ಮಥುರಾದ ಶಾಹಿ ಈದ್ಗಾಹ್ ಮಸ್ಜಿದ್‌ನಲ್ಲಿ ಶ್ರೀಕೃಷ್ಣ ವಿಗ್ರಹ ಸ್ಥಾಪನೆಯ ಘೋಷಣೆ: 144 ಸೆಕ್ಷನ್ ಜಾರಿ

in Kannada News/News 601 views

ಉತ್ತರ ಪ್ರದೇಶದ ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ ವಿವಾದ ಮತ್ತಷ್ಟು ಜಟಿಲವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಡಿಸೆಂಬರ್ 6 ಕ್ಕೂ ಮೊದಲೇ ಅಲ್ಲಿ ಸೆಕ್ಷನ್-144 ಜಾರಿಗೊಳಿಸಲಾಗಿದೆ. ಡಿಸೆಂಬರ್ 6 ರಂದು ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪೊಲೀಸ್-ಆಡಳಿತ ಜನತೆಗೆ ಮನವಿ ಮಾಡುತ್ತಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ನಡೆದ ದಿನವೂ ಇದೇ ದಿನವಾಗಿದೆ. ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಶ್ರೀಕೃಷ್ಣನ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಹಿಂದೂ ಸಂಘಟನೆಗಳು ಘೋಷಿಸಿದ ನಂತರ ಆಡಳಿತವು ಎಚ್ಚೆತ್ತುಕೊಂಡಿದೆ‌.

Advertisement

ಈ ಮಸೀದಿಯು ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಸಮೀಪದಲ್ಲಿದೆ. ಔರಂಗಜೇಬನು ದೇವಾಲಯವನ್ನು ಒಡೆದು ಮಸೀದಿ ನಿರ್ಮಿಸಿದ್ದನು. ಈಗಾಗಲೇ ಸೆಕ್ಷನ್-144 ಜಾರಿಯಲ್ಲಿದ್ದು, ವದಂತಿಗಳನ್ನು ಹಬ್ಬಿಸುವಲ್ಲಿ ಯಾರಾದರೂ ತೊಡಗಿರುವುದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಸ್‌ಪಿ ಗೌರವ್ ಗ್ರೋವರ್ ತಿಳಿಸಿದ್ದಾರೆ. ನಗರದ ಶಾಂತಿಯುತ ವಾತಾವರಣಕ್ಕೆ ಭಂಗ ತರುವುದನ್ನು ಸಹಿಸುವುದಿಲ್ಲ ಎಂದರು. ಕೆಲವು ಸಂಘಟನೆಗಳು ಡಿ.6ರಂದು ಶಾಹಿ ಈದ್ಗಾ ಮಸೀದಿಗೆ ಪಾದಯಾತ್ರೆ ನಡೆಸಲು ಮುಂದಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ಸಹಾಯ ಮಾಡುವಂತೆ ಎಸ್‌ಎಸ್‌ಪಿ ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಅಲ್ಪಸಂಖ್ಯಾತ ಸಮುದಾಯದ ಜನರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಲಾಗಿದೆ ಎಂದರು. ಯಾವುದೇ ತಪ್ಪು ಮಾಡಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ ಎಂದು ಸರ್ಕಲ್ ಇನ್ಸ್‌ಪೆಕ್ಟರ್ (ಸಿಟಿ) ಅಭಿಷೇಕ್ ತಿವಾರಿ ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಜನರನ್ನು ಭೇಟಿ ಮಾಡಿ ಪೊಲೀಸರು ವಿವಿಧೆಡೆ ಚೆಕ್‌ಪಾಯಿಂಟ್ಸ್ ಹಾಕಲಾಗಿದೆ ಎಂದು ತಿಳಿಸಿದರು.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ 17ನೇ ಶತಮಾನದಲ್ಲಿ ದೇವಸ್ಥಾನವನ್ನು ಕೆಡವಿ ಅತಿಕ್ರಮಣ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಈ ಮಸೀದಿಯನ್ನು ತೆರವುಗೊಳಿಸುವ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಡಿಸೆಂಬರ್ 6 ರಂದು ಯಾವುದೇ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 53 ವರ್ಷಗಳ ಹಿಂದೆ ದೇವಸ್ಥಾನ ಮತ್ತು ಮಸೀದಿ ಆಡಳಿತ ಮಂಡಳಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸುವಂತೆ ‘ಕ್ವಾಮಿ ಏಕ್ತಾ ಮಂಚ್’ ಒತ್ತಾಯಿಸಿದೆ. 60 ವರ್ಷ ಹಳೆಯದಾದ ‘ಅಖಿಲ ಭಾರತ ತೀರ್ಥ ಪುರೋಹಿತ್ ಮಹಾಸಭಾ’ ಶಾಂತಿಗಾಗಿ ಮನವಿ ಮಾಡಿದೆ ಮತ್ತು ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ ಎಂದು ನೆನಪಿಸಿದೆ.

Advertisement
Share this on...