ಮದುವೆಯಾಗ್ತೀನಿ ಅಂತ ಆಶ್ವಾಸನೆ ನೀಡಿ ವಿವಾಹಿತ ಮಹಿಳೆಯೊಂದಿಗೆ ಆಕೆಯ ಅನುಮತಿ ಪಡೆದು ಲೈಂ-ಗಿ-ಕ ಕ್ರಿಯೆ ನಡೆಸುವುದು ರೇ#ಪ್ ಅಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಹೇಳಿದೆ. ಇದರ್ಥ, ವಿವಾಹಿತ ಮಹಿಳೆಯು ಆರೋಪಿಯು ತನಗೆ ಮದುವೆಯ ಭರವಸೆ ನೀಡಿ ತನ್ನನ್ನು ಮೋಹಿಸಿದನೆಂದು ಹೇಳುವ ಮೂಲಕ ಪುರುಷನ ಮೇಲೆ ಅ-ತ್ಯಾ-ಚಾ-ರದ ಆರೋಪ ಹೊರಿಸುವಂತಿಲ್ಲ. ಪ್ರಕರಣ ದಾಖಲಿಸಿರುವ ವಿವಾಹಿತ ಮಹಿಳೆ ವಿಚ್ಛೇದನವಿಲ್ಲದೆ ಮದುವೆಯಾಗಲು ಸಾಧ್ಯವಿಲ್ಲ ಎಂದು ತಿಳಿದು ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು, ಹೀಗಾಗಿ ಅ-ತ್ಯಾ-ಚಾ-ರ ಪ್ರಕರಣದಡಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿದೇದಿ ಈ ತೀರ್ಪು ನೀಡಿದ್ದಾರೆ. ಪತಿಗೆ ವಿಚ್ಛೇದನ ನೀಡಿದ ನಂತರ ಮದುವೆಯಾಗುವುದಾಗಿ ಅರ್ಜಿದಾರರು ಸಂತ್ರಸ್ತೆಗೆ ಭರವಸೆ ನೀಡಿದ್ದರು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ದೇವಸ್ಥಾನವೊಂದರಲ್ಲಿ ಮಹಿಳೆಯ ಹಣೆಗೆ ಸಿಂಧೂರವನ್ನೂ ಹಚ್ಚಿದ್ದನು. ಇದಾದ ಬಳಿಕ ಇಬ್ಬರೂ ಹಲವು ಬಾರಿ ದೈ-ಹಿ-ಕ ಸಂ-ಬಂ-ಧ ಬೆಳೆಸಿದ್ದರು. ಆದರೆ, ಕೊನೆಗೆ ಆತ ಮದುವೆಗೆ ನಿರಾಕರಿಸಿದ್ದ. ಇದಾದ ಬಳಿಕ ಆತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಇದರ ವಿರುದ್ಧ ಆತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು.
ಮಂಗಳವಾರ (ಡಿಸೆಂಬರ್ 6, 2022), ಏಕ ಪೀಠವು ಈ ತೀರ್ಪನ್ನು ನೀಡಿದೆ. ವಿವಾಹಿತ ಮಹಿಳೆ ತನ್ನ ಸ್ವಂತ ಇಚ್ಛೆಯಿಂದ ಬೇರೊಬ್ಬ ಪುರುಷನೊಂದಿಗೆ ದೈ-ಹಿ-ಕ ಸಂಬಂಧ ಹೊಂದಿದ್ದಲ್ಲಿ ಮತ್ತು ಆ ವ್ಯಕ್ತಿ ಬಳಿಕ ಆಕೆಯನ್ನು ಮದುವೆಯಾಗಲು ನಿರಾಕರಿಸಿದರೆ, ಅದನ್ನು ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದು ಹೈಕೋರ್ಟ್‌ನ ಮುಂದಿರುವ ಪ್ರಶ್ನೆಯಾಗಿತ್ತು. ಆರೋಪಿಯ ಉದ್ದೇಶ ಮೊದಲಿನಿಂದಲೂ ವಂಚನೆ ಮಾಡಬೇಕು ಎಂಬುದೇ ಆಗಿದ್ದರೆ, ಈ ಪ್ರಕರಣವನ್ನು ಸೆಕ್ಷನ್-420 ಅಡಿಯಲ್ಲಿ ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ.
शादी के वादे पर विवाहिता से संबंध बनाना रेप नहीं: कोर्ट ने कहा- शादीशुदा को ऐसा कहकर फुसलाया नहीं जा सकता#Women #Law #Jharkhand BY: @vivekkahar08 @anuragaanand085https://t.co/BpUK4utEGr pic.twitter.com/TTM1x2jGe6
— Dainik Bhaskar (@DainikBhaskar) December 11, 2022
ವಿಷಯ ಏನೆಂದರೆ, ನವೆಂಬರ್ 2019 ರಲ್ಲಿ, ಆರೋಪಿಯ ಪೋಸ್ಟಿಂಗ್ ಅನ್ನು ದಿಯೋಘರ್ ಜಿಲ್ಲೆಯ ಸರವನ್ ಜಾತ್ರೆಯಲ್ಲಿ ಮಾಡಲಾಗಿತ್ತು. ಕೇಸ್ ದಾಖಲಿಸಿದ್ದ ಮಹಿಳೆ ತನ್ನ ತಂದೆಯ ಅಂಗಡಿಯೊಂದನ್ನು ನಡೆಸುತ್ತಿದ್ದು, ಅಲ್ಲಿ ಇಬ್ಬರು ಭೇಟಿಯಾಗಿದ್ದಾರೆ. ಇಬ್ಬರ ನಡುವಿನ ಲೈಂ-ಗಿ-ಕ ಸಂಬಂಧಕ್ಕೂ ಮುನ್ನವೇ ಮಹಿಳೆ ನ್ಯಾಯಾಲಯದಲ್ಲಿ ತನ್ನ ವಿಚ್ಛೇದನ ಅರ್ಜಿ ಸಲ್ಲಿಸಿದ್ದಳು. ಇಬ್ಬರೂ ವಯಸ್ಕರು ಮತ್ತು ಅವರ ಸ್ವಂತ ಇಚ್ಛೆಯ ಮೇಲೆ ದೈ-ಹಿ-ಕ ಸಂಬಂಧವನ್ನು ಬೆಳೆಸಿದ್ದಾರೆ ಹೀಗಾಗಿ ಇಂತಹ ಪ್ರಕರಣದಲ್ಲಿ ಅ-ತ್ಯಾ-ಚಾ-ರದ ಕೇಸ್ ದಾಖಲಿಸಲು ಸಾಧ್ಯವಿಲ್ಲ ಎಂದು ಆರೋಪಿಗಳ ಕಡೆಯವರು ಹೇಳುತ್ತಾರೆ. ಆರೋಪಿಯ ತಾಯಿಯೂ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ:
“ಹೆಣ್ಣುಮಗುವಿನ ಸ್ತ#ನ ಮುಟ್ಟಿದರೆ ತಪ್ಪಿಲ್ಲ, ಅವನು ತನ್ನ ಪ್ಯಾಂಟ್ ಬಿಚ್ಚದೇ ಆಕೆಯ ಬ್ಲೌಸ್ ಒಳಗೆ ಕೈ ಹಾಕಿ ಮುಟ್ಟಿದ್ದು ‘ಅದೇ’ ಕಾರಣಕ್ಕೆ ಅಂತ ಪರಿಗಣಿಸೋಕಾಗಲ್ಲ”: ಎಂಬ ತೀರ್ಪು ಕೊಟ್ಟು ಡೀಮೋಟ್ ಆದ ಮಹಿಳಾ ಜಡ್ಜ್
ಬಾಂಬೆ ಹೈಕೋರ್ಟ್‌ನ ಜಡ್ಜ್ (ನ್ಯಾಯಮೂರ್ತಿ) ಪುಷ್ಪಾ ವೀರೇಂದ್ರ ಗನೇಡಿವಾಲಾ ಅವರ ಪದಚ್ಯುತಿ (demotion) ನಿರ್ಣಯ ಕೈಗೊಳ್ಳಲಾಗಿದೆ. ಅವರನ್ನು ಕಾಯಂ ನ್ಯಾಯಮೂರ್ತಿ ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ದೃಢಪಡಿಸಿಲ್ಲ. ಪ್ರಸ್ತುತ, ಅವರು ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ತಾತ್ಕಾಲಿಕ ನ್ಯಾಯಾಧೀಶರಾಗಿದ್ದಾರೆ. ಅವರ ಅವಧಿ ಫೆಬ್ರವರಿ 2022 ರಲ್ಲಿ ಕೊನೆಗೊಳ್ಳಲಿದೆ. ಹೆಚ್ಚುವರಿ ನ್ಯಾಯಾಧೀಶರಾಗಿ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹೀಗಿರುವಾಗ ಜಿಲ್ಲಾ ನ್ಯಾಯಾಧೀಶರಾಗಿ ಡಿಮೋಷನ್ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.
ಇದೇ ಜಸ್ಟಿಸ್ ಗನೇದಿವಾಲಾ ರವರೇ ‘ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್ (Skin-to-Skin Contact)’ ನ ವಿವಾದಾತ್ಮಕ ತೀರ್ಪು ನೀಡಿದ್ದರು. ಈ ತೀರ್ಪನ್ನು ಬಳಿಕ ಸುಪ್ರೀಂಕೋರ್ಟ್ ಬದಲಿಸಿತ್ತು. ಜಸ್ಟಿಸ್ ಪುಷ್ಪಾ ವೀರೇಂದ್ರ ಗನೇದಿವಾಲಾ ನೀಡಿದ್ದ ತೀರ್ಪಿನಲ್ಲಿ, “12 ವರ್ಷದ ಬಾಲಕಿಯ ಸ್ತನ ಒತ್ತಲಾಗುತ್ತದೆ. ಆದರೆ ಆರೋಪಿ ಆಕೆಯ ಟಾಪ್ ಬಿಚ್ಚಿದ್ದನೋ ಇಲ್ಲವೋ? ಅಥವ ಅವನು ಟಾಪ್‌ನೊಳಗೆ ಕೈ ಹಾಕಿ ಸ್ತನಗಳನ್ನ ಒತ್ತಿದ್ದನೋ? ಇಂತಹ ಸೂಚನೆಗಳಲ ಅಭಾವದಿಂದ ಇದನ್ನ ಲೈಂ ಗಿ ಕ ಕಿ ರು ಕು ಳ ಅಂತ ಹೇಳಲು ಸಾಧ್ಯವಿಲ್ಲ. ಸ್ತ್ರೀಯರ ಲಜ್ಜೆಯ ಜೊತೆ ಆಟವಾಡೋ ಆರೋಪದ ಮೇಲೆ ಸಜೆಯಾಗುತ್ತೆ, ಇದು IPC ಸೆಕ್ಷನ್ 354 ರ ಅಡಿಯಲ್ಲೇ ಬರುತ್ತೆ” ಎಂದಿದ್ದರು.
ಸುಪ್ರೀಂ ಕೋರ್ಟ್ ಕೊಲಿಜಿಯಂನ ತೀರ್ಪಿನ ನಂತರ, ಹೆಚ್ಚುವರಿ ನ್ಯಾಯಾಧೀಶರಾಗಿ ಅವರ ಅವಧಿಯನ್ನು ವಿಸ್ತರಿಸದಿದ್ದರೆ ಅಥವಾ ಅವರು ಖಾಯಂ ನ್ಯಾಯಾಧೀಶರು ಎಂದು ಖಚಿತಪಡಿಸದಿದ್ದರೆ, ಅವರು ಮತ್ತೆ ಜಿಲ್ಲಾ ನ್ಯಾಯಾಧೀಶರ ಹುದ್ದೆಯನ್ನೇ ವಹಿಸಿಕೊಳ್ಳಬೇಕಾಗುತ್ತದೆ. ಹೈಕೋರ್ಟ್‌ಗೆ ನೇಮಕಾತಿಗಳನ್ನು ನಿರ್ಧರಿಸಲು ಭಾರತದ ತ್ರಿಸದಸ್ಯ ಕೊಲಿಜಿಯಂ ನಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ್ಣ ಮತ್ತು ನ್ಯಾಯಮೂರ್ತಿಗಳಾದ ಯುಯು ಲಲಿತ್ ಮತ್ತು ಎಎಂ ಖಾನ್ವಿಲ್ಕರ್ ಇದ್ದಾರೆ.
ಪುಷ್ಪಾ ವೀರೇಂದ್ರ ಗನೇಡಿವಾಲಾ ಅವರ ಈ ‘ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್ (Skin-to-Skin Contact)’ ತೀರ್ಪನ ಬಳಿಕ ಪ್ರತಿಯೊಬ್ಬರೂ ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಹ್ಮದಾಬಾದ್ ನಿವಾಸಿ ದೇವಶ್ರೀ ತ್ರಿವೇದಿ ಎಂಬ ಯುವತಿ ಜಸ್ಟಿಸ್ ಪುಷ್ಪಾ ವೀರೇಂದ್ರ ಗನೇಡಿವಾಲಾಗೆ ಬರೋಬ್ಬರಿ 150 ಕಾಂಡಮ್‌ಗಳನ್ನ ಕಳಿಸಿದ್ದಳು. ಈ ಬಗ್ಗೆ ಮಾತನಾಡಿ ಆಕೆ, “ಜಸ್ಟಿಸ್ ಪುಷ್ಪಾ ಅವರು ಹೇಳುವ ಪ್ರಕಾರ ಸ್ಕಿನ್‌ಗೆ ಮುಟ್ಟಲಿಲ್ಲವಾದರೆ ಅದು ಲೈಂ ಗಿ ಕ ಕಿ ರು ಕುಳ ಅಲ್ಲ, ನಾನು ಅವರಿಗೆ ಕಾಂಡೋಮ್‌ಗಳನ್ನ ಕಳಿಸಿ, ಇದನ್ನ ಬಳಸಿದರೂ ಸ್ಕಿನ್ ಟಚ್ ಆಗಲ್ಲ ಅಂತ ಹೇಳಿದ್ದೇನೆ. ಇದು ಸಾಧ್ಯವೇ?” ಎಂದಿದ್ದರು.
ಇದಾದ ನಂತರ ಜಸ್ಟಿಸ್ ಪುಷ್ಪಾ ಗನೇಡಿವಾಲಾ ಅವರ ಮತ್ತೊಂದು ತೀರ್ಪು ಬಂದಿತ್ತು. ಅವರ ನೇತೃತ್ವದ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಏಕ ಪೀಠವು ಬಾಲಕಿಯ ಕೈ ಹಿಡಿದು ಆ ರೋ ಪಿಯ ಪ್ಯಾಂಟ್ ಅನ್ನು ಬಿಚ್ಚುವುದು ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಶುವಲ್ ಅಫೆನ್ಸಸ್ ಆ್ಯಕ್ಟ್, 2012 (POCSO) ಅಡಿಯಲ್ಲಿ ಲೈಂvಗಿಕ ದೌ ರ್ಜ ನ್ಯದ ಶ್ರೇಣಿಗೆ ಬರುವುದಿಲ್ಲ ಎಂದು ತೀರ್ಪು ನೀಡಿತ್ತು. ಬರುತ್ತದೆ.