದು ಅವರ ಈ ಹೇಳಿಕೆಯನ್ನ ಕೇಳಿದರೆ ನಿಮಗೆ ಕೆಂಡದಂತಹ ಕೋಪ ಬರೋದು ಗ್ಯಾರಂಟಿ. ಈ ಸುದ್ದಿಯ ಮೂಲಕ ನೇಪಾಳದ ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ಅವರು ತಮ್ಮ ಹೇಳಿಕೆಯಲ್ಲಿ ಏನು ಹೇಳಿದ್ದಾರೆಂದು ನಾವು ನಿಮಗೆ ಹೇಳುತ್ತೇವೆ. ಹಾಗಾದರೆ ಈತನ ಹೇಳಿಕೆ ಇಷ್ಟು ಚರ್ಚೆಗೆ ಗ್ರಾಸವಾಗಿರೋದ್ಯಾಕೆ? ಬನ್ನಿ ಸಂಪೂರ್ಣ ಸುದ್ದಿಯನ್ನು ವಿವರವಾಗಿ ನಿಮಗೆ ತಿಳಿಸುತ್ತೇವೆ.
ಭಾರತದ ಅನೇಕ ಭಾಗಗಳನ್ನ ನೇಪಾಳದ ನಕ್ಷೆಯಲ್ಲಿ ತೋರಿಸಲಾಗಿತ್ತು
ನೇಪಾಳದ ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ಅಧಿಕಾರದಲ್ಲಿದ್ದಾಗ ಅವರು ನೇಪಾಳದ ನಕ್ಷೆಯನ್ನು ಬಿಡುಗಡೆ ಮಾಡಿದ್ದರು. ಆ ನಕ್ಷೆಯಲ್ಲಿ ಭಾರತದ ಹಲವು ಭಾಗಗಳನ್ನು ಸೇರಿಸಲಾಗಿತ್ತು. ಕೆಪಿ ಶರ್ಮಾ ಸರ್ಕಾರ ನೇಪಾಳದ ನಕ್ಷೆಯನ್ನು ತೋರಿಸಿದ ನಂತರವೇ ಈ ವಿಷಯ ಭಾರತ ಮತ್ತು ನೇಪಾಳದ ಜನರ ನಡುವೆ ಚರ್ಚೆಗೆ ಗ್ರಾಸವಾಗಿತ್ತು. ಭಾರತದ ಕಡೆಯಿಂದಲೂ ಅನೇಕರು ಈ ನಕ್ಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಝಾಡಿಸಿದ್ದರು. ಮತ್ತೊಂದೆಡೆ ಕೆಲವರು ಪಾಕಿಸ್ತಾನ, ಚೀನಾದ ಪಾತ್ರದ ಬಗ್ಗೆಯೂ ಪ್ರಶ್ನಿಸಿದ್ದರು. ಆದರೆ, ಕೆಪಿ ಶರ್ಮಾ ಓಲಿ ನಂತರ ಆ ನಕ್ಷೆಯನ್ನು ಹಿಂತೆಗೆದುಕೊಂಡಿದ್ದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೇಪಾಳದಲ್ಲಿ ಕಾಲಾಪಾನಿ, ಲಿಂಪಿಯಾಧುರಾ, ಲಿಪುಲೇಖ್ ವಿಲೀನ
ಮತ್ತೊಮ್ಮೆ ನಮ್ಮ ಸರ್ಕಾರ ರಚನೆಯಾದರೆ ನಾವು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುದ ಬಳಿಕ ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಎಂದು ನೇಪಾಳದ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆಪಿ ಶರ್ಮಾ ಓಲಿ ಹೇಳಿಕೆ ನೀಡಿದ ನಂತರವೇ ನೇಪಾಳದ ಅನೇಕ ಜನರು ಬೆಂಬಲ ನೀಡುತ್ತಿರುವುದು ಕಂಡುಬಂದಿದೆ. ಮತ್ತೊಂದೆಡೆ, ಭಾರತದ ಅನೇಕ ಜನರು ಈ ಹೇಳಿಕೆಯನ್ನು ಆಧಾರರಹಿತ ಎಂದು ಕರೆಯುತ್ತಿದ್ದಾರೆ. ಇದು ಎಂತಹ ಪ್ರದೆಶಗಳೆಂದರೆ. ಈ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ಮಾತುಕತೆಗಳು ನಡೆದಿವೆ.
ನೇಪಾಳದಲ್ಲಿ ಶ್ರೀರಾಮ ಜನಿಸಿದ್ದ ಎಂದು ಹೇಳಿದ್ದ ಕೆಪಿ ಶರ್ಮಾ ಓಲಿ
ನೇಪಾಳದಲ್ಲಿ ಕೆ.ಪಿ.ಶರ್ಮಾ ಓಲಿ ಅವರ ಸರ್ಕಾರ ಇದ್ದಾಗ ಆಗ ಅವರು ಹೇಳಿಕೆ ನೀಡಿದ್ದರು. ಅದರ ನಂತರ ಭಾರತವು ತಿರುಗೇಟು ನೀಡಿತ್ತು. ಭಗವಾನ್ ಶ್ರೀರಾಮ ಭಾರತದಲ್ಲಿ ಹುಟ್ಟಿಲ್ಲ ನೇಪಾಳದಲ್ಲಿ ಎಂದು ಕೆಪಿ ಶರ್ಮಾ ಓಲಿ ಹೇಳಿಕೆಯಲ್ಲಿ ತಿಳಿಸಿದ್ದರು. ನೇಪಾಳದಲ್ಲಿ ರಾಮಜನ್ಮಭೂಮಿ ಇದೆ ಎಂದೂ ಹೇಳಿದ್ದರು. ಆ ಸ್ಥಳದಲ್ಲಿ ದೇವಸ್ಥಾನವನ್ನೂ ನಿರ್ಮಿಸಲಾಗುವುದು ಎಂದು ಹೇಳಿದ್ದರು. ಆದರೆ, ಈ ಮಾತನ್ನು ಯಾರೂ ನಂಬಲಿಲ್ಲ.