ನವದೆಹಲಿ: ಭಾರತದ ನೆರೆಯ ರಾಷ್ಟ್ರವಾದ ಪಾಕಿಸ್ತಾನ ಯಾವಾಗಲೂ ಭಾರತದ ವಿರುದ್ಧ ದುಷ್ಕೃತ್ಯಗಳನ್ನು ನಡೆಸುತ್ತಲೇ ಇರುತ್ತದೆ ಮತ್ತು ಭಾರತದ ಹೆಸರನ್ನ ಹಾಳುಮಾಡಲು ಪ್ರಯತ್ನಿಸುತ್ತಲೇ ಇರುತ್ತದೆ. ಆದರೆ ಈಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಹಾಡಿ ಹೊಗಳಿದ್ದಾರೆ. ಅಸಲಿಗೆ ಇಮ್ರಾನ್ ಖಾನ್ ತನ್ನ ಭಾರತ ವಿರೋಧಿ ನಿಲುವಿನಿಂದ ತಿರುಗಿ ಭಾರತೀಯ ಕ್ರಿಕೆಟ್ ತಂಡವನ್ನು ಹೊಗಳಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ಭಾರತ ತನ್ನನ್ನು ತಾನೇ ಬದಲಿಸಿದೆ ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ತನ್ನ ಮೂಲ ಕ್ರಿಕೆಟ್ ಕ್ಷೇತ್ರದಲ್ಲಿ ತನ್ನನ್ನ ತಾನು ಬದಲಿಸಿಕೊಂಡು ಸಾಕಷ್ಟು ಸುಧಾರಣೆಗಳನ್ನ ತಂದಿದೆ. ಇದರಿಂದಾಗಿ ಟೀಂ ಇಂಡಿಯಾ ವಿಶ್ವದ ಅಗ್ರ ತಂಡವಾಗಿ ಮಾರ್ಪಟ್ಟಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಮತ್ತೊಂದೆಡೆ, ಇಮ್ರಾನ್ ಅವರು ಪಾಕಿಸ್ತಾನದ ಕ್ರಿಕೆಟ್ ತಂಡ ಯಾವಾಗಲೂ ಉತ್ತಮ ತಂಡವಾಗಿದ್ದರೂ ಅದು ತನ್ನ ಕ್ರಿಕೆಟಿಂಗ್ ರಚನೆಯನ್ನು ಸುಧಾರಿಸಲಿಲ್ಲ, ಇದರಿಂದಾಗಿ ವಿಶ್ವದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಅಥವಾ ಅದು ಉನ್ನತ ತಂಡವಾಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ಮೀಡಿಯಾಗಳ ಜೊತೆ ಮಾತನಾಡುತ್ತ ಅವರು, “ಈಗ ನೀವು ಭಾರತವನ್ನ ನೋಡಿ, ಅವರ ಟೀಂ ವಿಶ್ವದ ಟಾಪ್ ಟೀಂ ಆಗಿದೆ ಯಾಕಂದ್ರೆ ತಮ್ಮ ಕ್ಷೇತ್ರದಲ್ಲಿ ಭಾರೀ ಸುಧಾರಣೆ ತಂದಿದೆ. ಆದರೆ ನಮ್ಮಲ್ಲೂ ಅನೇಕ ಪ್ರತಿಭೆಗಳಿವೆ. ಒಂದು ರಚನೆಯಲ್ಲಿ ಕೆಲಸ ಮಾಡಲು ಮತ್ತು ಹೊಸ ಪ್ರತಿಭೆಗಳನ್ನು ರೂಪಿಸಲು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ನಮ್ಮ ತಂಡವು ವಿಶ್ವದ ಅಗ್ರ ತಂಡವಾಗಲಿದೆ ಎಂಬ ವಿಶ್ವಾಸವಿದೆ” ಎಂದರು.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಸಂರಕ್ಷಕ (ಚೀಫ್ ಗಾರ್ಡಿಯನ್) ಇಮ್ರಾನ್ ಖಾನ್ ಮಾತನಾಡುತ್ತ, ತನ್ನ ಬ್ಯುಸಿ ಶೆಡ್ಯೂಲ್ ಗಳ ಕಾರಣದಿಂದಾಗಿ ಆಟದ ಕಡೆ ಹೆಚ್ಚು ಸಮಯ ಕೊಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು. ವಿಶೇಷವೆಂದರೆ, ಇಮ್ರಾನ್ ಖಾನ್ ತಮ್ಮ ಹೇಳಿಕೆಗಳಿಂದ ಭಾರತವನ್ನು ಆಗಾಗ್ಗೆ ಖಂಡಿಸುತ್ತಾರೆ, ಆದರೆ ಈಗ ಭಾರತೀಯ ಕ್ರಿಕೆಟ್ ತಂಡವನ್ನ ಅವರು ಹೊಗಳಿರುವುದು ಚರ್ಚೆಗೆ ಗ್ರಾಸವಾಗಿದೆ. ಅದೇ ಸಮಯದಲ್ಲಿ, ಕರೋನಾದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನವು ಭಾರತದಿಂದ ಲಸಿಕೆ ನಿರೀಕ್ಷಿಸುತ್ತಿದೆ, ಅದೇ ಕಾರಣದಿಂದಾಗಿ ಭಾರತವನ್ನ ಹೊಗಳುವಂತಹ ಮಾತುಗಳನ್ನ ಇಮ್ರಾನ್ ಖಾನ್ ಮಾತನಾಡುತ್ತಿದ್ದಾನೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಜನ ಟ್ರೋಲ್ ಮಾಡುತ್ತಿದ್ದಾರೆ.
ಮೋದಿ ಯಾಕೆ ಗಡ್ಡ ತೆಗೆಯುತ್ತಿಲ್ಲ? ಪಾಕ್ ಜ್ಯೋತಿಷಿ ಹೇಳಿದ್ದೇನು?
ಪ್ರಧಾನಿ ಮೋದಿ ಬಗ್ಗೆ ಪಾಕಿಸ್ತಾನದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ, ಪಾಕಿಸ್ತಾನದ ಜ್ಯೋತಿಷಿಯೊಬ್ಬರು ಭಾರತದ ಪ್ರಧಾನ ಮಂತ್ರಿಯ ಬಗ್ಗೆ ವಿಚಿತ್ರ ಮಾತುಗಳನ್ನ ಮತ್ತು ತೀರ್ಮಾನಗಳನ್ನು ನೀಡುವುದನ್ನು ಕಾಣಬಹುದಾಗಿದೆ. ಈ ಕಾರ್ಯಕ್ರಮವನ್ನು ಕಳೆದ ವರ್ಷ ಡಿಸೆಂಬರ್ 31 ರಂದು ನಿಯೋ ಟಿವಿ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಯಿತು, ಆದರೆ ಈಗ ಅದು ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ಜ್ಯೋತಿಷಿ ಮಾತನಾಡುತ್ತ, “ಮೋದಿಯವರು 2019 ರ ನವೆಂಬರ್‌ನಿಂದ ಕೆಟ್ಟ ಸಮಯವನ್ನು ಅನುಭವಿಸುತ್ತಿದ್ದಾರೆ. ನರೇಂದ್ರ ಮೋದಿಯ ಮುಖ್ಯ ಜ್ಯೋತಿಷಿಗಳಲ್ಲಿ ಒಬ್ಬರು (ಬಿಜೆಪಿಯ) ಸ್ಥಾಪಕರು, ಅವರ ಹೆಸರು ಮುರುಳಿ ಮನೋಹರ್ ಜೋಶಿ. ಅವರೇ ನರೇಂದ್ರ ಮೋದಿಯವರಿಗೆ ಸಲಹೆ ನೀಡುತ್ತಾರೆ” ಎಂದಿದ್ದಾರೆ. ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ, ಮುರುಳಿ ಮನೋಹರ್ ಜೋಶಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಹೊರತು ಜ್ಯೋತಿಷಿಯಲ್ಲ. ಆದರೆ, ಪಾಕ್‌ನ ಈ ವ್ಯಕ್ತಿ ಇಲ್ಲಿಗೇ ನಿಲ್ಲಲಿಲ್ಲ. ಪ್ರಧಾನಿ ಮೋದಿಯವರ ಬಗ್ಗೆ ಅವರು ತಮ್ಮ ಕಥೆಯನ್ನು ಮುಂದುವರಿಸಿದರು.
ಅವರು ಮುಂದೆ ಮಾತನಾಡುತ್ತ, “ಭಾರತೀಯ ಪ್ರಧಾನಿ ಉದ್ದೇಶಪೂರ್ವಕವಾಗಿ ತನ್ನ ಗಡ್ಡವನ್ನು ತೆಗೆಯುತ್ತಿಲ್ಲ, ಕೂದಲನ್ನು ಕತ್ತರಿಸುತ್ತಿಲ್ಲ ಮತ್ತು ಅವರು ‘ಅಖಂಡ್ ಭಾರತ್’ ಕನಸನ್ನು ಸಾಧಿಸಲು ಸಕ್ರಿಯವಾಗಿ ‘ಹವನ’ ಮಾಡುತ್ತಿದ್ದಾರೆ. ಅಲ್ಲದೆ, ಮೋದಿ ಅವರ ಮಾರ್ಗದರ್ಶಕರು (ಮುರುಳಿ ಮನೋಹರ್ ಜೋಶಿ) ಮೋದಿ ನಂ.1 ನಾಯಕ ಮತ್ತು ಕಲ್ಕಿಯ ಅವತಾರ ಎಂದು ಹೇಳಿದ್ದಾರೆ” ಎಂದರು. ಭಾರತದ ಯೋಜನೆಗಳ ಬಗ್ಗೆ ಅಸಮಾಧಾನಗೊಂಡ ಪಾಕ್ ಜ್ಯೋತಿಷಿ, ‘ಅಖಂಡ್ ಭಾರತ್’ ರಚಿಸುವ ಯೋಜನೆಗಳಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಬಾರದು ಎಂದು ಹೇಳಿದರು.
ಅದೇ ಸಮಯದಲ್ಲಿ, ಪಾಕಿಸ್ತಾನದ ನಿರೂಪಕಿ ಮತ್ತು ಪತ್ರಕರ್ತೆ ನಾಯ್ಲಾ ಇನಾಯತ್ ಅವರು ಹಂಚಿಕೊಂಡ ಮತ್ತೊಂದು ವಿಡಿಯೋದಲ್ಲಿ, “ಪ್ರಧಾನಿ ಮೋದಿ ಅವರ ಗಡ್ಡ ಮತ್ತು ಮೀಸೆ ಬೆಳೆದಿರುವುದನ್ನು ನೀವು ನೋಡಿರಬೇಕು. ಇದರ ಉದ್ದೇಶ ಮರಾಠಾ ನಾಯಕ (ಛತ್ರಪತಿ ಶಿವಾಜಿ ಮಹಾರಾಜ್) ಗೆ ಹೋಲುತ್ತದೆ. ಅದೇ ಆಡಳಿತಗಾರ ಔರಂಗಜೇಬನ ವಿರುದ್ಧ ಹೋರಾಡಿದ್ದ. ಮೋದಿ ಶಿವಾಜಿಯನ್ನ ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ. ತನ್ನ ಇಮೇಜ್ ಸೃಷ್ಟಿಸೋಕೆ ಅವರು ಏನು ಬೇಕಾದರೂ ಮಾಡಬಹುದು ಮತ್ತು ಅದು ನಿರಂತರ ಪ್ರಕ್ರಿಯೆ” ಎಂದಿದ್ದಾರೆ.
Modi ki darhi mein strategy.. pic.twitter.com/bcOrTKZUkt
— Naila Inayat (@nailainayat) February 12, 2021
ವಿಶೇಷವೆಂದರೆ, ನಾವು ಈ ವಿಷಯದಲ್ಲಿ ಭಾರತದ ಬಗ್ಗೆ ಮಾತನಾಡುವುದಾದರೆ, ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಮತ್ತು ಪತ್ರಕರ್ತೆ ಬರ್ಖಾ ದತ್ ಕೂಡ ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರಧಾನಿ ಮೋದಿಯವರ ಗಡ್ಡದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು.
ದಿನದಿಂದ ದಿನಕ್ಕೆ ಪಿಎಂ ಮೋದಿಯವರ ಗಡ್ಡ ಮತ್ತು ಮೀಸೆ ಬೆಳೆಯುತ್ತಿದೆ, ಅವರು ಹೊಸ ಭಾರತದ ‘ರಿಷಿ ರಾಜ್’ ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶಶಿ ತರೂರ್ ಹೇಳಿದ್ದರು. ಕೇಸರಿ ನಿಲುವಂಗಿಯನ್ನು ಧರಿಸಿರುವ ರಾಜರ್ಷಿಯ ಪಾತ್ರದಲ್ಲಿ ಪ್ರಧಾನಿ ತಮ್ಮನ್ನು ಪ್ರದರ್ಶಿಸಲು ಬಯಸುತ್ತಾರೆ ಎಂದಿದ್ದರು.
ಇದರ ನಂತರ ಬರ್ಖಾ ದತ್ ಇದನ್ನು ‘ಆಧುನಿಕ ರಾಜಕೀಯ’ ಎಂದೂ ಕರೆದಿದ್ದಳು. ನೀವು ಏನು ತೋರಿಸಲು ಹೊರಟಿದ್ದೀರಿ?, ನೀವು ಯಾವ ಸಂದೇಶವನ್ನು ನೀಡಬೇಕು ಮತ್ತು ಯಾವ ಚಿತ್ರವನ್ನು ಪ್ರದರ್ಶಿಸಲು ಬಯಸುತ್ತೀರಿ – ಇವೆಲ್ಲವೂ ಆಧುನಿಕ ರಾಜಕಾರಣದ ಒಂದು ಭಾಗವಾಗಿ ಮಾರ್ಪಟ್ಟಿವೆ ಎಂದು ಹೇಳಿದ್ದಳು. ಇದರ ನಂತರ, ಪ್ರಧಾನಿ ಮೋದಿಯವರು ನಿರ್ದಿಷ್ಟ ಮತದ ಟೋಪಿ ಏಕೆ ಧರಿಸುವುದಿಲ್ಲ ಎಂಬ ಬಗ್ಗೆ ಶಶಿ ತರೂರ್ ಪ್ರಶ್ನೆ ಮಾಡಿದ್ದರು.. ಅವರು ಪ್ರತಿ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಆಯಾ ಧರ್ಮದ ಟೋಪಿ ಹಾಕಿಕೊಂಡಿದ್ದಾರೆ ಆದರೆ ಇಸ್ಲಾಮಿಕ್ ಟೋಪಿ ಧರಿಸಿಲ್ಲ ಎಂದಿದ್ದರು.
‘ರಿಷಿರಾಜ್’ ಇಮೇಜ್‌ನ್ನ ತೋರಿಸಿಕೊಳ್ಳಲು ಕಾರಣವೇನೆಂದರೆ, ಅವರು ತಮ್ಮನ್ನ ತಾನು ಪವಿತ್ರ ವ್ಯಕ್ತಿಯೆಂದು ತೋರಿಸುವುದಾಗಿದೆ, ಅವನು ರಾಜನೂ ಹೌದು. ಪಿಎಂ ಮೋದಿ ಅವರು ತಮ್ಮನ್ನ ತಾವು ಋಷಿ ಹಾಗು ಯೋಧನೆಂದೂ ಜನರು ಅರ್ಥ ಮಾಡಿಕೊಳ್ಳಬೇಕೆಂದು ಬಯಸುತ್ತಾರೆ ಎಂದು ಶಶಿ ತರೂರ್ ಹೇಳಿದ್ದರು. ಅವರ ಮಾತನ್ನು ಬರ್ಖಾ ದತ್ ಕೂಡ ಬೆಂಬಲಿಸಿದ್ದಳು.