ಲಕ್ನೋ: ಉತ್ತರ ಪ್ರದೇಶದ ಜನಸಂಖ್ಯೆ ದೇಶದ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಈ ಅರ್ಥದಲ್ಲಿ, ಉತ್ತರಪ್ರದೇಶ ದೇಶದ ಅತಿದೊಡ್ಡ ರಾಜ್ಯವಾಗಿರುವ ಕಾರಣ ಇಲ್ಲೇ ಕರೋನಾದ ಅಪಾಯ ಹೆಚ್ಚಿರಬೇಕು ಎಂದು ಹೇಳಲಾಗಿತ್ತು. ಆದರೆ ಈ ಎಲ್ಲ ನಿರೀಕ್ಷೆಗಳನ್ನೂ ಹುಸಿಗೊಳಿಸಿ ಕರೋನಾ ನಿರ್ವಹಣೆಗಾಗಿ ಯೋಗಿ ಸರ್ಕಾರ ಕೈಗೊಂಡ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಶ್ಲಾಘಿಸಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕರೋನಾ ರೋಗಿಗಳನ್ನು ಗುರುತಿಸಲು ರಾಜ್ಯ ಸರ್ಕಾರ 1.41 ಲಕ್ಷಕ್ಕೂ ಹೆಚ್ಚು ತಂಡಗಳನ್ನು ರಚಿಸಿದೆ ಎಂದು WHO ಹೇಳಿದೆ ಮತ್ತು ಉತ್ತರ ಪ್ರದೇಶ ಸರ್ಕಾರದ ಪ್ರಯತ್ನವನ್ನು ಒಂದು ರೀತಿಯಲ್ಲಿ WHO ಪ್ರಶಂಸಿಸಿದೆ.
ಭಾರತದ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ಕರೋನಾ ರೋಗಿಗಳನ್ನು ಗುರುತಿಸಲು ಮನೆ ಮನೆಗೆ ತೆರಳಿ ಟೆಸ್ಟಿಂಗ್ ನಡೆಸುವ ಮೂಲಕ ಆ್ಯಕ್ಟಿವ್ ಕೇಸ್ ಗಳನ್ನ ಪತ್ತೆಹಚ್ಚಲಾಗುತ್ತಿದೆ. ಹಾಗೆ ಗುರುತಿಸಿದ ಸೋಂಕಿತರನ್ನ ಅಲ್ಲಿನ ಸರ್ಕಾರ ಐಸೋಲೇಟ್ ಮಾಡುತ್ತಿದೆ ಹಾಗು ಕಾಂಟ್ಯಾಕ್ಟ್ ಟ್ರೇಸಿಂಗ್ ಕೂಡ ಮಾಡಲಾಗುತ್ತಿದೆ ಎಂದು WHO ಹೇಳಿದೆ.
In #India's 🇮🇳 most populous state Uttar Pradesh, the state gov. has initiated house-to-house active case finding of #COVID19 in rural areas to contain transmission by testing people with symptoms for rapid isolation, disease management & contact tracing
👉https://t.co/pbDi98UByQ pic.twitter.com/7H2yXcU0if— World Health Organization (WHO) (@WHO) May 10, 2021
ಉತ್ತರ ಪ್ರದೇಶದಲ್ಲಿ ರಚಿಸಲಾದ ತಂಡಗಳು 9,7941 ಹಳ್ಳಿಗಳಿಗೆ ಭೇಟಿ ನೀಡಿ ಕರೋನದ ಲಕ್ಷಣಗಳನ್ನು ಕಂಡುಬಂದಿರುವ ಪ್ರತಿಯೊಬ್ಬರ ಟೆಸ್ಟ್ ನಡೆಸಿವೆ ಮತ್ತು ಟೆಸ್ಟಿಂಗ್ ನಲ್ಲಿ ಪಾಸಿಟಿವ್ ಕಂಡುಬಂದವರಿಗೆ ಅವರನ್ನು ಐಸೋಲೇಟ್ ಮಾಡುವ ಜೊತೆಗೆ ಮೆಡಿಸಿನ್ ಕಿಟ್‌ಗಳನ್ನು ನೀಡಲಾಗಿದೆ. ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡಿ ಅವರನ್ನೂ ಟೆಸ್ಟ್ ಮಾಡಲಾಗಿದೆ ಎಂದು WHO ತಿಳಿಸಿದೆ.
ಉತ್ತರಪ್ರದೇಶದಲ್ಲಿ ಸುಮಾರು 23 ಕೋಟಿ ಜನಸಂಖ್ಯೆ ಇದ್ದು, ವ್ಯಾಕ್ಸಿನ್ ನೀಡಲು ಮತ್ತು ಕರೋನದ ಲಕ್ಷಣಗಳು ಕಾಣಿಸಿಕೊಳ್ಳದಿರುವವರಿಗೂ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ರಾಜ್ಯದ ಎಲ್ಲ ಜನರನ್ನು ಕೋರಿದೆ, ಇದು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು WHO ಹೇಳಿದೆ.
ಸೋಮವಾರ, ರಾಜ್ಯದಲ್ಲಿ 21,331 ಹೊಸ ಕರೋನಾ ಪ್ರಕರಣಗಳು ವರದಿಯಾಗಿದ್ದರೆ, 29,709 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 278 ರೋಗಿಗಳು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ರೀತಿಯಾಗಿ ರೋಗಿಗಳ ಸಾವಿನ ಸಂಖ್ಯೆಯೂ ರಾಜ್ಯದಲ್ಲಿ ಕಡಿಮೆಯಾಗಿದೆ.