ಭಾರತವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ಮಾಡಿದ್ದಕ್ಕಾಗಿ ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಗಾಂಧಿಯನ್ನ ಬಹಳ ಹಿಂದಿನಿಂದಲೂ ಗೌರವಿಸುತ್ತಲೇ ಬರಲಾಗುತ್ತಿದೆ. ಅದೇ ಸಮಯದಲ್ಲಿ, ಜವಾಹರಲಾಲ್ ನೆಹರು ಅವರ ತಂದೆ ಮೋತಿಲಾಲ್ ನೆಹರು ಅವರು ಮುಸ್ಲಿಂ ಪತ್ರಕರ್ತನೊಂದಿಗೆ ತಮ್ಮ ಮಗಳ ಮದುವೆಯನ್ನು ವಿರೋಧಿಸಿದ್ದರು. ಬಳಿಕ ಅವರಿಬ್ಬರ ನಡುವಿನ ಸಂಬಂಧವನ್ನು ಅಂತ್ಯಗೊಳಿಸಲು ಗಾಂಧಿ ಕೂಡ ಮೋತಿಲಾಲ್ ನೆಹರೂಗೆ ಸಹಾಯ ಮಾಡಿದ್ದರು.
ಶೀಲಾ ರೆಡ್ಡಿ ಅವರು ತಮ್ಮ ‘ಮಿಸ್ಟರ್ ಆ್ಯಂಡ್ ಮಿಸೆಸ್ ಜಿನ್ನಾ: ದಿ ಮ್ಯಾರೇಜ್ ದಟ್ ಷೂಕ್ ಇಂಡಿಯಾ (Mister and Misses Jinnah: The Marriage that shook India)’ ಪುಸ್ತಕದಲ್ಲಿ ಐತಿಹಾಸಿಕ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಮೋತಿಲಾಲ್ ನೆಹರು ಅವರು ಜಾತ್ಯತೀತತೆಯ ಕವಚವನ್ನು ಧರಿಸಿರುವುದು ಕೇವಲ ನೆಪ ಮಾತ್ರ ಎಂದು ಹೇಳಿದ್ದಾರೆ. ಮುಸ್ಲಿಂ ವ್ಯಕ್ತಿಯೊಂದಿಗೆ ಮಗಳ ಪ್ರೇಮ ಪ್ರಕರಣಕ್ಕೆ ಹೇಗೆ ವಿರೋಧ ವ್ಯಕ್ತಪಡಿಸಿದ್ದರು ಎಂಬುದನ್ನು ಅವರು ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ.
ಮೋತಿಲಾಲ್ ನೆಹರು ಅವರ ಹಿರಿಯ ಮಗಳು ಮತ್ತು ಜವಾಹರಲಾಲ್ ನೆಹರು ಅವರ ಸಹೋದರಿಯನ್ನ ‘ನನ್’ ವಿಜಯಾ ಲಕ್ಷ್ಮಿ ಪಂಡಿತ್ ಎಂದೂ ಕರೆಯುತ್ತಾರೆ. ವಿಜಯಾ ಅವರು ಆಕ್ಸ್ಫರ್ಡ್ ಶಿಕ್ಷಣ ಪಡೆದ ಮುಸ್ಲಿಂ ಪತ್ರಕರ್ತ ಮತ್ತು ಇಂಡಿಪೆಂಡೆಂಟ್ ಆಂಗ್ಲ ಪತ್ರಿಕೆಯ ಯುವ ಸಂಪಾದಕ ಸೈಯದ್ ಹುಸೇನ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ಮೋತಿಲಾಲ್ ನೆಹರೂರವರಿಗೆ ಈ ಸಂಬಂಧದ ಬಗ್ಗೆ ತಿಳಿಯುವ ಹೊತ್ತಿಗೆ, ಇಬ್ಬರೂ ತಮ್ಮ ಕುಟುಂಬಗಳಿಗೆ ತಿಳಿಸಿದೇ ರಹಸ್ಯವಾಗಿ ಮದುವೆಯಾಗಿದ್ದರಿಂದ ತುಂಬಾ ತಡವಾಗಿತ್ತು. ಮೋತಿಲಾಲ್ ಸೈಯ್ಯದ್ ಅವರನ್ನು ತಮ್ಮ ಅದ್ದೂರಿ ನಿವಾಸ ‘ಆನಂದ ಭವನ’ದಲ್ಲಿ ಇರಲು ಆಹ್ವಾನಿಸಿದಾಗ ಈ ಪ್ರೀತಿ ಶುರುವಾಗಿತ್ತು.
ಹುಸೇನ್ ಅವರ ದೇಶಭಕ್ತಿಯಿಂದ ಮೋತಿಲಾಲ್ ನೆಹರೂ ಅವರು ತುಂಬಾ ಪ್ರಭಾವಿತರಾಗಿದ್ದರು ಎಂದು ವರದಿಯಾದ ಆ ದಿನಗಳ ವಿಷಯವಾಗಿದೆ. ಅವರು ತಮ್ಮ ಪತ್ರಿಕೆಯನ್ನು ಪ್ರಾರಂಭಿಸಲು ಸಂಪಾದಕರನ್ನು ಹುಡುಕುತ್ತಿದ್ದರು. ಅವರು ತಮ್ಮ ಇಂಗ್ಲಿಷ್ ಸ್ನೇಹಿತ ಮತ್ತು ಬಾಂಬೆ ಕ್ರಾನಿಕಲ್ನ ಸಂಸ್ಥಾಪಕ ಸಂಪಾದಕರಾದ ಬಿಜಿ ಹಾರ್ನಿಮನ್ ಅವರ ಆದೇಶದ ಮೇರೆಗೆ ಯುವ ಪತ್ರಕರ್ತ ಹುಸೇನ್ ಅವರನ್ನು ನೇಮಿಸಿಕೊಂಡರು. ಆದಾಗ್ಯೂ, ಸೈಯದ್ ಇಂಗ್ಲೆಂಡ್ನಲ್ಲಿ ಅಧ್ಯಯನ ಮಾಡಿದರು ಮತ್ತು ಅವರ ಮನೆಯವರಿಗೆ ಪ್ರಿಯರಾಗಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಅವರು ಅಲಹಾಬಾದ್ನಲ್ಲಿ ವಾಸಿಸುವಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರು ಇಲ್ಲಿ ಅನಾರೋಗ್ಯಕ್ಕೆ ಒಳಗಾದರು, ನಂತರ ಮೋತಿಲಾಲ್ ನೆಹರು ಅವರನ್ನು ‘ಆನಂದ ಭವನ’ದಲ್ಲಿ ಉಳಿಯಲು ಆಹ್ವಾನಿಸಿದರು.
ಸೈಯದ್ ಹುಸೇನ್ ಮತ್ತು ವಿಜಯಾ ಒಂದೇ ಸೂರಿನಡಿ ವಾಸಿಸಲು ಪ್ರಾರಂಭಿಸಿದ ತಕ್ಷಣ, ಇಬ್ಬರೂ ಪರಸ್ಪರ ತುಂಬಾ ಹತ್ತಿರವಾಗಿದ್ದರು. ಮೋತಿಲಾಲ್ಗೆ ತಮ್ಮ ಮಗಳು ಹುಸೇನ್ನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿಯುವ ಹೊತ್ತಿಗೆ, ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದರು. ಮೋತಿಲಾಲ್ ನೆಹರೂ ಅವರಿಗೆ ಈ ವಿಷಯ ಇಷ್ಟವಾಗಲಿಲ್ಲ. ಈ ಸಂಬಂಧ ಅವರಿಗಿದ್ದ ಅಸಮಾಧಾನವೇನೆಂದರೆ ಸೈಯದ್ ಹುಸೇನ್ ಒಬ್ಬ ಮುಸ್ಲಿಂ ಎಂಬುದಾಗಿತ್ತು. ಹಿಂದೂ-ಮುಸ್ಲಿಂ ಐಕ್ಯತೆಯ ಆದರ್ಶ ಎಂದು ಕರೆಯಲ್ಪಡುವ ಕುಟುಂಬದ ಸದಸ್ಯರ ವಿಷಯಕ್ಕೆ ಬಂದಾಗ, ತಮ್ಮ ಮಗಳು ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾಳೆ ಮತ್ತು ರಹಸ್ಯವಾಗಿ ಮದುವೆಯಾಗಿದ್ದಾಳೆ ಎಂಬ ಅಂಶವನ್ನು ಒಪ್ಪಿಕೊಳ್ಳುವುದು ಅವರಿಗೆ ತುಂಬಾ ಕಷ್ಟಕರವಾಗಿತ್ತು.
ಇಬ್ಬರು ತಮ್ಮ ಸಂಬಂಧವನ್ನು ಹೇಗೆ ಬಲವಂತವಾಗಿ ಅಂತ್ಯಗೊಳಿಸಿದರು ಎಂದು ರೆಡ್ಡಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಹುಸೇನ್ ಜೊತೆಗಿನ ಸಂಬಂಧವನ್ನು ಅಂತ್ಯಗೊಳಿಸಲು ತನ್ನ ಕುಟುಂಬ ಸದಸ್ಯರು ಹೇಗೆ ಒತ್ತಡ ಹೇರಿದ್ದರು ಎಂಬುದನ್ನು ವಿಜಯಾ ನಂತರ ವಿವರಿಸಿದರು. ಇದಕ್ಕೆ ಕಾರಣ ಸೈಯದ್ ಹುಸೇನ್ ಮುಸ್ಲಿಮನಾಗಿದ್ದು ಮತ್ತು ಧರ್ಮದಿಂದ ಹೊರ ಹೋಗಿ ಮದುವೆ ಮಾಡಿಕೊಂಡಿದ್ದು ತಪ್ಪು ಎಂದು ಹೇಳಿದ್ದರು.
ರೆಡ್ಡ ಮುಂದೆ ಬರೆಯುತ್ತ ಆ ಕಾಲದಲ್ಲಿ ಯಾವ ವ್ಯಕ್ತಿಗಳು ಹಿಂದೂ-ಮುಸ್ಲಿಂ ಐಕ್ಯತೆಗೆ ಉದಾಹರಣೆ ನೀಡಿದ್ದರೋ, ಅತಿ ಹೆಚ್ಚು ಮುಸ್ಲಿಂ ಸ್ನೇಹಿತರನ್ನು ಹೊಂದಿರುವ ಕುಟುಂಬ. ಧರ್ಮದ ಹೊರಗೆ ಹೋಗಿ ತನ್ನ ಮಗಳನ್ನು ಮದುವೆಯಾಗುವುದು ಅವರಿಗೆ ಸ್ವೀಕಾರಾರ್ಹವಾಗಬೇಕಿತ್ತು, ಆದರೆ ಅವರು ಸಂಪ್ರದಾಯವಾದಿ ಸಿದ್ಧಾಂತದವನಾಗಿದ್ದರಿಂದ ಇದು ಸಾಧ್ಯವಾಗಲಿಲ್ಲ.
ಅಷ್ಟೇ ಅಲ್ಲ, ಮೋತಿಲಾಲ್ ನೆಹರೂ ಅವರು ತಮ್ಮ ಮಗಳ ಹಾಗು ಸೈಯದ್ ಸಂಬಂಧವನ್ನು ಮುರಿದುಹಾಕಲು ಗಾಂಧಿಯವರ ಸಹಾಯವನ್ನೂ ಪಡೆದಿದ್ದರು. ಗಾಂಧಿಯವರು ವಿಜಯಾಗೆ, “ಸರೂಪ್ (ಮದುವೆಗೂ ಮೊದಲಿದ್ದ ಹೆಸರು), ನಾನು ನಿನ್ನ ಸ್ಥಾನದಲ್ಲಿದ್ದರೆ, ನಾನು ಎಂದಿಗೂ ಸೈಯದ್ ಹುಸೇನ್ಗೆ ಹತ್ತಿರ ಬರಲೂ ಬಿಡುತ್ತಿರಲಿಲ್ಲ. ಅವನಿಗೆ ಸ್ನೇಹಿತನಾಗಲು ಮಾತ್ರ ಅವಕಾಶ ನೀಡುತ್ತಿದ್ದೆ” ಎಂದಿದ್ದರು. ಜವಾಹರಲಾಲ್ ನೆಹರು ಅವರ ಸಹೋದರಿಗೆ ಗಾಂಧಿ ವಿವರಿಸಿದರು, ಸೈಯದ್ ನನ್ನನ್ನು ಹೊಗಳಿದ್ದರೆ ಅಥವಾ ನನ್ನ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದರೆ, ನಾನು ಎಂದಿಗೂ ಅವನತ್ತ ಆಕರ್ಷಿತನಾಗುತ್ತಿರಲಿಲ್ಲ. ನಾನು ಹೇಳುತ್ತೇನೆ, “ಸೈಯದ್, ನೀನು ಹೇಳುತ್ತಿರುವುದು ನಿಜವಲ್ಲ. ನೀನು ಮುಸ್ಲಿಂ ಮತ್ತು ನಾನು ಹಿಂದೂ. ನಮಗೆ ಇದೆಲ್ಲಾ ಸರಿಯಲ್ಲ. ನೀನು ನನ್ನ ಸಹೋದರ, ನಾನು ನಿನ್ನನ್ನು ಎಂದಿಗೂ ಗಂಡನಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದೆ” ಎಂದು ಗಾಂಧಿ ವಿಜಯಾಗೆ ಬುದ್ಧಿ ಹೇಳಿದ್ದರು ಎಂದು ಶೀಲಾ ರೆಡ್ಡಿ ತಮ್ಮ ಪುಸ್ತಕದಲ್ಲಿ ವಿವರವಾಗಿ ತಿಳಿಸಿದ್ದಾರೆ.