“ಮನೆಗೆ ಮಗಳನ್ನ ಹೊತ್ತುಕೊಂಡು ಹೋದರು, ತಡೆಯಲು ಬಂದ ಮಗನನ್ನ ಕೊಂದೇ ಬಿಟ್ಟರು”: ಕೊರೆಯುವ ಚಳಿಯಲ್ಲಿ ಪ್ರತಿಭಟನೆಗೆ ಕೂತ ಹಿಂದೂ ತಾಯಿ, #ಅಬ್ದುಲ್ಲಾ ವಿರುದ್ಧ FIR ಕೂಡ ಇಲ್ಲ

in Uncategorized 1,333 views

ನೆರೆಯ ರಾಷ್ಟ್ರ ಪಾಕಿಸ್ತಾನ ಅಲ್ಪಸಂಖ್ಯಾತ ಹಿಂದುಗಳ ಪಾಲಿಗೆ ಅಕ್ಷರಶಃ ನರಕವಾಗಿಬಿಟ್ಟಿದೆ. ಹಿಂದೂ ಮಹಿಳೆಯರ ಅಪಹರಣ, ರೇ-ಪ್ ಮತ್ತು ಕೊ-ಲೆಯಂತಹ ಘಟನೆಗಳು ಇಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಪಾಕಿಸ್ತಾನದ ಇಸ್ಲಾಮಿಕ್ ಮೂಲಭೂತವಾದಿ ಸರ್ಕಾರಕ್ಕೂ ಇದು ದೊಡ್ಡ ವಿಷಯೇ ಅಲ್ಲ.

ಸಿಂಧ್‌ನಲ್ಲಿ, ತನ್ನ ಸಹೋದರಿಯ ಅಪಹರಣವನ್ನು ವಿರೋಧಿಸಿದ್ದಕ್ಕಾಗಿ ಮತ್ತೊಮ್ಮೆ ಒಬ್ಬ ಹಿಂದೂವನ್ನು ಸಾರ್ವಜನಿಕವಾಗಿ ಎಲ್ಲರೆದುರೇ ಕೊ ಲ್ಲ ಲಾಗಿದೆ. ನ್ಯಾಯಕ್ಕಾಗಿ, ಮೃತನ ವೃದ್ಧ ತಾಯಿ ಕೊರೆಯುವ ಚಳಿಯಲ್ಲಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಬೇಕಾಯಿತು, ನಂತರ ಕಾಟಾಚಾರಕ್ಕಾಗಿ ಪೊಲೀಸರು ಈ ಪ್ರಕರಣದಲ್ಲಿ ಯವಕನ ಕೊ-ಲೆ ಪ್ರಕರಣದಲ್ಲಿ ಮಾತ್ರ ಎಫ್‌ಐಆರ್ ದಾಖಲಿಸಿದ್ದಾರೆ.

ಇತ್ತೀಚೆಗಷ್ಟೇ ಸಿಂಧ್‌ನಲ್ಲಿ ಹಿಂದೂ ವಿಧವೆಯೊಬ್ಬಳನ್ನು ರೇ-ಪ್ ಮಾಡಿ ಬ ರ್ಬ ರವಾಗಿ ಹ-ತ್ಯೆ ಮಾಡಲಾಗಿತ್ತು. ಅಷ್ಟೇ ಅಲ್ಲ ಆಕೆಯ ಕೈಕಾಲುಗಳನ್ನು ಕೂಡ ಆರೋಪಿ ಕ ತ್ತ ರಿಸಿ ಹಾಕಿದ್ದ. ಈ ಪ್ರಕರಣದಲ್ಲೂ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

Advertisement

ಈ ಪ್ರಕರಣವು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಉಮರ್ಕೋಟ್ ಜಿಲ್ಲೆಯ ಕುಂಟಿ ಎಂಬ ಊರಿನದ್ದಾಗಿದೆ. 35 ವರ್ಷದ ಲಾಲು ಕಾಛಿ ಇಲ್ಲಿ ವಾಸವಾಗಿದ್ದರು. ಡಿಸೆಂಬರ್ 25 ರಂದು ಅಬ್ದುಲ್ಲಾ ಖೋಸೊ ಎಂಬ ಸ್ಥಳೀಯನೊಬ್ಬನ ಜೊತೆ ಕೆಲವು ಮುಸ್ಲಿಮರು ಅವರ ಮನೆಗೆ ನುಗ್ಗಿ ಆತನ ವಿವಾಹಿತ ಸಹೋದರಿ ಲಾಲಿಯನ್ನ ಹೊತ್ತೊಯ್ದರು.

ಈ ಸಮಯದಲ್ಲಿ, ಲಾಲು ತನ್ನ ಸಹೋದರಿಯನ್ನು ಈ ದೂರ್ತರಿಂದ ರಕ್ಷಿಸಲು ಪ್ರಯತ್ನಿಸಿದಾಗ ಗುಂಪು ಲಾಲು ಅವರನ್ನು ಹಿಗ್ಗಾಮುಗ್ಗಾ ಥಳಿಸಿದರು, ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಅಂತಿಮವಾಗಿ, ಲಾಲು ಬಡ ಕುಟುಂಬದವರಾದ್ದರಿಂದ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೆ ಜನವರಿ 1, 2023 ರಂದು ನಿಧನರಾದರು.

ಇದಕ್ಕೂ ಮೊದಲು, ನವೆಂಬರ್ 2022 ರಲ್ಲಿ, ಅಬ್ದುಲ್ಲಾ ಲಾಲಿಯನ್ನು ಬಲವಂತವಾಗಿ ಹೊತ್ತೊಯ್ದು ತನ್ನ ಮನೆಗೆ ಕರೆದೊಯ್ದಿದ್ದನು. ಆತ ಲಾಲಿಯನ್ನ ತನ್ನ ಮನೆಯಲ್ಲಿ ಬಂಧಿಯಾಗಿರಿಸಿದ್ದ. ಇದಾದ ನಂತರ ಲಾಲು ತನ್ನ ಸಹೋದರಿಯ ಅಪಹರಣದ ಬಗ್ಗೆ ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದರು, ಆದರೆ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿರಲಿಲ್ಲ.

ಈ ವೇಳೆ ಅಬ್ದುಲ್ಲಾ ಲಾಲಿಯನ್ನು ಬಲವಂತವಾಗಿ ಮತಾಂತರ ಮಾಡಿದ್ದ ಎಂದು ಸ್ಥಳೀಯರು ಹೇಳುತ್ತಾರೆ. ಅಷ್ಟೇ ಅಲ್ಲ, ಅಬ್ದುಲ್ಲಾ ಈ ವಿವಾಹಿತ ಮಹಿಳೆಯನ್ನು ಬಲವಂತವಾಗಿ ಮದುವೆಯಾಗಿದ್ದ. ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ಪಾಕಿಸ್ತಾನದ ಹಿಂದೂ ಸಮುದಾಯ ಸಿಡಿದೆದ್ದಿದೆ.

ಇದಕ್ಕೆ ಹಿಂದೂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಲಾಲು ಅವರು ಅಬ್ದುಲ್ಲಾ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದರು, ನಂತರ ನ್ಯಾಯಾಲಯವು ಲಾಲಿಯನ್ನು ಆಕೆಯ ಸಹೋದರನಿಗೆ ಹಸ್ತಾಂತರಿಸಿತು. ಆ ವೇಳೆ ಅಬ್ದುಲ್ಲಾ ಲಾಲೂಗೆ ಬೆದರಿಕೆ ಹಾಕಿದ್ದ. ಅಬ್ದುಲ್ಲಾನನ್ನ ಸ್ಥಳೀಯ ಗೂಂಡಾ ಎಂದು ಅಲ್ಲಿನ ಜನ ಕರೆಯುತ್ತಾರೆ.

ಇದಾದ ನಂತರ ಅಬ್ದುಲ್ಲಾ ತನ್ನ ಸಹಚರರೊಂದಿಗೆ ಲಾಲು ಮನೆ ಮೇಲೆ ದಾ-ಳಿ ಮಾಡಿ ಲಾಲುಗೆ ಹಿಗ್ಗಾಮುಗ್ಗಾ ಥಳಿಸಿದ್ದು ಆತ ಸಾವನ್ನಪ್ಪಿದ್ದಾನೆ. ಬಳಿಕ ಲಾಲು ಸಹೋದರಿ ಲಾಲಿ ಬಾಯಿಯನ್ನ ಮತ್ತೊಮ್ಮೆ ಕರೆದುಕೊಂಡು ಹೋಗಲಾಯಿತು. ಸದ್ಯ ಲಾಲಿ ಎಲ್ಲಿದ್ದಾಳೆ, ಏನಾಗಿದ್ದಾಳೆ ಎಂಬುದು ಮನೆಯವರಿಗೂ ಗೊತ್ತಿಲ್ಲ. ಮೃತ ಲಾಲುಗೆ ಮದುವೆಯಾಗಿದ್ದು ನಾಲ್ಕು ಮಕ್ಕಳಿದ್ದಾರೆ.

Advertisement
Share this on...