ಮದರಸಾಗಳ ವಿರುದ್ಧ ಖಡಕ್ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ: ಬೆಚ್ಚಿಬಿದ್ದ ಮು-ಸಲ್ಮಾನರು

in Uncategorized 1,037 views

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ನಿರ್ಧಾರ ಮುಸ್ಲಿಂ ಸಮುದಾಯವನ್ನೇ ಬೆಚ್ಚಿ ಬೀಳಿಸಿದೆ. ಭಾರಿ ವಿರೋಧದ ನಡುವೆಯೂ ಅಸ್ಸಾಂನ 1,281 ಮದರಸಾ ಶಾಲೆಗಳನ್ನು ಸಾಮಾನ್ಯ ಶಾಲೆಯಾಗಿ ಪರಿವರ್ತಿಸಲಾಗಿದೆ.ತಕ್ಷಣದಿಂದಲೇ ಆದೇಶ ಜಾರಿಯಾಗಿದೆ.

Advertisement

ಗುವಾಹಟಿ: ಅಸ್ಸಾಂನಲ್ಲಿದ್ದ 1,281 ಮದರಸಾ ಶಿಕ್ಷಣ(Madrasas Education) ಇಂದಿನಿಂದ ಮಿಡ್ಲ್ ಇಂಗ್ಲೀಷ್(Middle English) ಸ್ಕೂಲ್ ಆಗಿ ಪರಿವರ್ತಿಸಲಾಗಿದೆ. ಸರ್ಕಾರದ ಖರ್ಚಿನಲ್ಲಿ ಮದರಸಾ ನಡೆಸಲು ಸಾಧ್ಯವಿಲ್ಲ. ಡಾಕ್ಟರ್, ಎಂಜಿನೀಯರ್ ಸೇರಿದಂತೆ ಹಲವು ಪ್ರತಭಾನ್ವಿತರನ್ನು ಸಮಾಜಕ್ಕೆ ನೀಡುವ ಕೆಲಸ ಸರ್ಕಾರಿ ಅನುದಾನಿತ ಶಾಲೆಗಳಲ್ಲಾಗಬೇಕು. ಇದರ ಬದಲು ಯಾವುದೇ ಧಾರ್ಮಿಕ ಮುಖಂಡರನ್ನು ಸೃಷ್ಟಿಸುವ ಕೆಲಸಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎಂಬು ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು. ಬಳಿಕ ಅನಧೀಕೃತ ಮದರಸಾಗಳ ಮೇಲೆ ದಾಳಿ ಆರಂಭಿಸಿದ ಅಸ್ಸಾಂ ಸರ್ಕಾರ, ಇದೀಗ 1,281 ಮದರಸಾ ಶಾಲೆಗಳನ್ನು ಎಲ್ಲಾ ಸಮದಾಯದವರು ಕಲಿಯುವ ಸಾಮಾನ್ಯ ಸರ್ಕಾರಿ ಶಾಲೆಯಾಗಿ ಪರಿವರ್ತಿಸಿದ್ದಾರೆ.

ಅಸ್ಸಾಂ ಸೆಕೆಂಡರಿ ಬೋರ್ಡ್ ಎಜುಕೇಶನ್( SEBA) ಈ ಆದೇಶ ಹೊರಡಿಸಿದೆ. ಅಸ್ಸಾಂ ಶಿಕ್ಷಣ ಸಚಿವ ರನೋಜ್ ಪೆಗು ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 1,281 ಮದರಾಸ ಶಾಲೆಗಳನ್ನು ಮಿಡ್ಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಗಿ ಪರಿವರ್ತಿಸಲಾಗಿದೆ. ಯಾವೆಲ್ಲಾ ಮದಸಾಗಳನ್ನು ಸಾಮಾನ್ಯ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತಿಸಲಾಗಿದೆ ಅನ್ನೋ ಮಾಹಿತಿಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಏಕರೂಪತೆ ತರಲು ಅಸ್ಸಾಂ ಸರ್ಕಾರ ಕಳೆದ ಒಂದು ವರ್ಷದಿಂದ ನಿರಂತರವಾಗಿ ಕೆಲಸ ಮಾಡುತ್ತಿದೆ. ಅಸ್ಸಾಂನಲ್ಲಿರುವ ಮದರಾಸಗಳು ಸಾರ್ವಜನಿಕ ಶಾಲೆಯಾಗಬೇಕು. ಮೌಲ್ವಿ, ಮುಲ್ಲಾಗಳನ್ನು ಸೃಷ್ಟಿಸಲು ಸರ್ಕಾರದಿಂದ ಅನುದಾನ ನೀಡಲು ಸಾಧ್ಯವಿಲ್ಲ. ಸರ್ಕಾರ ಆರ್ಥಿಕ ಅನುದಾನ ನೀಡುವ ಶಾಲೆಗಳಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಇರಬೇಕು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು. ಇದರಂತೆ ಆರಂಭಿಕ ಹಂತದಲ್ಲಿ ಅನಧಿಕೃತ ಮದರಸಾಗಳ ಮೇಲೆ ದಾಳಿ ಆರಂಭಿಸಲಾಗಿತ್ತು. ಅಸ್ಸಾಂನಲ್ಲಿನ ಅನಧಿಕೃತ ಮದಸರಾಗಳನ್ನು ಬಂದ್ ಮಾಡಲಾಗಿತ್ತು.

ಮದರಸಾದಲ್ಲಿ ಕಲಿಯುವ ಮಕ್ಕಳು ಮುಖ್ಯವಾಹನಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ.ಹೀಗಾಗಿ ಎಲ್ಲಾ ಮದರಸಾಗಳಲ್ಲಿ ಶಿಕ್ಷಣ ಮುಖ್ಯವಾಹಿನಿ ಶಿಕ್ಷಣದಲ್ಲೇ ಇರಬೇಕು. ಮಕ್ಕಳು ಪ್ರವರ್ಧಮಾನಕ್ಕೆ ಬಂದಾಗ ತಾವು ಏನಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲೇ ಒತ್ತಾಯಪೂರ್ಕವಾಗಿ ಅವರ ಮೇಲೆ ನಮ್ಮ ಉದ್ದೇಶ ಈಡೇರಿಸಿಕೊಳ್ಳುವುದು ತಪ್ಪು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.

ಹಿಮಂತ ಬಿಸ್ವಾ ಶರ್ಮಾ ನಿರ್ಧಾರಕ್ಕೆ ಮುಸ್ಲಿಮ್ ಸಮುದಾಯ ಭಾರಿ ವಿರೋಧ ವ್ಯಕ್ತಪಡಿಸಿದೆ. ಮದರಾಸಗಳು ಧಾರ್ಮಿಕ ಹಕ್ಕು ಎಂದು ವಾದ ಮಾಡಿದೆ. ಈ ಕುರಿತು ಮುಸ್ಲಿಂ ಸಮುದಾಯ ಕೋರ್ಟ್ ಮೆಟ್ಟಿಲೇರಿದೆ.

Advertisement
Share this on...