ಕಾಬೂಲ್: ಆಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವುದನ್ನು ತಾಲಿಬಾನಿಗಳು ಇಷ್ಟಪಡುತ್ತಿಲ್ಲ ಎಂದು ವರದಿಯಾಗಿದೆ. ಭಾರತೀಯ ಪ್ರಜೆಗಳಿಗೆ ಆಫ್ಘಾನಿಸ್ತಾನದಲ್ಲಿ ಸೂಕ್ತ ಭ ದ್ರ ತೆ ಒದಗಿಸಲಾಗುವುದು. ಅವರಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ ಎಂದು ತಾಲಿಬಾನ್‍ನ ರಾಜಕೀಯ ಘಟಕದ ವಕ್ತಾರ ಎಂ.ನಹೀಮ್ ವಿಡಿಯೋ ಸಂದೇಶದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈವರೆಗೂ ಎರಡು ವಿಮಾನಗಳಲ್ಲಿ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ. ಮೊದಲ ಹಂತದಲ್ಲಿ ರಾಯಬಾರಿ ರುದ್ರೇಂದ್ರ ಟೆಂಡನ್ ಸೇರಿದಂತೆ 120 ಮಂದಿಯನ್ನು ಭಾರತೀಯ ವಾಯು ಸೇ ನೆ ಗೆ ಸೇರಿದ ಸಿ-17 ವಿಮಾನದ ಮೂಲಕ ಗುಜರಾತ್‍ಗೆ ಕರೆತರಲಾಯಿತು. ಜತೆಗೆ ಸಿ-130ಜೆ ವಿಮಾನದ ಮೂಲಕ ಮತ್ತಷ್ಟು ಭಾರತೀಯರನ್ನು ದೆಹಲಿಗೆ ಕಳುಹಿಸಲಾಗಿದೆ.
ಸೋಮವಾರ 45 ಮಂದಿಯನ್ನು ಸ್ಥಳಾಂತರಿಸಲು ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ತಾಲಿಬಾನಿಗಳು ಅವರನ್ನು ತ ಡೆ ದಿ ದ್ದು, ಅವರ ವ್ಯಕ್ತಿಗತ ವಸ್ತುಗಳನ್ನು ವ ಶ ಪ ಡಿ ಸಿ ಕೊಂಡಿದ್ದಾರೆ. ತಾಲಿಬಾನ್ ಹಿ ಡಿ ತ ದ ಲ್ಲಿರುವ ಆಫ್ಘನ್ ಸರ್ಕಾರ ಮುಂದಿನ ದಿನಗಳಲ್ಲಿ ಭಾರತದ ಜತೆಯಾಗಿ ಕೆಲಸ ಮಾಡಲು ಬಯಸುತ್ತಿದೆ ಎಂದು ಕರ್ತಾರ್ ನಲ್ಲಿರುವ ತಾಲಿಬಾನ್‍ನ ಕೇಂದ್ರ ಕಚೇರಿ ಹೇಳಿದೆ.
ಹೀಗಾಗಿ ಭಾರತೀಯರಿಗೆ ನಾವು ರಕ್ಷಣೆ ನೀಡುತ್ತೇವೆ. ಯಾವುದೇ ಕಾರಣಕ್ಕೂ ದೆಹಲಿಗೆ ಸ್ಥಳಾಂತರಿಸುವುದು ಬೇಡ ಎಂದು ತಾಲಿಬಾನ್‍ಗಳು ಸಂದೇಶ ರವಾನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹೀಗಾಗಿ 200 ಮಂದಿ ಸಿ ಖ್ ಮತ್ತು ಹಿಂ ದು ಸಮುದಾಯದವರು ಹಾಗೂ ಭಾರತೀಯ ರಾಯಬಾರಿ ಕಚೇರಿಯ ರಾಜತಾಂತ್ರಿಕ ಸಿಬ್ಬಂದಿ ಆಫ್ಘಾನಿಸ್ತಾನದಲ್ಲೇ ಸಿ ಲು ಕಿ ದ್ದಾ ರೆ.
ರಾಯಬಾರಿ ಕಚೇರಿಯ ಮೇ ಲೆ ಲಷ್ಕರ್ ಅಥವ ಜೈಷ್ ಸಂಘಟನೆಯ ಉ ಗ್ರ ರು ದಾ ಳಿ ಮಾಡುವ ಆ ತಂ ಕ ಇರುವುದರಿಂದ ಗುರುದ್ವಾರದಲ್ಲಿ ಪುನರ್ ವಸತಿ ಕಲ್ಪಿಸಲಾಗಿದೆ.
ಈ ಮಧ್ಯೆ ಭಾರತೀಯ ರಾಯಭಾರಿ ಕಚೇರಿ ಮೇ ಲೆ ತಾಲಿಬಾನ್ ದಾ ಳಿ?
ಅಫ್ಘಾನಿಸ್ತಾನವನ್ನು ಹಿ ಡಿ ತ ಕ್ಕೆ ಪಡೆದಿರುವ ತಾಲಿಬಾನ್ ಭ ಯೋ ತ್ಪಾ ದ ಕ ರ ಅ ಟ್ಟ ಹಾ ಸ ನಿಂತಿಲ್ಲ. ಈಗ ಭಾರತೀಯ ರಾಯಭಾರ ಕಚೇರಿಗೆ ದಾ ಳಿ ಮಾಡಿ ದಾಖಲೆಗಳನ್ನು ಹುಡುಕಾಡಿದ್ದಾರೆ ಎಂದು ವರದಿಯಾಗಿದೆ.
ಹೇರತ್ ಮತ್ತು ಕಂದಹಾರ್ ನಲ್ಲಿರುವ ಭಾರತದ ರಾಯಭಾರ ಕಚೇರಿಗೆ ದಾ ಳಿ ಮಾಡಿರುವ ತಾಲಿಬಾನ್ ಉ ಗ್ರ ರು ದಾಖಲೆಗಳಿಗಾಗಿ ಹುಡುಕಾಡಿದ್ದಾರೆ ಮತ್ತು ರಾಯಭಾರ ಕಚೇರಿಯಲ್ಲಿದ್ದ ವಾಹನಗಳನ್ನು ಕೊಂಡೊಯ್ದಿದ್ದಾರೆ. ಕಾಬೂಲ್ ಮತ್ತು ಜಲಾಲಬಾದ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇ ಲೆ ದಾ ಳಿ ನಡೆದಿದ್ಯಾ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ.
ಭ ಯೋ ತ್ಪಾ ದ ಕ ಗುಂಪಿನ ಮುಖ್ಯಸ್ಥ ಮತ್ತು ತಾಲಿಬಾನ್‍ನ ಉಪನಾಯಕ ಸಿರಾಜುದ್ದೀನ್ ಹಕ್ಕಾನಿಯ ಸಹೋದರ ಅನಸ್ ಹಕ್ಕಾನಿ ನೇತೃತ್ವದ ಹಕ್ಕಾನಿ ನೆಟ್‍ವರ್ಕ್‍ನ ಸುಮಾರು 6 ಸಾವಿರ ಕಾರ್ಯಕರ್ತರು ರಾಜಧಾನಿಯಾದ ಕಾಬೂಲ್ ಮೇ ಲೆ ಹಿ ಡಿ ತ ಸಾಧಿಸಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ಗು ಪ್ತ ಚ ರ ಸಂಸ್ಥೆ ಎನ್‍ಡಿಎಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ ಮನೆ ಮನೆಯಲ್ಲೂ ತಾಲಿಬಾನ್ ಬಂ ದೂ ಕು ಧಾ ರಿ ಗಳು ಹುಡುಕಾಡುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಇನ್ನೂ 450 ಭಾರತೀಯರು ಸಿ ಲು ಕಿ ಕೊಂ ಡಿ ದ್ದು ಅವರನ್ನು ಭಾರತಕ್ಕೆ ವಾಪಸ್ ಕರೆತರುವುದೇ ಈಗ ಸರ್ಕಾರಕ್ಕೆ ಸವಾಲಾಗಿದೆ. ಅಮೆರಿಕ ಮತ್ತು ಇತರೆ ರಾಯಭಾರ ಕಚೇರಿಗಳ ಮೂಲಕ ಭಾರತೀಯರನ್ನು ಕರೆತರುವ ಪ್ರಯತ್ನವನ್ನು ವಿದೇಶಾಂಗ ಸಚಿವಾಲಯ ಮಾಡುತ್ತಿದೆ.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವ ಶ ಪ ಡಿ ಸಿ ಕೊಂ ಡು ನಾಲ್ಕು ದಿನವಾದ್ರೂ ಇನ್ನೂ ಅಲ್ಲಿ ಸರ್ಕಾರ ರಚನೆ ಆಗಿಲ್ಲ. ಅಲ್ಲಿ ಸಿ ಲು ಕಿ ಕೊಂ ಡಿ ರು ವ ಭಾರತೀಯರನ್ನು ವಿಮಾನ ನಿಲ್ದಾಣಕ್ಕೆ ಕರೆತರುವುದೇ ಹರಸಾಹಸವಾಗಿದೆ. ಪ್ರತಿ ಚೆಕ್‍ಪೋಸ್ಟ್‍ಗಳಲ್ಲೂ ಬಂ ದೂ ಕು ಧಾ ರಿ ತಾಲಿಬಾನಿಗಳು ತಪಾಸಣೆ ಮಾಡ್ತಿರುವ ಕಾರಣ ತಾಲಿಬಾನಿಗಳ ಅಧಿಕೃತ ಒಪ್ಪಿಗೆ ಸಿಗದ ಹೊರತು ಜೀ ವ ಭ ಯ ದಿಂದಾಗಿ ಕಾಬೂಲ್‍ನಲ್ಲಿ ಸಿ ಲು ಕೊಂ ಡಿ ರು ವ ಕೆಲವು ಭಾರತೀಯರು ಮನೆಬಿಟ್ಟು ಹೊರಬರಲು ಸಿದ್ಧರಿಲ್ಲ.
ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತದ ರಾಯಭಾರ ಕಚೇರಿಗೆ 10 ಕಿಲೋ ಮೀಟರ್ ದೂರವಿದೆ. ವಿಮಾನ ನಿಲ್ದಾಣಕ್ಕೆ ಅಮೆರಿಕ ಸೈನಿಕರ ಪಹರೆ ಇದ್ದರೂ ಹೊರಗಿನ ಭ ದ್ರ ತೆ ಅಮೆರಿಕ ಸೈ ನಿ ಕ ರ ಕೈಯಲ್ಲಿ ಇಲ್ಲ. ಹೀಗಾಗಿ ತಾಲಿಬಾನಿಗಳ ಸ್ಥಳೀಯ ನಾಯಕರೊಂದಿಗೆ ಸಂಪರ್ಕ ಸಾಧಿಸುವುದು ಕೂಡಾ ಸವಾಲಾಗಿದೆ ಎಂದು ವರದಿ ಆಗಿದೆ.
ನಾಲ್ಕು ದಿನಗಳ ಹಿಂದೆ ಭಾರತದ ರಾಜತಾಂತ್ರಿಕ ಸಿಬ್ಬಂದಿ, ಸೈ ನಿ ಕ ರ ನ್ನು ಕರೆತರುವ ವೇಳೆ ಚೆಕ್‍ಪೋಸ್ಟ್ ನಲ್ಲಿ ತಾಲಿಬಾನಿಗಳು ತ ಡೆ ಹಾಕಿದ್ದರು. ಆ ಬಳಿಕ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಕರೆತರಲು ಭಾರತಕ್ಕೆ 1 ದಿನ ಹಿಡಿದಿತ್ತು.