ಉತ್ತರ ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ. ಈ ಸಂದರ್ಭದಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸೈನಿಕರೊಬ್ಬರು ದೇವರಂತೆ ಬಂದು ಆಕೆಯನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ. ಜಿಲ್ಲೆಯ ಖಾನಬಾಲ್‌ನಿಂದ ಪಿಎಚ್‌ಸಿ ವಿಲ್ಗಾಮಾವರೆಗೆ ಭಾರೀ ಹಿಮಪಾತವಾಗಿದೆ. ಇದರಿಂದ ಇಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು.
ಹೇಗೋ, ಭಾರೀ ಹಿಮಪಾತದ ನಡುವೆ, ಸ್ಥಳೀಯ ಆಶಾ ಕಾರ್ಯಕರ್ತೆಯರನ್ನು ಮೊದಲು ಕರೆಸಲಾಯಿತು. ಮಹಿಳೆಯ ಸ್ಥಿತಿ ಹದಗೆಡಲು ಪ್ರಾರಂಭಿಸಿದಾಗ, ಸ್ಥಳೀಯ ಆರೋಗ್ಯ ಕಾರ್ಯಕರ್ತರು ಅವಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿಕೊಂಡರು.
ವಿಷಯವನ್ನು ಮೊದಲು ಸ್ಥಳೀಯ ಪೊಲೀಸರಿಗೆ ಮತ್ತು ನಂತರ ಸೈನ್ಯಕ್ಕೆ ತಿಳಿಸಲಾಯಿತು. ಮಾಹಿತಿ ಪಡೆದ ತಕ್ಷಣ ಸೈನಿಕರ ತುಕಡಿ ಕಾರ್ಯಾಚರಣೆಗೆ ಬಂದಿತು. ಮಹಿಳೆಯ ಮನೆಯಿಂದ ಜಿಲ್ಲಾ ಆಸ್ಪತ್ರೆವರೆಗೆ ಮಾರ್ಗ ನಕ್ಷೆ ತಯಾರಿಸಲಾಗಿತ್ತು. ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತ್ತು. ನಂತರ ಸೇನಾ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರು ಸ್ಟ್ರೆಚರ್‌ಗಳು, ಔಷಧಗಳು ಮತ್ತು ಇತರ ಪ್ರಥಮ ಚಿಕಿತ್ಸಾ ಸಾಮಗ್ರಿಗಳನ್ನು ಹೊತ್ತು ಸ್ಥಳಕ್ಕೆ ತಲುಪಿದರು. ಆಸ್ಪತ್ರೆ ಮತ್ತು ಮಹಿಳೆಯ ಮನೆಯ ನಡುವಿನ ಅಂತರವು ಸುಮಾರು 8 ಕಿಲೋಮೀಟರ್ ಇತ್ತು. ರಸ್ತೆಯ ಮೇಲೆ ಮೂರು ಇಂಚು ಹಿಮ ಬಿದ್ದಿತ್ತು.
ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪುವ ಮೂಲಕ ಮಗು ಮತ್ತು ತಾಯಿಯ ಪ್ರಾಣ ಉಳಿಸಲಾಗಿದೆ. ಮಾಹಿತಿಯ ಪ್ರಕಾರ, ವಿಲ್ಗಮ್ ಸೇನಾ ಶಿಬಿರದ ಸೈನಿಕರು ಈ ಸಂಪೂರ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯ ಪ್ರಾಣ ಉಳಿಸಿದ ಬಳಿಕ ಸ್ಥಳೀಯರು ಸೇನೆಗೆ ಧನ್ಯವಾದ ಅರ್ಪಿಸಿದ್ದಾರೆ. ಕಳೆದ ಒಂದು ವಾರದಿಂದ ಸೇನೆ ನಿರಂತರವಾಗಿ ಜನರನ್ನು ರಕ್ಷಿಸುತ್ತಿದೆ. ಉತ್ತರ ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತವಾಗುತ್ತಿದೆ.
#WATCH | Srinagar, J&K: Srinagar covered in a blanket of snow as the city receives heavy snowfall pic.twitter.com/H2GaQAMsIU
— ANI (@ANI) February 4, 2024
ಮಾಹಿತಿ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಕಿಶ್ತ್ವಾರ್, ರಾಜೌರಿ, ದೋಡಾ, ರಾಂಬನ್, ಪೂಂಚ್, ರಾಂಬನ್ ಮುಂತಾದ ಸ್ಥಳಗಳಲ್ಲಿ ಮಳೆ ಮತ್ತು ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.