ಮದುವೆಯಾಗಿ ಕೇವಲ 11 ತಿಂಗಳಾಗಿತ್ತು, ಗಂಡನ ಅಂತ್ಯಸಂಸ್ಕಾರ ಮುಗಿಯುತ್ತಲೇ ಈ ಯುವತಿ ಹೀಗೆ ಮಾಡೋದಾ? ಇವರ ಕಥೆ ನಿಮಗೆ ಕಣ್ಣೀರು ತರಿಸುತ್ತೆ

in Kannada News/News 724 views

ನಾಗಮಂಗಲ: ಇವರಿಬ್ಬರೂ ದಾಂಪತ್ಯಕ್ಕೆ ಕಾಲಿಟ್ಟು 11 ತಿಂಗಳಾಗಿತ್ತು. ನೂರಾರು ಕನಸಿನ ಬುತ್ತಿಯೊಂದಿಗೆ ಖುಷಿಯಾಗಿದ್ದವರ ಬಾಳಲ್ಲಿ ವಿಧಿಯಾಟವೇ ಬೇರೆ ಇತ್ತು. ಇಬ್ಬರೂ ಪ್ರತ್ಯೇಕ ಘಟನೆಯಲ್ಲಿ ಒಂದೇ ದಿನ ದುರಂತ ಅಂತ್ಯ ಕಂಡಿದ್ದಾರೆ. ಗಂಡನ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದ ಪತ್ನಿಯೂ ಸಾ-ವಿ-ನ ಮನೆಯ ಕದ ತಟ್ಟಿದ ಕರುಣಾಜನಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.

Advertisement

ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿಯ ಕಿರಣ್ ಮತ್ತು ಇವರ ಪತ್ನಿ ಪೂಜಾ ಮೃ-ತ ದುರ್ದೈವಿಗಳು. 11 ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದ ಈ ಜೋಡಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸವಿತ್ತು.

ಕಿರಣ್​ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು(ಶುಕ್ರವಾರ) ಬೆಳಗ್ಗೆ ಕೊನೆಯುಸಿರೆಳೆದಿದ್ದರು. ಮೃ#ತ-ದೇ-ಹವನ್ನು ಕಿರಣ್​ರ ಸ್ವಗ್ರಾಮ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿಗೆ ತರತಾಗಿತ್ತು. ಗಂಡನ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಪತ್ನಿ ಪೂಜಾ, ಮನೆಯಲ್ಲೇ ನೇ#ಣು ಬಿ-ಗಿ-ದು ಕೊಂಡು ಆ#ತ್ಮ-ಹ-ತ್ಯೆ ಮಾಡಿಕೊಂಡಿದ್ದಾರೆ. ಮಗ-ಸೊಸೆ ಇಬ್ಬರನ್ನೂ ಒಂದೇ ದಿನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಹೃದಯವಿದ್ರಾವಕ ಘಟನೆಗೆ ಇಡೀ ಗ್ರಾಮವೇ ಮಮ್ಮಲ ಮರುಗಿದೆ.

ಮುಂದಿನ ಸುದ್ದಿ: ಕೊರೋನಾ ಭಯದಿಂದ ತನ್ನ ಹೆತ್ತ ಅಮ್ಮನ ಜೊತೆ ಮಗ ಮಾಡಿದ್ದೇನು ಗೊತ್ತಾ? ಇಂಥಾ ಮಕ್ಕಳೂ ಇರ್ತಾರೆ ನೋಡಿ

ಲಖನೌ: ಹೆತ್ತ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೆ, ಕರೊನಾ ಇದ್ದಿರಬಹುದು ಎಂದು ಅನುಮಾನ ಪಟ್ಟ ಮಗ ಆಕೆಯನ್ನು ತನ್ನ ಅಕ್ಕನ ಮನೆ ಬಾಗಿಲಲ್ಲಿ ಮಲಗಿಸಿ ಬಂದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮಗಳೂ ಕೂಡ ಅಮ್ಮನನ್ನು ಒಳಗೆ ಕರೆದುಕೊಂಡು ಬರದೆ, ಆಕೆಯನ್ನು ರಸ್ತೆಯಲ್ಲೇ ಮಲಗಿಸಿರುವುದಾಗಿ ವರದಿಯಾಗಿದೆ.

ವಯಸ್ಸಾಗಿದ್ದ ಆಕೆ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಕರೊನಾ ಇದ್ದಿರಬಹುದು ಎನ್ನುವ ಅನುಮಾನ ಬಂದ ಹಿನ್ನೆಲೆಯಲ್ಲಿ ಆಕೆಯನ್ನು ಕರೆದುಕೊಂಡು ಹೋದ ಮಗ, ಅಕ್ಕನ ಮನೆ ಬಾಗಿಲಲ್ಲಿ ಮಲಗಿಸಿ ವಾಪಾಸಾಗಿದ್ದಾನೆ. ತಾಯಿ ರಸ್ತೆ ಬದಿ ಮಲಗಿರುವುದು ಕಂಡರೂ ಮನ ಕರಗದ ಮಗಳು ಕೂಡ ಹಾಗೆಯೇ ಬಾಗಿಲು ಹಾಕಿಕೊಂಡಿದ್ದಾಳೆ. ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದು ವೈರಲ್ ಆಗಿದೆ.

ವೈರಲ್​ ವಿಡಿಯೋ ಗಮನಿಸಿದ ಪೊಲೀಸರು ಆಕೆ ಮಲಗಿದ್ದ ಸ್ಥಳಕ್ಕೆ ತೆರಳಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನ ಉಸಿರಾಡುತ್ತಿದ್ದ ಆಕೆ ಆಮೇಲೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆಸ್ಪತ್ರೆ ಸೇರಿದ ನಂತರ ಆಕೆಗೆ ಕರೊನಾ ಪರೀಕ್ಷೆ ಮಾಡಿಸಿದಾಗ ಆಕೆಯಲ್ಲಿ ಸೋಂಕಿರುವುದು ದೃಢವಾಗಿದೆ. ತಾಯಿ ಸತ್ತು ಗಂಟೆಗಳು ಉರುಳಿದರೂ ಆಕೆಯ ಶವವನ್ನು ತೆಗೆದುಕೊಂಡು ಹೋಗಲು ಕುಟುಂಬಸ್ಥರು ಬಂದಿಲ್ಲ ಎಂದು ತಿಳಿಸಲಾಗಿದೆ.

ಈತ ತಾಯಿಯನ್ನೇ ಮನೆಯಿಂದ ಹೊರಹಾಕಿದರೆ ಅತ್ತ ಮತ್ತೊಂದು ಘಟನೆಯಲ್ಲಿ ತಾಯಿಯ ಕೊನೆ ಘಳಿಗೆಯಲ್ಲಿ ವಿಡಿಯೋ ಕಾಲ್ ನಲ್ಲಿ ಹಾಡು ಹೇಳಿದ ಮಗ

ಈ ಕರೊನಾದಿಂದಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಎಷ್ಟೊ ಜನರು ಆಸ್ಪತ್ರೆಗೆ ಹೋದವರು ಶ-ವ-ವಾಗಿ ವಾಪಸು ಬರುತ್ತಿದ್ದಾರೆ. ರೋಗಿಗಳು ಕೊನೆಯುಸಿರೆಳೆವ ಮುನ್ನ ಅವರಿಗೆ ಅವರ ಕುಟುಂಬಸ್ಥರೊಂದಿಗೆ ವಿಡಿಯೋ ಕಾಲ್​ ಮುಖಾಂತರ ಮಾತನಾಡುವ ಅವಕಾಶವನ್ನೂ ವೈದ್ಯಕೀಯ ಸಿಬ್ಬಂದಿ ಮಾಡಿಕೊಡುತ್ತಿದ್ದಾರೆ. ಅದೇ ರೀತಿ ತಾಯಿಯ ಕೊನೆ ಕ್ಷಣದಲ್ಲಿ ವಿಡಿಯೋ ಕಾಲ್​ ಮಾಡಿದ ಮಗ ತಾಯಿಗಾಗಿ ಹಾಡೊಂದನ್ನು ಹಾಡಿರುವ ಘಟನೆ ನಡೆದಿದೆ.

ಡಿಪ್ಶಿಖಾ ಘೋಷ್ ಹೆಸರಿನ ಡಾಕ್ಟರ್​ ತಮ್ಮ ಆಸ್ಪತ್ರೆಯಲ್ಲಿ ನಡೆದ ಕಣ್ಣೀರು ತರಿಸುವ ಕಥೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂಘಮಿತ್ರ ಚಟರ್ಜಿ ಹೆಸರಿನ ಮಹಿಳೆ ಕರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯನ್ನು ಬದುಕಿಸುವುದು ತುಂಬಾ ಕಷ್ಟವಾಗಿತ್ತಂತೆ. ಇನ್ನೇನು ಆಕೆ ಕೊನೆಯುಸಿರೆಳೆಯುತ್ತಾಳೆ ಎನ್ನುವ ವೇಳೆಗೆ ಡಿಪ್ಶಿಖಾ ಘೋಷ್, ಸೋಂಕಿತೆಯ ಮಗ ಸೋಹಮ್​ ಚಟರ್ಜಿಗೆ ವಿಡಿಯೋ ಕಾಲ್​ ಮಾಡಿದ್ದಾರೆ. ಅಮ್ಮ ಮಗನನ್ನು ವಿಡಿಯೋ ಕಾಲ್​ನಲ್ಲಿ ಮಾತನಾಡಿಕೊಳ್ಳಲು ಬಿಟ್ಟಿದ್ದಾರೆ.

ಈ ವೇಳೆ ಡಾಕ್ಟರ್​ಗೆ ಮನವಿ ಮಾಡಿದ ಸೋಹಮ್​, ಅಮ್ಮನಿಗಾಗಿ ಹಾಡೊಂದನ್ನು ಹಾಡಲಾರಂಭಿಸಿದ್ದಾರೆ. ಅಮ್ಮ ಮಗನ ಕಥೆಯಿರುವ ಸಿನಿಮಾದ “ತೇರಾ ಮುಜ್ಸೆ ಹೈ ಪೆಹ್ಲೇ ಕ ನತಾ ಕೋಯಿ” ಹಾಡನ್ನು ಹಾಡಿದ್ದಾರೆ. ಮೊಬೈಲ್​ ಹಿಡಿದು ಕುಳಿತಿದ್ದ ಡಾಕ್ಟರ್​ ಹಾಡಿಗೆ ತಲೆದೂಗಿದ್ದಾರೆ. ಈ ಹಾಡನ್ನು ಕೇಳಿ ಅಕ್ಕ ಪಕ್ಕದ ವಾರ್ಡ್​ಗಳಲ್ಲಿದ್ದ ನರ್ಸ್​ಗಳೂ ಬಂದು ನಿಂತಿದ್ದಾರೆ. ಅಮ್ಮ ಮಗನ ಪ್ರೀತಿಯನ್ನು ಕಂಡು ಪ್ರತಿಯೊಬ್ಬರು ಕಣ್ಣೀರು ಸುರಿಸಿದ್ದಾರೆ.

ಈ ಘಟನೆಯನ್ನು ಡಾಕ್ಟರ್​ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್​ ಭಾರೀ ವೈರಲ್​ ಆಗಿದೆ. ಕರೊನಾದಿಂದಾಗಿ ಅಮ್ಮನನ್ನು ಕಳೆದುಕೊಂಡಿರುವ ಅದೆಷ್ಟೋ ಜನ ಅವರವರ ಅಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ.

 

Advertisement
Share this on...